ಕಥೊಲಿಕ್ ಸಭಾ ಬೆಳ್ಮಣ್ ಘಟಕದ ವತಿಯಿಂದ  ಪ್ರತಿಭಾ ಪುರಸ್ಕಾರ

ವರದಿ: ವಾಲ್ಟರ್ ಮೊಂತೇರೊ

ಕಥೊಲಿಕ್ ಸಭಾ ಬೆಳ್ಮಣ್ ಘಟಕದ ವತಿಯಿಂದ  ಪ್ರತಿಭಾ ಪುರಸ್ಕಾರ

13.10.2019 ಆದಿತ್ಯವಾರ ಕಥೊಲಿಕ್ ಸಭಾ ಬೆಳ್ಮಣ್ ಘಟಕದ ವತಿಯಿಂದ ಬೆಳ್ಮಣ್ ಚರ್ಚ್‍ನ ಮಿನಿಹಾಲ್‍ನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡೆವು. ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ ಹಾಗೂ ಉನ್ನತ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಮಕ್ಕಳಿಗೆ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. ಜೊತೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಚರ್ಚ್‍ನ ಧರ್ಮಗುರುಗಳಾದ ರೇ|ಫಾ| ಎಡ್ವಿನ್ ಡಿಸೋಜ, ದಿಯಕೊನ್ ಐವನ್ ಮಾರ್ಟಿಸ್, ಮುಖ್ಯ ಅತಿಥಿಗಳಾದ ಚರ್ಚಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಆಲ್ವಿನ್ ಅಗೇರಾ, 18 ಆಯೋಗಾಗಳ ಸಂಯೋಜಕ ಶ್ರೀ ಡೊಮಿನಿಕ್ ಅಂದ್ರಾದೆ, ಸಿ| ಗ್ಲಾಡಿಸ್, ಕಥೊಲಿಕ್ ಸಭೆಯ ಅಧ್ಯಕ್ಷರಾದ ಶ್ರೀಮತಿ ಸೆವ್ರಿನ್ ಡೇಸಾ, ಕಾರ್ಯದರ್ಶಿ ಜೆನೆಟ್ ಬ್ರಿಟ್ಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚರ್ಚಿನ ಧರ್ಮಗುರುಗಳಾದ ಎಡ್ವಿನ್ ಡಿಸೋಜರವರು ಮಕ್ಕಳನ್ನು ಉದ್ದೇಶಿಸಿ ಮಾತಾನಾಡಿದರು “ ಹೆತ್ತವರ ಮಾತಿಗೆ ಬೆಲೆ ಕೊಟ್ಟರೆ ಮಾತ್ರ ಜೀವನದಲ್ಲಿ ಯಶಸ್ಸು” ಎಂಬ ಧ್ಯೇಯವಾಕ್ಯವನ್ನು ನುಡಿದರು. ಈ ಸಂದರ್ಭದಲ್ಲಿ ಬೆಳ್ಮಣ್ ಚರ್ಚಿನ ಕು| ರೊಶೆಲ್ ಡಿಕ್ರೂಜ್ ಸಿ.ಎ ಪರೀಕ್ಷೆಯಲ್ಲಿ ಪಾಸಾಗಿ ಚಾರ್ಟ್‍ಡ್ ಎಕೌಂಟೆಂಟ್ ಎಂಬ ಪದವಿಯನ್ನು ಪೂರ್ಣಗೊಳಿಸಿ ಬೆಳ್ಮಣ್ ಚರ್ಚಿಗೆ ಕೀರ್ತಿ ತಂದ ಕಾರಣ ಅವಳನ್ನು ಚರ್ಚಿನ ಪರವಾಗಿ ಹಾಗೂ ಕಥೊಲಿಕ್ ಸಭಾ ಪರವಾಗಿ ಸನ್ಮಾನಿಸಲಾಯಿತು. ಸೆವ್ರಿನ್ ಡೇಸಾ ಸ್ವಾಗತಿಸಿದರು. ಜೆನೆಟ್ ಬ್ರಿಟ್ಟೋ ಧನ್ಯವಾದ ಮಾಡಿದರು, ಲಿಡಿಯಾ ಆರಾನ್ಹ ಕಾರ್ಯಕ್ರಮ ನಿರೂಪಿಸಿದರು.