ಕಾರ್ಮಿಕ ಸಂಘಟಕ, ಧೀಮಂತ ಹೋರಾಟಗಾರ ಮಾಜಿ ಕೇಂದ್ರ ರೈಲೆ ಸಚಿವ ಜಾರ್ಜ್ ಫೆರ್ನಾಂಡಿಸ್ ಇನ್ನಿಲ್ಲಾ

ಕಾರ್ಮಿಕ ಸಂಘಟಕ, ಧೀಮಂತ ಹೋರಾಟಗಾರ ಮಾಜಿ ಕೇಂದ್ರ ರೈಲೆ ಸಚಿವ ಜಾರ್ಜ್ ಫೆರ್ನಾಂಡಿಸ್ ಇನ್ನಿಲ್ಲಾ

ಮಂಗಳೂರು ಮೂಲದವರಾಗಿದ್ದು, ಮುಂಬೈಯಲ್ಲಿ ಉದ್ಯೋಗ ಮಿಮಿತ್ತ ತೆರಳಿ ಅಲ್ಲಿ ಕಾರ್ಮಿಕರ ಕಷ್ಟಗಳನ್ನು ನೋಡಿ, ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ, ಆ ಸಂಘಟನೆಗಳನ್ನು ಬಹಳ ಬಲಿಷ್ಟವಾಗಿ ಕಟ್ಟಿ ಬೆಳೆಸಿದ ಧೀಮಂತ ನಾಯಕ, ರೈಲ್ವೆ ಕಾರ್ಮಿಕರ ಬಲಿಷ್ಟ ಸಂಘಟನೆ ಕಟ್ಟಿದಲ್ಲದೆ. ಮನೆ ಕೆಲಸ ಮಾಡುವ ಕಾರ್ಮಿಕರ ಸಂಘಟನೆಯನ್ನು ಕೂಡ ಕಟ್ಟಿದ್ದ ಕಾರ್ಮಿಕ ಹೋರಾಟಗಾರರಾಗಿದ್ದರು. ಮುಂದೆ ರಾಜಕೀಯದಲ್ಲಿ ಬೆಳೆದು ಎನ್. ಡಿ.ಎ ಕೂಟದಲ್ಲಿ ವಾಜಪೇಯಿ ಸರಕಾರದಲ್ಲಿ ರೈಲ್ವೆ ಮಂತ್ರಿ, ರಕ್ಷಣ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದ ಜಾರ್ಜ್ ಫೆರ್ನಾಂಡಿಸ್  ತಮ್ಮ 88 ವರ್ಷ ಪ್ರಾಯದಲ್ಲಿ ದೈವಾಧಿಅನರಾಗಿದ್ದಾರೆಂದು ಅವರ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.  ಸ್ಪೋಟದ ವಿಚಾರದಲ್ಲಿ ಜೈಲಿನಲ್ಲಿದ್ದೆ ಚುನಾವಣೆಯನ್ನು ಗೆದ್ದವರು ಜಾರ್ಜ್ ಫೆರ್ನಾಂಡಿಸ್.

    ಜಾರ್ಜ್ ಫೆರ್ನಾಂಡಿಸ್ 9 ವರ್ಷಗಳಿಂದ ಮರೆಗುಳಿ ರೋಗದಿಂದ ಬಳಲುತಿದ್ದರು. ಮತ್ತೆ ಮಿದುಳು ನಿಷ್ಕ್ರಿಯೆಯಿಂದ ಕೋಮಾಕ್ಕೆ ತೆರಳಿದ್ದರು.

    ದಿಟ್ಟ, ನಭೀತ ಹೋರಾಟಗಾರಗಿದ್ದ ಅವರು ಕೊಂಕಣ ರೈಲ್ವೆ ಸಾಕರಗೊಳಿಸಲು ಇವರೇ ಕಾರಣರೆಂದು ನೆನಪು ಮಾಡಿಕೊಳ್ಳ ಬೇಕಾಗುತ್ತದೆ. ದೇಶ ಒರ್ವ ದಿಮಂತ ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ.

    ಅವರ ನಿಧನಕ್ಕಾಗಿ ಪ್ರಧಾನ ಮಂತ್ರಿ ಮೋದಿ, ಹಲವಾರು ಮಂತ್ರಿಗಳು, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮುಂತಾದ ಗಣ್ಯ ರಾಜಕೀಯ ನೇತಾರರು ಸಂತಾಪವನ್ನು ನುಡಿದಿದ್ದಾರೆ.

    ಜನನುಡಿ.ಕಾಂ ಅವರ ನಿಧನಕ್ಕೆ ಸಂತಾಪವನ್ನು ಸಲ್ಲಿಸುತ್ತದೆ.