ಕೊಟೇಶ್ವರ ಕಟ್ಕರೆ ಬಾಲ ಯೇಸು ಮಠಾಶ್ರಮದ ರಜತ್ಸೋವ ಮತ್ತು ಬಾಲ ಯೇಸುಸುವಿನ ವಾರ್ಷಿಕ ಮಹೊತ್ಸೋವ

ಕುಂದಾಪುರ,ಜ.20 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದ ರಜತ್ಸೋವ ಮತ್ತು ಬಾಲಾ ಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 19 ಶನಿವಾರದಂದು ಸಂಜೆ ಭಕ್ತಿ ಬಲಿದಾನದ ಮೂಲಕ ಆಚರಿಸಲಾಯಿತು. ಪವಿತ್ರ ಪುಸ್ತಕದ ವಾಕ್ಯವನ್ನು ಪಠಿಸಿದ ಮಡ್ಯಾಂತರ್ ಚರ್ಚಿನ ಧರ್ಮಗುರು ವಂ|ಜೋಸೆಫ್ ಡಿಸೋಜ “ನೀವು ಸತ್ಯ ಅರಿತರೆ, ನಿಮಗೆ ಸತ್ಯ ಮುಕ್ತಿಯನ್ನು ನೀಡುತ್ತದೆ, ಸತ್ಯ ಎಂದರೆ ಯೇಸು, ಮನುಷ್ಯನ ಜೊತೆ ಇರುವುದು ನನಗೆ ಸಂತೋಷ ತರುತ್ತೆ ಎಂದು ಯೇಸು ಹೇಳಿದ್ದಾನೆ., ಮನುಷ್ಯರ ಜೊತೆ ಮನುಷ್ಯನಾಗಿ ನಾನು ಜೀವಿಸುತ್ತೇನೆ. ಜ್ಯುಬಿಲಿ ಅಂದರೆ ನಮಗೆ ಮುಕ್ತಿ, ನಮ್ಮ ಪಾಪಗಳಿಂದ ಬಿಡುಗಡೆಗೆ ಸಂತೋಷ ಪಡುವುದು, ಜುಬಿಲಿ ಅಂದರೆ ದೇವರ ದಯೆ, ನಮಗೆ ಅವನು ಬಿಡುಗಡೆಗೊಳಿಸಿದ್ದಾನೆ, ನಾವೆಲ್ಲರೂ ಪಾಪ ಮಾಡುವರೆ ಆಗಿದ್ದೇವೆ, ಯೇಸುವಿನ ಶಿಲುಭೆ ನಮಗೆ ಕ್ಷಮೆ ನೀಡಿ ಮುಕ್ತಿ ದೊರಕಿಸುತ್ತದೆ. ಶಿಲುಭೆಯ ಮೇಲೆ ಮರಣ ಹೊಂದಿದ ಯೇಸು ನಮನ್ನು ರಕ್ಷಿಸುತ್ತಾನೆ, ಇದುವೇ ಸು ವಾರ್ತೆಯಾಗಿದೆ, ಇದುವೇ ನಮಗೆಲ್ಲ, ಜುಬಿಲಿ ಉತ್ಸವ ಸಂಭ್ರಮ ಆಗಿದೆ” ಎಂದು ತಿಳಿಸಿ “ನಾವು ಇಲ್ಲಿ ಆಶ್ರಮ ಸ್ಥಾಪಿಸಿ 25 ವರ್ಷಗಳಾಗಿವೆ, ನಾವು ಇಲ್ಲಿ ದೊಡ್ಡ ದೊಡ್ಡ ಕಟ್ಟಡ ಕಟ್ಟಲಿಲ್ಲ, ಇಲ್ಲಿನ ಜನರ ಧಾರ್ಮಿಕ ಸೇವೆ, ಅವರ ಅಧ್ಯಾತ್ಮಿಕ ಅಗತ್ಯಗಳಿಗೆ ನೆರವಾಗಿದ್ದೇವೆ. ಇದುವೇ ನೀಜವಾದ ಸೇವೆ” ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು.
ರಜತ್ಸೋವದ ಪ್ರಯುಕ್ತ ಪವಿತ್ರ ಬಲಿದಾನದ ನೇತ್ರತ್ವ ವಹಿಸಿಕೊಂಡು ಬಲಿದಾನ ಅರ್ಪಿಸಿದ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ “ಇಲ್ಲಿ ಕಟ್ಕರೆಯಲ್ಲಿ ಕಾರ್ಮೆಲ್ ಮೇಳದ ಧರ್ಮಗುರುಗಳು ಬಾಲಯೇಸುವಿನ ಮಠಾಶ್ರಮವನ್ನು ಸ್ಥಾಪಿಸಿ 25 ವರ್ಷಗಳಿಂದ ಕುಂದಾಪುರ ವಲಯಕ್ಕೆ ಅಧ್ಯಾತ್ಮಿಕ ಸೇವೆಗಳನ್ನು ನೀಡುತ್ತಾ ಬಂದಿದ್ದಾರೆ, ಅವರ ಸೇವೆ ಬಹು ಅಮೂಲ್ಯ, ಇವರ ಸೇವೆ ಕೇವಲ ಕುಂದಾಪುರ ವಲಯಕ್ಕೆ ಸೀಮಿತವಾಗಿಲ್ಲ, ಇಡೀ ಉಡುಪಿ ಧರ್ಮಪ್ರಾಂತಕ್ಕೆ ಅವರು ಸೇವೆ ನೀಡುತ್ತಾರೆ, ಇಂದು ನಾವು ಮೂರು ಸಂಭ್ರಮವನ್ನು ಆಚರಿಸುತ್ತೇದ್ದೆವೆ, ಬಾಲ ಯೇಸುವಿನ ವಾರ್ಷಿಕ ಉತ್ಸವ, ಇಲ್ಲಿನ ಬಾಲ ಯೇಸುವಿನ ಮಠಾಶ್ರಮದ ರಜತ್ಸೋವ ಮತ್ತೊಂದು ನಾಳೆ ಬೈಬಲ್ ಭಾನುವರ ಅದನ್ನು ಆಚರಿಸುತ್ತಿದ್ದೇವೆ. ದಿನ ನಿತ್ಯ ನಾವು ಕುಟುಂಬ ಸಮೇತ ಬೈಬಲನ್ನು ಒದಿ ಅರ್ಥಮಾಡಿಕೊಳ್ಳಬೇಕು, ಅದು ನಮ್ಮ ಅಧ್ಯಾತ್ಮಿಕತೆಯನ್ನು ಬಲ ಪಡಿಸುತ್ತದೆ” ಎಂದು ಸಂದೇಶ ನೀಡಿದರು.
ಇಲ್ಲಿ ಈ ಹಿಂದೆ ಮುಖ್ಯಸ್ಥರಾಗಿದ್ದ ಈಗ ಕರ್ನಾಟಕ – ಗೋವಾ ಪ್ರಾಂತೀಯ ಮುಖ್ಯಸ್ಥರಾದ ಅ|ವಂ| ಜಾರ್ಜ್ ಸಾಂತುಮಾಯೆರ್ ತಮ್ಮ ಅನುಭವನ್ನು ತಿಳಿಸಿ ಶುಭಾಶಯ ಕೋರಿದರು. ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಭೋಜನವನ್ನು ಆಶಿರ್ವದಿಸಿದರು.
ಈ ಉತ್ಸವದ ತಯಾರಿಗಾಗಿ ಆಶ್ರಮದಲ್ಲಿ 3 ದಿನಗಳ ಧ್ಯಾನ ಕೂಟವನ್ನು ಹಮ್ಮಿಕೊಂಡಿತ್ತು. ಈ ಧ್ಯಾನ ಕೂಟವನ್ನು ವಂ|ಫಾ|ರುಡೊಲ್ಪ್ ರಾಜ್ ಪಿಂಟೊ, ಮತ್ತು ಬ್ರದರ್ ಪ್ರಕಾಶ್ ನಡೆಸಿ ಕೊಟ್ತರು. ಬಾಲ ಯೇಸು ಮಠಾಶ್ರಮದ ವಂ ಫಾ|ದೀಪ್ ಫೆರ್ನಾಂಡಿಸ್ ದಾನಿಗಳ ಹೆಸರುಗಳನ್ನು ವಾಚಿಸಿದರು. ಇಲ್ಲಿನ ಮಠಾಶ್ರಮದ ಪ್ರಥಮ ಮುಖ್ಯಸ್ಥರಾದ ವಂ|ಫಾ|ಬೋನಿಪಾಸ್ ಡಿಸೋಜಾ ದಾನಿಗಳನ್ನು ಗೌರವಿಸಿದರು.
ರಿಶಿವನ- ರಾಣಿಪುರ ಇದರ ನಿರ್ದೇಶಕರಾದ ವಂ ಫಾ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್, ಕೋಟೆಶ್ವರದ ವಂ|ಫಾ|ಸಿರಿಲ್ ಮಿನೇಜಸ್, ಫ್ರಾನ್ಸಿಸ್ ಮೊಂತೇರೊ, ಕಾರ್ಮೆಲ್ ಸಂಸ್ಥೆಯ ಹಲವಾರು ಧರ್ಮಗುರುಗಳು ಹಾಗೇ ಕುಂದಾಪುರ ವಲಯದ ಹಲವಾರು ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಈ ಉತ್ಸವದ ಬಲಿದಾನದಲ್ಲಿ ಭಾಗಿಯಾದರು. ಕಟ್ಕೆರೆ ಬಾಲ ಯೇಸು ಪುಣ್ಯ ಕ್ಷೇತ್ರದ ರೆಕ್ಟರ್ ಧರ್ಮಗುರು ವಂ|್ವಆಲ್ವಿನ್ ಸಿಕ್ವೇರ ವಂದಿಸಿದರು.

ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಸಂಭ್ರಮ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು:ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ:ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಸಂಭ್ರಮ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು. ಯುವ ಸಮುದಾಯ ಸಾಹಿತ್ಯ ಕೃತಿಗಳ ಓದಿಗೆ ಹಿಂದಿರುಗಬೇಕು ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಯಲ್ದೂರಿನ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕನ್ನಡ ಪ್ರೀತಿಗೆ ಕೊರತೆಯಿಲ್ಲ. ಆದರೆ ಜನರು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ಗಡಿ ಪ್ರದೇಶದ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು. ಕನ್ನಡ ಶಾಲೆಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ಒದಗಿಸಬೇಕು. ಉನ್ನತ ಶಿಕ್ಷಣದಲ್ಲಿ ಆದ್ಯತೆ ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಸಮಾರೋಪ ಭಾಷಣ ಮಾಡಿ, ತಾಲ್ಲೂಕಿನಲ್ಲಿ ಕನ್ನಡ ಭಾಷೆ ಅರಳುತ್ತಿದೆ. ಹಿಂದಿನ ಪರಿಸ್ಥಿತಿ ಈಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾತನಾಡುವುದು ಫ್ಯಾಷನ್ ಆಗುತ್ತಿದೆ. ಮಕ್ಕಳು ತಮ್ಮ ಅಜ್ಜ , ಅಜ್ಜಿಯೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ಹಿರಿಯರಿಗೂ ಕನ್ನಡ ಭಾಷೆ ಆಪ್ತವಾಗುತ್ತಿದೆ ಎಂದು ಹೇಳಿದರು.
ಜನಪ್ರತಿನಿಧಿಗಳು ಸಾರ್ವಜನಿಕ ಸಮಾರಂಭಗಳು ಹಾಗೂ ಕಚೇರಿ ಸಭೆಗಲಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಭಾಷೆ ಬಳಸಬೇಕು. ಅನಗತ್ಯವಾಗಿ ಅನ್ಯ ಭಾಷೆ ಬಳಸುವುದನ್ನು ಬಿಡಬೇಕು. ಜೀವನದಲ್ಲಿ ಕನ್ನಡ ಭಾಷೆಗೆ ಮೊದಲ ಆಧ್ಯತೆ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸಲಾದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನೆರವೇರಿದೆ. ಕನ್ನಡ ಮನಸ್ಸುಗಳ ಹಾಗೂ ಸಹೃದಯರ ಸಹಕಾರ ಹೀಗೆಯೇ ಮುಂದುವರಿಯಬೇಕು. ಸಮ್ಮೇಳನದ ನೆನಪು ಉಳಿಯಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ, ಪದಾಧಿಕಾರಿಗಳಾದ ಎಂ.ಬೈರೇಗೌಡ, ಲಕ್ಷ್ಮಣರೆಡ್ಡಿ, ಶಂಕರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡ ಮಣಿ, ಮುಖ್ಯ ಶಿಕ್ಷಕ ಎಚ್.ಸಿ.ಮೋಕ್ಷಗುರು ಲಿಂಗಾರಾಧ್ಯ ಮತ್ತಿತರರು ಇದ್ದರು.

ಗ್ರಾಮೀಣ ಜನರ ಅಹವಾಲುಗಳ ಸ್ಪಂದನೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವರದಾನ – ಜಿಲ್ಲಾಧಿಕಾರಿ ವೆಂಕಟ್ ರಾಜಾ

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳಿಗೆ ತ್ವರಿತ ಸ್ಪಂದನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ದೊರೆತ ಸೌಲಭ್ಯಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವರದಾನವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ಇಂದು ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿಯ ಆಲವಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಗ್ರಾಮೀಣ ಪ್ರದೇಶದ ಜನರ ಅಹವಾಲುಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಪ್ರತಿ ತಿಂಗಳು ಮೂರನೇ ಶನಿವಾರದಂದು ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯ ಅತಿ ಹಿಂದುಳಿದ ಹಳ್ಳಿಯನ್ನು ಆಯ್ದುಕೊಂಡು ಅಲ್ಲಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ , ತ್ವರಿತ ಪರಿಹಾರ ಒದಗಿಸುವ ಕಾರ್ಯಗಳು ಈ ಕಾರ್ಯಕ್ರಮದಿಂದ ಸಾಧ್ಯವಾಗುತ್ತಿವೆ.
ಇಂದಿನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ ಪಿಂಚಣಿ ಮಂಜೂರಿ ಆದೇಶ , ಪೌತಿ ಖಾತೆ ಆದೇಶ , ಹಕ್ಕು ಪತ್ರ ಪಹಣಿ ತಿದ್ದುಪಡಿ ಪತ್ರಗಳನ್ನು ವಿತರಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ. ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಒಂದು ತಂಡವಾಗಿ ಪ್ರತಿ ತಿಂಗಳು ಗ್ರಾಮವೊಂದಕ್ಕೆ ಬಂದು ಜನರಿಗೆ ಸ್ಪಂದಿಸುತ್ತಿರುವುದು ಸರ್ಕಾರದ ಜನಪರ ಕಾರ್ಯವಾಗಿದೆ. ಗ್ರಾಮೀಣ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಂದಾಯ ಇಲಾಖೆಯ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ , ವಿಧವಾ ವೇತನ , ಆರೋಗ್ಯ ಇಲಾಖೆಯಿಂದ ತಾಯಿ ಕಾರ್ಡುಗಳು , ಆಭಾ ಕಾರ್ಡ್ , ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿಗಳು ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಮಂಜೂರಾತಿ ಪತ್ರ , ಹಕ್ಕು ಪತ್ರ , ದಾಖಲೆಗಳನ್ನು ವಿತರಿಸಲಾಯಿತು.
ಗ್ರಾಮಸ್ಥರು ಗ್ರಾಮದ ಕೆರೆ ಕಟ್ಟೆಯನ್ನು ದುರಸ್ಥಿ ಮಾಡಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಕೆರೆ ಕಟ್ಟೆಯನ್ನು ದುರಸ್ಥಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ್ ಯೋಜನೆಯಡಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನವನ್ನು ನೆರವೇರಿಸಿದರು. ಗರ್ಭಿಣಿ ಸ್ತ್ರೀಯರು ಆರೋಗ್ಯದ ಕಾಳಜಿ ಮಾಡಬೇಕು ಮತ್ತು ಕಾಲ ಕಾಲಕ್ಕೆ ಸೂಕ್ತ ಔಷಧಿಗಳು ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು ಎಂದರು. ನಂತರ ವಿವಿಧ ಇಲಾಖೆಗಳ ಮಳಿಗೆಗಳಿಗೆ ಭೇಟಿ ನೀಡಿ ಎಲ್ಲ ಇಲಾಖೆಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು.
ಸಾರ್ವಜನಿಕರು ಕೃಷಿ , ಆರೋಗ್ಯ , ತೋಟಗಾರಿಕೆ , ಪಶುಪಾಲನೆ , ಆಹಾರ ಇನ್ನೂ ಮುಂತಾದ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆಯಾ ಮಳಿಗೆಗಳಲ್ಲಿ ಪಡೆಯಬಹುದು ಎಂದರು.
ಶ್ರೀನಿವಾಸಪುರ ತಾಲ್ಲೂಕಿನ ತಹಶೀಲ್ದಾರರಾದ ಶರೀನ್ ತಾಜ್ ಅವರು ಮಾತನಾಡಿ , ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಈ ಗ್ರಾಮವು ಜೆ.ತಿಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿದ್ದು , ಈ ಗ್ರಾಮದಲ್ಲಿ ಸುಮಾರು 1075 ಜನ ಸಂಖ್ಯೆಯನ್ನು ಒಳಪಟ್ಟಿದ್ದು , 231 ಮನೆಗಳಿವೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕಾರ್ಯ ಈ ಗ್ರಾಮದಲ್ಲಿ ಶೇ .99 ರಷ್ಟು ಗುರಿಯನ್ನು ಸಾಧಿಸಲಾಗಿದೆ.
ಈ ಗ್ರಾಮಕ್ಕೆ ಮಂಜೂರಾಗಿರುವ 5 ಸ್ಮಶಾನಗಳಲ್ಲಿ 1 ಸ್ಮಶಾನವು ಒತ್ತುವರಿಗೆ ಒಳಗಾಗಿದ್ದು , ಪ್ರಸ್ತುತ ಒತ್ತುವರಿಯನ್ನು ತೆರವುಗೊಳಿಸಿ ಆದೇಶಿಸಲಾಗಿದೆ ಎಂದರು.
ಇಂದು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಅಂಗವಾಗಿ ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದ್ದು , ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಉಚಿತ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ ಮತ್ತು ಉಚಿತ ಜಾನುವಾರು ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿದೆ.
ಜಾನುವಾರು ಶಿಬಿರದಲ್ಲಿ ಜಾನುವಾರುಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಹಾಗೂ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ , ಉಪಾಧ್ಯಕ್ಷ ನಾಗೇಶ್‌ರೆಡ್ಡಿ , ಸದಸ್ಯೆ ಭಾರತಮ್ಮ . ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ವಿನಾಯಕ್ ,ಕಸಬಾ ಕಂದಾಯ ನಿರೀಕ್ಷಕ ಮುನಿರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ , ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಕಾಳಪ್ಪ , ಸಹಾಯಕ ನಿರ್ದೇಶಕ ವಿ.ಕೃಷ್ಣಪ್ಪ , ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ವಿ.ಕೃಷ್ಣಪ್ಪ , ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ , ಕೃಷಿ ಇಲಾಖೆಯ ರಘು , ಈಶ್ವರ್ , ತಾಲ್ಲೂಕು ಆರೋಗ್ಯಾಧಿಕಾರಿ ಡಾ || ವಿಶ್ವನಾಥ್‌ರೆಡ್ಡಿ , ಲೋಕೋಪಯೋಗಿ ಇಲಾಖೆಯ ಎಂ.ನಾರಾಯಣಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು
.

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ,ತಲ್ಲೂರು ರೋಟರಿ ಸಮುದಾಯ ದಳ ಸೇರಿ ಹೊಲಿಗೆ ಯಂತ್ರ ಹಸ್ತಾಂತರ

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ತಲ್ಲೂರು ರೋಟರಿ ಸಮುದಾಯ ದಳ ಸೇರಿ ಹಟ್ಟಿಯಂಗಡಿಯ ಶ್ರೀಮತಿ ಆಚಾರ್ಯರಿಗೆ ಸ್ತ್ರೀ ಸಬಲೀಕರಣದ ಯೋಜನೆಯ ಭಾಗವಾಗಿ ರೋ. ಕೆ. ಪಿ. ಭಟ್ ಹಾಗೂ ರೋ. ಶೋಭಾ ಭಟ್ ದಂಪತಿಗಳು ಕೊಡ ಮಾಡಿದ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಲಾಯಿತು.
ರೋಟರಿ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ರೋ. ಕೆ.ಪಿ ಭಟ್, ಸಭಾಪತಿ ರೋ. ಓಝ್ಲಿನ್ ರೆಬೆಲ್ಲೊ, ಸಮುದಾಯ ದಳದ ಅಧ್ಯಕ್ಷ ಜಗದೀಶ ಆಚಾರ್ಯ, ಕಾರ್ಯದರ್ಶಿ ಸದಾನಂದ ಆಚಾರ್ಯ ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೂರು ನೀಡಲು ಬರುವ ಮಹಿಳೆಯರೊಂದಿಗೆ ಉತ್ತಮವಾಗಿ ಸಂವಹನ ನಡೆಸಿ ಎಸ್.ಪಿ.ಎಂ.ನಾರಾಯಣ

ಕೋಲಾರ : ಮಹಿಳೆಯರು ಠಾಣೆಯ ಬಳಿ ದೂರುಗಳನ್ನು ನೀಡಲು ಬಂದಾಗ ಅಧಿಕಾರಿಗಳು ಅವರೊಂದಿಗೆ ಸೂಕ್ತವಾಗಿ ಸಂವಹನ ನಡೆಸಿ ದೂರುಗಳನ್ನು ಸ್ವೀಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ನಿರ್ದೇಶನ ನೀಡಿದರು.

ಇಂದು ನಗರದ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು , ಮಹಿಳೆಯರಿಗೆ ಸಮಸ್ಯೆಗಳಾದಾಗ ಅವರು ಠಾಣೆಗೆ ದೂರನ್ನು ನೀಡಲು ಬರುತ್ತಾರೆ. ಇಂತಹ ದೂರುಗಳನ್ನು ಮಹಿಳೆಯರು ತಂದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಡೆದ ವಿಚಾರದ ಬಗ್ಗೆ ದೂರುಗಳನ್ನು ಸ್ವೀಕರಿಸಿ ಮುಂದಿನ ಕ್ರಮವನ್ನು ವಹಿಸಬೇಕೆಂದು ತಿಳಿಸಿದರು.

ಮಧ್ಯರಾತ್ರಿಯ ವೇಳೆಯಲ್ಲಿ ಟೀ ಅಂಗಡಿಗಳು , ಮದ್ಯದ ಅಂಗಡಿಗಳು , ಹೋಟೆಲ್‌ಗಳು ಸೇರಿದಂತೆ ಇತರೆ ಅಂಗಡಿಗಳು ತೆರೆಯುವುದನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕೆಲಸ ಮಾಡಬೇಕು. ಈ ಸಂಬಂಧ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳು ಸೂಕ್ತವಾಗಿ ಕಾರ್ಯನಿರ್ವಹಿಸಬೇಕು. ಇವುಗಳನ್ನು ಸಮಯಕ್ಕೆ ಸರಿಯಾಗಿ ಮುಚ್ಚಿಸುವ ಕೆಲಸ ಮಾಡಬೇಕು ಎಂದರು.

ದ್ವಿ ಚಕ್ರ ವಾಹನ ಚಾಲಕರು ತಪ್ಪದೆ ಹೆಲೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ತ್ರಿಬಲ್ ರೈಡಿಂಗ್ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವುದು ಹೆಚ್ಚಾಗಿ ಕಂಡುಬರುತ್ತಿರುತ್ತದೆ. ಇವುಗಳನ್ನು ನಿಯಂತ್ರಿಸುವುದರ ಜೊತೆಗೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂಚಾರಿ ಪೊಲೀಸ್‌ ಮಾಡಬೇಕೆಂದು ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ ಕೆಲವರನ್ನು ಸನ್ನಡತೆಯ ಆಧಾರದ ಮೇಲೆ ರೌಡಿ ಶೀಟರ್ ಪಟ್ಟಿಯಿಂದ ಹೆಸರನ್ನು ಕೈ ಬಿಡಲಾಗಿದೆ. ಸಾರ್ವಜನಿಕ ವಲಯದಲ್ಲಿ ಗಲಾಟೆ ಮತ್ತು ದೊಂಬಿಗಳನ್ನು ಮಾಡುವವರು ಇದ್ದರೆ ಅವರನ್ನು ಹೊಸದಾಗಿ ರೌಡಿಶೀಟರ್ ಪಟ್ಟಿಗೆ ಸೇರ್ಪಡೆ ಮಾಡಿ , ಪುಂಡು ಪೋಕರಿಗಳ ಹಾವಳಿಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿನಿರ್ನಾಮ ಮಾಡಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದರು.

ಸಾರ್ವಜನಿಕರಿಗೆ ಸಮಸ್ಯೆಯಾದಲ್ಲಿ ಕೂಡಲೇ ಪೊಲೀಸ್ ಇಲಾಖೆಯ 112 ಟೋಲ್ ಫ್ರೀ ನಂಬರ್‌ಗೆ ಕರೆಮಾಡಿ ದೂರುಗಳನ್ನು ನೀಡಬಹುದು ಎಂದ ಅವರು , ರಾತ್ರಿ ಹೈವೇ ಸಂಚರಿತ ವಾಹನಗಳು ಸರಿಯಾದ ಸುರಕ್ಷಿತ ಕ್ರಮವನ್ನು ಕೈಗೊಳ್ಳಬೇಕು . ಹೊರ ರಾಜ್ಯಗಳಿಂದ ಬರುವ ವಾಹನಗಳ ಮೇಲೆ ನಿಗಾ ವಹಿಸಬೇಕು . ಇದರ ಜೊತೆಗೆ ಅಪಘಾತಗಳು ಸಂಭವಿಸಿದಾಗ ಅವರನ್ನು ರಕ್ಷಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ ಗೋಪಿನಾಥ್ , ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ವಿನಾಯಕ್ , ಎಲ್ಲಾ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕದಿಂದ, ಕುಂದಾಪುರ ಸರಕಾರಿ ಆಸ್ಪತ್ರೆಯ ಮಾತು/ಶ್ರವಣ ವಿಭಾಗಕ್ಕೆ ರೂ. 87,000/- ಬೆಲೆಯ ಪೀಠೋಪಕರಣ ಕೊಡುಗೆ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಸರಕಾರಿ ಆಸ್ಪತ್ರೆ ಕುಂದಾಪುರ ಇದರ ವಾಕ್ (ಮಾತು) ಮತ್ತು ಶ್ರವಣ ವಿಭಾಗಕ್ಕೆ ಜನವರಿ 19 ರಂದು ರೂ. 87,000/- ಬೆಲೆಯ ಪೀಠೋಪಕರಣ ಗಳನ್ನು ನೀಡಿದರು. ಈ ದೇಣಿಗೆಯನ್ನು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ಆಡಳಿತ ಶಸ್ತ್ರ ಚಿಕಿತ್ಸಕರಾದ ಡಾ. ರಾಬರ್ಟ್ ರೆಬೆಲ್ಲೊ ಇವರಿಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಶಾಂತಾರಾಂ ಪ್ರಭು, ಸೀತಾರಾಮ ನಕ್ಕತ್ತಾಯ, ಸತ್ಯನಾರಾಯಣ ಪುರಾಣಿಕ, ನಾರಾಯಣ ದೇವಾಡಿಗ, ಜಿ. ಸಂತೋಷ ಕುಮಾರ್ ಶೆಟ್ಟಿ ಮತ್ತು ಅಬ್ದುಲ್ ಬಶೀರ್ ಹಾಗೂ ಆಸ್ಪತ್ರೆಯ ವಾಕ್ ಮತ್ತು ಶ್ರವಣ ವಿಭಾಗದ ಸಿಭಂದಿಗಳು ಉಪಸ್ಥಿತರಿದ್ದರು.

ಮೂವರು ಸಹೋದರಿಯರು ಆತ್ಮಹತ್ಯೆ ದುರಂತ ಸಾವಿನಿಂದ ಬೆಚ್ಚಿಬಿದ್ದ ಚಿಕ್ಕನಾಯಕನಹಳ್ಳಿಯ ಜನ

ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣವು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.18ರಿಂದ 24 ವರ್ಷದೊಳಗಿನ ಮೂವರು ಸಹೋದರಿಯರು ನೇಣಿಗೆ ಕೊರಳೊಡ್ಡಿದ್ದು, ಮೂರು ಅಮಾಯಕ ಜೀವ ಬಲಿಗೆ ಇಡೀ ಗ್ರಾಮಸ್ಥರು ಕಣ್ಣೀರಾಗಿದ್ದಾರೆ.  ತಂದೆ, ತಾಯಿ, ಅಜ್ಜಿಯನ್ನು ಕಳೆದುಕೊಂಡು ಅನಾಥರಾಗಿದ್ದ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವುದು ಸಾರ್ವಜನಿಕರ ಹೃದಯ ಕರಗಿಸಿದೆ.

ರಂಜಿತಾ(24), ಬಿಂದು(21) ಚಂದನಾ(18) ಮೃತಪಟ್ಟ ಸಹೋದರಿಯರಾಗಿದ್ದಾರೆ. ಸುಮಾರು 9 ದಿನಗಳ ಹಿಂದೆಯೇ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿದ್ದು, ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ, ಶೋಧಿಸಿದಾಗ  ಜನವರಿ 19ರಂದು ಈ ದುರ್ಘಟನೆ ಬೆಳಕಿಗೆ ಬಂದಿದೆ.

ಕೆ. ಪ್ರತಾಪಚಂದ್ರ ಶೆಟ್ಟಿ ಕೆಪಿಸಿಸಿ ಸದಸ್ಯತ್ವಕ್ಕೆ ಸಲ್ಲಿಸಿದ ರಾಜೀನಾಮೆ ಅಂಗೀಕರಿಸದಿರಲು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಎಐಸಿಸಿ ಗೆ ಮನವಿ

ಕುಂದಾಪುರ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಕೆಪಿಸಿಸಿ ಸದಸ್ಯತ್ವಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸದಿರಲು ಕುಂದಾಪುರ ಬ್ಲಾಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದಿದ್ದಾರೆ

    ಕೆ. ಪ್ರತಾಪಚಂದ್ರ ಶೆಟ್ಟಿಯವರು ಕುಂದಾಪುರ ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರು, ಎಐಸಿಸಿ ಸದಸ್ಯರು, ಹೀಗೆ ಪಕ್ಷದ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಿ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಮತ್ತು ನಾಯಕರಾಗಿ ಗುರುತಿಸಿಕೊಂಡು 4 ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, 3 ಬಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಹಾಗೂ ಸಭಾಪತಿಯಾಗಿ ಸೇವೆ ಸಲ್ಲಿಸಿದವರು.

ಅವರು ತಮ್ಮ ರಾಜಕೀಯ ಜೀವನದಲ್ಲಿ ಸಜ್ಜನ, ಸಚ್ಚಾರಿತ್ರ್ಯ, ದಕ್ಷ ಕಳಂಕರಹಿತ, ಶುದ್ಧ ಹಸ್ತದ ರಾಜಕಾರಣಿಯಾಗಿ ತನ್ನ ಸುಧೀರ್ಘ 40 ವರ್ಷದ ರಾಜಕೀಯ ಜೀವನದಲ್ಲಿ ಶಕ್ತಿ ಮೀರಿ ಪಕ್ಷಕ್ಕಾಗಿ ದುಡಿದು ತನ್ನ ಕೆಲಸದಿಂದ ಮತ್ತು ವ್ಯಕ್ತಿತ್ವದಿಂದ ಗೌರವ ಹೆಚ್ಚಾಗುವಂತೆ ಕಾಂಗ್ರೆಸ್ ಪಕ್ಷಕ್ಕೂ ಕಾರ್ಯನಿರ್ವಹಿಸಿದ್ದಾರೆ. ತನ್ನ ನೇರನುಡಿ, ಸಾಮಾಜಿಕ ನ್ಯಾಯದ ಬದ್ಧತೆ, ಸಚ್ಚಾರಿತ್ಯದ ಬದುಕಿನಿಂದ ಕೆ ಪ್ರತಾಪಚಂದ್ರ ಶೆಟ್ಟಿಯವರು ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಳಷ್ಟು ಜನ ಅನುಯಾಯಿಗಳನ್ನು ಹೊಂದಿದ್ದು, ತನ್ನನ್ನು ನಂಬಿದವರನ್ನು ಹಾಗೂ ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಎಂದಿಗೂ ಕೈಬಿಡದವರೆಂದು ಜನಜನಿತವಾಗಿರುತ್ತದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಹೋರಾಟಕ್ಕೆ ಯಾವುದೇ ಮುಲಾಜಿಲ್ಲದೇ ಹೋರಾಟ ಮಾಡುವ ವ್ಯಕ್ತಿತ್ವ ಹೊಂದಿರುವುದರಿಂದ ಜಿಲ್ಲೆಯಲ್ಲಿ ಜನಪ್ರಿಯ ಕಾಂಗ್ರೆಸ್ ನಾಯಕರಾಗಿರುತ್ತಾರೆ.

ಕೆ ಪ್ರತಾಪಚಂದ್ರ ಶೆಟ್ಟಿಯವರು ಪ್ರಚಲಿತ ರಾಜಕೀಯ ವಿದ್ಯಮಾನಗಳ ಹಿನ್ನಲೆಯಲ್ಲಿ ಮತ್ತು ಪಕ್ಷದಲ್ಲಿ ಬೇರೆಯವರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಅವರು ನೀಡಿರುವ `ರಾಜೀನಾಮೆಯು ಅವರ ನಾಯಕತ್ವದಲ್ಲಿ ಕಳೆದ 30 ವರ್ಷಗಳಿಂದ ಇರುವ ನನಗೆ ವೈಯಕ್ತಿಕವಾಗಿ ನೋವನ್ನುಂಟು ಮಾಡಿದೆ. ಪಕ್ಷದ ಹಿತದೃಷ್ಟಿ ಮತ್ತು ಚುನಾವಣಾ ದೃಷ್ಟಿಯಿಂದ ಇವರ ರಾಜೀನಾಮೆಯು ಉಡುಪಿಯ ಜಿಲ್ಲೆಯಲ್ಲಿ ಬಹಳಷ್ಟು ಪರಿಣಾಮ ಬೀರಲಿರುವುದು ತಮ್ಮ ಗಮನಕ್ಕೂ ಬಂದಿರುತ್ತದೆ ಎಂದು ಭಾವಿಸುತ್ತೇನೆ. ಈ ಎಲ್ಲಾ ಹಿನ್ನಲೆಯಲ್ಲಿ ತಾವು ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿಯವರು ನೀಡಿರುವ ರಾಜೀನಾಮೆಯ ಪತ್ರದ ಕುರಿತು ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳುವಂತೆ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ವಿನಂತಿಸಿಕೊಂಡಿದ್ದಾರೆ.

ಕನ್ನಡಕುದ್ರುವಿನಲ್ಲಿ ಸಂತ ಜೋಸೆಫ್ ವಾಜ್ ರವರ ವಾರ್ಷಿಕ ಹಬ್ಬ

ಗಂಗೊಳ್ಳಿ: ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ಅಧೀನದಲ್ಲಿರುವ ಕನ್ನಡಕುದ್ರುವಿನ ಸಂತ ಜೋಸೆಫ್ ವಾಜ್ ಪ್ರಾರ್ಥನಾಲಯದಲ್ಲಿ ಪಾಲಕ ಸಂತ ಜೋಸೆಫ್ ವಾಜ್ ರವರ ವಾರ್ಷಿಕ ಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಕಂಡ್ಲೂರು ಚರ್ಚಿನ ಧರ್ಮಗುರು ವಂ|ಕೆನ್ಯುಟ್ ಬಾರ್ಬೊಜಾ ದೇವರ ವಾಕ್ಯವನ್ನು ಪಠಿಸಿ “ಯೇಸುವಿಗೆ ಆರಂಭದಿಂದಲೇ, ಅಡ್ಡಿ ಆತಂಕಗಳು ಎದುರಾದವು, ಆದರೆ ಅವುಗಳೆಲ್ಲದರ ಮೇಲೆ ಅವರು ಜಯ ಸಾಧಿಸಿದರು. ಹಾಗೇ ನಾವು ನಮಗೆ ಬರುವಂತಹ ತೊಂಅದ್ರೆ ಅಡ್ಡಿ ಆತಂಕಗಳ ಮೇಲೆ ಜಯ ಸಾಧಿಸಬೇಕು, ನಮಗೆ ಬರುವ ತೊಂದರೆಗಳನ್ನು, ನಾವು ಆಶಿರ್ವಾವದವನ್ನಾಗಿ ಬದಲಿಸಿಕೊಳ್ಳಬೇಕು, ನಾವು ಯೇಸು ಹೇಳಿದಂತೆ ನಡೇದುಕೊಂಡರೆ ಮಾತ್ರ ಸಾಲದು, ಯೇಸುವಿನಂತೆ ಆಗಬೇಕು” ಎಂದು ಹೇಳುತ್ತಾ “ನಾವು ಉಪವಾಸ, ಪ್ರಾರ್ಥನೆ, ಭಕ್ತಿ ಆಚರಿಸಿದರೆ ಸಾಲದು, ಯೇಸುವಿನಂತೆ ತನ್ನ ವೈರಿಯನ್ನು ಕ್ಷಮಿಸಬೇಕು, ನಿನಗೆ ಕೆಟ್ಟದನ್ನು ಬಯಸಿದವರಿಗೆ, ನೀನು ಒಳ್ಳೆಯದನ್ನು ಬಯಸಬೇಕು, ಯೇಸು ತನ್ನನ್ನು ವಧಿಸಿದವರಿಗೆ ಕ್ಷಮೆ ನೀಡಿದರು, ಮೊತ್ತ ಮೊದಲು ನಿಮಗೆ ಬರುವ ಅಡ್ಡಿ ಆತಂಕಗಳನ್ನು ಆಶಿರ್ವಾದವೆಂದು ಭಾವಿಸಲು ಆರಂಭಿಸಿ, ಹೀಗೆ ಎಲ್ಲಾ ಅಡಿ ಆತಂಕಗಳ ಮೇಲೆ ಜಯ ಸಾಧಿಸಿಕೊಂಡು, ನಾವು ಯೇಸುವಿನ ನೀಜ ಸಾಕ್ಸಿಗಳಾಗೋಣ” ಎಂದು ಅವರು ಸಂದೇಶ ನೀಡಿದರು.
ಈ ಹಿಂದೆ ಗಂಗೊಳ್ಳಿ ಚರ್ಚಿನಲ್ಲಿ ಸೇವೆ ನೀಡಿದ ಧರ್ಮಗುರು ವಂ|ಆಲ್ಬರ್ಟ್ ಕ್ರಾಸ್ತಾ ಪವಿತ್ರ ಬಲಿದಾನದ ನೇತ್ರತ್ವವನ್ನು ವಹಿಸಿದ್ದರು. ಕುಂದಾಪುರ ವಲಯದ ಹಲವಾರು ಧರ್ಮಗುರುಗಳು ಸಾಮುಹಿಕ ಬಲಿದಾನದವನ್ನು ಅರ್ಪಿಸಿದರು. ಹಬ್ಬದ ನೇತ್ರತ್ವ ವಹಿಸಿದ ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ರೋಶನ್ ತೊಮಸ್ ಡಿಸೋಜಾ ವಂದಿಸಿದರು. ಕುಂದಾಪುರ ವಲಯ ಪ್ರಧಾನ ರೋಜರಿ ಚರ್ಚಿನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಶುಭಾಶಯಗಳನ್ನು ಕೋರಿದರು. ಕನ್ನಡ ಕುದ್ರು ನಿವಾಸಿ ದಿವಗಂತ ರೊಬರ್ಟ್ ಪಿ.ಕ್ರಾಸ್ತಾ ಮತ್ತು ಆಲಿಸ್ ಕ್ರಾಸ್ತಾ ದಂಪತಿಯ ಮಕ್ಕಳು ಪೆÇೀಷಕರಾಗಿದ್ದ ಈ ವಾರ್ಷಿಕ ಹಬ್ಬದಲ್ಲಿ ಹಲವಾರು ಧರ್ಮಭಗಿನಿಯರು, ಅನೇಕ ಭಕ್ತಾಧಿಗಳು ಪಾಲ್ಗೊಂಡರು.