JANANUDI.COM NETWORK
ದಿನಾಂಕ 09/10/2020 ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಕೊಟೇಶ್ವರ ಜ್ಯೂನಿಯರ್ ಕಾಲೇಜು ಬಳಿಯ ಸಾರ್ವಜನಿಕ ಸ್ಥಳದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾಟದ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ. ಸದಾಶಿವ ಆರ್ ಗವರೋಜಿಯವರು ಠಾಣಾ ಸಿಬ್ಬಂದಿಯವರೊಂದಿಗೆ ಕೊಟೇಶ್ವರ ಜ್ಯೂನಿಯರ್ ಕಾಲೇಜು ಸಮೀಪ 19:45 ಗಂಟೆಗೆ ತಲುಪಿದಾಗ ಕೊಟೇಶ್ವರ ಜ್ಯೂನಿಯರ್ ಕಾಲೇಜು ಬಳಿಯ ಸಾರ್ವಜನಿಕ ಸ್ಥಳದಲ್ಲಿ 7 ಜನರು ನಿಂತುಕೊಂಡಿದ್ದು ಅವರ ಪೈಕಿ ಓರ್ವನು ಓರ್ವನು ರಾಜಸ್ಥಾನ ರಾಯಲ್ಸ್ ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300 ಎಂದು ಎಂದು ಜೋರಾಗಿ ಹೇಳುತ್ತಾ ನೋಟ್ ಪುಸ್ತಕದಲ್ಲಿ ವಿವರಗಳನ್ನು ಬರೆದುಕೊಳ್ಳುತ್ತಿದ್ದು ಇತರರು ಕೈಯಲ್ಲಿ ಹಣವನ್ನು ಹಿಡಿದುಕೊಂಡು ರಾಜಸ್ಥಾನ ರಾಯಲ್ಸ್ ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300 ಎಂದು ಹೇಳುತ್ತಿರುವುದನ್ನು ಗಮನಿಸಿ ಇವರುಗಳು ತಮ್ಮ ಸ್ವಂತ ಲಾಭಕ್ಕಾಗಿ ಕ್ರಿಕೆಟ್ ಪಂದ್ಯದ ಮೇಲೆ ಹಣವನ್ನು ಪಣವಾಗಿಟ್ಟು ಬೆಟ್ಟಿಂಗ್ ನಡೆಸುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದು ಕಂಡುಬಂದಿರುವುದರಿಂದ ಆರೋಪಿತರನ್ನು ವಶಕ್ಕೆ ಪಡೆದು ಬೆಟ್ಟಿಂಗ್ ನಡೆಸಲು ಉಪಯೋಗಿಸಿದ ನಗದು ರೂ 29,000/-, ರೆಡ್ ಮಿ ಮೊಬೈಲ್ ಫೋನ್-1 ಹಾಗೂ ಒಂದು ನೋಟ್ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳುತಿಳಿಸಿವೆ.
ಆರೋಪಿಗಳ ವಿವರ ಹೀಗಿದೆ
1) ರಾಘವೇಂದ್ರ ಪ್ರಾಯ: 38 ವರ್ಷ, ತಂದೆ: ಶ್ರೀನಿವಾಸ ಜೋಗಿ, ವಾಸ: ಕೋಟೇಶ್ವರ ಜ್ಯೂನಿಯರ್ ಕಾಲೇಜು ಬಳಿ, ಕೋಟೇಶ್ವರ ಅಂಚೆ, ಬೀಜಾಡಿ ಗ್ರಾಮ, 2). ಶ್ರುತಿರಾಜ್ ಪ್ರಾಯ 28 ವರ್ಷ, ತಂದೆ: ದಿ: ರಾಜು ಮೊಗವೀರ, ವಾಸ: ಕ್ಯಾಜಿ ಕೆರೆ ಹತ್ತಿರ, ಅರಸರಬೆಟ್ಟು ರಸ್ತೆ, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು 3). ಸುಬಾಸ್ ಪ್ರಾಯ: 29 ವರ್ಷ, ತಂದೆ: ಗೋವಿಂದ ಮರಕಾಲ, ವಾಸ: ಕ್ಯಾಜಿ ಕೆರೆ ಹತ್ತಿರ, ಅರಸರಬೆಟ್ಟು ರಸ್ತೆ, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು. 4). ಸರ್ಫರಾಜ್ (35), ತಂದೆ: ಅನ್ವರ್, ವಾಸ: ವಿಶ್ವಕರ್ಮಹಾಲ್ ಎದುರು, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು. 5). ಮುರಳಿ, ಪ್ರಾಯ: 30 ವರ್ಷ, ತಂದೆ:ರಾಮು ಎನ್ ವಾಸ: ಗಣೇಶ ಕೃಪ, ಹಳವಳ್ಳಿ ಮಸೀದಿಯ ಬಳಿ, ಬೀಜಾಡಿ ಗ್ರಾಮ, ಕುಂದಾಪುರ ತಾಲೂಕು. 6) ರತೀಶ್, ಪ್ರಾಯ: 35 ವರ್ಷ, ತಂದೆ: ದಿ: ವಾಸುದೇವ ಆಚಾರ್, ವಾಸ: ವಾಸುಧೇವ ಸಧನ, ಕಾಮತ್ ಪೆಟ್ರೋಲ್ ಪಂಪ್ ಬಳಿ, ಬೀಚ್ ರಸ್ತೆ, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು. 7). ರಾಘವೇಂದ್ರ ಪ್ರಾಯ: 37 ವರ್ಷ, ತಂದೆ: ರಾಮಚಂದ್ರ ಮೊಗವೀರ, ವಾಸ: ರಾಘವೇಂದ್ರ ನಿಲಯ, ಬ್ಯಾಲಿ ಬೊಬ್ಬರ್ಯ ದೇವಸ್ಥಾನದ ಬಳಿ, ಬೀಜಾಡಿ, ಬೀಜಾಡಿ ಗ್ರಾಮ, ಕುಂದಾಪುರ ತಾಲೂಕು