ಕರೋನಾ ಮಹಾ ಮಾರಿ ರೋಗಕ್ಕೆ ಯಾವುದೆ ನಿರ್ಧಿಷ್ಟವಾದ ಔಷದಿ ಇಲ್ಲದಿರುವುದರಿಂದ ಆಯುರ್ವೇದ ಮನೆಯ ಔಷದಿಗಳನ್ನು ಬಳಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಕರೋನಾ ಮಹಾ ಮಾರಿ ರೋಗಕ್ಕೆ ಯಾವುದೆ ನಿರ್ಧಿಷ್ಟವಾದ ಔಷದಿ ಇಲ್ಲದಿರುವುದರಿಂದ ಆಯುರ್ವೇದ ಮನೆಯ ಔಷದಿಗಳನ್ನು ಬಳಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ  

 

 

ಶ್ರೀನಿವಾಸಪುರ: ಕರೋನಾ ಮಹಾ ಮಾರಿ ರೋಗಕ್ಕೆ ಯಾವುದೆ ನಿರ್ಧಿಷ್ಟವಾದ ಔಷದಿ ಇಲ್ಲದಿರುವುದರಿಂದ ಆಯುರ್ವೇದ ಮನೆಯ ಔಷದಿಗಳನ್ನು ಬಳಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕೆಂದು ಆಯುರ್ವೇದ ತಜ್ನ ಡಾ: ಪವನ್ ಕುಮಾರ್ ಸಫಾರೆ ತಿಳಿಸಿದ್ದಾರೆ.

ಜಿಲ್ಲಾ ಆಯುಷ್ ಇಲಾಖೆ ಕೋಲಾರ, ಸರ್ಕಾರಿ ಆಯುರ್ವೇದ ಆಸ್ಪತ್ರೆ, ಶ್ರೀನಿವಾಸಪುರ ವತಿಯಿಂದ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಘಟಕದ ಸಿಬ್ಬಂದಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಶ್ ಕಿಟ್ ಅನ್ನು ವಿತರಿಸಿ ಮಾತನಾಡಿದ ಡಾ: ಪವನ್ ಕುಮಾರ್, ಕರೋನ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೆ ಸದ್ಯದ ಪರಿಹಾರವಾಗಿದೆ. ಹಾಗಾಗಿ ಆಯುಷ್ ಇಲಾಖೆಯಿಂದ ನಿರ್ದೇಶಿತವಾದ ಸೂಚನೆಗಳಾದ ನಿತ್ಯ ಬಿಸಿನೀರು ಸೇವನೆ, ತುಳಸಿ, ಶುಂಟಿ, ಡಾಲ್ ಚಿನ್ನಿ, ಕಾಳು ಮೆಣಸಿನ ಕಶಾಯವನ್ನು ನಿತ್ಯ 2 ಬಾರಿ ಸೇವಿಸುವುದು ಯೋಗ ಪ್ರಾಣಾಯಾಮದ ಅಭ್ಯಾಸವನ್ನು ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು, ಕೆ.ಎಸ್.ಆರ್.ಟಿ.ಸಿ. ನೌಕರರು ಸದಾ ಸಾರ್ವಜನಿಕ ಸೇವೆಯಲ್ಲಿರುವುದರಿಂದ ಆಯುರ್ವೇಧ ಹೋಮಿಯೋಪತಿ ಮತ್ತು ಯುನಾನಿ ಔಷದಿಗಳಾದ ಸಂಶಮನಿವಟಿ ಆರ್ಸನಿಕಮ್, ಆಲ್ಪಮ್ 30 ಆರ್ಕ-ಎ ಅಜೀಬ್, ಔಷದಿಗಳನ್ನು ವಿತರಿಸಿ ಇದನ್ನು ಬಳಸುವ ವಿಧಾನವನ್ನು ವಿವರಿಸಿದರು.

ಕೆ.ಎಸ್.ಆರ್.ಟಿ.ಸಿ. ಘಟಕದ ವ್ಯವಸ್ಥಾಪಕ ಎಸ್.ಜಿ. ಪ್ರಶಾಂತ್ ಕುಮಾರ್ ಮಾತನಾಡಿ, ಕರೋನ ಸಂದರ್ಭದಲ್ಲಿ ಘಟಕದ ಸಿಬ್ಬಂದಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರÉ ಜೂತೆಗೆ ಸಾರ್ವಜನಿಕರ ಸೇವೆ ಮಾಡುವುದು ಅನಿವಾರ್ಯವಾಗಿದೆ, ಭಾರತೀಯ ವೈಧ್ಯ ಪದ್ದತಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಿಂದಿನ ಕಾಲದಿಂದಲೂ ಮನೆಗಳಲ್ಲಿ ಬಳಸಲಾಗುತ್ತಿದ್ದು, ಇವುಗಳೆಲ್ಲವನ್ನು ನಾವು ಮೊಳಕೆ ಮಾಡಿಕೊಂಡು ಜೊತೆಗೆ ಇಲಾಖೆ ವಿತರಿಸಿದ ಔಷಧಿಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೆಕ್ಕ ಪತ್ರ ಮೇಲ್ವಿಚಾರಕ ರವಿಶಂಕರ, ಹರೀಷ್, ಸಂದೀಪ್, ಸಂಚಾರ ನಿರೀಕ್ಷಕ ಮನೋಹರ್, ಮುನಿಶಾಮಿ, ಕವಿತ, ಗಂಗಾಧರ್, ಸರ್ಕಾರಿ ಆಯುರ್ವೇಧ ಇಲಾಖೆಯ ಮತ್ತು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಜರಿದ್ದರು.