ಕಥೊಲಿಕ್ ಸಭಾ ಕುಂದಾಪುರ ವಲಯದಿಂದ ಪೊಕ್ಸೊ ಕಾನೂನು – ಲೈಗಿಂಕ ಹಲ್ಲೆಯ ಬಗ್ಗೆ ಮಾಹಿತಿ ಕಾರ್ಯಗಾರ

JANANUDI.COM NETWORK 

ಕಥೊಲಿಕ್ ಸಭಾ ಕುಂದಾಪುರ ವಲಯದಿಂದ ಪೊಕ್ಸೊ ಕಾನೂನು – ಲೈಗಿಂಕ ಹಲ್ಲೆಯ ಬಗ್ಗೆ ಮಾಹಿತಿ ಕಾರ್ಯಗಾರ


ಕುಂದಾಪುರ, ಆ.19: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿಯಿಂದ ಅಪ್ರಾಪ್ತ ಮಕ್ಕಳ ಮೇಲೆ ಲೈಗಿಂಕ ಹಲ್ಲೆ ಮತ್ತು ಹಲ್ಲೆ ಮಾಡಿದಕ್ಕೆ ನ್ಯಾಯ ದೊರಕಿಸಿಕೊಡುವ ಪೊಕ್ಸೊ ಕಾನೂನಿನ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರವು ಸ್ಥಳಿಯ ಪಿ.ಯು.ಕಾಲೇಜ್ ಸಭಾ ಭವನದಲ್ಲಿ ಆಗೋಸ್ತ್ 18 ರಂದು ನಡೆಯಿತು.
ಕಾರ್ಯಗಾರವನ್ನು ನಡೆಸಲಿಕ್ಕಾಗಿ ಜಿಲ್ಲಾ ವಿಶೇಷ ಅಭಿಯೋಜಕ ವಿಜಯ ವಾಸು ಪೂಜಾರಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ‘ಅಪ್ರಾಪ್ತ ಮಕ್ಕಳು ಲೈಗಿಂಕ ಹಲ್ಲೆಗೊಳಗಾದವರು ಹೆಚ್ಚಾಗಿ ತಮ್ಮ ಹತ್ತಿರದವರಿಂದ, ಬಂಧುಗಳಿಂದ ಕುಟುಂಬಸ್ಥರಿಂದ, ಅದ್ಯಾಪಕರರಿಂದ ಎಂದು ಪರಿಶೀಲನೆಯಿಂದ ತಿಳಿದು ಬಂದಿದೆ. ಈ ಲೈಗಿಂಕ ಹಲ್ಲೆಗಳು 100 ರಲ್ಲಿ 93 ಪ್ರಕರಣಗಳು ಹೊರ ಬರುವುದಿಲ್ಲಾ, ಮರ್ಯಾದೆಯ ಅಂಜಿಕೆಯಿಂದ ಪ್ರಕರಣಗಳು ದಾಖಲಿಸದೆ ಮುಚ್ಚಿ ಹೋಗುತ್ತಿವೆ,  ಪೊಕ್ಸೊ ಕಾಯಿದೆ ಅಡಿ ಹಲ್ಲೆಯಾದವರ ಬಗ್ಗೆ ಬಹಿರಂಗ ಪಡಿಸುವಂತೆ ಇಲ್ಲಾ, ಮಾದ್ಯಮಗಳು ಲೈಗಿಂಕ ಹಲ್ಲೆಯಾದವರ ಅಪ್ರಾಪ್ತ ಹೆಣ್ಣು ಗಂಡು ಅಥವಾ ಲಿಂಗ ಬೇದದವರ ಹೆಸರನ್ನು ಪ್ರಕಟಿಸಿದರೆ ಆರು ತಿಂಗಳ ಶಿಕ್ಷಯಾಗುವು, ಲೈಗಿಂಕ ಹಲ್ಲೆಯಾದವರ ಬಗ್ಗೆ ವಿವರಗಳನ್ನು ಗುಪ್ತವಾಗಿಡಲಾಗುವುದು, ಯಾರೋಬ್ಬರು ರೇಪ್ ಅಂತಾ ಬಳಸುವ ಹಾಗಿಲ್ಲಾ, ಲೈಂಗಿಕ ಹಲ್ಲೆ ಎಂದು ಕರೆಯ ಬೇಕು, ಹಲ್ಲೆಯಾದವರ ಹೆಸರನ್ನು ನ್ಯಾಧಿಶರು ಕೂಡ ಉಚ್ಚರಿಸುವುದಿಲ್ಲಾ, ಎಲ್ಲವೂ ಗೌಪ್ಯವಾಗಿ ತನಿಕೆ ನಡೆಯುವುದು, ಹಾಗಾಗಿ ಲೈಗಿಂಗ ಹಲ್ಲೆಯಾದವರು ಯಾವ ಭೀತಿಯು ಬೇಡ. ಅಪರಾಧಿಯ ಅಪರಾಧ ಶಾಭಿತಾರರೆ ಅಪರಾಧಿಗೆ ಕಠಿಣ ಶಿಕ್ಷೆಯನ್ನು ವಿದಿಸಲಾಗುವುದು’ ಎಂದು ಕಾನುನಿ ಬಗ್ಗೆ ಸವಿಸ್ತಾರವಾದ ಅರಿವನ್ನು ವಿಜಯ ವಾಸು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭೆಯ ಅದ್ಯಾತ್ಮಿಕ ನಿರ್ದೇಶಕ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ‘ಪೊಕ್ಸೊ ಕಾಯ್ದೆ ಬಂದು 7 ವರ್ಷ ಸಂದರೂ, ಇದನ್ನು ಸೂಕ್ತವಾಗಿ ಬಳಸದೆ ನ್ಯಾಯವನ್ನು ಪಡೆದುಕೊಳ್ಳುತ್ತಿಲ್ಲಾ, ಈ ಕಾಯ್ದೆಯನ್ನು ನಾವು ಸದುಪಯೋಗ ಪಡೆದುಕೊಳ್ಳೊಣ’ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಸಂಚಾಲಕ ಜೋನ್ಸನ್ ಡಿಆಲ್ಮೇಡಾ, ವಿಜಯ್ ವಾಸು ಕಿರಿಯ ವಯಸ್ಸಿನ ಅಭಿಯಂತರರಾಗಿ ಆಯ್ಕೆಗೊಂಡವರು ಹಾಗೂ ಆರೋಪಿಗಳಿಗೆ ಹೆಚ್ಚು ಶಿಕ್ಷೆ ನೀಡಿದವರೆಂದು ಅಭಿಯಂತರರ ಪರಿಚಯ ನೀಡಿದರು.
ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಕುಂದಾಪುರ ಚರ್ಚಿನ ಸಹಾಯಹ ಧರ್ಮಗುರು ವಂ|ವಿಜಯ್ ಡಿಸೋಜಾ, ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಅಮ್ರತ್ ಮಾರ್ಟಿಸ್, ಕಥೊಲಿಕ್ ಸಭಾ ಕುಂದಾಪುರ ವಲಯದ ಉಪಾಧ್ಯಕ್ಷರಾದ ಎಲ್ಟನ್ ರೆಬೇರೊ ಸಹ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ, ಖಚಾಂಚಿಂi ವಿಲ್ಸನ್ ಡಿಆಲ್ಮೇಡಾ ಉಪಸ್ಥಿತರಿದ್ದರು ನಿಯೋಜಿತ ಅಧ್ಯಕ್ಷೆ ಮೇಬಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿ ವಿನೋದ್ ಕ್ರಾಸ್ಟೊ ವಂದಿಸಿದರು.