ಕಾರ್ಕಳ ತಾಲೂಕು ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ : ಆಮಂತ್ರಣ ಪತ್ರಿಕೆ ಬಿಡುಗಡೆ ಸಾಹಿತ್ಯವೆಂಬುದು ಸರ್ವರನ್ನೂ ಒಂದು ಗೂಡಿಸುವ ಬಹುದೊಡ್ಡ ವೇದಿಕೆ – ವಿ. ಸುನಿಲ್ ಕುಮಾರ್

ವರದಿ: ವಾಲ್ಟರ್ ಮೊಂತೇರೊ

 

 

ಕಾರ್ಕಳ ತಾಲೂಕು ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ : ಆಮಂತ್ರಣ ಪತ್ರಿಕೆ ಬಿಡುಗಡೆ
ಸಾಹಿತ್ಯವೆಂಬುದು ಸರ್ವರನ್ನೂ ಒಂದು ಗೂಡಿಸುವ ಬಹುದೊಡ್ಡ ವೇದಿಕೆ – ವಿ. ಸುನಿಲ್ ಕುಮಾರ್

 

 

 

ಸಾಹಿತಿಗಳಿಗೆ ಅವಕಾಶ ಕೊಟ್ಟಾಗ ತಮ್ಮ ಅನುಭವದ ಮೂಲಕ ಜನರ ಭಾವನೆ, ಸಾಮಾಜಿಕ ನಾಡಿ ಮಿಡಿತವನ್ನು ಒಂದುಗೂಡಿಸಿ ಅದು ಪುಸ್ತಕಗಳ ರೂಪದಲ್ಲಿ ಹೊರಬರುತ್ತದೆ. ಸಾಹಿತ್ಯವೆಂಬುದು ಸರ್ವರನ್ನೂ ಒಂದು ಗೂಡಿಸುವ ಬಹುದೊಡ್ಡ ವೇದಿಕೆ ಈ ನಿಟ್ಟಿನಲ್ಲಿ ಸರ್ವರ ಸಹಕಾರದಿಂದ ಕೆದಿಂಜೆ ಶಾಲೆಯಲ್ಲಿ ಜರಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶÀಸ್ವಿಯಾಗಲಿ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಹಯೋಗದಲ್ಲಿ ಕೆದಿಂಜೆ ಶಾಲೆಯಲ್ಲಿ ಡಿಸೆಂಬರ್ 29ರಂದು ಜರಗಲಿರುವ ಕಾರ್ಕಳ ತಾಲೂಕು ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕಾರ್ಕಳದ ಶಾಸಕರ ವಿಕಾಸ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಕಾರ್ಕಳ ತಾಲೂಕು ಪಂಚಾಯತ್ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷ ಬೋಳ ಸತೀಶ್ ಪೂಜಾರಿ, ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಸಾಹಿತ್ಯ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಇನ್ನಾ ಉದಯ ಕುಮಾರ್ ಶೆಟ್ಟಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಣೈ, ಜೇಸಿ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ., ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಪೂರ್ವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಇಂದಾರು ಸತ್ಯನಾರಾಯಣ ಭಟ್, ಬಜಗೋಳಿ ಹೋಬಳಿ ಘಟಕದ ಅಧ್ಯಕ್ಷ ನಾಗೇಶ್ ನಲ್ಲೂರು, ಬೈಲೂರು ಹೋಬಳಿ ಅಧ್ಯಕ್ಷ ದಿನೇಶ್ ಶೆಟ್ಟಿ ಬೈಲೂರು, ಬೆಳ್ಮಣ್ಣು ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ರಘುನಾಥ್ ನಾಯಕ್ ಪುನಾರು, ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧಾಕರ್ ಶೆಣೈ, ದೇವದಾಸ್ ಕೆರೆಮನೆ, ಗಣೇಶ್ ಜಾಲ್ಸೂರು, ಶಿವಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಉಪಾಧ್ಯಾಯ, ಕೃಷ್ಣ ಕುಮಾರ್, ಲಕ್ಷ್ಮೀ ಹೆಗ್ಡೆ ಮೊದಲಾದವರಿದ್ದರು.