JANANUDI NETWORK
ಕುಂದಾಪುರ: ಕಥೊಲಿಕ್ ಸಭಾ ಮತ್ತು ರೋಟರಿ ದಕ್ಷಿಣ ಇವರಿಂದ ಸ್ವಯಂ ರಕ್ತದಾನ ಶಿಬಿರ
ಕುಂದಾಪುರ, ಜೂ. 7: ‘ರಕ್ತದಾನ ಎಷ್ಟು ಮಹತ್ವದೆಂದರೆ, ವಿಜ್ಞಾನ ಎಷ್ಟು ಮುಂದುವರಿದರು, ಇನ್ನೂ ಕೂಡ ಒಂದು ತೊಟ್ಟು ರಕ್ತವನ್ನು ಸಿದ್ದ ಮಾಡಲು ಸಾಧ್ಯವಾಗಲಿಲ್ಲಾ, ಹಾಗಾಗಿ ರಕ್ತ ದಾನ ನೀಡುವುದು ಒಂದು ಮಹತ್ಕಾರ್ಯಾವಾಗಿದೆ, ನೀವು ರಕ್ತ ದಾನ ನೀಡಿದರೆ, ಬೇರೊಬ್ಬರು ಜೀವ ಹೋಗುವ ಸಂದರ್ಭದಲ್ಲಿ ಅವರ ಪ್ರಾಣವನ್ನು ಉಳಿಸಿದ ಪುಣ್ಯ ಕಾರ್ಯ ನಿಮ್ಮದಾಗುತ್ತದೆ’ ಎಂದು ಹೋಲಿ ರೊಜರಿ ಮಾತ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ನುಡಿದರು.
ಅವರು ಕಥೊಲಿಕ್ ಸಭಾ ಕುಂದಾಪುರ ಘಟಕ ಮತ್ತು ರೋಟರಿ ಕ್ಲಬ್ ದಕ್ಶಿಣ ಇವರ ಜಂಟಿ ಆಶ್ರಯದಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ರೋಜರಿ ಕ್ರೆಡಿಟ್ ಕೊ.ಆಪ್ ಸೊಸೈಟಿ ಇವರ ಸಹಭಾಗಿತ್ವದಲ್ಲಿ ಕುಂದಾಪುರ ಚರ್ಚ್ ಸಭಾಭವನದಲ್ಲಿ ಆಯೋಜಿಸಲ್ಪಟ್ಟ ಸ್ವಯಂ ರಕ್ತಾ ದಾನ ಶಿಬಿರವನ್ನು ಉದ್ಘಾಟಿಸಿ ಅವರು ಸಂದೇಶ ನೀಡಿದರು. ಈ ರಕ್ತದಾನ ಶಿಬಿರವು ಚರ್ಚಿನ ಸಂಘಟನೆಗಳಾದ, ಕಥೊಲಿಕ್ ಸ್ತ್ರೀ ಸಂಘಟನೆ, ಐ.ಸಿ.ವಾಯ್. ಎಮ್. , ಕ್ರೈಸ್ತ ತಾಯಂದಿರ ಒಕ್ಕೂಟ, ಸಂತ ಫ್ರಾನ್ಸಿಸ್ಕನ್ ಸಭಾ ಮತ್ತು ಎಸ್.ವಿ.ಪಿ. ಸಂಘಟನೆಗಳ ಸಹಕಾರದೊಂದಿಗೆ ನೆಡೆಯಿತು.
ಇಂಡಿಯನ್ ರೇಡ್ ಕ್ರಾಸ್ ಸಂಸ್ಥೆಯ ಛೇಯೆರ್‍ಮೇನ್ ಜಯಕರ್ ಶೆಟ್ಟಿ ಮಾತಾನಾಡಿ ‘ಇವತ್ತು ರಕ್ತದ ಅವಶ್ಯಕತೆ ಬಹಳವಿದೆ, ನಮ್ಮಲ್ಲಿ ರಸ್ತೆ ಅಪಘಾತಗಳು ಬಹಳಸ್ಟು ನೆಡೆಯುತ್ತಿವೆ, ಹಾಗೂ ಇನ್ನಿತರ ರೋಗಿಗಗಳ ಪ್ರಾಣ ಉಳಿಸುವುದಕ್ಕೆ ರಕ್ತದ ಕೊರತೆಯಾಗುತ್ತದೆ, ಕಾಲೇಜುಗಳಿಗೆ ರಜೆ ಇರುವಾಗ ರಕ್ತತ ಕೊರತೆಯಾಗಿ ಬೇರೆ ಕಡೆಯಿಂದ ರಕ್ತ ತರಿಸುವ ಅಗತ್ಯ ಬೀಳುತ್ತದೆ, ಹಾಗಾಗಿಯು ನಮ್ಮ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ ರಾಜ್ಯದಲ್ಲಿ ಉತ್ತಮ ಸಂಸ್ಥೆಯೆಂದು ಪ್ರಶಸ್ತಿ ಪಡೆದಿದೆ’ ಎಂದು ಅವರು ತಿಳಿಸಿದರು.
ಸಹಕಾರ ನೀಡಿದ ಕಥೊಲಿಕ್ ಸ್ತ್ರೀ ಸಂಘನೆ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಮತ್ತು ರೋಜರಿ ಕ್ರೆಡಿಟ್ ಕೊ.ಆಪ್ ಸೊಸೈಟಿಯ ನಿರ್ವಹಣ ಅಧಿಕಾರಿ ಪಾಸ್ಕಲ್ ಡಿಸೋಜಾ ಇವರನ್ನು ಗೌರವಿಸಲಾಯಿತು. ಕಥೊಲಿಕ್ ಸಭಾದ ಅಧ್ಯಕ್ಷ್ಷ ವಾಲ್ಟರ್ ಡಿಸೋಜಾ ಸ್ವಾಗತಿಸಿದರು. ವೇದಿಕೆಯಲ್ಲಿ ಕಥೊಲಿಕ್ ಸಭಾದ ಕಾರ್ಯದರ್ಶಿ ವಿಲ್ಸನ್ ಡಿಆಲ್ಮೇಡಾ, ರೋಟರಿ ಕ್ಲಬ್ ದಕ್ಶಿಣದ ಶೋಭಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೆಡ್‍ಕ್ರಾಸ್ ಸಂಸ್ಥೆಯ ಕೋಶಾಧಿಕಾರಿ ಶಿವರಾಮ್ ಶೆಟ್ಟಿ, ರೋಟರಿ ಸಂಸ್ಥೆಯ ಡಾ ಮೆನೇಜ್‍ಮೆಂಟ್ ಕಮಿಟಿ ಸದಸ್ಯರಾದ ಗಣೇಶ್ ಆಚಾರ್, ಡಾ|ಸೋನಿ ಡಿಕೋಸ್ತಾ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಿಬಂದಿ ರಕ್ತದಾನದ ಶಿಬಿರವನ್ನು ನಡೆಸಿ ಕೊಟ್ಟರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಚರ್ಚ್ ಅಂಗ ಸಂಸ್ಥೆಗಳ ಅಧ್ಯಕ್ಷರು ಸದಸ್ಯರು ಈ ರಕ್ತದಾನದಲ್ಲಿ ಭಾಗಿಯಾಗಿದ್ದರು. ರೋಟರಿ ಕ್ಲಬ್ ದಕ್ಶಿಣದ ಅಧ್ಯಕ್ಷ ದೇವರಾಜ್ ಕೆ. ವಂದಿಸಿದರು. ರಕ್ತದಾನ ಶಿಬಿರದ ಸಂಚಾಲಕರಾದ ಜೋನ್ಸನ್ ಡಿ’ಆಲ್ಮೇಡಾ ಕಾರ್ಯಕ್ರಮವನ್ನು ನಿರೂಪಿಸಿದರು.