JANANUDI NETWORK
ಕುಂದಾಪುರ ಕಥೊಲಿಕ್ ಸಭಾದಿಂದ – ಸ್ವಾತಂತ್ರ್ಯೊತ್ಸವದ ಪ್ರಯುಕ್ತ ದೇಶ ಭಕ್ತಿಗಿತೆಗಳ ಸ್ಪರ್ಧೆ
ಕುಂದಾಪುರ,ಆ.10: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆಗಳ ಸ್ಪರ್ಧೆ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಖ್ಯಾತ ಪ್ರಸ್ತೂತಿ ವೈದ್ಯೆ ಡಾ|ಪ್ರಮೀಳಾ ನಾಯಕ್ ಇವತ್ತಿನ ತಲೆಮಾರು ದೇಶ ಭಕ್ತಿಗಳು ಹಾಡುವಲ್ಲಿ ಮಾತ್ರ ದೇಶ ಭಕ್ತಿಯನ್ನು ಮಿಸಲಿಡದೆ ಭಾರತದ ನೆಲ ಜಲ ರಕ್ಷಣೆ ಮಾಡುವ ನಿಟ್ಟಿನಲ್ಲಿ ತೊಡಗಿಕೊಳ್ಳ ಬೇಕು. ಸ್ಚಚ್ಚತೆಗೆ ಪ್ರಾಮುಖ್ಯತೆ ನೀಡಿ, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ ಪರಿಸರದ ರಕ್ಷಣೆ ಮಾಡಿ ದೇಶ ಭಕ್ತರಾಗಿ’ ಎಂದು ಅವರು ಸಂದೇಶ ನೀಡಿ ಗಾಯನ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಿದರು.
ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ ಶುಭಾಷಯ ಕೋರಿದರು. ತೀರ್ಪುಗಾರರಾಗಿ ರಾಮಚಂದ್ರ ಆಚಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು, ಪ್ರೆಸಿಲ್ಲಾ ಎಸ್. ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಇನ್ನೊರ್ವ ಶಾಂತಾ ಕಾಂಚನ್ ತಿರ್ಪುಗಾರಾಗಿದ್ದರು ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ ವಾಲ್ಟರ್ ಜೆ. ಡಿಸೋಜಾ ಸ್ವಾಗತ ಕೋರಿದರು. ನಿಯೋಜಿತ ಅಧ್ಯಕ್ಷ ಬರ್ನಾಡ್ ಜೆ.ಡಿಕೋಸ್ತಾ, ಕುಂದಾಪುರ ವಲಯದ ಉಪಾಧ್ಯಕ್ಷ ಎಲ್ಟನ್ ರೆಬೇರೊ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿರಿದ್ದರು. ಕಥೊಲಿಕ್ ಸಭಾದ ನಿರ್ಗಮನ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಸಹಕಾರ್ಯದರ್ಶಿ ಲೋನಾ ಲುವಿಸ್, ಖಜಾಂಚಿ ಪ್ರೇಮಾ ಡಿಕುನ್ಹಾ ಸ್ಪರ್ಧೆಗಳನ್ನು ನೆಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕ ವಿಲ್ಸನ್ ಡಿಆಲ್ಮೇಡಾ ನಿರೂಪಿಸಿ ವಂದಿಸಿದರು.
ಸ್ಪರ್ಧೆಯಲ್ಲಿ ಗೆದ್ದವರ ವಿವರ ಇಂತಿದೆ
ವಯಕ್ತಿಕ ಗಾಯನ ವಿಭಾಗ 1 ರಿಂದ ನಾಲ್ಕನೆ ತರಗತಿಯಲ್ಲಿ ಪ್ರಥಮ ಸ್ಥಾನ ಶ್ರಾವಣಿ, ಸಂತ ಜೋಸೆಫ್ ಪ್ರಾಥಮಿಕ ಶಾಲೆ, ದ್ವೀತಿಯ ರಾಫಿಡಾ ಸಿ ಸೈಡ್ ಪಬ್ಲಿಕ್ ಶಾಲೆ. 5 ರಿಂದ 7 ನೇ ತರಗತಿಯ ವಿಭಾಗದಲ್ಲಿ ಪ್ರಥಮ ಜಯಶ್ರಿ ಎಚ್.ಎಮ್,ಎಮ್. ಆಂಗ್ಲಾ ಮಾ. ಶಾಲೆ, ದ್ವೀತಿಯ ಹಫಿದಾ, ಸಿ ಸೈಡ್ ಪಬ್ಲಿಕ್ ಶಾಲೆ, ತ್ರತೀಯ ರಿಶಿಕಾ ಜಾನ್, ಹೋಲಿ ರೋಜರಿ ಆಂಗ್ಲಾ ಮಾ. ಶಾಲೆ. 8 ರಿಂದ 10 ನೇ ತರಗತಿಯ ವಿಭಾಗದಲ್ಲಿ ಪ್ರಥಮ ಕೆ.ಎಸ್. ಧಾರಿಣಿ ಹೋಲಿ ರೋಜರಿ ಆಂಗ್ಲಾ ಪ್ರೌಢ ಶಾಲೆ, ಮತ್ತು ಪ್ರಾಪ್ತಿ ವಿ.ಕೆ.ಆರ್. ಆಂಗ್ಲಾ ಮಾ. ಪ್ರೌಢ ಶಾಲೆ. ದ್ವಿತೀಯ ಅಫಸಾನಾ ಸಿ ಸೈಡ್ ಪಬ್ಲಿಕ್ ಶಾಲೆ, ತ್ರತೀಯ ನಾಗರತ್ನ ಸಂತ ಜೋಸೆಫ್ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಥಮ ರಶ್ಮಿ ಅರ್.ಎನ್.ಶೆಟ್ಟಿ ಕಾಲೇಜು. ಮತ್ತು ಸಮುಹ ಗಾಯನದಲ್ಲಿ ಪ್ರಥಮ ವಿ.ಕೆ.ಆರ್. ಆಂಗ್ಲಾ ಮಾ. ಪ್ರೌಢ ಶಾಲೆ. ದ್ವಿತೀಯ. ಸಿ ಸೈಡ್ ಪಬ್ಲಿಕ್ ಶಾಲೆ, ತ್ರತೀಯ ಸ್ಥಾನವನ್ನು ಎಚ್.ಎಮ್,ಎಮ್. ಆಂಗ್ಲಾ ಮಾ. ಶಾಲೆ ಪಡೆಯಿತು.