ಕುಂದಾಪುರ ತಾ.ಪಂ. 17 ನೇ ಸಾಮಾನ್ಯ ಸಭೆ: ಅಧಿಕಾರಿ- ತಾ.ಪಂ.ಸದಸ್ಯರುಗಳ ಸವಾಲು ಉತ್ತರಗಳ ಸಮರ

JANANUDI.COM NETWORAK

ಕುಂದಾಪುರ ತಾ.ಪಂ. 17 ನೇ ಸಾಮಾನ್ಯ ಸಭೆ: ಅಧಿಕಾರಿ- ತಾ.ಪಂ.ಸದಸ್ಯರುಗಳ ಸವಾಲು ಉತ್ತರಗಳ ಸಮರ


ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ 17 ನೇ ಸಾಮಾನ್ಯ ಸಭೆಯು ತಾಲೂಕು ಪಂಚಾಯತ್ ಸಭಾ ಭವನದಲ್ಲಿ ದಿನಾಂಕ ಆಗೋಸ್ತ್ 28 ರಂದು ನಡೆಯಿತು.
ಸಭೆಯಲ್ಲಿ ಸದಸ್ಯರು ಮತ್ತು ಅಧಿಕಾರಿಗಳ ನಡುವಿನ ಸವಾಲು ಉತ್ತರಗಳ ಸಮರ ನಡೆಯಿತು.
ವೈದ್ಯಾಧಿಕಾರಿ- ಸದಸ್ಯರ ನಡುವೆ ಜಟಾಪಟಿ: ಕುಂದಾಪುರ ಸಾರ್ವಜನಿಕ ಆಸ್ಪತ್ರಯಲ್ಲ್ಲಿ ನೀಡುತ್ತಾರೆಡುತ್ತಾರೆ ಎಂದು ಉತ್ತರ ನೀಡಿದರು ಸ್ಕ್ಯಾನಿಂಗ್ ಮಾಡುವುದಿಲ್ಲಾ ಎಂದಾಗ ವೈದ್ಯಧಿಕಾರಿ ಸರಕಾರ ನಿಗದಿ ಪಡೆದ ಸ್ಕ್ಯಾನಿಂಗ್ ಸೆಂಟರಗಳಲ್ಲಿ ರೋಗಿಗಳಿಗೆ ಇಂತಿಷ್ಟು ಅಂತ ಹಣ ನೀಡುತ್ತಾರೆ ಎಂದು ಉತ್ತರ ನೀಡಿದರು. ಶಸ್ತ್ರಚಿಕಿತ್ಸಕ(ವೈದ್ಯಾಧಿಕಾರಿ) ಜನಪ್ರತಿನಿಧಿಗಳಿಗೆ ಗೌರವ ನೀಡುವುದಿಲ್ಲ ಎಂಬ ವಿಚಾರದಲ್ಲಿ ಆರಂಭಗೊಂಡ ಚರ್ಚೆ ತೀವ್ರ ಜಟಾಪಟಿಗೆ ಕಾರಣವಾಯಿತು. ವೈದ್ಯಾಧಿಕಾರಿ ತಮಗೆ ಸಂಬಂದ್ದ ಪಡದ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಅಂತಿಮವಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೊ ಸದಸ್ಯರಿಗೆ ತಕ್ಕ ಉತ್ತರ ನೀಡಿ ಸಭೆಯಿಂದ ಹೊರನಡೆದರು,

ಸೋಲಾರ್ ದೀಪ ಮೂಲೆಗುಂಪು: ತಾಲೂಕು ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಸದಸ್ಯರ ಅನುದಾನದಡಿ ಅಳವಡಿಕೆ ಮಾಡಿರುವ ಸೋಲಾರ್ ದೀಪಗಳು ಮೂಲೆಗುಂಪಾಗಿವೆ. ಸಂಬಂಧಿಸಿದ ಕಂಪೆನಿ ನಿರ್ವಹಣೆ ಮಾಡದಿರುವುದರಿಂದ ಎಲ್ಲವು ಕೆಟ್ಟುಹೋಗಿದೆ. ಜನರಿಂದ ಉಗಿಸಿಕೊಳ್ಳುವಂತಾಗಿದೆ ಎಂದು ಸದಸ್ಯೆ ಪ್ರಮೀಳಾ ದೇವಾಡಿಗ ಆರೋಪಿಸಿದರು. ಇತರೆ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಹೊರ ಜಿಲ್ಲೆಯ ಕಂಪೆನಿಗಳಿಗೆ ನಿರ್ವಹಣೆ ಜವಾಬ್ದಾರಿ ನೀಡುವುದಕ್ಕಿಂತ ಸೋಲಾರ್ ದೀಪ ನಿರ್ವಹಣೆಯನ್ನು ಸ್ಥಳೀಯರಿಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯ ಮಂಡಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು

ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯ ಕೂಲಿಯಾಳುಗಳಿಗೆ ಕಳೆದ ಎರಡು ವರ್ಷದಿಂದ ಹಣ ನೀಡಿಲ್ಲ ಎಂಬ ವಿಚಾರ ತೋಟಗಾರಿಕೆ ಸಹಾಯಕ ನಿರ್ದೇಶಕರು ಮತ್ತು ಕೆಲವು ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು. ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಮಾತನಾಡಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಕೂಲಿಯಾಳುಗಳಿಗೆ ನೀಡಬೇಕಾದ ಹಣ ನೀಡದೆ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕೆರಳಿದ ಅಧಿಕಾರಿ ಸಂಜೀವ ನಾಯ್ಕ್ ಪ್ರತಿಕ್ರಿಯಿಸಿ ಆರೋಪ ಮಾಡುವಾಗ ದಾಖಲೆ ಇಟ್ಟುಕೊಂಡಿರಿ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆಗೆ ಸಂಬಂಧಿತ ಕೆಲಸ ನಿರ್ವಹಿಸುವಾಗ ನೀತಿ ನಿರೂಪಣೆಗಳಿರುತ್ತವೆ. ನಮಗೆ ಬಂದ ಅನುದಾನದಲ್ಲಿ ನಿಯಮಾವಳಿಯಡಿ ಯಾರಿಗೆ ಹಣ ಸಲ್ಲಬೇಕು ಸಂದಾಯವಾಗಿದೆ ಎಂದು ಎಲ್ಲಿಯೂ ಕೂಡ ವಂಚನೆಯಾಗಿಲ್ಲಾ ಎಂದು ಉತ್ತರಿಸಿದರು. ಆದರೂ ಕೆಲ್ವು ಸದಸ್ಯರು ಹಣ ಸಂದಾಯವಾಗಿಲ್ಲಾ ಎಂದು ಸದನದ ಬಾವಿ ಇಳಿದು ಕೂಗಾಡಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಸದಸ್ಯ ಸಿದ್ಧಾಪುರ ವಾಸುದೇವ ಪೈ ಮತ್ತು ಪ್ರಮೀಳಾ ಕೆ. ದೇವಾಡಿಗ ಮೇಲ್ಕಂಡ ಸದಸ್ಯರು ಮಾಡುತ್ತಿರುವ ಆರೋಪ ಒಪ್ಪತಕ್ಕದ್ದಲ್ಲ. ನಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳಿಗೆ ಇಲಾಖೆಯಿಂದ ಹಣ ಬಿಡುಗಡೆಯಾಗಿದೆ ಎಂದರು.
ಇಲಾಖೆಯಿಂದ ರಸಗೊಬ್ಬರ ಇನ್ನಿತರ ವಸ್ತುಗಳು ಲಭಿಸಿವೆ. ಎಲ್ಲಾ ಸದಸ್ಯರನ್ನು ಸೇರಿಸಿಕೊಂಡು ಆರೋಪ ಮಾಡಬೇಡಿ ಎಂದು ತಿಳಿಸಿದರು. ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದು ಇಲಾಖೆಯಿಂದ ನರೇಗಾದಿಂದ ಕೈಗೊಂಡ ಕಾಮಗಾರಿ, ಬಂದಿರುವ ಅನುದಾನ ಸಹಿತ ಎಲ್ಲಾ ವಿವರವನ್ನು ತಾಲೂಕು ಪಂಚಾಯಿತಿ ಮುಂದಿಡುವುದಾಗಿ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್ ಹೇಳಿದರು.

.

ಕುಂದಾಪುರ ಬಸ್ನಿಲ್ದಾಣದ ಬಗ್ಗೆ ಉತ್ತರ ದೊರಕಿಲ್ಲಾ ಕುಂದಾಪುರದ ಬಸ್ನಿಲ್ದಾಣದಲ್ಲಿ ಬಸ್ಗಳು ಲಂಗುಲಗಾಮಿಲ್ಲದೆ ನಿಲುಗಡೆಯಾಗುತ್ತಿವೆ. ವ್ಯವಸ್ಥಿತ ನಿಲುಗಡೆ, ಮಾರ್ಗಸೂಚಿ ಅಳವಡಿಸಬೇಕೆಂಬ ಆಗ್ರಹಕ್ಕೆ ಮನ್ನಣೆ ಸಿಕ್ಕಿಲ್ಲ. ಉತ್ತರಿಸಬೇಕಾದ ಪುರಸಭೆ ಮುಖ್ಯಾಧಿಕಾರಿ ಸಭೆಗೆ ಬರುವುದೇ ಇಲ್ಲ. ತಾ.ಪಂ. ಆಡಳಿತವು ಈ ವಿಚಾರದಲ್ಲಿ ಮೌನ ವಹಿಸಿದೆ ಎಂದು ಸದಸ್ಯ ಸುರೇಂದ್ರ ಖಾರ್ವಿ ಅಸಮಾಧಾನ ಹೊರಗೆಡಹಿದರು.

ಸಭೆಯ ಔಚಿತ್ಯವೇನು: ಪುರಸಭೆ ಮುಖ್ಯಾಧಿಕಾರಿ, ಆರ್ಟಿಓ, ತಹಸೀಲ್ದಾರ ಸಹಿತ ಪ್ರಮುಖ ಅಧಿಕಾರಿಗಳು ಸಭೆಗೆ ಬರುತ್ತಿಲ್ಲ. ಅಧಿಕಾರಿಗಳಿಗೆ ಸಭೆಯ ನೋಟಿಸು ತಡವಾಗಿ ತಲುಪುತ್ತಿದೆ ಎಂಬ ಬಗ್ಗೆ ದೂರುಗಳಿವೆ. ಸಭೆಗೆ ಅಧಿಕಾರಿಗಳು ಬರುವಂತಾಗಲು ಸೂಕ್ತ ಕ್ರಮ ವಹಿಸಿ. ಪ್ರಮುಖ ಅಧಿಕಾರಿಗಳಿಲ್ಲದೆ ನಡೆಯುವ ಸಭೆಯ ಔಚಿತ್ಯವಾದರು ಏನು ಎಂದು ಸದಸ್ಯ ಪುಷ್ಪರಾಜ್ ಶೆಟ್ಟಿ ಪ್ರಶ್ನಿಸಿದರು.

ಕುಂದಾಪುರ: ಸದಸ್ಯರು ಸಭೆಯ ಘನತೆ ಘನತೆ ಅರಿತುಕೊಳ್ಳಿ. ಒಬ್ಬೊಬ್ಬರೆ ಮಾತನಾಡಿ. ಎಲ್ಲರು ಏಕಕಾಲಕ್ಕೆ ಬಾಯಿ ಹಾಕಲು ಇದೇನು ಮಾರ್ಕೆಟ್ಟಾ ಎಂದು ಹಿರಿಯ ಸದಸ್ಯ ರಾಜು ದೇವಾಡಿಗ ಪ್ರಶ್ನಿಸಿದವರು ಒಂದೆ ವಿಚಾರದ ಕುರಿತು ಐದಾರು ಮಂದಿ ಸದಸ್ಯರು ಮಾತನಾಡಲು ಏಕಕಾಲಕ್ಕೆ ಎದ್ದು ನಿಂತು ಮಾತನಾಡುವುದು ಸರಿಯಲ್ಲಾ. ಒಬ್ಬೊಬ್ಬರೆ ಮಾತನಾಡಿ. ಸೂಕ್ತ ಉತ್ತರ ಪಡೆಯಿರಿ ಎಂದು ಸಲಹೆ ನೀಡಿದರು.

ಯರೋ ಉಬ್ಬ ಸದಸ್ಯ ಈ ಸಾಮನ್ಯ ಸಭೆಯಲ್ಲಿ ಜೇವಲ ಕೆಲಸಕ್ಕೆ ಬಾರದ ಚರ್ಚೆಯಾಗುತ್ತದೆ, ಈಗಷ್ಟೆ ಚಾ ತಿಂಡಿ ಬಂದಿದೆ ನಂತರ ಊಟ ಬರುತ್ತದೆ ಎಂದು ಹೇಳಿದ್ದು ಕೇಳಿತು. ಮತ್ತೊಬ್ಬರು ನಮ್ಮ ಪ್ರಶ್ನೆಗಳಿಗೆ ಉತ್ತರ ಸರಿಯಿಲ್ಲಾ, ನಮ್ಮ ಪ್ರಶ್ನೆಗೆ ಬೇರೆಯೆ ಇಲಾಖೆಯವರು ಉತ್ತರ ಕೊಡುತಿದ್ದಾರೆ, ಸರಿಯಾಗಿ ಪ್ರಶ್ನೆ ಆಲಿಸುವುದಿಲ್ಲಾ, ಇದಕ್ಕೆ ಒಬ್ಬರು ಮೆನೇಜರನ್ನು ನೇಮಿಸಿ’ ಎಂದು ಆಗ್ರಹಿಸಿದರು.
ಈ ಸಭೆಗೆ ತಾ.ಪಂ.ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷ ತೆ ವಹಿಸಿದ್ದರು. ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಗುಜ್ಜಾಡಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್ ಉಪಸ್ಥಿತರಿದ್ದರು.