ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಅಂಗನವಾಡಿ ನೌಕರರ ಕುಂದುಕೊರತೆಗಳ ಸಭೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಅಂಗನವಾಡಿ ನೌಕರರ ಕುಂದುಕೊರತೆಗಳ ಸಭೆ

ಕೋಲಾರ : ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕೀಯರ ಕುಂದುಕೊರತೆಗಳನ್ನು ಚರ್ಚೆ ಮಾಡಲು ಸುಮಾರು 3 ವರ್ಷಗಳಿಂದ ಸಾಧ್ಯವಾಗದೆ ಈ ಹಿಂದೆ ಇದ್ದಂತಹ ಉಪ ನಿರ್ದೇಶಕರು ವಿಳಂಭ ಮಾಡಿದ್ದು, ಇತ್ತೀಚೆಗೆ ಅಧಿಕಾರಿಗಳಾಗಿ ಬಂದಿರುವ ಎಂ.ಜಿ.ಪಾಲಿ ರವರು ಜಿಲ್ಲೆಯ ಅಂಗನವಾಡಿ ನೌಕರರ ಸಂಘಟನೆಗಳ ಮುಖಂಡರುಗಳ ಸಭೆಯನ್ನು ನಡೆಸಿದರು. ಸಭೆಯಲ್ಲಿ ಜಿಲ್ಲೆಯಲ್ಲಿ ಸುಮಾರು 3-4 ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಅಂಗನವಾಡಿ ನೌಕರರಿಗೆ ಗೌರವ ಧನ ನೀಡುತ್ತಿರಲಿಲ್ಲ. ಮತ್ತು ಆಹಾರ ಸರಬರಾಜು ದಿನಾಂಕವನ್ನು ಸಹ ನೀಡಿರುವುದಿಲ್ಲ. ಇದರ ಬಗ್ಗೆ ಅಂಗನವಾಡಿ ಸಂಘಟನೆಗಳ ಮುಖಂಡರುಗಳು ಉಪ ನಿರ್ದೇಶಕರ ಗಮನಕ್ಕೆ ಸಭೆಯಲ್ಲಿ ತಂದಾಗ ಇನ್ನು ಮುಂದೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಗೌರವಧನ ಮತ್ತು ಇದರ ಜೊತೆಯಲ್ಲೇ ಮೊಟ್ಟೆ ಮತ್ತು ತರಕಾರಿಗಳ ಹಣವನ್ನು ಅಂಗನವಾಡಿ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಭೆಗೆ ಬರವಸೆ ನೀಡಿದರು.

ಈ ಹಿಂದೆ ಇದ್ದ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಬಂದು ಮಧ್ಯಾಹ್ನದ ಊಟ ಮಾಡಬೇಕೆಂದು ಆದೇಶ ಮಾಡಿದ್ದರು. ಆದರೆ ಗರ್ಭಿಣಿ ಮತ್ತು ಬಾಣಂತಿಯರು ಹಲವು ಕಡೆ ಅಂಗನವಾಡಿ ಕೇಂದ್ರಗಳಿಗೆ ಬಂದು ಊಟ ಮಾಡಲು ಹಿಂಜರಿಯುತ್ತಿದ್ದು, ಈ ಪದ್ಧತಿಯನ್ನು ನಿಲ್ಲಿಸಿ ಈ ಹಿಂದೆ ಇದ್ದಂತಹ ಟೇಕ್ ಹೋಂ ಪುಡ್ ಮತ್ತು ಎಂ.ಎಸ್.ಪಿ.ಟಿ.ಸಿ. ಗಳ ಉಸ್ತುವಾರಿಯನ್ನು ಮೂರು ವರ್ಷಕ್ಕೊಮ್ಮೆಯಾದರೂ ಬದಲಾಯಿಸಬೇಕು. ಅಂಗನವಾಡಿ ನೌಕರರಿಗೆ ನೀಡುತ್ತಿರುವ ಸಮವಸ್ತ್ರ ಸರಿಯಿಲ್ಲದೆ ಇರುವುದರಿಂದ ಗುಣಮಟ್ಟದ ಸಮವಸ್ತ್ರವನ್ನು ನೀಡಬೇಕೆಂಬ ಬೇಡಿಕೆಯ ಮನವಿಯನ್ನು ಸರ್ಕಾರಕ್ಕೆ ಮತ್ತು ಕೇಂದ್ರ ಕಛೇರಿಗೆ ಪಸ್ತಾವನೆ ಸಲ್ಲಿಸುತ್ತೇನೆ ಎಂದು ಉಪ ನಿರ್ದೇಶಕಿ ಎಂ.ಜಿ.ಪಾಲಿ ರವರು ಭರವಸೆ ನೀಡಿದರು. ಈ ಸಭೆಯಲ್ಲಿ ನಿರೂಪಣಾಧಿಕಾರಿಗಳು ಹಾಗೂ ಬಂಗಾರಪೇಟೆ ಮತ್ತು ಕೋಲಾರ ಶಿಶು ಅಭಿವೃದ್ಧಿ ಅಧಿಕಾರಿ ಆದ ಕೆ.ಹೆಚ್.ಎಸ್.ಜೈದೇವಿ, ಸಿ.ಡಿ.ಪಿ.ಗಳಾದ ಶ್ರೀನಿವಾಸಪುರ ರೋಜಲಿನ್, ಮುಳಬಾಗಿಲಿನ ಪ್ರಭಾವತಿ, ಮಾಲೂರಿನ ಶೀಲ ಹಾಗೂ ಬೇತಮಂಗಲ ಮುನಿರಾಜು ರವರುಗಳ ಜೊತೆಯಲ್ಲಿ ಕಲ್ಲಮಂಜಲಿ ಸಿ. ಶಿವಣ್ಣ ನೇತೃತ್ವದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕೀಯರ ಕ್ಷೇಮಾಭಿವೃದ್ಧಿ ಸಮಿತಿಯ ಮುಖಂಡರುಗಳಾದ ವಿ.ನಿರ್ಮಲಾಬಾಯಿ, ಕಲ್ವಮಂಜಲಿ ನಾಗವೇಣಮ್ಮ, ಎಂ.ವಿಜಯಕುಮಾರಿ, ಪಾರ್ವತಮ್ಮ, ಲಕ್ಷ್ಮೀದೇವಮ್ಮ, ಹೆಚ್.ಮಂಜುಳ, ವಿಮಲಮ್ಮ ಇತರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.