ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಸ್ವಸ್ಥ ನಿರ್ಮಲ ಪರಿಸರ ಅಭಿಯಾನ

JANANUDI.COM NETWORK 

ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಸ್ವಸ್ಥ ನಿರ್ಮಲ ಪರಿಸರ ಅಭಿಯಾನ


ಕುಂದಾಪುರ, ಒ.2: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಸೂಚನೆ ಮೇರೆಗೆ ಉಡುಪಿ ಜಿಲ್ಲೆಯ ಎಲ್ಲಾ ಘಟಕಗಳಲ್ಲಿ ನಿರ್ಮಲ ಪರಿಸರ ನಮ್ಮ ಕರ್ತವ್ಯ ಧೇಯ್ಯ ವಾಕ್ಯದೊಂದಿಗೆ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನವನ್ನು ಕುಂದಾಪುರ ಕಥೊಲಿಕ್ ಸಭಾ ಘಟಕವು ಕುಂದಾಪುರದ ಚರ್ಚ್ ವಠಾರ ಮತ್ತು ಚರ್ಚ್‍ನಿಂದ ಹೂವಿನ ಮಾರ್ಕೆಟ್ ತನಕ ಚರ್ಚ್ ರಸ್ತೆಯ ಕಸ, ಕಡ್ಡಿ, ಪ್ಲಾಸ್ಟಿಕ್ ಗಾಜಿನ ಬಾಟಲುಗಳನ್ನು ಹೆಕ್ಕಿ ರಸ್ತೆಯನ್ನು ಸ್ವಚ್ಚ ಪಡಿಸಲಾಯಿತು.
ಚರ್ಚಿನ ಧರ್ಮಗುರು ಕಥೊಲಿಕ್ ಸಭೆಯ ಅದ್ಯಾತ್ಮಿಕ ನಿರ್ದೇಶಕರಾದ ವಂ|ಸ್ಟ್ಯಾನಿ ತಾವ್ರೊ ಕೈ ಗ್ಲಾವ್ಜ್‍ಗಳನ್ನು ನೀಡಿ ‘ನಾವು ನಮ್ಮ ಪರಿಸರ ನಿರ್ಮಲವಾಗಿ ಇಟ್ಟು ಕೊಳ್ಳೋಣ, ನಿರ್ಮಲ ಪರಿಸರ ಉತ್ತಮ ಆರೋಗ್ಯಕ್ಕೆ ಕಾರಣಾವಾಗುತ್ತದೆ, ಪ್ಲಾಸ್ಟಿಕನ್ನು ನಾವು ಆದಸ್ಟೂ ತ್ಯಜಿಸಿ ನಮ್ಮ ಭಾರತ ಸ್ವಸ್ಥ ನಿರ್ಮಲ ಭಾರತವನ್ನಾಗಿ ಮಾಡೋಣ” ಎಂದು ಈ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಈ ಅಭಿಯಾನಕ್ಕೆ ರೊಟಾರ್ಯಾಕ್ಟ್ ಕ್ಲಬ್ ಸದಸ್ಯರು ಹಾಗೂ ಭಂಡಾರ್ಕಸ್ ಕಾಲೇಜಿನ ವಿದ್ಯಾರ್ಥಿಗಳು ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರ ಕಥೊಲಿಕ್ ಸಭೆಯ ಅಧ್ಯಕ್ಷ ವಾಲ್ಟರ್ ಡಿಸೋಜಾ, ಕಾರ್ಯದರ್ಶಿ ವಿಲ್ಸನ್ ಡಿಆಲ್ಮೇಡಾ, ಕೋಶಾಧಿಕಾರಿ ಪ್ರೇಮಾ ಡಿಕುನ್ಹಾ, ಉಪಾಧ್ಯಕ್ಷೆ ಜೂಲಿಯೆಟ್ ಪಾಯ್ಸ್, ಕಥೊಲಿಕ್ ಸಭೆಯ ಇನ್ನಿತರ ಪದಾಧಿಕಾರಿಗಳು, ರೊಟಾರ್ಯಾಕ್ಟ್ ಕ್ಲಬಿನ ಅಧ್ಯಕ್ಷ ಆಲ್ಡ್ರಿನ್ ಡಿಸೋಜಾ, ಕಾರ್ಯದರ್ಶಿ ವಿನಾಯಕ್ ಗಾಣಿಗ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಕಥೊಲಿಕ್ ಸಭೆಯ ನಿಯೋಜಿತ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.