ಆಯುಷ್ ಸಚಿವಾಲಯದಿಂದ ಅನುಮೋದನೆಗೊಂಡ ಆಯುಷ್ ರೋಗ ನಿರೋಧಕ ಔಷಧಿಗಳನ್ನು ಮೆಸ್ಕಾಂ ಸಿಬ್ಬಂದಿಗಳಿಗೆ ವಿತರಣೆ

JANANUDI.CO NETWORK

 

ಆಯುಷ್ ಸಚಿವಾಲಯದಿಂದ ಅನುಮೋದನೆಗೊಂಡ ಆಯುಷ್ ರೋಗ ನಿರೋಧಕ ಔಷಧಿಗಳನ್ನು ಮೆಸ್ಕಾಂ ಸಿಬ್ಬಂದಿಗಳಿಗೆ ವಿತರಣೆ 

 

 

ಕುಂದಾಪುರ,ಜೂ.20: ಕೋವಿಡ್-19 ರೋಗವನ್ನು ತಡೆಗಟ್ಟುವ ಸಲುವಾಗಿ ಆಯುಷ್ ಸಚಿವಾಲಯದಿಂದ ಅನುಮೋದನೆಗೊಂಡ ಆಯುಷ್ ರೋಗ ನಿರೋಧಕ ಔಷಧಿಗಳಾದ ಸಂಶಮನಿ ವಟಿ ಮತ್ತು ಆರ್ಸೆನಿಕ್ ಆಲ್ಬಾ ಅನ್ನು ದಿನಾಂಕ 20-06-2020ರಂದು ತಾಲೂಕು ಆಯುಷ್ ಘಟಕ (ಆಸ್ಪತ್ರೆ) ಕುಂದಾಪುರ ಇಲ್ಲಿ ಕುಂದಾಪುರ ವಿಭಾಗದ ಮೆಸ್ಕಾಂ ಅಧಿಕಾರಿ ವರ್ಗದವರಿಗೆ ಮತ್ತು ಸಿಬ್ಬಂದಿಗಳಿಗೆ ಡಾ|| ನಾಗೇಶ್, ತಜ್ಞ ವೈದ್ಯರು ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇವರು ವಿತರಿಸಿ ಈ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಆಯುರ್ವೇದವು ಬಹಳ ಪುರಾತನವಾದ ಭಾರತೀಯ ವೈದ್ಯ ಪದ್ಧತಿಯಾಗಿದ್ದು ಸಂಶೋದನೆಗಳ ಕೊರತೆಯಿಂದ ಬೇರೆ ವೈದ್ಯಕೀಯ ಪದ್ಧತಿಗಿಂತ ಹಿಂದುಳಿದಿದೆ. ಆದರೆ ಆಯುರ್ವೇದದಲ್ಲಿ ಹಲವಾರು ಖಾಯಿಲೆಗಳನ್ನು ಗುಣಮಡಿಸುವ ಶಕ್ತಿಯಿದೆ ಅಲ್ಲದೆ ಆಯುರ್ವೇದದ ಮಹತ್ವವನ್ನ ತಿಳಿದ ವಿದೇಶಿಯರು ಹಲವಾರು ಗಿಡಮೂಲಿಕೆಗಳನ್ನು ತಮ್ಮ ದೇಶದಲ್ಲಿ ಪೆಟೆಂಟ್ ಪಡೆದುಕೊಂಡಿರುತ್ತಾರೆ. ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಹಲವಾರು ಔಷಧಗಳಿದ್ದು ಯಾವುದೇ ಖಾಯಿಲೆಗಳನ್ನು ಬಾರದಂತೆ ತಡೆಯುವ ಶಕ್ತಿಯಿದೆ ಎಂದು ತಿಳಿಸಿದರು.
ಇಲ್ಲಿನ ಹಿರಿಯ ವೈದ್ಯಾಧಿಕಾರಿಗಳಾದ ಡಾ|| ಅಶೋಕ ಹೆಚ್ ಇವರು ಆಯುರ್ವೇದದ ಔಷಧಗಳನ್ನು ಬಳಸುವ ವಿಧಾನವನ್ನು ವಿವರಿಸಿದರು. ಕುಂದಾಪುರ ವಿಭಾಗದ ಮೆಸ್ಕಾಂ ಸಹಾಯಕ ಕಾರ್ಯನಿರ್ವಹಣಾ ಅಭಿಯಂತರರಾದ ಅಶೋಕ್ ಪೂಜಾರಿ, ಸಹಾಯಕ ಅಭಿಯಂತರರಾದ ರಾಘವೇಂದ್ರ, ಕಿರಿಯ ಅಭಿಯಂತರರಾದ ರಾಘವೇಂದ್ರ, ಸಹಾಯಕ ಅಭಿಯಂತರರಾದ (ತಾಂತ್ರಿಕ) ಸುಧಾಕರ್ ಪೂಜಾರಿ, ಗುತ್ತಿಗೆದಾರರಾದ ವಿಜಯ ಕುಮಾರ್ ಶೆಟ್ಟಿ, ಮೆಸ್ಕಾಂ ಸಿಬ್ಬಂದಿಗಳು ಭಾಗವಹಿಸಿದ್ದರು. ತಾಲೂಕು ಆಯುಷ್ ಘಟಕದ ಸಿಬ್ಬಂದಿಗಳಾದ ನವೀನ್ ಕುಮಾರ್ ಕೇ.ಆರ್ ಪ್ರಥಮ ದರ್ಜೆ ಸಹಾಯಕರು, ಶೃತಿ ಶುಶ್ರೂಷಕಿ, ಮತ್ತು ಗ್ರೂಪ್-ಡಿ ಸಿಬ್ಬಂದಿಗಳಾದ ರಾಘವೇಂದ್ರ ಹೆ.ಆರ್ ಮತ್ತು ಕುಮಾರಿ ಶಿಲ್ಲಾ ಕಾರ್ಯಕ್ರಮದಲ್ಲಿ ಸಹಕರಿಸಿದರು.