ಇವತ್ತಿನ ಸಮಾಜದಲ್ಲಿ ಪತ್ರಕರ್ತ ದಿಕ್ಕೆ ತಪ್ಪಿ ಬಿಟ್ಟಿದ್ದಾನೆ: ಕುಂದಾಪುರ ತಾ. ಕಾ. ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ – ಚಿಂತಕ ಪತ್ರಕರ್ತ ದಿನೇಶ್ ಅಮೀನ್ ಮಟ್ಟು

JANANUDI.COM NET WORK

ಇವತ್ತಿನ ಸಮಾಜದಲ್ಲಿ ಪತ್ರಕರ್ತ ದಿಕ್ಕೆ ತಪ್ಪಿ ಬಿಟ್ಟಿದ್ದಾನೆ: ಕುಂದಾಪುರ ತಾ. ಕಾ. ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ –ಪತ್ರಕರ್ತ  ಚಿಂತಕ  ದಿನೇಶ್ ಅಮೀನ್ ಮಟ್ಟು

 

 

ಕುಂದಾಪುರ, ನ.14: ’:ಕೆಲವು ವರ್ಷಗಳ ಹಿಂದೆ ಇದ್ದ ಪತ್ರಿಕಾ ರಂಗ ಮತ್ತು ಈಗಿರುವ ಪತ್ರಿಕಾ ರಂಗದ ಸ್ಥಿತಿ ಅಜಗಜಾಂತರ ಪರಿಸ್ಥಿತಿ ಉಂಟಾಗಿದೆ. ಇವತ್ತು ಪತ್ರಕರ್ತ ಕವಲುದಾರಿಯಲ್ಲಿದ್ದಾನೆ.  ವಾಸ್ತವಿಕ ಸುದ್ದಿಯನ್ನು ನೀಡಲು ಪತ್ರಕರ್ತನಿಗೆ ಅಸಾಧ್ಯವಾದ ಸ್ಥಿತಿ ನಿರ್ಮಾಣವಾದಂತಿದೆ.  ಇಂದು  ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿಲ್ಲ. ಆದರೂ ಅಘೋಷಿತ ತುರ್ತು ಪರಿಸ್ಥಿತಿಯ ನಿರ್ಮಾಣವಾದಂತಿದೆ. . ಯಾವ ಪ್ರಭುತ್ವವೂ ಕೂಡ ಈ ಥರದ ಸ್ವತಂತ್ರ ಮಾಧ್ಯಮವನ್ನು ಇಷ್ಟಪಡುವುದಿಲ್ಲ. ಹಿಂದೆ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದಾಗ ಮಾಧ್ಯಮದವರು ದೇಶಾದ್ಯಂತ ಪ್ರಬಲ ವಿರೋಧಗ ತೋರಿಸಿದ್ದವು. ಆದರೆ ಇಂದು ತುರ್ತು ಪರಿಸ್ಥಿತಿ ಇಲ್ಲದಿದ್ದರೂ ಮಾಧ್ಯಮಗಳು ಸೇರಿ ಯಾರೂ ಕೂಡ ಪ್ರಶ್ನೆ ಮಾಡದಿರುವಂತಹ ಸ್ಥಿತಿ ನಿರ್ಮಾಣವಾಗಿರುವುದು ಯಾಕೆ ಎನ್ನುವುದು ಕಾಡುವ ಪರ್ಶ್ನೆಯಾಗಿದೆ’ ಎಂದು  ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಮಂಗಳವಾರ ಸಂಜೆ ಕುಂದಾಪುರ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಕವಲು ದಾರಿಯಲ್ಲಿ ಪತ್ರಕರ್ತ ಎಂಬ ವಿಷಯದ ಮೇಲೆ  ದಿಕ್ಸೂಚಿ ಭಾಷಣ ಮಾಡಿದರು.

    ಪತ್ರಕರ್ತ ಸೂಕ್ಷ್ಮತೆ ಅರಿತುಕೊಳ್ಳ ಬೇಕು, ಸೂಕ್ಷ್ಮತೆ ಅರಿವು ಇಲ್ಲದವರು ಪತ್ರಕರ್ತನಾಗಲು ಸಾಧ್ಯವಿಲ್ಲಾ.  ಜಾಗೃತ ಸಮಾಜದಲ್ಲಿ ಮಾತ್ರ ಒಂದು ಪತ್ರಿಕೆ ಯಶಸ್ವಿಯಾಗಿ ತಮ್ಮ ಕೆಲಸವನ್ನು  ಮಾಡಲು ಸಾಧ್ಯವಿರುತ್ತದೆ.  ವಿಶ್ವಾಸ ಕಳೆದುಕೊಂಡರೆ ಪತ್ರಿಕೆ ಬೆಲೆ ಇಲ್ಲದೆ ಅದು ರದ್ದಿಯಾಗುತ್ತದೆ. ಓದುಗ ಪತ್ರ್ರಿಕೆಗಳನ್ನು ಓದುತ್ತಾನೆ, ಆದರೆ ಆತ ಪತ್ರಿಕೆಗಳನ್ನು ನಂಬುತ್ತಿಲ್ಲ ಪರಿಸ್ಥಿಯಲಿಲ್ಲಾ.. ಇತರ ದೇಶಗಳಲ್ಲಿ ಪತ್ರಿಕೆಗಳಿಗೆ ಹತ್ತರಿಂದ ಹದಿನೈದು ರೂಪಾಯಿ ಇದೆ. ಆದರೆ ಭಾರತದಲ್ಲಿ ಪತ್ರಿಕೆಗಳ ಬೆಲೆ ಕಡಿಮೆಯಿದೆ. ಇದರಿಂದಾಗಿ ಒದುಗರೆ ಜಾಹಿರಾತುದಾರನ ಕಾಲಾ ಕೆಳಗೆ ಪತ್ರಿಕೆ ಕೊಂಡಯ್ಯವಂತಾಗಿದೆ.  ಉತ್ಪಾದನ ವೆಚ್ಚಕಿಂತ, ಕಡಿಮೆ ಬೆಲೆಗೆ ಒಂದು ವಸ್ತು ಸಿಗುವುದಾದರೆ, ಅದು ಪತ್ರಿಕೆ, ಇವತ್ತಿನ ಸ್ಥಿಯಲ್ಲಿ ಪತ್ರಕರ್ತ ಎಲ್ಲಾ ಸ್ಥಿತಿಯನ್ನು ಮೆಟ್ಟಿ ನಿಂತು ಕೆಲಸ ಮಾಡಬೇಕಾಗಿದೆ.  ’ ಎಂದು ಅವರು ಹೇಳಿದರು.

      ಮಾಧ್ಯಮ  ಕ್ಷೇತ್ರ ಮತ್ತು ಪೊಲೀಸ್ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳು, ಮಾಧ್ಯಮ ಮತ್ತು ಪೊಲೀಸ್ ಇಲಾಖೆ ಪರ್ಸಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ, ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಬಹುದೆಂದು’ ಮುಖ್ಯ ಅತಿಥಿ ಕುಂದಾಪುರದ  ಎ ಎಸ್ಪಿ  ಹರಿರಾಮ್ ಶಂಕರ್ ತಿಳಿಸಿದರು

        ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ನೂತನ  ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ, ಪ್ರಧಾನ ಕಾರ್ಯದರ್ಶಿ ರಾಯಪ್ಪನ ಮಠ ಉಪಾಧ್ಯಕ್ಷರುಗಳಾದ ಎಸ್.ಎಮ್. ಮಝರ್, ಸಂತೋಷ ಕುಂದೇಶ್ವರ, ಕೋಶಾಧಿಕಾರಿಯಾಗಿ ಸತೀಶ್ ಆಚಾರ್ ಉಳ್ಳುರು, ಜತೆ ಕಾರ್ಯದರ್ಶಿಯಾಗಿ ರಾಘವೇಂದ್ರ ಬಳ್ಕೂರು, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ರಾಘವೇಂದ್ರ ಪೈ, ಉದಯಕುಮಾರ ತಲ್ಲೂರು, ವಿನಯಾ ಪಾಯ್ಸ್, ಜಿ.ಎಂ.ಶೆಣೈ, ಬರ್ನಾಡ್ ಡಿಕೋಸ್ತಾ, ಜಯಶೇಖರ ಮಡ್ಪಾಡಿ ಮತ್ತು ಚಂದ್ರಮ ತಲ್ಲೂರು   ಇವರಿಗೆ ಪ್ರತಿಜ್ಙಾವಿಧಿಯನ್ನು ಭೋಧಿಸಿದರು.

 

 

. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಹಾಗೂ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಪತ್ರಕರ್ತ ಸಂತೋಷ್ ಕುಂದೇಶ್ವರ ಇವರನ್ನು ಸನ್ಮಾನಿಸಲಾಯಿತು.

ಕುಂದಾಪುರ ತಾಲೂಕು ಕಾರ್ಯನಿತರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು, ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಕೆಸಿ, ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ದನ್ ಎಸ್ ಮರವಂತೆ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ತಾಲೂಕು ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿ ಸತೀಶ್ ಆಚಾರ್ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ರಾಮಕೃಷ್ಣ ಹೇರ್ಳೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ರಾಘವೇಂದ್ರ ಪೈ ಸ್ವಾಗತಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಧನ್ಯವಾದವಿತ್ತರು. ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.