ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ಸಹಕರಿಸಬೇಕು ಡಾ.ಶಾಂತ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ಸಹಕರಿಸಬೇಕು ಎಂದು ಡಾ.ಶಾಂತ ತಿಳಿಸಿದರು.
ನಗರದ ಕಾರಂಜಿಕಟ್ಟೆಯಲ್ಲಿರುವ ಶ್ರೀ ನಲ್ಲೂರಮ್ಮ ದೇವಿ ಅನಾಥ ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟಿನಲ್ಲಿ ಹಾಲುಮತ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ನಡೆದ 533ನೇ ಕನಕದಾಸ ಜಯಂತೋತ್ಸವ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಅನಾಥಾಶ್ರಮ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಸ್ವಂತ ಜೀವನ ಕಟ್ಟಿಕೊಳ್ಳುವಾಗೆ ಬೆಂಬಲ ನೀಡಬೇಕು ಎಂದು ನುಡಿದರು. ಕನಕದಾಸರಂತಹ ದಾರ್ಶನಿಕರ ಜೀವನಚರಿತ್ರೆಯ ಜ್ಞಾನವನ್ನು ಮಕ್ಕಳಿಗೆ ತಿಳಿ ಹೇಳಿ ಅವರ ಜೀವನಕ್ಕೆ ಮಾರ್ಗದರ್ಶನವಾಗಿಸಬೇಕು ಎಂದ ಅವರು ಮಕ್ಕಳಿಗೆ ಯಾವುದೇ ರೀತಿಯ ಸೌಲಭ್ಯ ಒದಗಿಸಲು ತಾನು ಸದಾ ಮುಂಚೂಣಿಯಲ್ಲಿರುತ್ತೇನೆ. ತನ್ನ ಸ್ವಂತ ಖರ್ಚಿನಲ್ಲಿ ಇವರ ಆರೋಗ್ಯ ಕಾಪಾಡುವುದಕ್ಕೆ ಬೇಕಾದ ಸಹಾಯ ಮಾಡುತ್ತೇನೆ ಎಂದು ಭರವಸೆನೀಡಿದರು.
ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನ್ನು ಏನಾರದೂ ಬಲ್ಲಿರಾ ಎಂದು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಜನರಲ್ಲಿದ್ದ ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ ಹರಿಕರಾರು ಎಂದು ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಉಪನ್ಯಾಸ ನೀಡಿದರು.
ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಕೆ.ಗೋವಿಂದರಾಜು ಮಾತನಾಡಿ, ಹಾಲುಮತ ಮಹಾಸಭಾ ವತಿಯಿಂದ ಜಿಲ್ಲೆಯಲ್ಲಿ ಕನಕದಾಸರ ಜಯಂತಿ ಮೊಟ್ಟಮೊದಲ ಕಾರ್ಯಕ್ರಮ ನಡೆಸುತ್ತಿದ್ದೇವೆ. ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ, ಅವರು ರಚಿಸಿರುವ ಕೃತಿಗಳ ಮೂಲಕ ಜಾತ್ಯತೀತವಾದ ಬೆಳವಣಿಗೆ ಕಾಣಬಹುದಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಸ್ವತಂತ್ರವಾಗಿ ಬಾಳಬೇಕೆನ್ನುವುದೇ ಅವರ ಆಶಯವಾಗಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಹಾಲುಮತ ಮಹಾಸಭಾ ಗೌರವಾಧ್ಯಕ್ಷ ಸೊಣ್ನೂರು ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್, ಪದಾಧಿಕಾರಿಗಳಾದ ವಕೀಲರಾದ ಶ್ರೀನಿವಾಸ್, ಲಲಿತಮ್ಮ, ನಲ್ಲಾಂಡಹಳ್ಳಿ ರಮೇಶ್, ರಾಜು, ಮಂಜುನಾಥ್, ಕಿರಣ್ ಕುಮಾರ್, ಬೆಟ್ಟಪ್ಪ, ಭುವನೇಶ್ವರ್ ಮತ್ತಿತರರು ಉಪಸ್ಥಿತರಿದ್ದರು
.