ಕುಂದಾಪುರ ಕಾನ್ವೆಂಟ್ ಛಾಪೆಲ್‍ನಲ್ಲಿ ಸಂತ ಜೋಸೆಫರ ಹಬ್ಬ -ಸರಳ ವ್ಯಕ್ತಿಯಾಗಿದ್ದವನ್ನು ಮಹಾನ್ ಸಂತನಾದ

ಕುಂದಾಪುರ ಕಾನ್ವೆಂಟ್ ಛಾಪೆಲ್‍ನಲ್ಲಿ ಸಂತ ಜೋಸೆಫರ ಹಬ್ಬ -ಸರಳ ವ್ಯಕ್ತಿಯಾಗಿದ್ದವನ್ನು ಮಹಾನ್ ಸಂತನಾದ


ಕುಂದಾಪುರ,ಮಾ.19: ‘ಮೇರಿ ಮಾತೆಯ ಪತಿ ಒರ್ವ ಸರಳ ಮನುಷ್ಯ, ಆದರೆ ಆತ ದೇವರ ಆಜ್ಞೆಗಳನ್ನು, ಎನೊಂದು ಸಂಷಯ ಪಡದೆ, ಆತ ದೇವರಲ್ಲಿ ವಿಶ್ವಾಸಿಯಾಗಿ, ನಿಷ್ಠಾವಂತನಾಗಿ ವಿಧೇಯನಾಗಿ ನೆಡೆಸಿಕೊಟ್ಟಿದರಿಂದ ಆತ ಅತ್ಯಂತ ಮಹಾನ್ ಮಹಾ ಸಂತನಾದ, ಆತ ನೀತಿವಂತ ಮನುಷ್ಯ, ಆತ ಬಡವರ, ಕೂಲಿಗಳ, ಪತ್ನಿಯರ, ಕುಟುಂಬದ, ಪಯಣಿಗರ ಹೀಗೆ ಅನೇಕರ ಪಾಲಕನಾಗಿದ್ದಾನೆ, ಆತನಿಂದ ಅನೇಕ ಪವಾಡಗಳು ನೆಡೆಯುತ್ತವೆ, ಮಳೆ ಬೆಳೆ ಇಲ್ಲದ ಉರಿನಲ್ಲಿ ಮಳೆಯಾಗಿ ಯೇಥೆಷ್ಟೆ ಬೆಳೆಯಾಗಿದ್ದು ದಾಖಲೆ ಇದೆ, ನೆಂಟಸ್ತಿಕೆ ಇಲ್ಲದ ಹೆಣ್ಣು ಮಕ್ಕಳಿಗೆ ನೆಂಟಸ್ತಿಕೆಯಾದ ಉದಾಹರಣೆಗಳಿವೆ. ಸಂತ ಜೋಸೆಫ ಎಷ್ಟು ಮಹಾತ್ಮನೆಂದರೆ, ಎಸು ಸ್ವಾಮಿ ಸ್ಥಾಪಿಸಿರ ಪವಿತ್ರ ಸಭೆ ಆತ ಪಾಲಕ ಆತನಾಗಿದ್ದಾನೆ’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು
ಅವರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕುಂದಾಪುರ ಸಂತ ಜೋಸೆಫರ ಕಾನ್ವೆಂಟಿನ ಚಾಪೆಲನಲ್ಲಿ ಸಂತ ಜೋಸೆಫರ ಹಬ್ಬದ ಪ್ರಯುಕ್ತ ಪ್ರಧಾನ ಯಾಜಕಾರಾಗಿ ಪವಿತ್ರ ಬಲಿದಾನ ನೆಡೆಸಿಕೊಟ್ಟರು ಪ್ರವಚನ ನೀಡಿದರು. ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ವಂ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಬಲಿದಾನವನ್ನು ಅರ್ಪಿಸಿದರು. ಈ ಬಲಿದಾನದಲ್ಲಿ ಅತಿಥಿ ಧರ್ಮ ಭಗಿನಿಯರು ಹಾಗೂ ಹಲವಾರು ಭಕ್ತರು ಪಾಲ್ಗೊಂಡರು. ಕಾನ್ವೆಂಟಿನ ಮುಖ್ಯಸ್ಥೆ ಸಿ|ವಾಯ್ಲೆಟ್ ತಾವ್ರೊ ವಂದಿಸಿದರು.