JANANUDI.COM NETWORK
ಇನ್‍ಸ್ಪಾಯರ್ ಅವಾರ್ಡ್
ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲಾ ವಿದ್ಯಾರ್ಥಿ ಸ್ಟೆಲೋನ್ ಫೆರ್ನಾಂಡಿಸ್ ರಾಜ್ಯಮಟ್ಟಕ್ಕೆ ಆಯ್ಕೆ
ಕುಂದಾಪುರ: ಫೆ. 3: ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇವರ ಆಶ್ರಯದಲ್ಲಿ ಮಂಗಳೂರು ಪಿಲಿಕುಳ ನಿಸರ್ಗಧಾಮದಲ್ಲಿ ನಡೆದ ದಕ್ಷಿಣ ಕನ್ನಡ ಮತು ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇನ್‍ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸ್ಟೆಲೋನ್ ಫೆರ್ನಾಂಡಿಸ್ ರಚಿಸಿದ “ಮಲ್ಟಿಪರ್ಪಸ್ ಪೋರ್ಟೇಬಲ್ ಟೇಬಲ್” ಅತ್ಯುತ್ತಮ ವಿಜ್ಞಾನ ಮಾದರಿಯಾಗಿ ಮೂಡಿ ಬಂದಿದ್ದು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ಸ್ಟೆಲೋನ್ ಫೆರ್ನಾಂಡಿಸ್
ಇದೇ ವಿದ್ಯಾ ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿ ವಿಶ್ವಾಸ್ ರಚಿಸಿದ “ಜನರೇಟಿಂಗ್ ಇಲೆಕ್ಟ್ರಿಸಿಟಿ ಬೈ ಮೂವಿಂಗ್ ವೆಹಿಕಲ್”ಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ ಬಂದಿದ್ದು, ಈ ವಿದ್ಯಾರ್ಥಿಗಳನ್ನು ಶಾಲಾ ವಿಜ್ಞಾನ ಶಿಕ್ಷಕಿ ಸ್ಮಿತಾ ಡಿ ಸೋಜಾ ತರಬೇತಿಗೊಳಿಸಿದ್ದರು. ವಿಜೇತರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.
ವಿಶ್ವಾಸ್