ಕಾಂಕ್ರಿಟ್ ತಜ್ಞ ಪ್ರೊ|ಎಂ.ಎಸ್.ಶೆಟ್ಟಿಯವರಿಗೆ ಕೋಣಿ ಮ. ಕಾರಂತ ಪ್ರಶಸ್ತಿ ಪ್ರದಾನ

JANANUDI.COM NETWORK

 

 

ಕಾಂಕ್ರಿಟ್ ತಜ್ಞ ಪ್ರೊ|ಎಂ.ಎಸ್.ಶೆಟ್ಟಿಯವರಿಗೆ ಕೋಣಿ ಮ. ಕಾರಂತ ಪ್ರಶಸ್ತಿ ಪ್ರದಾನ

 

ಕುಂದಾಪುರ, ಜ.20: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕುಂದಪ್ರಭ ಸಂಸ್ಥೆ ಸುಮಾರು 20 ವರ್ಷಗಳಿಂದ ಖ್ಯಾತ ಪತ್ರಕರ್ತ ಕೋಣಿ ಮ.ಕಾರಂತ ಹೆಸರಿನಲ್ಲಿ ಕೊಡ ಮಾಡುವ 20 ನೇ ವರ್ಷದ ಕೊ.ಮ.ಕಾರಂತ ಪ್ರಶಸ್ತಿಯನ್ನು ಕಾಂಕ್ರಿಟ್ ತಜ್ಞರೆಂದೆ ಪ್ರಖ್ಯಾತರಾದ ಭಾರತ ಸರಕಾರದ ರಕ್ಷಣ ಇಲಾಖೆಯ ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗಿನ ನಿವ್ರತ್ತ ಹಿರಿಯ ಪ್ರೊಫೆಸರ್ , ಕೋಟೆಶ್ವರದಲ್ಲಿ ಹುಟ್ಟಿ ಕುಂದಾಪುರ ಬೋರ್ಡ್ ಹೈಸ್ಕೂಲನಲ್ಲಿ ಕಲಿತ ಪ್ರೊ|ಎಂ.ಎಸ್.ಶೆಟ್ಟಿಯವರಿಗೆ ಕೋಣಿ ಮ. ಕಾರಂತ ಪ್ರಶಸ್ತಿಯನ್ನು ಅವರು ಕಲಿತ ಶಾಲಾ ವಠಾರದ ಕಲಾ ಮಂದಿರದಲ್ಲಿ ಪ್ರದಾನ ಮಾಡಲಾಯಿತು.
ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದ ಮಜುರಾಯಿ ಬಂದರು ಒಳನಾಡು ಜಲಸಾರಿಗೆ ಮತ್ತು ಮೀನುಗಾರಿಕಾ ಇಲಾಖೆಯ ಸಚಿವ ಕೋm ಶ್ರೀನಿವಾಸ ಪೂಜಾರಿ ‘ಪ್ರಶಸ್ತಿಗಳು ಸೂಕ್ತ ವ್ಯಕ್ತಿಗಳಿಗೆ ದೊರಕಿದರೆ ಆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ, ಕೊ.ಮ.ಕಾರಂತ ಪ್ರಶಸ್ತಿ ಪ್ರೊ|ಎಂ.ಎಸ್.ಶೆಟ್ಟಿಯವರಿಗೆ ದೊರಕಿದ್ದು ಸೂಕ್ತವಾಗಿದೆ. ಇಂದು ಪ್ರಶಸ್ತಿಗಾಗಿ ನಡೆಯುವ ಪೈಪೋಟಿ , ಒತ್ತಡ ಹೆಚ್ಚುತ್ತದೆ. ಪ್ರೊ|ಎಂ.ಎಸ್.ಶೆಟ್ಟಿಯವರಿಗೆ ಈ ಪ್ರಶಸ್ತಿ ಹುಡುಕಿ ಬಂದಿದೆ, ಅವರ ಅನುಭವವನ್ನು ಸರಕಾರ ಸಮಾಜಕ್ಕೆ ಪ್ರಯೋಜವಾಗುವಂತೆ ಬಳಸಿಕೊಳ್ಳುವಂತೆ ಪ್ರಯತ್ನಿಸಲಾಗುವುದು’ ಎಂದು ಹೇಳಿದರು. ಕುಂದಾಪುರದ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಸ್ ಅಧ್ಯಕ್ಷರಾದ ರಾಮಚಂದ್ರ ಆಚಾರ್ ಅಭಿನಂದನ ನುಡಿಗಳನ್ನಾಡಿದರು.

    ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಪ್ರೊ|ಎಂ.ಎಸ್.ಶೆಟ್ಟಿಯವರು ನಾನು ಈ ಶಾಲೆಯಲ್ಲಿ ಕಲಿತವನು, ಇಲ್ಲಿ ಪ್ರಶಸ್ತಿ ಪಡೆದ ನನಗೆ ಶುಭ ವಿಚಾರವಾಗಿದೆ. ನಾನು ನನ್ನ ಸೇವೆಯಲ್ಲಿ ಸುಮಾರು 55 ವರ್ಷ ಈ ಪ್ರದೇಶ ಬಿಟ್ಟು ಉತ್ತರ, ಪೂರ್ವ ಭಾರತದಲ್ಲಿ ಇದ್ದು ಮರೆಯಾಗಿದ್ದೆ ಆದರೂ ನನನ್ನು ಹುಡುಕಿ ಪ್ರಶಸ್ತಿ ಕೊಟ್ಟಿದಕ್ಕೆ ತುಂಬು ಧನ್ಯವಾದಗಳು, ನಾನು ಕನ್ನಡ ಪಂಡಿತನಾಗಬೇಕೆಂಬ ಆಶೆ ಹೊಂದಿದ್ದೆ, ಆದರೆ ನನ್ನ ಹೆತ್ತವರ ಆಶೆಯಂತ್ತೆ ಇಂಜಿನಿಯರ್ ಆದೆ, ಇಂದು ಸಫಲನಾಗಿದ್ದೆನೆ. ನಾನು ಈ ಬೋರ್ಡ್ ಹೈಸ್ಕೂಲಿನಲ್ಲಿರುವಾಗಲೇ, ಸ್ವಾತಂತ್ರ್ಯ ಹೋರಾಟಕ್ಕಾಗಿ ನೇಶನಲ್ ಕಾಂಗ್ರೆಸ್ ಬೆಂಬಲಿಸಿ ರಾಷ್ಟ್ರೀಯ ಸೆವಾ ದಳದ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೆ. ನಾನು 1948 ರಲ್ಲಿ ಹೈಸ್ಕೂಲು ಮುಗಿಸಿ ಇಂಜಿನಿಯರ್‍ಗೆ ಸೇರಿಕೊಂಡು ಇಂಜಿನಿಯರ್ ಆದಾಗ ನಾನು ಬಹುಶಾ ಕುಂದಾಪುರದ ಎರಡನೇ ಇಂಜಿನಿಯರ್ ಆಗಿದ್ದೆ’ ಎಂದು ಅವರು ನೆನಪಿಸಿಕೊಂಡರು.

ಬಸ್ರೂರು ದೇವಳದ ಮುಖೇಸ್ತರಾದ. ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಮಾತಾಡಿ ಪ್ರೊ|ಎಂ.ಎಸ್.ಶೆಟ್ಟಿಯವರು ಅವರ ಸೇವೆಗಾಗಿ ಜೀವನದಲ್ಲಿ ಹೆಚ್ಚು ಕಾಲ ಕರ್ನಾಟಕ ಬಿಟ್ಟು ಹೊರಗಡೆ ಇದ್ದರು, ಆದರೂ ಅವರ ಇಳಿ ವಯಸಿನಲ್ಲಿಯೂ ಒಳ್ಳೆಯ ಕನ್ನಡ ಮಾತುಗಳು ಅವರಿಗೆ ಬರುತ್ತವೆಂದು ಅವರ ಮಾತಲ್ಲಿ ಕೇಳಿದೆ. ಯಾರೂ ಕನ್ನಡ ಮಾಧ್ಯಮದಲ್ಲಿ ಕಲಿಯಲು ಹಿಂಜರಿಯುವುದು ಬೇಡ, ಪ್ರೊ|ಎಂ.ಎಸ್.ಶೆಟ್ಟಿಯವ ಸಾಧನೆಯೆ ಉದಾರಣೆಯಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ತಾಲೂಕಿನ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ‘ಕುಂದಾಪುರ ಸಣ್ಣ ನಗರವಾದರೂ, ಇಲ್ಲಿ ಹಲವಾರು ಉತ್ತಮ ಕಾರ್ಯಕ್ರಮಗಳು ನಡೆಯುತ್ತಲೆ ಇರುತ್ತವೆ. ಕುಂದಾಪುರ ಬಹಳ ಚಟುವಟಿಕೆಯುಳ್ಳ ನಗರವಾಗಿದ್ದು ಬೇರೆ ಕಡೆ ಹೋದಾಗ ಇಲ್ಲಿನ ವಿಷಯಗಳನ್ನು ಪ್ರಸ್ತಾವಿಸುತ್ತೇನೆ’ ಎಂದರು. ಕುಂದಪ್ರಭದ ಸಂಪಾದಕ ಯು.ಎಸ್.ಶೆಣೈ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕೋ.ಮ.ಕಾರಂತರ ಸಹೋದರ ಕೋ.ಶಿವಾನಂದ ಕಾರಂತ ಪ್ರಶಸ್ತಿ ಪತ್ರ ವಾಚಿಸಿದರು. ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಜಯವಂತ ಪೈ ವಂದಿಸಿದರು.