ಕುಂದಾಪುರದಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ವಿಶ್ವ ರಕ್ತ ದಾನಿಗಳ ದಿನಾಚರಣೆ

JANANUDI.COM NETWORK

 

 

 

ಕುಂದಾಪುರದಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ವಿಶ್ವ ರಕ್ತ ದಾನಿಗಳ ದಿನಾಚರಣೆ 

 

ಕುಂದಾಪುರ 14-06-2020 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು, ಭಾರತೀಯ ರೆಡ್ ಕ್ರಾಸ್ ಸಂಸ್ತೆಯ ರಕ್ತ ನಿಧಿ ಕೇಂದ್ರದಲ್ಲಿ ಆಚರಿಸಿದರು. ರೆಡ್ ಕ್ರಾಸ್ ಸಂಸ್ತೆಯ ಅದ್ಯಕ್ಷರೂ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಯವರೂ ಆದ ಶ್ರೀ ಕೆ. ರಾಜು ಇವರು ಉದ್ಗಾಟಿಸಿ ಉದ್ಗಾಟನಾ ಭಾಷಣ ಮಾಡಿ ಸಂಸ್ಥೆಗೆ ಯಾವುದೇ ಸಹಕಾರ ಮತ್ತು ಸಲಹೆಗಳಿಗೆ ತಾನು ಸದಾ ಬದ್ದನಿದ್ದೇನೆ ಎಂದರು. ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ, ಅಥಿಥಿ ಗಳನ್ನು ಸ್ವಾಗತಿಸಿದರು, ಮತ್ತು ಕಳೆದ ಐದು ವರ್ಷಗಳಿಂದ ಸಂಸ್ತೆಯ ಸಾಧನೆಗಳಾನ್ನು ಸಭೆಗೆ ತಿಳಿಸಿದರು. ಮುಖ್ಯ ಅಥಿಥಿಗಳಾಗಿ I M A   ಅದ್ಯಕ್ಷರಾದ ಶ್ರೀದೇವಿ ಕಟ್ಟೆ, ತಾಲೂಕು ಆರೋಗ್ಯಾಧಿಕಾರಿ ಶ್ರೀ ನಾಗಭೂಷಣ ಉಡುಪರು, ಹಿರಿಯ ವಕೀಲರಾದ ಶ್ರೀ ಎ. ಎಸ್. ಎನ್. ಹೆಬ್ಬಾರ್, ಆಯುಷ್ ಯುನಿಟ್ ಕುಂದಾಪುರದ ಸೀನಿಯರ್ ಮೆಡಿಕಲ್ ಆಫಿಸರ್ ಡಾ. ಅಶೋಕ್, ಸಮಾರಂಬದ ಪ್ರಾಯೋಜಕರಾದ ಕಾರ್ತಿಕ್ ಸ್ಕೇನಿಂಗಿನ ಮಾಲಕರಾದ ಡಾ| ಬಿ. ವಿ. ಉಡುಪರು ಮತ್ತು ಉಡುಪಿ ಜಿಲ್ಲಾ ಘಟಕದ ಸಮಿತಿ ಸದಸ್ಯರಾದ ಸನ್ಮಾನ್ ಶೆಟ್ಟಿ ಹಾಜರಿದ್ದರು. ವರ್ಷಂಪ್ರತಿ ನಡೆದುಕೊಂಡು ಬಂದಂತೆ ಹೆಚ್ಚು ರಕ್ತ ದಾನ ಮಾಡಿದ ದಾನಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಉಡುಪಿ ವಲಯದ ರಾಘವೇಂದ್ರ (51 ಸಲ), ಸಚ್ಚಿದಾನಂದ ವೈದ್ಯ (46 ಸಲ, ಕುಂದಾಪುರದ ರಾಘವೇಂದ್ರ ( 41 ಸಲ), ಸುಹೇಲ್ ಸುತಿಹಿ) ( 26 ಸಲ) ಮತ್ತು ಮುಜಾಫರ್ ( 21 ಸಲ) ಇವರೆಲ್ಲರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಡಾ . ಸೋನಿ ಡಿಕೊಸ್ಟಾ, ಗಣೇಶ್ ಆಚಾರ್ಯ, ಅಬ್ದುಲ್ ಬಶೀರ್, ನಾರಾಯಣ ದೇವಾಡಿಗ ಹಾಗೂ ಸದಸ್ಯರುಗಳು ಹಾಜರಿದ್ದರು.
 Immunity   ಹೆಚ್ಚಿಸಲು Samshamana vati Arasenic kalpa & Tablet S R   ಗಳನ್ನು  AyuS Elake , ಕುಂದಾಪುರ ಇವರು ರಕ್ತದಾನಿಗಳಿಗೆ ವಿತರಿಸಿದರು. ಶ್ರಿ ಬಿ. ವಿ. ಉಡುಪರು ಉಪಹಾರದ ವ್ಯವಸ್ತೆ ಮಾಡಿದ್ದರು. ದಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಸಿದ್ದರು.  ಈಸಂದರ್ಭ ದಲ್ಲಿ ರಕ್ತ ದಾನಿಗಳಿಂದ 91 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು
ಕಾರ್ಯದರ್ಶಿಯವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.