ಕ್ರಿಸ್ಮಸ್ ಗೆ ಅನಗತ್ಯ ಖರ್ಚನ್ನು ಕಡಿತಗೊಳಿಸಿ ಉಳಿತಾಯದ ಹಣವನ್ನು ಬಡವರ ಸಂತ್ರಸ್ತರ ಮತ್ತು ನಿರ್ಗತರಿಗೆ ಉಪಯೋಗಿಸಿ- ಮಾದ್ಯಮ ಕ್ರಿಸ್ಮಸ್ ಕೂಟದಲ್ಲಿ- ಉಡುಪಿ ಬಿಷಪ್

JANAANUDI.COM NETWORK

ಉಡುಪಿ, 19 ಡಿಸೆಂಬರ್ 20:  ಕೊವೀಡ್ 19 ಸಾಂಕ್ರಮಿಕ ರೋಗದಿಂದ ಹಾಗೆ ಲಾಖ್ ಡೌನ್ ನಿಂದ ಅನೇಕರು ಉದ್ಯೋಗ ಕಳೆದುಕೊಂಡರು.ನಿರ್ವಸತಿಕರಾದರು. ಇದು ಕಠಿಣ ಕಷ್ಟ ಕಾಲಾವಾಗಿತ್ತು. ಹಾಗಾಗಿ ಉಡುಪಿ ಧರ್ಮಪ್ರಾಂತ್ಯ ಸಹಾಯ ಹಸ್ತ ಚಾಚಿದೆ’ 9000 ಸಾವಿರ ಕುಟುಂಬ ಸರಿ ಸುಮಾರು 30 ಸಾವಿರ ಸಂತ್ರಸ್ತರಿಗೆ ಅಗತ್ಯದ ಆಹಾರ, ಇನ್ನಿತರ ಮೂಲಭೂತ ಸೌಕರ್ಯಗಳನ್ನು ಓದಗಿಸಲು ಸಾಧ್ಯವಾಗಿದೆ’ ಎಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಡಿಸೆಂಬರ್ 19  ರಂದು ಉಡುಪಿ ಜಿಲ್ಲೆಯ ಆರಂಭದಿಂದಲೂ,ಉಡುಪಿ ಧರ್ಮಪ್ರಾಂತ್ಯ ಬಿಷಪ್ ಅ| ವಿವಿಧ ಮಾಧ್ಯಮ ವೇದಿಕೆಗಳು, ಮುದ್ರಣ, ಆಡಿಯೋ ಮತ್ತು ಎಲೆಕ್ಟ್ರಾನಿಕ್ ಪತ್ರಕರ್ತರೊಂದಿಗೆ ಕ್ರಿಸ್ಮಮಸ್ ಸೌರ್ಹಾದ ಕೂಟದ ಅದ್ ವಹಿಸಿ ಮಾತನಾಡುತಿದ್ದರು.

 3000 ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಸಹಾಯ ಹಸ್ತ,ನೂರಾರು  6000 ಅನಾಶ್ರಿತರಿಗೆ ಶಾಲೆ ಮತ್ತು ಇನ್ನಿತರ ಕಡೆ ವಸತಿ ಕಲ್ಪಿಸಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಓದಗಿಸಿಕೊಟ್ಟಿದ್ದೆವೆ. ನಮ್ಮ 52 ಧರ್ಮಕೇಂದ್ರಗಳ ಮಟ್ಟದಲ್ಲಿ ಸರಿಸುಮಾರು 40 ಲಕ್ಷದ ರೂಪಾಯಿನ್ನು ನಿರ್ವಹಿಸಿತರಿಗೆ ಹಂಚಿದ್ದೆವೆ, 62 ಲಕ್ಷದ ರೂ.ಮೌಲ್ಯದ ಆಹಾರ ಕಿಟ್ ಗಳನ್ನು ಓದಗಿಸಿದ್ದೇವೆ.ಇವೆಲ್ಲಾ ಮಾನವೀಯತೆಯಲ್ಲಿ ಜಾತಿ ಮತ ಧರ್ಮ ಭೇದವಿಲ್ಲದೆ ಸಂತ್ರಸ್ತ ಸಹೋದರ ಸಹೋದರರಿಯರ ಕಷ್ಟವನ್ನು ಹಗುರಗೊಳಿಸಲು ಪ್ರಯ್ನತಿಸಿದ್ದೇವೆ. ಕೋವಿಡ್ ಕಷ್ಟಕಾಲ ಇನ್ನೂ ಇರುವುದರಿಂದ ಕ್ರಿಸ್ಮಸ್ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ.ಅನಗತ್ಯ ಖರ್ಚನ್ನು ಕಡಿತಗೊಳಿಸಿಉಳಿತಾಯದ ಹಣವನ್ನು ಬಡವರ ಸಂತ್ರಸ್ತರ ಮತ್ತು ನಿರ್ಗತರಿಗೆ ವಿನಿಯೋಗಿಸಲಾಗುವುದು. ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಕ್ರೈಸ್ತ ಕುಟುಂಬಗಳು ಇದೆ ಆದರ್ಶವನ್ನು ಪಾಲಿಸಿ ಈ ವರ್ಷದ ಕ್ರಿಸ್ಮಸನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ನಾವು ಕರೆಯನ್ನು ನೀಡಿದ್ದೆವೆ’ ಎಂದು ತಿಳಿಸಿದರು.        ಅಂದು ಮಧ್ಯಾಹ್ನ 12 ಗಂಟೆಗೆ ಉಡುಪಿಯ ಮದರ್ ಆಫ್ ಸೊರೊಸ್ ಚರ್ಚ್ ಹಾಲ್‌ನಲ್ಲಿ ಆಯೋಜಿಸಲಾದ ಈ ಕೂಟದಲ್ಲಿ ಹೆಚ್ಚಿನ ಸಂಖ್ಯೆಯ ಮಾಧ್ಯಮ ಮಿತ್ರರು ಹಾಜರಿದ್ದರು.

 ಗಣೇಶ್ ಪ್ರಸಾದ್ ಪಾಂಡೇಲು ತಮ್ಮ ಸಂದೇಶದಲ್ಲಿ ಉಡುಪಿ ಡಯಾಸಿಸ್ ಆಯೋಜಿಸಿದ್ದ ಕ್ರಿಸ್‌ಮಸ್ ಸೌರ್ಹಾದ ಕೂಟವನ್ನು ಶ್ಲಾಘಿಸಿ ಮಾನವೀಯ ಚಟುವಟಿಕೆಗಳನ್ನು ನಡೆಸುವಲ್ಲಿ ಧರ್ಮಪ್ರಾಂತ್ಯದ ವಿವಿಧ ಚಟುವಟಿಕೆಗಳಲ್ಲಿ ಪತ್ರಕರ್ತರ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

 ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ಥಿಗೆ ಪ್ರದಾನ ಮಾಡಿದ ದೂರದರ್ಶನ ಚಾನೆಲ್‌ನ ಉದಯ್ ಪಡಿಯಾರ್-ಉಡುಪಿ ಜಿಲ್ಲಾ ವರದಿಗಾರ; ಶ್ರೀಪತಿ ಹೆಗಡೆ-ವಿಜಯವಾಣಿಯ ವರದಿಗಾರ, ಕುಂದಾಪುರ, ಉಡುಪಿ ಜಿಲ್ಲೆಯ ವಿಜೇತ ಕನ್ನಡ ರಾಜ್ಯೋತ್ಸವ ಪ್ರಶಸ್ಥಿ; ಮತ್ತು ಕರಣಾಟಕ ರಾಜ್ಯ ಬೈರಿ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ವರ್ತಭಾರತಿಯ ನಜೀರ್ ಪೊಲ್ಯ-ವರದಿಗಾರ ಇವರನ್ನು ಸನ್ಮಾನಿಸಲಾಯಿತು. ಫಾ. ಚೇತನ್ ಲೋಬೊ ಇವರ ಲೇಖನಗಳ ಸಂಪೂಟವನ್ನು ಈ ಸಂದರ್ಭದಲ್ಲಿ ಬಿಷಪ್ ರವರು ಬಿಡುಗಡೆ ಗೊಳಿಸಿದರು

ಉಡುಪಿಯ ಮದರ್ ಆಫ್ ಸೊರೊಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜೆಸ್  ಗೌರವ ಅತಿಥಿಯಾಗಿದ್ದರು. ಕ್ಯಾಥೆಡ್ರಲ್‌ನ -ರೆಕ್ಟರ್ ಮತ್ತು ಉಡುಪಿ ಡಯಾಸಿಸ್ನ ಕುಲಪತಿ ವಲೇರಿಯನ್ ಮೆಂಡೊನ್ಕಾ. ಪ್ರಾರ್ಥನಾ ಆಯೋಗದ ನಿರ್ದೇಶಕ ಫ್ರಾ. ಸ್ಟೀಫನ್ ಡಿಸೋಜಾ ಉಪಸ್ಥಿತರಿದ್ದರು

ಉಡುಪಿ ಧರ್ಮಪ್ರಾಂತ್ಯದ ಪಿ.ಆರ್.ಓ ಫಾ. ಚೇತನ್ ಲೋಬೊ ಸ್ವಾಗತ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಜ್ವಾಡ್ ಪತ್ರಿಕೆಯ ಸಂಪಾದಕ ಫಾ. ರಾಯ್ಸನ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಧರ್ಮ ಪ್ರಾಂತ್ಯದ  ಕ್ರಿಶ್ಚಿಯನ್ ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್  ಮಿಲಾಗ್ರೀಸ್ ವಂದಿಸಿದರು. ಎಲ್ಲಾ ಮಾಧ್ಯಮ ಮಿತ್ರರಿಗೆ ಕುಟುಂಬಸ್ಥರೊಟ್ಟಿಗೆ ಹಂಚಿ ತಿನ್ನಲು ಕೇಕನ್ನು ಕಾಣಿಕೆಯಾಗಿ ನೀಡಲಾಯಿತು.

.