ಕಾಲು ಸ್ವಾದೀನ ಕಳೆದುಕೊಂಡ ಯುವಕ : ಹರೀಶ್ ಪೂಜಾರಿ ಮನೆಗೆ ಫ್ರಿಡ್ಜ್ ಕೊಡುಗೆ

JANANUDI.COM NETWORK

 

 

ಕಾಲು ಸ್ವಾದೀನ ಕಳೆದುಕೊಂಡ ಯುವಕ : ಹರೀಶ್ ಪೂಜಾರಿ ಮನೆಗೆ ಫ್ರಿಡ್ಜ್ ಕೊಡುಗೆ 

 

 

 

ಮರದಿಂದ ಬಿದ್ದು ಗಂಭೀರ ಗಾಯಗೊಂಡು ತನ್ನ ಸೊಂಟ ಎರಡೂ ಕಾಲುಗಳ ಸ್ವಾದೀನ ಕಳೆದುಕೊಂಡ ಬೀಜಾಡಿ ಗ್ರಾಮದ ಹರೀಶ್ ಪೂಜಾರಿಯವರ ಔಷಧಗಳ ರಕ್ಷಣೆಗಾಗಿ ಆದಿತ್ಯವಾರ ಫ್ರಿಡ್ಜ್ ಕೊಡುಗೆ ನೀಡಲಾಯಿತು.
ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ನೆರವಿನಿಂದ ನೂತನ ಫ್ರಿಡ್ಜ್ ನೀಡುವ ಕಾರ್ಯಕ್ರಮವನ್ನು ಜೇಸಿಐ ಕುಂದಾಪುರ ಸಿಟಿ, ಇಂಡಿಯನ್ ಸಿನಿಯರ್ ಚೇಂಬರ್ ಕುಂದಾಪುರ ಲೀಜನ್ ಸಂಘಟಿಸಿತ್ತು. ಮಿತ್ರ ಸಂಗಮ (ರಿ) ಬೀಜಾಡಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಪರವಾಗಿ ಸ್ನೇಹಾ ಪಿ.ರೈ . ಫ್ರಿಡ್ಜ್ ಹಸ್ತಾಂತರಿಸಿದರು.
ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ನಾಗೇಶ ನಾವಡ, ಜೇಸಿ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ರಾಷ್ಟ್ರೀಯ ನಿರ್ದೇಶಕ ಡಾ. ಅರವಿಂದರಾವ್ ಕೇದಿಗೆ, ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ, ಗೌರವಾಧ್ಯಕ್ಷ ವಾದಿರಾಜ ಹೆಬ್ಬಾರ್, ಭಾಗವಹಿಸಿದ್ದರು. ಇಂಡಿಯನ್ ಸಿನಿಯರ್ ಚೇಂಬರ್ ಕುಂದಾಪುರದ ಅಧ್ಯಕ್ಷ ಹುಸೈನ್ ಹೈಕಾಡಿ ಹರೀಶ್ ಪೂಜಾರಿಯವರ ಕುಟುಂಬಕ್ಕೆ ನೆರವಾಗಬೇಕಾಗಿ ಉದ್ದೇಶ ವಿವರಿಸಿದರು.
ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ಯು.ಎಸ್.ಶೆಣೈ , ಕೆ.ನಾರಾಯಣ ಸಂಸ್ಥೆಯ ಉದ್ದೇಶ ವಿವರಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹರೀಶ್ ಪೂಜಾರಿ ಕುಟುಂಬಕ್ಕೆ ಸಾಂತ್ವಾನ
ಹರೀಶ್ ಪೂಜಾರಿಯವರ ಮನೆಗೆ ಭೇಟಿ ನೀಡಿದ ಸಂಘಟನೆಯ ಸದಸ್ಯರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ತಾಯಿ, ಪತ್ನಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿರುವ ಆರ್ಥಿಕವಾಗಿ ಯಾವ ಸಂಪನ್ಮೂಲ ಇಲ್ಲದ ಕುಟುಂಬ ಭರವಸೆ ತುಂಬಿದ ಸ್ನೇಹ ಪಿ. ರೈ ಹರೀಶ್ ಪೂಜಾರಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.