ಕುಂದಾಪುರ:ಜಾಗತಿಕ ಸವಾಲುಗಳಿಗೆ ಪೂರಕವಾಗಿ ಪ್ರಸ್ತುತದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾಗಿ ಬಾರತೀಯಆಧಾರಿತ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ

JANANUDI NETWORK

ಕುಂದಾಪುರ:ಜಾಗತಿಕ ಸವಾಲುಗಳಿಗೆ ಪೂರಕವಾಗಿ ಪ್ರಸ್ತುತದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾಗಿ ಬಾರತೀಯಆಧಾರಿತ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ


ಕುಂದಾಪುರ:ಜಾಗತಿಕ ಸವಾಲುಗಳಿಗೆ ಪೂರಕವಾಗಿ ಪ್ರಸ್ತುತದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾಗಿ ಬಾರತೀಯಆಧಾರಿತ ಶಿಕ್ಷಣ ನೀತಿಯನ್ನುರೂಪಿಸಲು ಮತ್ತುಜಾರಿಗೆತರುವ ಉದ್ದೇಶದಿಂದ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಶೈಕ್ಷಣಿಕ ಅಧ್ಯಯನಕೇಂದ್ರ (ಸೆಂಟರ್ ಫಾರ್‍ಎಜುಕೇಶನ್ ಸ್ಟಡೀಸ್ ಇದರ ಉಪನಿರ್ದೇಶಕರಾದ ಗೌರೀಶ್ ಜೋಶಿ ಹೇಳಿದರು.
ಅವರುಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಶುಕ್ರವಾರ“ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು-2019”ರಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಸ್ತುತದ ಜಾಗತಿಕ ವ್ಯವಸ್ಥೆಯಲ್ಲಿನ ಸವಾಲುಗಳನ್ನು ಎದುರಿಸುವ ಸಾಮಥ್ರ್ಯ ಭಾರತೀಯ ಶಿಕ್ಷಣ ನೀತಿಗೆ ಬರಬೇಕೆಂಬ ಹಲವು ಅಂಶಗಳನ್ನು ಈ ಶಿಕ್ಷಣ ನೀತಿಕರಡು- 2019ರಲ್ಲಿ ಅಳವಡಿಸಿ ಸಿದ್ಧಪಡಿಸಲಾಗಿದೆ. ಇದು ಕೇವಲ ಶಿಕ್ಷಣ ನೀತಿಅಲ್ಲ. ಸಮಗ ್ರಜ್ಞಾನ ಆಧಾರಿತ ಶೈಕ್ಷಣಿಕ ವ್ಯವಸ್ಥೆಯನ್ನು ಭಾರತದಲ್ಲಿ ರೂಪಿಸಬೇಕೆಂಬ ಮಹಾದಾಸೆಯೊಂದಿಗೆ ಈ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಎಲ್ಲರಿಗೂ ಕೌಶಲ ಹೆಚ್ಚಿಸುವ ಗುಣಮಟ್ಟದ ಮತ್ತು ಸಮಾನ ಶಿಕ್ಷಣ ಸುಲಭವಾಗಿ ಸಿಗಬೇಕು.ಎಂಬ ಸಮಗ ್ರದೃಷ್ಟಿಕೋನ ಈ ನೀತಿಯಲ್ಲಿದೆಎಂದರು.
ಪ್ರಸ್ತುತದ ಶಿಕ್ಷಣ ವ್ಯವಸ್ಥೆಗಿಂತ ಈ ಶಿಕ್ಷಣ ನೀತಿ ಹೇಗೆ ಭಿನ್ನವಾಗಿದೆ ಎಂಬುದನ್ನುಅವರು ಪರಿಚಯಿಸಿ ಇಂದಿನ ಪೂರ್ವ ಪ್ರಾಥಮಿಕ ಶಿಕ್ಷಣ ಅದರ ಇತಿಮಿತಿಗಳು ಅವುಗಳ ಕಾರ್ಯ ವ್ಯಾಪ್ರಿಗಿಂತ ಮುಂದೆ ಬರುವ ಶಿಕ್ಷಣ ನೀತಿಇದರಿಂದ ಹೊರತಾಗಿದ್ದುಇದನ್ನು ಸಂಪೂರ್ಣವಾಗಿ ಶಿಕ್ಷಣ ವ್ಯವಸ್ಥೆಯ ಚೌಕಟ್ಟಿನೊಳಗೆ ತರಬೇಕು. ಇಲ್ಲಿಒಂದು ಮಗುವಿನ ಕಲಿಕೆಯ ಹಂತಗಳನ್ನು ಸರಿಯಾದ ದಾರಿಯಲ್ಲಿ ಸುಸಂಬದ್ಧ ರೀತಿಯಲ್ಲಿತೆಗೆದುಕೊಂಡು ಹೋಗಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಬಲವಾದ ಪ್ರತಿಪಾದನೆಯಾಗಿದೆ. ಆರಂಬಿಕ ಶಿಕ್ಷಣ ಗುಣಾತ್ಮಕವಾಗಿರಬೇಕು. ಮಗುವಿನ ಆರಂಭಿಕ ವರ್ಷಗಳಲ್ಲಿ ಮಿದುಳಿನ ಬೆಳವಣಿಗೆ ಮತ್ತು ವಿಷಯ ಗ್ರಹಿಸುವ ಸಾಮಥ್ರ್ಯ ಹೆಚ್ಚಿರುತ್ತದೆ. ಹಾಗಾಗಿ ಮಗುವಿನ ಜ್ಞಾನಕಲಿಕೆಯ ಆಧಾರದಲ್ಲಿ ಅದರ ಶಿಕ್ಷಣ ಮುಂದುವರಿಯಬೇಕು. ಅಲ್ಲದೇ ಹೆಚ್ಚು ಭಾóಷಾಜ್ಞಾನ, ಹೇಳುವ ವಿಷಯಗಳನ್ನು ಪ್ರಾಯೋಗಿಕವಾಗಿ ವಿಭಿನ್ನ ನೆಲೆಗಳಲ್ಲಿ ಕಲಿಸುವುದಕ್ಕೆ ಒತ್ತು ನೀಡಲಾಗುವುದು. ಮುಂದೆ 3ರಿಂದ 18ವರ್ಷದವರೆಗಿನ ಮಕ್ಕಳು ಶಿಕ್ಷಣ ಹಕ್ಕು ಕಾಯಿದೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಹೇಳಿದರು.
ಅಲ್ಲದೇ ನಿರ್ಧಿಷ್ಠ ವಿಷಯಾಧಾರಿತ ಮಗುವಿನ ಆಸಕ್ತಿಗೆ ಪೂರಕವಾದ ಮತ್ತು ಶಿಕ್ಷಣದ ಸವಾಲುಗಳನ್ನು ಎದುರಿಸುವ ಸಾಮಥ್ರ್ಯವನ್ನು ಪ್ರಾಥಮಿಕ ಶಿಕ್ಷಣದಲ್ಲಿಯೇ ಬೆಳೆಸುವ ಮತ್ತು ಕಲಿಸುವ ವ್ಯವಸ್ಥೆಯನ್ನು ಪ್ರಾಥಮಿಕ ಶಿಕ್ಷಣ ಒಳಗೊಡಿರಲಿದೆ. ಈಗಾಗಲೇ ಇರುವ 10ಪ್ಲಸ್2 ಬದಲಾಗಿ 5 ಪ್ಲಸ್ 3 ಪ್ಲಸ್ 3 ಪ್ಲಸ್ 4 ಮಾದರಿಯ ಶಾಲಾ ಶಿಕ್ಷಣ ವ್ಯವಸ್ಥೆಜಾರಿಗೆ ಬರಲಿದೆ. ಇಲ್ಲಿ ಕೇವಲ ಓದುವಿಕೆಗಿಂತ ಕಲಿಯುವ ವಿಷಯಗಳಿಗೆ ಪ್ರಾಯೋಗಿಕವಾಗಿ ಹೆಚ್ಚು ಒತ್ತನ್ನು ಈ ನೀತಿಯಲ್ಲಿಕೊಡಲಾಗಿದೆ. ಮಗು ಚಟುವಟಿಕೆಯಿಂದ, ಆಟವಾಡುತ್ತಾಇದ್ದುವಿಷಯಗ್ರಹಿಸಬೇಕು ಎಂಬುದಕ್ಕೆ ಹೆಚ್ಚಿನಆದ್ಯತೆ ಸಿಗಲಿದೆ.ಅಲ್ಲದೇ ಪರೀಕ್ಷೆ ಎಂಬ ಆತಂಕವನ್ನು ಮತ್ತುಒತ್ತಡವನ್ನು ಒತ್ತಡರಹಿತ ಶಿಕ್ಷಣ ಜಾರಿಯಾಗಲಿದೆ. ನಿವಾರಿಸಲುಈ ನೀತಿಯಲ್ಲಿ ಮಗುವಿಗೆ ಆಯ್ಕೆಗಳು ಬಹಳವಿದೆ. ಮಗು ತನ್ನ ಕ್ರೀಯಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಪರಿಣತಿ ಪಡೆದುಕೊಳ್ಳುವುದು ಶಿಕ್ಷಣದ ಬಹುಮುಖ್ಯ ಅಂಶವಾಗಿದ್ದುಇದು ಮಗುವಿನ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಲಿದೆ. ಹಾಗೆಯೇ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಗಬೇಕೆಂಬ ಮಹಾದಾಸೆಯೊಂದಿಗೆ ಶಿಕ್ಷಣ ವಂಚಿತ ಸ್ಥಳಗಳಿಗೆ ವಿಶೇಷ ಆರ್ಥಿಕ ವಲಯವೆಂದು ಗುರುತಿಸಿ ವಿಶೇಷ ಸೌಲಭ್ಯಗಳೊಂದಿಗೆ ಶಿಕ್ಷಣ ನೀಡುವಇರಾದೆ ಈ ನೀತಿಯಲ್ಲಿದೆ.
ಹಾಗೆಯೇಇಲ್ಲಿ ವಿದ್ಯಾರ್ಥಿಯೊಂದಿಗೆ ಶಿಕ್ಷಕನ ಜ್ಞಾನಾಭಿವೃದ್ಧಿ ಕೌಶಲ ಹೆಚ್ಚಿಸಿಕೊಳ್ಳುವುದಕ್ಕೆ ಗಮನ, ಗುಣಮಟ್ಟದ ಬಧನೆಗೆಒತ್ತು, ನಿರಂತರ ತರಬೇತಿ ಮತ್ತು ಕಲಿಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೇಗಳು ನಡೆಯಲಿದ್ದು ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆಗೆ ಹೆಚ್ಚಿನ ಮಹತ್ವವನ್ನು ಕರಡಿನಲ್ಲಿ ನೀಡಲಾಗಿದ್ದು ಹಲವು ಸಾಮಾಜಿಕ ವ್ಯವಸ್ಥೆಯ ಜವಾಬ್ದಾರಿಯ ಅಂಶಗಳನ್ನು ಈ ನೀತಿ ಒಳಗೊಂಡಿದೆ ಎಂದು ಹೇಳಿದರು.
ಈ “ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು-2019” ಗೆ ಸಾಕಷ್ಟು ಸಲಹೆ ಸೂಚನೆಗಳು ಬಂದಿದ್ದುಇನ್ನೂ ಸಲಹೆಗಳನ್ನು ನೀಡುವವರಿದ್ದರೆಇದೇ ಬರುವಜುಲೈ 31ರವರೆಗೆ ಸಾರ್ವಜನಿಕರು ಸಲಹೆಗಳನ್ನು ನೀಡಬಹುದು. ಸಲಹೆ ನೀಡುವವರುಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಈ ನೀತಿಯನ್ನು ಅವಲೋಕಿಸಿ ಸಲಹೆ ನೀಡಬಹುದುಎಂದು ಹೇಳಿದರು.
ಈ ಸಂದರ್ಭದಲಿ ್ಲಭಂಡಾರ್ಕಾರ್ಸ್‍ಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯನ ಶೆಟ್ಟಿ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು.