ಜಾಹಿರಾತು/ಕುಂದಾಪುರ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಗೆ ರಾಜ್ಯ ಮಟ್ಟದಲ್ಲಿ “ಉತ್ತಮ ಸಹಕಾರ ಸಂಘ ಪ್ರಶಸ್ತಿ 2019”

 

ಬರ್ನಾಡ್ ಡಿಕೋಸ್ತಾ

ಕುಂದಾಪುರ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಗೆ ರಾಜ್ಯ ಮಟ್ಟದಲ್ಲಿ “ಉತ್ತಮ ಸಹಕಾರ ಸಂಘ ಪ್ರಶಸ್ತಿ 2019”

 

 

ಕುಂದಾಪುರ, .19: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಕೇಂದ್ರ. ಬ್ಯಾಂಕ್ ನಿ. ಮಂಗಳೂರು,. ಉಡುಪಿ ಜಿಲ್ಲಾ ಸಹಕಾರ ಯುನಿಯನ್ ನಿ.ಉಡುಪಿ,. ಮತ್ತು ಸಹಾಕಾರಿ ಇಲಾಖೆ, ಹಾಗೂ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ 66 ನೇ ಅಖಿಲ ಭಾತರ ಸಹಕಾರ ಸಪ್ತಾಹ 2019 ಸಮಾವೇಷದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ಕುಂದಾಪುರ ರೋಜರಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿಗೆ ರಾಜ್ಯ ಮಟ್ಟದಲ್ಲಿ 2019 ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಕುಂದಾಪುರ ರೋಜರಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ಇವರು ಸಹಕಾರ ರತ್ನ ಡಾ|ಎಂ.ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು ದಕ್ಷಿಣ . ಜಿ.. ಬ್ಯಾಂಕ್ ನಿ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ. ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ. ಬೆಂಗಳೂರು ಮತ್ತು ಎನ್.ಗಂಗಣ್ಣ ಅಧ್ಯಕ್ಷರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ. ಬೆಂಗಳೂರು ಹಾಗೂ ಇನ್ನಿತರ ಗಣ್ಯರಿಂದ, ವಿವಿಧ ಸಹಕಾರಿ ಸಂಘದ 3 ಸಾವಿರಕ್ಕೂ ಅಧಿಕ ಸದಸ್ಯರ ಸಮ್ಮೂಖ ಪ್ರಶಸ್ತಿಯನ್ನು ಪಡೆದುಕೊಂಡರು.

ಕುಂದಾಪುರ ರೋಜರಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಒಂದು ಹಿನ್ನೊಟ

 

ಸಹಕಾರ ವ್ಯವಸ್ಥೆಯಿಂದ ಇವತ್ತು ಆರ್ಥಿಕಸಾಮಾಜಿಕ ಬೆಳವಣಿಗೆಗೆ ತಮ್ಮದೇ ಆದ ಸೇವೆ ಸಿಗುತ್ತಿದೆ. ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಯಲ್ಲಿ ಕೂಡ ಸಹಕಾರ ಕ್ಷೇತ್ರ ತನ್ನದೇ ಆದ ಪಾತ್ರ ನೀಡುತ್ತಿದೆ. ಬಹುಶಃ 27 ವರ್ಷಗಳ ಹಿಂದಿನ ಮಾತು. ಕುಂದಾಪುರದ ರೋಜರಿ ಮಾತೆಯ ಇಗರ್ಜಿಯ ವಠಾರದಲ್ಲಿ ಸಹಕಾರ ಸಂಘವೊಂದನ್ನು ಹುಟ್ಟು ಹಾಕುವ ಕುರಿತಂತೆ ಮಹತ್ವದ ಸಭೆ ನಡೆದಿತ್ತು. ಅದು ದಿನಾಂಕ 15-08-1992. ಹೀಗೊಂದು ಕೋ ಅಪರೇಟಿವ್ ಸೊಸೈಟಿಯ ಕಲ್ಪನೆ ಮತ್ತು ರಚನೆಯ ಬಗ್ಗೆ ಸಾಕಷ್ಟು ವಿಚಾರಗಳು ವಿನಿಮಯವಾದವು. ವಂ| ಕ್ಲಿಫರ್ಡ್ ಡಿಸೋಜರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಕುಂದಾಪುರದ ಸಹಕಾರ ಕ್ಷೇತ್ರದ ಮಟ್ಟಿಗೆ ಮಹತ್ವದ ಸಭೆಯಾಗಿ ಮೂಡಿಬಂತು. ತಾಲೂಕಿನಲ್ಲಿ ಹಿಂದುಳಿದ ಜನರ ಆರ್ಥಿಕ ಪ್ರಗತಿ, ವ್ಯಾಪಾರ ವಹಿವಾಟು ಪ್ರಾರಂಭಿಸಲು ಆರ್ಥಿಕ ನೆರವು, ಗೃಹ ನಿರ್ಮಾಣ, ಕೈಗಾರಿಕೆಗಳ ಆರಂಭ, ನಿವೇಶನ ಖರೀದಿ, ಸ್ವ ಉದ್ಯೋಗ ಹೀಗೆ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸಹಕಾರ ಸಂಘವೊಂದನ್ನು ರಚನೆ ಮಾಡುವುದಕ್ಕೆ ಒಮ್ಮತದ ನಿರ್ಧಾರವಾಯಿತು.

 

ಪರಸ್ಪರ ಸಹಕಾರದಿಂದ ಇಂದು ರೋಜರಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಉಡುಪಿ ಜಿಲ್ಲೆಗೆ ಮಾದರಿಯಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ. ಸಂಘದ ಸಂಘಟನಾತ್ಮಕ ಹಾಗೂ ನಿಸ್ವಾರ್ಥ ಸೇವೆಯಿಂದ ರೋಜರಿ ಸಂಸ್ಥೆಯು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವುದು ಅಭಿಮಾನದ ವಿಷಯ. ಸಾಧನೆಯ 27 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಸ್ಥೆಯುಅಭಿವೃದ್ದಿಯೇ ಸಹಕಾರ ರಂಗದ ಮೂಲ ಮಂತ್ರವನ್ನಾಗಿಸಿಕೊಂಡು ಸಹಕಾರ ತತ್ವದಡಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ವರದಿ ವರ್ಷದಲ್ಲಿ 346 ಕೋಟಿ ಒಟ್ಟು ವ್ಯವಹಾರ ಸಾಧಿಸುವ ಮೂಲಕ ಅಭಿವೃದ್ಧಿಯ ಪಥದತ್ತ ಮುನ್ನಡೆಯುತ್ತಿದೆ. ಠೇವಣಿಗಳ ಸಂಗ್ರಹಣೆಗಳು ಗಣನೀಯವಾಗಿ ಏರಿದ್ದು ಪ್ರಸ್ತುತ ನಮ್ಮ ಸಂಸ್ಥೆಯು 7 ಶಾಖೆಗಳ ಮೂಲಕ ಸುಮಾರು ರೂ.85.00 ಕೋಟಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದ್ದು ಕಳೆದ ವರ್ಷ ರೂ. 1 ಕೋಟಿ 15 ಲಕ್ಷ ನಿವ್ವಳ ಲಾಭಗಳಿಸಿದೆಎಂದು ಸಂಘದ ಹಾಲಿ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡರು ತಿಳಿಸುತ್ತಾರೆ.
ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಭಾಗವಾಗಿ ಸಂಘವು ಪ್ರಾರಂಭದಿಂದ ವಿವಿಧ ಸಾಮಾಜಿಕ ಉಪಕ್ರಮಗಳಿಗೆ ಸ್ವಂದಿಸುತ್ತಾ ಬಂದಿದೆ. ವರದಿ ವರ್ಷದಲ್ಲಿ ಧರ್ಮದ ನಿಧಿ ಮತ್ತು ಉಪಕಾರ ನಿಧಿಯಿಂದ ಅನೇಕ ಯೋಜನೆಗಳಿಗೆ ಹಣಕಾಸು ನೆರವು ನೀಡಿದ್ದು ಇದರ ಪರಿಣಾಮಗಳು ಉತ್ತಮವಾಗಿದ್ದು ಅಪಾರ ಮೆಚ್ಚುಗೆ ಹಾಗೂ ಜನ ಮನ್ನಣೆಯನ್ನು ಪಡೆದಿದೆ. ‘ಸಹಕಾರದ ಮೂಲಕ ಸರ್ವಾಂಗೀಣ ಪ್ರಗತಿನಮ್ಮ ಧ್ಯೇಯವಾಕ್ಯ. ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜೋನ್ಸನ್ ಡಿಆಲ್ಮೇಡಾರವರು ಹೇಳುತ್ತಾರೆ.

    ರೋಜರಿ ಸೊಸೈಟಿಯ ಉಪಾಧ್ಯಕ್ಷರಾದ ಜೋನ್ ಮಿನೇಜಸ್, ಮುಖ್ಯ ಸಲಹಾದಾರರಾದ |ವಂ|ಧರ್ಮಗುರು ಸ್ಟಾö್ಯನಿ ತಾವ್ರೊ, ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಜೇಕಬ್ ಡಿಸೋಜ, ಮಾರ್ಟಿನ್ ಡಾಯಸ್, ವಿನೋದ್ ಕ್ರಾಸ್ಟೊ, ಸ್ಟ್ಯಾನಿ ಡಿಸೋಜ, ಕಿರಣ್ ಲೋಬೊ, ಜೆರಾಲ್ಡ್ ಕ್ರಾಸ್ತಾ, ಡಾಯನಾ ಡಿಆಲ್ಮೇಡಾಶಾಂತಿ ಕರ್ವಾಲ್ಲೊ, ಸಲಹದಾರರಾದ ಬ್ಯಾಪ್ಟಿಸ್ಟ್ ಡಾಯಸ್ ಉತ್ತಮ ಸಹಕಾರ ಕೊಡುತ್ತಾ ಸೊಸೈಟಿಯ ಅಭಿವ್ರದ್ದಿಗೆ ಸಹಕರಿಸುತ್ತಾರೆ ಹಾಗೇ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮತ್ತು ಸೊಸೈಟಿ ಸಿಬಂದಿ ಉತ್ತಮ ಸೇವೆ ನೀಡುತ್ತಾ ಸೊಸೈಟಿ ಉತ್ತಮ ಗುಣಮಟ್ಟ ತಲುಪಲು ಸಹಕಾರ ನೀಡುತ್ತಾರೆಎಂದು ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ತಿಳಿಸುತ್ತಾರೆ

 

ಬರ್ನಾಡ್ ಡಿಕೋಸ್ತಾ

ಕುಂದಾಪುರ ರೋಜರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ: ನೂತನ ಪ್ರಧಾನ ಕಚೇರಿವಿಸ್ತರಣ ಶಾಖೆಎಲ್ಲವೂ ಸುಸಜ್ಜಿತ ಆಧುನಿಕ ಶೈಲಿಯಲ್ಲಿ ಮಾರ್ಪಾಡಾಗಿ ಜನರ ಉತ್ಕ್ರಷ್ಟ ಸೇವೆಗೆ ಸಜ್ಜು

 

 

 

ಕುಂದಾಪುರ ರೋಜರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಪ್ರಗತಿಯ ದಾಪುಕಾಲು ಹಾಕುತ್ತಾ ಇದೆಯೆಂದು ಅದರ ಸಾಧನೆಯಿಂದ ಎಲ್ಲರಿಗೂ ತಿಳಿದಿರುವ ವಿಷಯವೆ. ಆದರೆ ಇತ್ತೀಚೆಗೆ ಸಂಸ್ಥೆ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ಮತ್ತು ವ್ಯವಹಾರ ಸುವ್ಯಸ್ಥಿತವಾಗಿ ನೆಡೆಯ ಬೇಕೆಂಬ ಹಂಬಲದಿಂದ, ಸೊಸೈಟಿಯ ಕಟ್ಟಡವನ್ನು ಪುನಹ ಸುವ್ಯಸ್ಥಿತವಾಗಿ, ಆಧುನಿಕವಾಗಿ ಹೊಚ್ಚ ಹೊಸ ವಿನ್ಯಾಸದೊಂದಿಗೆ, ತ್ವರಿತ ಸೇವೆಗೆ ಬೇಕಾಗುವ ಎಲ್ಲಾ ಸುಸಜ್ಜಿತ ಆಧುನಿಕ ಸೌಲಭ್ಯವುಳ್ಳ ಪ್ರಧಾನ ಕಚೇರಿ, ವಿಸ್ತರಿತ ಕುಂದಾಪುರ ಶಾಖೆ ಪುನರ್ ನಿರ್ಮಾಣದಂತೆ ಮಾಡಿ ತನ್ನ ಕೀರ್ತಿಯ ಗರಿಯನ್ನು ಇನ್ನೂ ಹೆಚ್ಚಿಸಿಕೊಂಡಿದೆ.
ಇದೀಗ ನೂತನ ಮಾರ್ಪಡು ಮಾಡುವುದರೊಂದಿಗೆ ಕುಂದಾಪುರ ರೋಜರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ತನ್ನ ಕಟ್ಟದ 2ನೇ ಅಂತಸ್ತಿನಲ್ಲಿ ಸುಸಜ್ಜಿತ ಪ್ರಧಾನ ಕಚೇರಿಯನ್ನು ನಿರ್ಮಾಣ ಮಾಡಿದೆ. ಅಲ್ಲಿ ಅಧ್ಯಕ್ಷರು, ನಿರ್ದೇಶಕರ ಜೊತೆ ಮುಖ್ಯ ವ್ಯವಸ್ಥಾಪಕರು ವ್ಯವ್ಯಹಾರದ ನಿಮಿತ್ತ ಲಭ್ಯರಿರುತ್ತಾರೆ. ಪ್ರಧಾನ ಕಚೇರಿ ಸುಸಜ್ಜಿತವಾಗಿ ನಿರ್ಮಾಣಗೊಂಡು, ಸೇವೆಯ ವೇಗ ಹೆಚ್ಚಿಸುವಂತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಹವಾ ನಿಯಂತ್ರಿತವಾದ ವಿಸ್ತಾರವಾದ ಮಿಟಿಂಗ್ ಹಾಲ್ ನಿರ್ಮಾಣ ಗೊಂಡಿದ್ದು, ಸುಂದರವಾದ ವಿನ್ಯಾಸದೊಂದಿಗೆ ರಚಿಸಲಾಗಿದೆ.
ಸೊಸೈಟಿ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತ, ಆಧುನಿಕ ಜಗತ್ತಿಗೆ ತಕ್ಕಂತ್ತೆ ಸಾಗುತ್ತ, ಇವತ್ತು ಬೆಳವಣಿಗೆ ಕಂಡು ಅದು ವಿಸ್ತರಣೆಯನ್ನು ಕುಂದಾಪುರ ತಾಲೂಕನ್ನು ದಾಟಿ ಉಡುಪಿ ತಾಲೂಕಿಗೆ ದಾಪು ಕಾಲು ಹಾಕಿ ಇವತ್ತು ಸೊಸೈಟಿ 7 ಶಾಖೆಗಳೊಂದಿಗೆ ನಿರೀಕ್ಷೆಕಿಂತ ಹೆಚ್ಚು ಬೆಳವಣಿಗೆ ಕಂಡುಕೊಂಡು, 27 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ ಜನರ ಮನದಾಳದಲ್ಲಿ ಮೆಚ್ಚುಗೆಯ ಪಾತ್ರವನ್ನು ಗಳಿಸಿಕೊಂಡಿದೆ. ಎಂದು ನಿಶಂಷಯವಾಗಿ ಹೇಳಬಹುದು.
ಹೀಗೆ ಬೆಳವಣಿಗೆ ಪಡೆಯುತ್ತಾ ಈಗ ಸಂಸ್ಥೆ ಕುಂದಾಪುರ, ಬೈಂದೂರು, ಪಡುಕೋಣೆ, ಬಸ್ರೂರು, ಪಿಯುಸ್ ನಗರ/ಕೋಟೆಶ್ವರ, ತ್ರಾಸಿ/ಗಂಗೊಳ್ಳಿ, ಸಂತೆಕಟ್ಟೆ/ಕಲ್ಯಾಣಪುರ ಶಾಖೆಗಳನ್ನು ಹೊಂದಿ ಹೆಮ್ಮರವಾಗಿ ಬೆಳೆದು ಬಿಟ್ಟಿದೆ,
ಕುಂದಾಪುರ, ಪಡುಕೋಣೆ, ಸಂತೆಕಟ್ಟೆ ಸ್ವಂತ ಕಟ್ಟಡ ಹೊಂದಿದ್ದು ಪ್ರಗತಿಯ ಸಾಕ್ಷಿಯಾಗಿದೆ, ಅದಲ್ಲದೆ, ಬಸ್ರೂರು, ಬೈಂದೂರಿನಲ್ಲಿ ಸೊಸೈಟಿಯ ಸ್ವಂತ ನಿವೇಶನ ಹೊಂದಿದೆ, ಭವಿಶ್ಯದಲ್ಲಿ ಅಲ್ಲಿಯೂ ಕೂಡ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಯೋಜನೆ ಇದ್ದು, ಸೊಸೈಟಿ 2017-18 ಸಾಲಿನ ಅವಧಿಯಲ್ಲಿ ಸ್ಥಿರ ಹಾಗೂ ಚಾಲ್ತಿಯಲ್ಲಿ ಉತ್ತಮ ಪ್ರಗತಿಯನ್ನು ಹೆಚ್ಚಿಸಿಕೊಳ್ಳುತ್ತ ಬಂದು, ಒಟ್ಟು 255 ಕೋಟಿ ರೂಪಾಯಿಯ ವಹಿವಾಟು ನೆಡೆಸಿ, 53 ಕೋಟಿ ಠೇವಣಿ ಹೊಂದಿ 63 ಲಕ್ಷ ಪಾಭ ಗಳಿಸಿ, ಶೇ. 17 ಪರ್ಸೆಂಟ್ ಡಿವಿಡೆಂಟ್ ನೀಡಿ ಪ್ರಗತಿಯನ್ನು ತನ್ನ ಪ್ರಗತಿಯನ್ನು ಖಾತ್ರಿ ಗೊಳಿಸಿದೆ.
ಕುಂದಾಪುರ ರೋಜರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಹಿನ್ನೆಲೆ.
ಕುಂದಾಪುರ ರೋಜರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ, ಕುಂದಾಪುರ ವಲಯ ಕಥೊಲಿಕ ಸಭಾದ ಅಂದು ಉಪಾಧ್ಯಕ್ಷರಾಗಿದ್ದ ನಾಡ ಆಲ್ಪೋನ್ಸ್ ಲೋಬೊ ಇವರ ಚಿಂತನೆಯಿಂದ, ಬೆಳವಣಿಗೆ ಪಡೆದು ಅಂದಿನ ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷರಾದ ಜಿ.ಎಲ್. ಡಿ ಲೀಮಾ, ಕುಂದಾಪುರ ವಲಯ ಕಥೊಲಿಕ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ವಂ|ಧರ್ಮಗುರು ಕ್ಲಿಫರ್ಡ್ ಡಿಸೋಜಾ ಮತ್ತು ಬ್ಯಾಂಕ್ ಮತ್ತು ಸೊಸೈಟಿ ವ್ಯವಹಾರದಲ್ಲಿ ಪಳಗಿದ ಕೋಣಿ ಜೋನ್ ಡಿಸೋಜಾ, ಬ್ಯಾಂಕಿನಲ್ಲಿ ನುರಿತ ಜೆ.ಬಿ.ಡಿಸೋಜಾ, ವಲೇರಿಯನ್ ಮಿನೇಜಸ್ ಕೋಟಾಆಲ್ಫ್ರೆಡ್ ಡಿಸೋಜಾ, ಹಂಗಳೂರು ಮತ್ತು ಇನ್ನಿತರ ಆರಿಸಿದ ಸದಸ್ಯರ (ಅಂದು ನಾನು ಕೂಡ ಪದಾಧಿಕಾರಿಯಾಗಿದ್ದು, ನನಗೆ ಬೆರೆಯೇ ಯೋಜನೆ ನೀಡಲಾಗಿತ್ತು) ಕಾಳಜಿ ಹಾಗೂ ಚಟುವಟಿಕೆಗಳಿಂದ ಸೊಸೈಟಿ 1992 ರಲ್ಲಿ ಆರಂಭ ಮಾಡಲು ಮನ್ನಣೆ ದೊರೆತು ಆರಂಭ ಆಯಿತು. ಅಂದು ಸೊಸೈಟಿ ಸ್ಥಾಪಿಸುವುದು ಅಷ್ಟು ಸುಲಭಕರವಾಗಿರಲಿಲ್ಲಾ ಎಂಬುದು ಇವತ್ತಿನ ಜನ ತಿಳಿದು ಕೊಳ್ಳಬೇಕು.
ಹೀಗೆ ಸ್ಥಾಪಿತವಾದ ರೋಜರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿ ಆಲ್ಪೋನ್ಸ್ ಲೋಬೊ ನಾಡ ಮತ್ತು ಉಪಾಧ್ಯಕ್ಷರಾಗಿ ಪಿಲಿಫ್ ಡಿಕೋಸ್ತಾ, ಕೋಣಿ ಆಯ್ಕೆಯಾಗಿ ಸಂಸ್ಥೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಪ್ರಸ್ತುತ ಅಧ್ಯಕ್ಷರಾಗಿರುವ ಜೋನ್ಸನ್ ಡಿಆಲ್ಮೇಡಾ, ಉಪಾಧ್ಯಕ್ಷರಾಗಿರುವ ಜೋನ್ ಮಿನೇಜೆಸ್ ಇವರ ನೇತ್ರದ್ವದಲ್ಲಿ ಉತ್ಸಾಹಿ ಆಡಳಿತ ಮಂಡಳಿ ಹಾಗೂ ಸದಾ ಸಂತಸ ನಗುಮೊಗದೊಂದಿಗೆ, ಕೊಂಡಯ್ಯುವ ಸಿಬ್ಬಂದಿ ವರ್ಗದ ಪ್ರಮಾಣಿಕ ಸೇವೆ ಇಲ್ಲಿ ದೊರಕುತ್ತದೆ.
ಸಂಸ್ಥೆ ಕೇವಲ ಹಣಕಾಸು ವ್ಯವಹಾರಗಳಿಗಷ್ಟೇ ಸಿಮೀತವಾಗದೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರತಿಕ, ಕ್ರೀಡೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಿಗೆ ಸ್ಪಂದಿಸಿ ಪೋಷಿಸಿ ಸಮಾಜ ಮುಖಿ ಸಂಸ್ಥೆ ಎಂದು ಪರಿಗಣಿಸಲ್ಪಟ್ಟಿದೆ. ಅತ್ಯಂತ ಸುಸಜ್ಜಿತ ಆಧುನಿಕ ಕಾಲಕ್ಕೆ ತಕ್ಕಂತೆ ರೂಪುಗೊಂಡಿರುವ ರೋಜರಿ ಸಂಸ್ಥೆ ತನ್ನ ಕಾರ್ಯ ಕ್ಷೇತ್ರವನ್ನು ರಾಜ್ಯ ಮಟ್ಟದಲ್ಲಿ ವಿಸ್ತರಿಸುವ ಕನಸನ್ನು ನನಸಾಗುವ ದಿಟ್ಟಿನಲ್ಲಿ ಶ್ರಮಿಸುತ್ತದೆ.
ಸಹಕಾರಿ ಸಂಸ್ಥೆಯ ಮೂಲಕ ಸದಸ್ಯರ ಸರ್ವಾಂಗೀಣ ಅಭಿವ್ರದ್ದಿಗೆ ಸ್ಪಂದಿಸಬೇಕು ಎನ್ನುವ ಉದಾತ್ತ ಚಿಂತನೆ ಹೊಂದಿರುವ ಪ್ರಸ್ತೂತ ಅಧ್ಯಕ್ಷರಾದ ಜೋನ್ಸನ್ ಡಿಆಲ್ಮೇಡ ಅವರು ಈಗಾಗಲೇ ಸೊಸೈಟಿಯ ವೇಗದ ಬೆಳವಣಿಗೆಯಿಂದ ತಮ್ಮ ನಾಯಕತ್ವವನ್ನು ರುಜುವಾತು ಪಡಿಸಿದ್ದಾರೆ. ಯುವ ಉದ್ಯಮಿಯಾಗಿ, ಸಮಾಜಮುಖಿ ಸಂಸ್ಥೆಗಳಲ್ಲಿ ಸಕ್ರೀಯವಾಗಿರುವ ಇವರು ಸಹಕಾರಿ ಕ್ಷೇತ್ರದಲ್ಲಿ ಸಂಸ್ಥೆಯನ್ನು ಮತ್ತಷ್ಟು ಸಂವೇದನಶೀಲ ಹಾಗೂ ನಿರಂತರ ಪ್ರಸ್ತುತೆಯ ಸಧ್ರಡ ಸಂಸ್ಥೆಯಾಗಿ ರೂಪಿಸಲುಟೀಮ್ ರೋಜರಿಸಿದ್ದಗೊಂಡಿದೆ ಮುಂದಿನ ಆರ್ಥಿಕ ವರ್ಷದಲ್ಲಿ 360 ಕೋಟಿ ವ್ಯವವಹಾರ ಹಾಗೇ 80-90 ಲಕ್ಷದ ಲಾಭದ ಗುರಿಯನ್ನು ಹೊಂದಿದೇವೆ ಎಂದು ಅಧ್ಯಕ್ಷ ಜೋನ್ಸನ್ ಡಿ ಆಲ್ಮೇಡ ತಿಳಿಸುತ್ತಾರೆ.