jananudi network
ಕುಂದಾಪುರದಲ್ಲಿ ಧರ್ಮಾಧ್ಯಕ್ಷ ಡಾ|ಜೆರಾಲ್ಡ್ ಲೋಬೊರವರ ಪಾಲನ ಅಧಿಕ್ರತ ಭೇಟಿ
ಹಸಿದವರಿಗೆ ಊಟ ಅನಾಥರಿಗೆ ಆಸರೆ ರೋಗಿಗಳ ಜತನ ಇಂತಹದೆಲ್ಲಾ ಮುಕ್ತಿ ಹೊಂದುವ ಮಾರ್ಗಗಳು
ಕುಂದಾಪುರದಲ್ಲಿ ಧ್ರಡಿಕರಣ ಸಂಸ್ಕಾರ
ಕುಂದಾಪುರ, ಜೂ.2: ‘ಶುದ್ದ ಮನಸ್ಸಿನವರು, ಪರರ ಕಷ್ಟಗಳಲ್ಲಿ ಭಾಗಿಯಾಗುವವರು, ಅನೀತಿ ಅನ್ಯಾಯ , ಶೊಷಣೆ, ಸತ್ಯಕ್ಕಾಗಿ ಹೋರಾಡಿದಲ್ಲಿ, ಅವಮಾನ ನಿಂದೆ, ನಾವು ಸಹಿಸಿಕೊಂಡಲ್ಲಿ, ದಯೆ, ಕರುಣೆ ನಾವು ರೂಡಿ ಮಾಡಿಕೊಂಡಲ್ಲಿ, ಹಸಿದವರಿಗೆ ಊಟ ನೀಡುವುದು ಅನಾಥರಿಗೆ ಆಸರೆ ನೀಡುವುದು, ರೋಗಿಗಳ ಜತನ ಮಾಡುವುದು ಬಾಯಾರಿದವರಿಗೆ ನೀರು ಕೊಡುವುದು, ಬಟ್ಟೆ ಇಲ್ಲದವರಿಗೆ ಬಟ್ಟೆ ನೀಡುವುದು, ವಿಧ್ಯೆ ಇಲ್ಲದವರಿಗೆ ವಿಧ್ಯೆ ದಾನ ಮಾಡುವುದು, ಇಂತಹದೆಲ್ಲಾ ಕೆಲಸಗಳು ಕೇವಲ ದಯೆ ಕರುಣೆಯ ಕೆಲಸ ಮಾತ್ರವಲ್ಲಾ, ಅವುಗಳು ನಾವು ಸ್ವರ್ಗ ರಾಜ್ಯ ಪಡೆಯುವಂತಹ ಮಾರ್ಗಗಳು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.
ಅವರು ಕುಂದಾಪುರ ರೋಜರಿ ಮಾತಾ ಇಗರ್ಜಿಯ ಪಾಲನ ಅಧಿಕ್ರತ ಭೇಟಿಯ ವೇಳೆ ಹಿರಿಯ 33 ಮಕ್ಕಳಿಗೆ ಧ್ರಡಿಕರಣದ ಸಂಸ್ಕಾರವನ್ನು ನೀಡಿ ಮಾತಾನಾಡಿದರು ‘ನಾವು ಮಾಡುವ ದಿನನಿತ್ಯದ ಸಣ್ಣ ಸಣ್ಣ ದಯೆಯ ಉಪಕಾರದ ಕೆಲಸಗಳು ಮಾಡಿದರೆ ನಾವು ಭಾಗ್ಯವಂತರಾಗುತ್ತೇವೆ’ ಎಂದು ಹೆಳುತ್ತಾ, ಧ್ರಡಿಕರಣ ಪಡೆದ ಮಕ್ಕಳಿಗೆ ಶುಭಾಷಯ ಕೋರುತ್ತಾ ‘ನೀವು ಯೇಸು ಕ್ರಿಸ್ತರ ತತ್ವಗಳನ್ನು ಪಾಲಿಸಿ ದೇವರ ಕ್ರಪೆಯನ್ನು ಪಡೆಯಿರಿ’ ಎಂದು ಶುಭ ನುಡಿದರು.
ಈ ಸಂದರ್ಭದಲ್ಲಿ ಅವರು ದಿವ್ಯ ಬಲಿದಾನವನ್ನು ಅರ್ಪಿಸಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ನೂತನವಾಗಿ ಆಗಮಿಸಿದ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಬಲಿದಾನದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನೂತನವಾಗಿ ಪ್ರಕಟಿಸಿದ ಇಗರ್ಜಿಯ “ರೊಜಾರಿಯುಮ್” ಪತ್ರಿಕಾ ಸಂಪುಟವನ್ನು ಸಂಪಾದಕ ಬರ್ನಾಡ್ ಡಿಕೋಸ್ತಾ ಧರ್ಮಾಧ್ಯಕ್ಷರಿಗೆ ಕಾಣಿಕೆಯಾಗಿ ನೀಡಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ. ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು.