ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚ್

ವಿಜ್ರಂಭಣೆಯ ಗಂಗೊಳ್ಳಿ ಕೊಸೆಸಾಂವ್ ಮಾತಾ ಚರ್ಚಿನ 2023 ರ ತೆರಾಲಿ ಹಬ್ಬ ಒಂದು ಚಾರಿತ್ರಿಕ ಹಬ್ಬವಾಯ್ತು

ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚಿನ ಇತಿಹಾಸದಲ್ಲಿ ಹಿದೆಂದೂ ನಡೆಯದ ರೀತಿಯಲ್ಲಿ, ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚಿನ 2023 ರ ತೆರಾಲಿ ಹಬ್ಬವು ಬಹು ವಿಜ್ರಂಭಣೆಯಿಂದ ನಡೆಯಿತು. ಇದು ಬಹಳ ಅದ್ದೂರಿ ಸಡಗರ ಭಕ್ತಿ ಪೂರ್ವಕವಾದ ಹಬ್ಬವಾಯಿತು. ಇಂಹದೊಂದು ಹಬ್ಬ ಗಂಗೊಳ್ಳಿ ಚರ್ಚಿನಲ್ಲಿ ಮಾತ್ರವಲ್ಲ, ಕರಾವಳಿ ಭಾಗದಲ್ಲಿ ಯಾವತ್ತೂ ನಡೆಯದ ಅತೀ ವಿಜ್ರಂಭಣೆ ಅದ್ದೂರಿಯ ಹಬ್ಬ ಎಂದು ಜನ ಮಾತನಾಡಿಕೊಳ್ಳುವಂತಾಯಿತು.

   ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚ್ ಒಂದು ಐತಿಹಾಸಿಕ ಚರ್ಚ್ ಆಗಿದ್ದು.ಇದಕ್ಕೆ 397 ವರ್ಷಗಳ ಇತಿಹಾಸವಿದೆ. ಮೊದಲು ಈ ಧರ್ಮಕೇಂದ್ರಕ್ಕೆ ಭಾಗ್ಯವಂತ ಮಿಂಗೆಲ್ ಠಾಣೆ ಎಂದು ಕರೆಯುತಿದ್ದರು. ಇದನ್ನು ಪೊರ್ಚುಗೇಸರು ಸ್ಥಾಪಿಸಿದ್ದರು. ಇಲ್ಲಿ ಫ್ರಾನ್ಸಿಕನ್ ಧರ್ಮಗುರುಗಳು ಸೇವೆ ಸಲ್ಲಿಸಿದ್ದರು.ಕೆಳದಿಯ 1645-1660) ಅರಸರ ಕಾಲದಲ್ಲಿ ರಾಜಕೀಯ ಸ್ಥಿತಿಯಾಂತರದಿಂದ ಅವರ ಸೇವೆಯು ನಿಂತಿತು. ತದ ನಂತರ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳ ಕಾಲಾದಲ್ಲಿ ಈ ಧರ್ಮ ಠಾಣೆಯನ್ನು  ಕೊಸೆಸಾಂವ್ ಮಾತೆಗೆ (ಅಮೊಲೋದ್ಭವಿ) ಸಮರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದಲ್ಲಿ ದ್ವೀತಿಯ ಪುರಾತನ ಚರ್ಚ್ ಎಂಬ ಹೆಗ್ಗಳಿಕೆ ಪಡೆದಿದೆ. ಕುಂದಾಪುರ  ರೋಜರಿ ಮಾತಾ ಚರ್ಚ್ ಪ್ರಥಮವಾಗಿದ್ದು. ಇಡೀ ರಾಜ್ಯದ ಕರಾವಳಿಯಲ್ಲಿ ದ್ವೀತಿಯ ಚರ್ಚ್ ಎಂಬ ಹೆಗ್ಗಳಿಕೆ ಪಡೆದಿದೆ. ಪ್ರಥಮ ಚರ್ಚ್ ಮಂಗಳೂರಿನ ಕಾಥಡ್ರೆಲ್ ಚರ್ಚ್ ಆಗಿದೆ.

    ಕುಂದಾಪುರ ವಲಯದ ಪ್ರಧಾನರಾಗಿದ್ದ ಸಂತ ಜುಜೆ ವಾಜ್ ಇವರ ಜೊತೆ ಕುಂದಾಪುರ ಸೇರಿ ಗಂಗೊಳ್ಳಿಯಲ್ಲೂ ಸಂತ ಜುಜೆ ವಾಜರ ಜೊತೆ ಬಂದಿದ್ದ ಧರ್ಮಗುರು ಜುಜೆ ಕರ್ವಾಲ್ ಕೂಡ ಸೇವೆ ಸಲ್ಲಿಸಿದ್ದು ಅವರ ಸ್ಮರಣೆಯನ್ನು ನಾವು ಮಾಡಬೇಕಾಗುತ್ತದೆ. ನಂತರ್ ಜುಜೆ ವಾಜರ ಇಚ್ಚೆಯಂತೆ ಈ ಪ್ರದೇಶದಲ್ಲಿ ಧಾರ್ಮಿಕ ಸೇವೆ ನೀಡಲು ಇನ್ನೂ ಇಬ್ಬರು ಧರ್ಮಗುರುಗಳನ್ನು ಗೋವಾದ ಆರ್ಚ್ ಬಿಷಪ್ ಕಳುಹಿಸಿ ಕೊಟ್ಟಿದ್ದು ನೆನಪಿಸಿಕೊಳ್ಳಬೇಕಾಗುತ್ತದೆ.

   ಇಂಥಹ ಚಾರಿತ್ರಿಕ ಹಿನ್ನೆಲೆಯುಳ್ಳ ಗಂಗೊಳ್ಳಿ ಚರ್ಚಿನ 2023 ರ ಆದ್ದೂರಿ ಸಾಂತ್ ಮಾರಿ ಹಬ್ಬವನ್ನು (ತೆರಾಲಿ) ನಡೆಸಿಕೊಟ್ಟದ್ದು ಗಂಗೊಳ್ಳಿಯ ಶ್ರೀ ಅಲ್ಟನ್ ರೆಬೇರೊ ಮತ್ತು ಶ್ರೀಮತಿ ಪ್ರಕೃತಿ ರೆಬೇರೊ. ಶ್ರೀ ಅಲ್ಟನ್ ರೆಬೇರೊರವರ ತಾಯಿಗೆ ಗಂಗೊಳ್ಳಿ ಚರ್ಚಿನ ತೆರಾಲಿ ಹಬ್ಬ ಮಾಡುವ ಬಯಕೆ ಇದ್ದು ಅದನ್ನು ಅವರ ಮಕ್ಕಳಿಗೆ ತಿಳಿಸಿದ್ದರು. ಇಂದು ಅವರ ಅಮ್ಮ ಜೇನ್ ರೇಬೆರೊ ನಿಧನರಾಗಿದ್ದರೆ, ಶ್ರೀ ಅಲ್ಟನ್ ರೇಬೆರೊರವರ ತಂದೆ ಅಗಸ್ಟಿನ್ ರೆಬೇರೊ ಅವರು ದೈವಾಧಿನರಾಗಿದ್ದಾರೆ. ಶ್ರೀ ಅಲ್ಟನ್ ರೆಬೇರೊ ಅವರ ಪತ್ನಿ ಪ್ರಕೃತಿಯ ತಂದೆ ಟಿ.ಉಪೇಂದ್ರ ಕೂಡ ದೈವಾಧಿನರಾಗಿದ್ದಾರೆ. ಅದಕ್ಕಾಗಿ ಶ್ರೀ ಅಲ್ಟನ್ ರೆಬೇರೊ ಮತ್ತು ಶ್ರೀಮತಿ ಪ್ರಕೃತಿ ರೆಬೇರೊ. ದಿ. ಅಗಸ್ಟಿನ್ ಮತ್ತು ದಿ. ಜೇನ್ ರೇಬೆರೊ ಹಾಗೂ ದಿ. ಟಿ.ಉಪೇಂದ್ರ ಕೂಡ ಇವರ ಸ್ಮರ್ಣಾರ್ಥ 2023 ರ ಗಂಗೊಳ್ಳಿ ತೆರಾಲಿ ಹಬ್ಬದ ಪೋಷಕತ್ವವನ್ನು ವಹಿಸಿಕೊಂಡು ಬಹಳ ವಿಜ್ರಂಭಣೆಯಿಂದ ನಡೆಸಿಕೊಟ್ಟು ಅಮಲೋದ್ಭವಿ ಮಾತೆಯ ಅಮೂಲ್ಯ ಆಶಿರ್ವಾದಗಳನ್ನು ಪಡೆದುಕೊಂಡರು. ಇವರ ಜೊತೆಗೆ ಪ್ರಕೃತಿ ತಾಯಿ ಶ್ರೀಮತಿ ಸುನೀತಾ ಉಪೇಂದ್ರ, ಶ್ರೀ ಅಲ್ಟನ್ ರೆಬೇರೊರವರ ಸಹೋದರರಾದ ಅಸ್ಟಿನ್ ಮತ್ತು ಪ್ರಜ್ವಲ್ ರೆಬೇರೊ, ಅಕ್ಕ ಜಾಕಲೀನ್ ಭಾವ ತಿಮೊತಿ ರೊಡ್ರಿಗಸ್ ಸಹ ಪೋಷಕತ್ವವನ್ನು ವಹಿಸಿಕೊಂಡು ಕೊಸೆಸಾಂವ್ ಮಾತೆಯ ಆಶಿರ್ವಾದಗಳನ್ನು ಪಡೆದುಕೊಂಡರು. 

     ತೆರಾಲಿ ಅಂದರೆ ಅದು ಒಂದು ದಿವಸದ ಹಬ್ಬವಲ್ಲಾ, ಅದು 3 ದಿನ ನಡೆಯುವಂತಹ ಭಕ್ತಿದಾಯಕ ಕಾರ್ಯಕ್ರಮ. ಈ ವರ್ಷ ತೆರಾಲಿ ಹಬ್ಬ ಇದೆಯೆಂದು ಕ್ರೈಸ್ತ ಭಕ್ತಾಧಿಗಳಿಗೆ ಮತ್ತು ಊರ ಜನರಿಗೆ ಸಾರಲಿಕ್ಕಾಗಿ ಹಾಗೇ ತೆರಾಲಿ ಹಬ್ಬದ ತಯಾರಿಗಾಗಿ ನಡೆಸುವ ಭಾøತ್ವವದ ದಿನ ಹಾಗೂ ಪರಮ ಪ್ರಸಾದ ಆರಾಧನೆ ಮತ್ತು ವಿಜ್ರಂಭಣೆಯ ಮೆರವಣಿಗೆ. ಇದು 2023 ರ ತೆರಾಲಿಗಾಗಿ ಡಿಸೆಂಬರ್ 3-12 ರಂದು ನಡೆಯಿತು. ಇದನ್ನು ವಂ|ಧರ್ಮಗುರು ರೋಯ್ ಲೋಬೊ ನಡೆಸಿಕೊಟ್ಟರು. ಚರ್ಚಿನ ಧರ್ಮಗುರು ಜೊತೆಗಿದ್ದು ವಂದಿಸಿದರು. ಹಲವಾರು ಧರ್ಮಭಗಿನಿಯರು ಮತ್ತು ಚರ್ಚಿನ ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಈ ಪ್ರಾರ್ಥನಾ ವಿಧಿಯಲ್ಲಿ ಭಾಗಿಯಾದರು. ಇದರ ಪೂರ್ಣ ಖರ್ಚು ವೆಚ್ಚವನ್ನು ಶ್ರೀ ಅಲ್ಟನ್ ರೆಬೇರೊ ಮತ್ತು ಶ್ರೀಮತಿ ಪ್ರಕೃತಿ ರೆಬೇರೊ ದಪಂತಿ ವಹಿಸಿಕೊಂಡದ್ದು ಮಾತ್ರವಲ್ಲ, ಅಂದು ಊರ ಜನರಿಗೆ ಅದ್ದೂರಿಯ ಭೋಜನ ಕೂಟವನ್ನು ಎರ್ಪಡಿಸಿದ್ದರು.

    ಅಂದು ಗಂಗೊಳ್ಳಿ ಚರ್ಚ್ ರಸ್ತೆ ಎಂದೂ ಕಂಡಿಲ್ಲದಂತಹ ರೀತಿ ಪೋಷಕರು ಶ್ರಂಗರಿಸಿದ್ದರು. ಚರ್ಚಿನಿಂದ ಹಿಡಿದು ಗಂಗೊಳ್ಳಿ ಮುಖ್ಯ ರಸ್ತೆಯ ತನಕ ಬಂಗಾರ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಇಡೀ ರಸ್ತೆಗೆ ಬಣ್ಣದ ದೀಪಗಳ ಛಾವಣಿಯನ್ನು ಹಾಕಿದಂತೆ ತೋರುತಿತ್ತು. ನೋಡುಗರ ಕಣ್ಣಿಗೆ ಅವೀಸ್ಮರಣೀಯ ದ್ರಶ್ಯವಾಗಿದ್ದು ಈಗಲೂ ಜನರ ಕಣ್ಣೆದುರು ಬರುತ್ತದೆ. ಮುಖ್ಯ ರಸ್ತೆಗಳಲ್ಲಿ ಟ್ಯುಬ್ ಲ್ಲೈಟಗಳನ್ನು ಅಳವಡಿಸಿ ರಸ್ತೆಗಳನ್ನು ಪ್ರಕಾಶಮಯವನ್ನಾಗಿಸಿದ್ದರು.

    ಬ್ಯಾಂಡು, ದೀಪಗಳಿಂದ ಕೂಡಿದ್ದು ಭಕ್ತಿಮಯ ಗಾಯನದೊಂದಿಗೆ ದಿವ್ಯ ಪರಮ ಪ್ರಸಾದದ ಮೆರವಣಿಗೆ ನಡೆಯಿತು.

    ತೆರಾಲಿಯ ಡಿಸೆಂಬರ್ 5 ರಂದು ಸಂದ್ಯಾವಂದನಾ ಪ್ರಾರ್ಥನಾ, ದೇವರ ವಾಕ್ಯದ ದಿನದ ಆಚರಣೆ (ತೆರಾಲಿ ರಾತ್ರಿ) ಗಂಗೊಳ್ಳಿಯ ಚರಿತ್ರೆಯಲ್ಲಿ ಅಚ್ಚಳಿಯದ ರೀತಿ ನಡೆಯಿತು. ದೇವರ ವಾಕ್ಯಗಳ ಸಂಭ್ರಮದ ಭಕ್ತಿಮಯ ಪ್ರಾರ್ಥನೆಯು ಕುಂದಾಪುರ ವಲಯದ ಹಲವಾರು ಧರ್ಮಗುರುಗಳು, ವಲಯದ ಹೊರಗಿನ ಧರ್ಮಗುರುಗಳು, ಡೋನ್ ಬೊಸ್ಕೊ ಸಂಸ್ಥೆಯ ಧರ್ಮಗುರುಗಳು, ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು ಹೀಗೆ ಹಲವಾರು ಧರ್ಮಗುರುಗಳ ಉಪಸ್ಥಿತಿಯಲ್ಲಿ ನಡೆಯಿತು. ಅಂದಿನ ಪ್ರಾರ್ಥನಾ ವಿಧಿಯ ನೇತ್ರತ್ವನ್ನು ಕಂಡ್ಲೂರು ಚರ್ಚಿನ ಧರ್ಮಗುರು ವಂ|ಕೆನ್ಯುಟ್ ಬಾರ್ಬೊಜಾ ನೆಡೆಸಿಕೊಟ್ಟರು

     ಪ್ರಾರ್ಥನ ವಿಧಿ ಮುಗಿದ ನಂತರ ಪೋಷಕರಿಂದ ಚರ್ಚಿನ ಮುಂಭಾಗದಿಂದ ವಿನೂತನವಾದ ಕಂಪ್ಯುಟರಿಕ್ರತ ತೆರಾಲಿಗಳಲ್ಲಿ ಪ್ರಪ್ರಥಮವೆಂಬತ್ತೆ ಲೇಸರ್ ಲೈಟಿಂಗ್ ಶೋ ಪ್ರದರ್ಶಿಸಲಾಯಿತು. ಸುಮಾರು ಅರ್ಧ ಗಂಟೆಕಾಲ ವೈವಿಧ್ಯಮಯ ಲೈಟಿಂಗ್ ಶೊ ಜೊತೆ ಅದಕ್ಕೆ ತಕ್ಕಾಗಿ ಹ್ರದಯಬಡಿತ ಕಾವೇರುನುವಂತಹ ಬೊರ್ಗೆರತದ ಸಂಗೀತ ಹೊರಹೊಮ್ಮಿ ಜನರನ್ನು ಮಂತ್ರ ಮುಗ್ದರಂತೆ ಮಾಡಿಸಿತು. ಥರಥರಹದ ಲೇಸರ್ ಲೈಟಿಂಗ್ ಪ್ರದರ್ಶನದಿಂದ ಜನರು ವಿಸ್ಮಿತರಾಗಿ ಹಲವಾರು ಜನರು ತಮ್ಮ ಮೊಬಯ್ಲ್ಗಂಳಿಂದ ಸೆರೆ ಹಿಡಿದಂತಹ ಆ ತುಣುಕುಗಳು ವೈರಲ್ ಆದವು. 

   ಇಷ್ಟು ವರ್ಷ ಪಟಾಕಿ, ಸುಡು ಮದ್ದು ಸುಟ್ಟು ಜನರಿಗೆ ಮನೋರಂಜನೆ ನೀಡುತಿದ್ದರು. ಅದರೆ ಈ ವರ್ಷ ನೂತನ ತಂತ್ರಜ್ಞಾನದಿಂದ ಅಮೋಘ ಲೇಸರ್ ಲೈಟಿಂಗ್ ಶೊ ಪ್ರದರ್ಶಿಸಿದ್ದು ಅವಿಸ್ಮರಣೀಯವಾಗಿ ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿಯುವುದು ಖಂಡಿತ. ಈ ಅಮೋಘವಾದ ಲೇಸರ್ ಲೈಟಿಂಗ್ ಶೊ ಮಾಡಲು ಪೋಷಕರಾದ ಶ್ರೀ ಅಲ್ಟನ್ ರೆಬೇರೊ ಮತ್ತು ಶ್ರೀಮತಿ ಪ್ರಕೃತಿ ರೆಬೇರೊ ಬೆಂಗಳೂರಿನಿಂದ ನಿಪುಣರನ್ನು ತರಿಸಿಕೊಂಡಿದ್ದರು. ಇಂತಹ ಲೇಸರ್ ಲೈಟಿಂಗ್ ಪ್ರದರ್ಶನಕ್ಕೆ ತಗಲುವ ಖರ್ಚು ಅಪಾರವಾಗಿರುತ್ತದೆ. 2023 ರ  ಗಂಗೊಳಿಯ ತೆರಾಲಿ ಜಾತ್ರೆ ಹಿದೆಂದು ರೀತಿ ಆಗದ ಮುಂದೆಂದು ಈ ರೀತಿ ಆಗದಂತೆ ಆಗಿದೆ ಎಂದು ಜನರೇ ಮಾತನಾಡಿಕೊಳ್ಳುತಿದ್ದಾರೆ.

    ಡಿಸೆಂಬರ್ 6 ರಂದು ಬುದವಾರ ಗಂಗೊಳ್ಳಿ ಕೊಸೆಸಾಂವ್ ಮಾತಾ ಚರ್ಚಿನ ವಾರ್ಷಿಕ ಮಹಾಹಬ್ಬ ಜರುಗಿತು. ಈ ವಾರ್ಷಿಕ ಮಹಾಹಬ್ಬದ ದಿವ್ಯ ಬಲಿಪೂಜೆಯಲ್ಲಿ ಕುಂದಾಪುರ ವಲಯದ ಹಲವಾರು ಧರ್ಮಗುರುಗಳು, ವಲಯದ ಹೊರಗಿನ ಧರ್ಮಗುರುಗಳು, ಡೋನ್ ಬೊಸ್ಕೊ ಸಂಸ್ಥೆಯ ಧರ್ಮಗುರುಗಳು, ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು ಹೀಗೆ ಹಲವಾರು ಧರ್ಮಗುರುಗಳ ಉಪಸ್ಥಿತಿಯಲ್ಲಿ ನಡೆಯಿತು. ಅಂದಿನ ಪ್ರಾರ್ಥನಾ ವಿಧಿಯ ನೇತ್ರತ್ವನ್ನು ಉಡುಪಿ ವಲಯ ಪ್ರಧಾನ ಧರ್ಮಗುರು ಅತಿ ವಂ| ಧರ್ಮಗುರು ಚಾಲ್ರ್ಸ್ ಮಿನೇಜೆಸ್ ನೆಡೆಸಿಕೊಟ್ಟರು. ಕುಂದಾಪುರ ವಲಯ ಪ್ರಧಾನರಾದ ಅ|ವಂ|ಸ್ಟ್ಯಾನಿ ತಾವ್ರೊ ಉಪಸ್ಥಿತರಿದ್ದು ಅವರು ತೆರಾಲಿ ಹಬ್ಬದ ಶುಭಾಷಯಳನ್ನು ನೀಡಿದರು. ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ತೋಮಸ್ ರೋಶನ್ ಡಿಸೋಜಾ ವಂದಿಸಿ, ವಿಶೇಷವಾಗಿ 2023 ರ ತೆರಾಲಿಯನ್ನು ವಿಜ್ರಂಭಣೆಯಿಂದ ನೆಡೆಸಿಕೊಟ್ಟ ಪೋಷಕರಾದ ಶ್ರೀ ಅಲ್ಟನ್ ರೆಬೇರೊ ಮತ್ತು ಶ್ರೀಮತಿ ಪ್ರಕೃತಿ ಇವರನ್ನು ವಂದಿಸಿದರು. 

    ವಾರ್ಷಿಕ ಹಬ್ಬದ ದಿನವೇ ಪೋಷಕ ಶ್ರೀ ಅಲ್ಟನ್ ರೆಬೇರೊ ಅವರ ಹುಟ್ಟು ಹಬ್ಬದ ದಿನವಾಗಿದ್ದು, ಅವರು ದೇವರಿಗೆ ಕ್ರತ್ಞತೆ ಸಲ್ಲಿಸಿದರು. ಅಂದು ಸಂಜೆ ಕೋಡಿ ಶೆಣೈ ಇವರ ರೆಸೊರ್ನ್  ಲ್ಲಿ ಹುಟ್ಟುಹಬ್ಬ ಆಚರಿಸಿ ಕುಟುಂಬಸ್ಥರಿಗೆ ಅತಿಥಿಗಳಿಗೆ ಮಿತ್ರರಿಗೆ ಹುಟ್ಟು ಹಬ್ಬದ ರಸತೌವಣ ನೀಡಿ ಹುಟ್ಟು ಹಬ್ಬವನ್ನು ಸ್ಮರ್ಮಣೀಯವಾಗಿ ಆಚರಿಸಿಕೊಂಡರು.