ಡಿಸಿಸಿ ಬ್ಯಾಂಕ್ ಹಾಗೂ ತಮ್ಮ ವಿರುದ್ದ ಎಂಎಲ್‍ಸಿ ಗೋವಿಂದರಾಜು ಆರೋಪಕ್ಕೆ ಸ್ಪಷ್ಟನೆ, ಕೇಸ್‍ಗಳಿರುವ ದಾಖಲೆ ಬಹಿರಂಗಪಡಿಸಿ-ತಕ್ಷಣ ರಾಜೀನಾಮೆ ನೀಡುವೆ-ಬ್ಯಾಲಹಳ್ಳಿ ತಿರುಗೇಟು

ಕೋಲಾರ:- ನನ್ನ ವಿರುದ್ದ ದಾಖಲಾಗಿರುವ 9 ಕೇಸ್‍ಗಳಿಗೆ ನಾನು ತಡೆಯಾಜ್ಞೆ ಪಡೆದುಕೊಂಡಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿರುವ ವಿಧಾನಪರಿಷತ್ ಸದಸ್ಯ ಇಂಚರಗೋವಿಂದರಾಜು ಸದರಿ ಪ್ರಕರಣಗಳ ಮಾಹಿತಿಯನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದರೆ ಆ ಕ್ಷಣವೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿರುಗೇಟು ನೀಡಿದರು.
ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿದ್ದ ಗೋವಿಂದರಾಜು ಹೇಳಿಕೆ ನೀಡಿ, ಡಿಸಿಸಿ ಬ್ಯಾಂಕ್‍ನಲ್ಲಿನ ಭ್ರಷ್ಟಾಚಾರದ ವಿರುದ್ದ 9 ಕೇಸುಗಳು ಹೈಕೋರ್ಟ್‍ನಲ್ಲಿದ್ದು, ಅದಕ್ಕೆ ಗೋವಿಂದಗೌಡರು ತಡೆಯಾಜ್ಞೆ ತಂದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರ ಹಿನ್ನಲೆಯಲ್ಲಿ ಗೋವಿಂದಗೌಡರು ಈ ಸುದ್ದಿಗೋಷ್ಟಿ ನಡೆಸಿ ವಾಗ್ದಾಳಿ ನಡೆಸಿದರು.
ಗೋವಿಂದರಾಜು ಹಿರಿಯರಿದ್ದಾರೆ, ಅವರಿಂದ ಇಂತಹ ಸುಳ್ಳು ಹೇಳಿಕೆ ನಿರೀಕ್ಷಿಸಿರಲಿಲ್ಲ, ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕನ್ನು ಕಟ್ಟಿ ಬೆಳೆಸಿದ್ದೇವೆ, 8 ಲಕ್ಷ ಫಲಾನುಭವಿಗಳಿಗೆ 10 ಸಾವಿರ ಕೋಟಿ ಸಾಲ ನೀಡಿದ್ದೇವೆ, ಇಂತಹ ಸಂದರ್ಭದಲ್ಲಿ ಸುಳ್ಳು ಹೇಳಿಕೆ ನೀಡುವ ಮೂಲಕ ಬಡವರು,ರೈತರು,ಮಹಿಳೆಯರಿಗೆ ಬೆನ್ನೆಲುಬಾಗಿರುವ ಬ್ಯಾಂಕಿನ ಘನತೆಗೆ ಮಸಿ ಬಳಿಯುವ ಎಂಎಲ್‍ಸಿ ಗೋವಿಂದರಾಜು ಪ್ರಯತ್ನ ಅವರ ಘನತೆಗೆ ತಕ್ಕುದಲ್ಲ ಎಂದರು.
ಕೆಂಚಾಪುರ ಸೊಸೈಟಿಯಲ್ಲಿ ನಾರಾಯಣರೆಡ್ಡಿ ಅವರಿಗೆ ಸಂಬಂಧಿಸಿದ ಒಂದು ಪ್ರಕರಣ ಈಗಾಗಲೇ ವಿಚಾರಣೆ ಮುಗಿದಿದೆ, ಉಳಿದಂತೆ ಒಂದೇ ಒಂದು ಪ್ರಕರಣ ದಾಖಲಾಗಿದ್ದು, ನಾನು ತಡೆಯಾಜ್ಞೆ ತಂದಿದ್ದರೆ ಮಾಧ್ಯಮಗಳ ಮುಂದೆ ದಾಖಲೆ ಪ್ರದರ್ಶಿಸಲಿ, ಅದು ಬಿಟ್ಟು ಮನಬಂದಂತೆ ಹೇಳಿಕೆ ನೀಡುವ ಮೂಲಕ ಒಂದು ಆರ್ಥಿಕ ಸಂಸ್ಥೆಯ ಘನತೆ ಹಾಳು ಮಾಡುವ ಪ್ರಯತ್ನ ಮಾಡಬಾರದು ಎಂದರು.
ಡಿಸಿಸಿ ಬ್ಯಾಂಕ್ ಸಾಲ ನೀಡಿಕೆ,ವಸೂಲಾತಿಯಲ್ಲಿ ರಾಜ್ಯಕ್ಕೆ ಮೊದಲಿದ್ದರೂ, ಠೇವಣಿ ಸಂಗ್ರಹದಲ್ಲಿ ಹಿನ್ನಡೆ ಹೊಂದಿದ್ದೇವೆ, ಗೋವಿಂದರಾಜು ಅಂತಹವರು ಇಂತಹ ಸುಳ್ಳು ಹೇಳಿಕೆ ನೀಡಿ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ನಡೆಸಿದರೆ ಬ್ಯಾಂಕನ್ನೆ ನಂಬಿರುವ ಜಿಲ್ಲೆಯ ಮಹಿಳೆಯರು, ಬಡ ರೈತರಿಗೆ ದ್ರೋಹ ಬಗೆದಂತೆ ಅಲ್ಲವೇ ಎಂದು ಪ್ರಶ್ನಿಸಿದರು.
ಬ್ಯಾಂಕಿನಲ್ಲಿ ತಪ್ಪು ನಡೆದಿದ್ದರೆ ಅದರ ವಿರುದ್ದ ತನಿಖೆ ನಡೆಸಲು ಮುಕ್ತ ಅವಕಾಶ ನೀಡಿದ್ದೇವೆ, ಈಗಾಗಲೇ ಎಲ್ಲವೂ ಸುಳ್ಳು ಎಂದು ಸಾಬೀತಾಗಿದೆ, ಕೇವಲ ಪ್ರಚಾರಕ್ಕಾಗಿ ಬಡವರು,ಮಹಿಳೆಯರಿಗೆ ನೆರವಾಗುತ್ತಿರುವ ಒಂದು ಸಂಸ್ಥೆಯನ್ನು ಹಾಳು ಮಾಡದಿರಿ ಎಂದು ಸಲಹೆ ನೀಡಿದರು.


ಜಿ.ಕೆ.ವಿ.ಆರೋಪಕ್ಕೆ ಬ್ಯಾಲಹಳ್ಳಿ ಸ್ಪಷ್ಟನೆ


ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಅಡ್ಡಗಲ್ ಸೊಸೈಟಿಯಲ್ಲಿ 33 ಕೋಟಿ ಅವ್ಯವಹಾರವಾಗಿದೆ, ಅಲ್ಲಿ ನಕಲಿ ಸಂಘಗಳಿವೆ ಎಂದೆಲ್ಲಾ ಹೇಳಿಕೆ ನೀಡಿದ್ದಾರೆ, ಆದರೆ ಅಲ್ಲಿ ಸಾಲ ನೀಡಿರುವುದೇ ಒಟ್ಟು 6.80 ಕೋಟಿ ರೂ, ಅಲ್ಲಿ 87 ಮಹಿಳಾ ಸಂಘಗಳಿಗೆ 4.35 ಕೋಟಿ ರೂ ಸಾಲ ನೀಡಿದ್ದೇವೆ, 267 ರೈತರಿಗೆ 2.32 ಕೋಟಿ ರೂ ನೀಡಿದ್ದೇವೆ, ಮಹಿಳೆಯರು ಪ್ರಾಮಾಣಿಕವಾಗಿ ಕಂತು ಪಾವತಿಸುತ್ತಿದ್ದು, ಈಗಾಗಲೇ 1.5 ಕೋಟಿ ರೂ ವಸೂಲಿಯಾಗಿದೆ, ಇಂತಹ ಸಂದರ್ಭದಲ್ಲಿ ಮಾಜಿ ಶಾಸಕರು ವಿಷಯ ತಿಳಿದು ಆರೋಪ ಮಾಡಬೇಕಾಗಿತ್ತು ಎಂದರು.
ದಾಖಲೆ ನೀಡಿ ಆರೋಪಿಸಿದರೆ ಖಂಡಿತಾ ತಲೆ ಬಾಗುವೆ, ಅವ್ಯವಹಾರ ನಡೆದಿದ್ದರೆ ಗಮನಕ್ಕೆ ತನ್ನಿ ನಾನೇ ಜವಾಬ್ದಾರಿ ವಹಿಸಿಕೊಳ್ಳುವೆ ಎಂದ ಅವರು, ನಕಲಿ ಮಹಿಳಾ ಸಂಘಗಳಿದ್ದರೆ ಕೂಡಲೇ ತಮ್ಮ ಗಮನಕ್ಕೆ ತರಲಿ ಎಂದು ಸಲಹೆ ನೀಡಿ, ನನಗೆ ನನ್ನ ಮಾನಹಾನಿಗಿಂತ ಬ್ಯಾಂಕಿನ ಘನತೆ ಮುಖ್ಯವಾಗಿದೆ, ಬ್ಯಾಂಕನ್ನು ಅನೇಕ ಬಡವರು,ಮಹಿಳೆಯರು ನಂಬಿದ್ದಾರೆ, ಅವರಿಗೆ ದ್ರೋಹವಾಗಬಾರದು ಎಂದರು.
ಬ್ಯಾಂಕ್ ಉಳಿಸಬೇಕು ಎಂದು ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ನಾನು ಅಧ್ಯಕ್ಷನಾದಾಗ ಕೇವಲ 33 ಸಂಘಗಳು ಮಾತ್ರ ಅವಿಭಜಿತ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಬಲವಾಗಿದ್ದವು, ಆದರೆ ಈಗ 193 ಸಂಘಗಳು ಸಬಲವಾಗಿವೆ, ಗಣಕೀಕರಣಗೊಂಡಿವೆ ಎಂದರು.
ನಾನು ಕಳೆದ 9 ವರ್ಷ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಂದಲೇ ಆಡಳಿತ ಅಧ್ಯಕ್ಷನಾಗಿದ್ದೇ, ನನಗೆ ಈ ಸ್ಥಾನ ಸಿಗಲು ಕಾಂಗ್ರೆಸ್ ಕಾರಣ, ಅವಿಭಜಿತ ಜಿಲ್ಲೆಯ ಆ ಪಕ್ಷದ ಶಾಸಕರು ಸಹಕಾರ ನೀಡಿದ್ದಾರೆ ಎಂದರು.
ನಿಮ್ಮನ್ನು ರಮೇಶ್‍ಕುಮಾರ್ ಬಲಿಪಶು ಮಾಡಿದ್ದಾರೆ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ದೂರಿರುವ ಕುರಿತು ಮಾತನಾಡಿದ ಅವರು, ನನ್ನನ್ನು ಬಲಿಪಶು ಮಾಡಲು ದೇವರು ಮತ್ತು ಅವಿಭಜಿತ ಜಿಲ್ಲೆಯ ಬಡವರಿಂದ ಮಾತ್ರ ಸಾಧ್ಯ ಎಂದರು.
ಕಾಂಗ್ರೆಸ್ ಶಾಸಕರಿಗೆ ಸಾಲ ನೀಡಿರುವ ಕುರಿತ ಆರೋಪಕ್ಕೆ ಉತ್ತರಿಸಿದ ಅವರು, ನಿಯಮಾನುಸಾರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಕೋಳಿ ಫಾರಂಗಾಗಿ ಅಡಮಾನ ಪಡೆದು 4 ಕೋಟಿ ರೂ ಸಾಲ ನೀಡಿದ್ದೇವೆ, ರಮೇಶ್‍ಕುಮಾರ್ 40 ಲಕ್ಷ ಸಾಲ ಪಡೆದಿದ್ದಾರೆ ಆದರೆ ಎಲ್ಲಾದರೂ ಅವ್ಯವಹಾರ ನಡೆದಿದ್ದರೆ ಸಾಬೀತು ಪಡಿಸಲಿ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್,ಎಸ್.ವಿ.ಸುಧಾಕರ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಶಿಧರ್ ಉಪಸ್ಥಿತರಿದ್ದರು.

ಕೋಲಾರ ವಿಧಾನಸಭಾಕ್ಷೇತ್ರದಲ್ಲಿ ನಾನೂ ಆಕಾಂಕ್ಷಿ ಸಿದ್ದರಾಮಯ್ಯ ಬಾರದಿದ್ದರೆ ನನಗೆ ಟಿಕೆಟ್ ನೀಡಲಿ

ಅವೈಜ್ಞಾನಿಕ ಹೆಚ್ಚುವರಿ ಶಿಕ್ಷಕರ ಸ್ಥಳನಿಯುಕ್ತಿ ಕೌನ್ಸಿಲಿಂಗ್ ರದ್ದತಿಗೆ ಆದೇಶ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮನವಿಗೆ ಸಚಿವರ ಸ್ಪಂದನೆ

ಕೋಲಾರ:- ಶಿಕ್ಷಣ ಇಲಾಖೆ ಆಯುಕ್ತರು ಹಠಕ್ಕೆ ಬಿದ್ದು ಇಂದು ನಡೆಸಲು ಮುಂದಾದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಮುಂದೂಡಿಸುವಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಯಶಸ್ವಿಯಾಗಿದ್ದು, ಕಡೆಗೂ ಕೌನ್ಸಿಲಿಂಗ್‍ಅನ್ನು ಮುಂದಿನ ಆದೇಶದವರೆಗೂ ಮುಂದೂಡುವಂತೆ ಶಿಕ್ಷಣ ಸಚಿವರೇ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸಿದ್ದಾರೆ.
ರಾಜ್ಯಾದ್ಯಂತ ಇಂದು ಆರಂಭವಾದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್‍ಗೆ ಸಂಬಂಧಿಸಿದಂತೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ, ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಸಂಖ್ಯೆಯನ್ನು ಕಳೆದ ವರ್ಷದ ದಾಖಲೆಗಳಂತೆ ಪಡೆಯಲಾಗಿದ್ದು, ಅನೇಕ ಶಿಕ್ಷಕರಿಗೆ ಅನ್ಯಾಯವಾಗುತ್ತದೆ ಎಂಬ ಆತಂಕವಿದ್ದ ಹಿನ್ನಲೆಯಲ್ಲಿ ಕೌನ್ಸಿಲಿಂಗ್ ರದ್ದುಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಷಡಕ್ಷರಿ ಮನವಿ ಮಾಡಿದ್ದರು.
ಈ ನಡುವೆ ಸಭಾಪತಿ ಬಸವರಾಜಹೊರಟ್ಟಿಯವರೂ ಸಹಾ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಜತೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ನಿರಂತರವಾಗಿ ಶಿಕ್ಷಣ ಸಚಿವರೊಂದಿಗೆ ಸಂಪರ್ಕದಲ್ಲಿದ್ದು, ಷಡಕ್ಷರಿ ಅವರು ಇಂದು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದರು ಎಂದು ತಿಳಿಸಿದ್ದಾರೆ.
ಈ ನಡುವೆ ಹೊಂದಾಣಿಕೆ, ಮುಂಬಡ್ತಿಯಲ್ಲಿನ ಗೊಂದಲಗಳೆಲ್ಲವನ್ನು ಸರಿಪಡಿಸಿದ ನಂತರ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ನೌಕರರ ಸಂಘದ ಅಧ್ಯಕ್ಷರು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ವಿರೋಧದ ನಡುವೆ
ಶಿಕ್ಷಕರ ಕೌನ್ಸಿಲಿಂಗ್
ಶಿಕ್ಷಕರು ಮತ್ತು ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಇಂದು ರಾಜ್ಯದ ಎಲ್ಲಾ ಡಿಡಿಪಿಐ ಕಚೇರಿಗಳಲ್ಲಿ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಆರಂಭಗೊಂಡಿತಾದರೂ, ಮಧ್ಯಾಹ್ನದ ವೇಳೆಗೆ ಶಿಕ್ಷಣ ಸಚಿವರ ಸೂಚನೆಯಂತೆ ಮುಂದಿನ ಆದೇಶದವರೆಗೂ ರದ್ದುಗೊಳಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತು.
ಶಿಕ್ಷಣ ಇಲಾಖೆ ಆಯುಕ್ತರು ಶಿಕ್ಷಕ ಸಂಘಟನೆಗಳ ಯಾವ ಒತ್ತಾಯವನ್ನೂ ಪರಿಗಣಿಸದೇ ಜ.24 ರಂದು ಹೆಚ್ಚುವರಿ ಶಿಕ್ಷಕರ ಸ್ಥಳ ನಿಯುಕ್ತಿಕೌನ್ಸಿಲಿಂಗ್ಸೂಚಿಸಿದ್ದರ ಹಿನ್ನಲೆಯಲ್ಲಿ ಕೋಲಾರ ಸೇರಿದಂತೆ ರಾಜ್ಯದ ಎಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಚೇರಿಗಳ ಮುಂದೆ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಫೆಬ್ರವರಿ 28ಕ್ಕೆ ನಿವೃತ್ತಿಯಾಗುವ ಶಿಕ್ಷಕರನ್ನೂ ಸಹಾ ಹೆಚ್ಚುವರಿ ಎಂದು ಪರಿಗಣಿಸಿ ಸ್ಥಳ ನಿಯುಕ್ತಿ ಕೌನ್ಸಿಲಿಂಗ್‍ಗೆ ಕರೆದಿದ್ದು, ಅಮಾನವೀಯ ವರ್ತನೆ ಎಂದೇ ಆರೋಪಿಸಲಾಗಿತ್ತು ಜತೆಗೆ ಕಳೆದ ವರ್ಷ ಮಕ್ಕಳ ಹಾಜರಾತಿಯನ್ನು ಪರಿಗಣಿಸಿ ಇದೀಗ ಹೆಚ್ಚುವರಿ ಎಂದು ಪರಿಗಣಿಸಿರುವ ಇಲಾಖೆಯ ನೀತಿಯೂ ಟೀಕೆಗೆ ಒಳಗಾಗಿತ್ತು.
ಕೌನ್ಸಿಲಿಂಗ್ ರದ್ದು
ಶಿಕ್ಷಕರ ಹರ್ಷ
ಬೆಳಗ್ಗೆ ಆರಂಭದಲ್ಲಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಹೆಚ್ಚುವರಿ ಕೌನ್ಸಿಲಿಂಗ್ ನಡೆದಿದ್ದು, ಅದನ್ನೂ ರದ್ದುಗೊಳಿಸಲು ಈಗ ಆದೇಶಿಸಲಾಗಿದೆ, ಒಟ್ಟಾರೆ ಸ್ಥಳ ನಿಯುಕ್ತಿಗಾಗಿ ಆತಂಕದಿಂದ ಕಾಯುತ್ತಿದ್ದ ಶಿಕ್ಷಕರು ಕೌನ್ಸಿಲಿಂಗ್ ರದ್ದಾದ ಸುದ್ದಿ ಹೊರ ಬೀಳುತ್ತಿದ್ದಂತೆ ಹರ್ಷ ವ್ಯಕ್ತಪಡಿಸಿದರು.
ಇನ್ನಾದರೂ ಗೊಂದಲಗಳನ್ನು ಸರಿಪಡಿಸಿ ನಂತರ ಸ್ಥಳ ನಿಯುಕ್ತಿಕೌನ್ಸಿಲಿಂಗ್ ನಡೆಸಲಿ ಎಂದು ಅನೇಕ ಶಿಕ್ಷಕರು,ಶಿಕ್ಷಕ ಮುಖಂಡರು ಒತ್ತಾಯಿಸಿದರು.
ಇಂದಿನ ಕೌನ್ಸಿಲಿಂಗ್ ನೇತೃತ್ವವನ್ನು ಡಿಡಿಪಿಐಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್,ಬಿಇಒಗಳಾದ ಕನ್ನಯ್ಯ, ಉಮಾದೇವಿ, ಗಂಗರಾಮಯ್ಯ,ಚಂದ್ರಕಲಾ, ಚಂದ್ರಶೇಖರ್, ಸುಕನ್ಯಾ, ವಿಷಯ ಪರಿವೀಕ್ಷಕರಾದ ಶಶಿವಧನ, ಶಂಕರೇಗೌಡ, ಗಾಯತ್ರಿ,ವೆಂಕಟೇಶಪ್ಪ, ಕಚೇರಿ ಅಧೀಕ್ಷಕರಾದ ಗೋವಿಂದಗೌಡ, ಮಂಜುನಾಥರೆಡ್ಡಿ ಇಲಾಖೆಯ ಲಕ್ಷ್ಮಣ್, ಚಿರಂಜೀವಿ,,ವೇಣು ಮತ್ತಿತರರು ವಹಿಸಿದ್ದರು.

ಅತ್ತೂರು ಮಹೋತ್ಸವದ 3 ನೇ ದಿನ “ಕಷ್ಟಕಾರ್ಪಣ್ಯಗಳ ನಡುವೆ ದೇವರಲ್ಲಿ ಭರವಸೆಯಿಟ್ಟು, ಅವರ ಸಾಕ್ಷಿಗಳಾಗಿ ಬಾಳೋಣ” ಬೆಳ್ತಂಗಡಿ ಬಿಷಪ್ ಲೋರೆನ್ಸ್ ಮುಕುಝಿ

ಅತ್ತೂರು: “ಪ್ರಾಪಂಚಿಕ ಅನುಭವಗಳಾದ ಕಷ್ಟಕಾರ್ಪಣ್ಯಗಳು, ದುಷ್ಟತನಗಳು ನಮ್ಮನ್ನು ಧೃತಿಗೆಡುವಂತೆ ಮಾಡುತ್ತವೆ. ಪವಿತ್ರ್ ಆತ್ಮರ ಕೃಪೆಯಿಂದ ಅವುಗಳ ಮೇಲೆ ಜಯ ಸಾಧಿಸಿ, ದೇವರಲ್ಲಿ ಅಚಲ ನಂಬಿಕೆಯಿಟ್ಟು ಅವರ ಸಾಕ್ಷಿಗಳಾಗಿ ಬಾಳಿದಾಗ ಮತ್ತು ಒಳಿತನ್ನು ಮಾಡಿದಾಗ ನಾವು ಆಶಿರ್ವಾದವನ್ನು ಪಡೆಯುತ್ತೇವೆ” ಎಂದು ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಲೋರೆನ್ಸ್ ಮುಕುಝಿ ಪ್ರಬೋಧನೆ ನೀಡಿದರು. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಮೂರನೇ ದಿನವಾದ ಮಂಗಳವಾರದಂದು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಜನವರಿ 22ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರದಂದು ಈ ಪುಣ್ಯಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು. ಅಸ್ವಸ್ಥರಿಗಾಗಿ ವಿಶೇಷವಾಗಿ ಪೂಜೆ ಪ್ರಾರ್ಥನೆಗಳ್ನು ನೆರವೇರಿಸಲಾಯಿತು.
ದಿನದ ಏಕೈಕ ಪ್ರಮುಖ ಬಲಿಪೂಜೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಲೋರೆನ್ಸ್ ಮುಕುಝಿಯವರು ನೆರವೇರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟಗುರು ಅತಿ ವಂದನೀಯ ಮ್ಯಾಕ್ಸಿಮ್ ನೊರೊನ್ಹಾ ಬೆಳಿಗ್ಗೆ 10 ಗಂಟೆಯ ಬಲಿಪೂಜೆಯನ್ನು ಅರ್ಪಿಸಿದರು. ದಿನದ ಇತರ ಬಲಿಪೂಜೆಗಳನ್ನು ವಂದನೀಯ ಆಲ್ವಿನ್ ಸಿಕ್ವೇರಾ, ಕಟ್ಕೆರೆ; ವಂದನೀಯ ವೀರೇಶ್ ಮೋರಸ್, ಶಿವಮೊಗ್ಗ; ವಂದನೀಯ ತೋಮಸ್ ರೋಶನ್ ಡಿಸೋಜಾ, ಗಂಗೊಳ್ಳಿ; ವಂದನೀಯ ಆ್ಯಂಡ್ರು ಡಿಸೋಜಾ, ಬೋಂದೆಲ್ ಇವರು ನೆರವೇರಿಸಿದರು.
ವಂದನೀಯ ವಿಕ್ಟರ್ ಡಿಮೆಲ್ಲೊ, ಪಾನೀರ್ ಇವರು ನೆರವೇರಿಸಿದ ದಿನದ ಅಂತಿಮ ಬಲಿಪೂಜೆಯೊಡನೆ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು.
ಮಾಜಿ ಶಾಸಕರಾದ ಶ್ರೀ ಅಭಯಚಂದ್ರ ಜೈನ್ ಮತ್ತು ಶ್ರೀ ವಿನಯ್ ಕುಮಾರ್ ಸೊರಕೆಯವರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಂತ ಲಾರೆನ್ಸರ ಅನುಗ್ರಹವನ್ನು ಪಡೆದರು.
ಮಹೋತ್ಸವದ ನಾಲ್ಕನೇ ದಿನ ಬುಧವಾರ ಬೆಳಿಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಮಧ್ಯಾಹ್ನ 12 ಗಂಟೆಯ ಬಲಿಪೂಜೆ ಕನ್ನಡ ಭಾಷೆಯಲಿದ್ದು, 10 ಗಂಟೆಯ ವಿಶೇಷ ಸಾಂಭ್ರಮಿಕ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಡೊ| ಅಲೋಶಿಯಸ್ ಪಾವ್ಲ್ ಡಿಸೋಜಾರವರು ನೆರವೇರಿಸಿ ಪ್ರಬೋಧನೆ ನೀಡಲಿದ್ದಾರೆ.

ನುಡಿದಂತೆ ನಡೆಯುತ್ತೇವೆ , 200 ಯೂನಿಟ್ ವಿದ್ಯುತ್ ಉಚಿತ , 2 ಸಾವಿರ ಪ್ರತಿ ಮಹಿಳೆಗೆ ನೀಡುತ್ತೇವೆ , ಸಿದ್ದರಾಮಯ್ಯ ಘೋಷಿಸಿದಂತೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡುತ್ತೇವೆ:ಡಿ.ಕೆ.ಶಿವಕುಮಾರ್

ಕೋಲಾರ: ನುಡಿದಂತೆ ನಡೆಯುತ್ತೇವೆ , 200 ಯೂನಿಟ್ ವಿದ್ಯುತ್ ಉಚಿತ , 2 ಸಾವಿರ ಪ್ರತಿ ಮಹಿಳೆಗೆ ನೀಡುತ್ತೇವೆ , ಸಿದ್ದರಾಮಯ್ಯ ಘೋಷಿಸಿದಂತೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡುತ್ತೇವೆ , ಜನರಿಗೆ ಸಹಾಯ ಮಾಡಲು ನಿಂತಿದ್ದೇವೆ ನಮ್ಮ ಈ ಘೋಷಣೆಗಳು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೋಲಾರದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ , ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ , ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಪ್ರಚಾರ ಮಾಡುತ್ತಿದ್ದೇವೆ , ಕೋಲಾರ ಚಿಕ್ಕಬಳ್ಳಾಪುರ 11 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದ್ದಲ್ಲದೇ ಕಳೆದವಾರ ನಡೆದ ಪ್ರಿಯಾಂಕ ಗಾಂಧಿಯವರ ನಾ ನಾಯಕಿ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಅತಿ ಹೆಚ್ಚು ಜನರನ್ನು ಸಂಘಟಿಸಿ ಕಳುಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಅಭಿನಂದನೆ ಸಲ್ಲಿಸಿದರು.

ಕೋಲಾರ ಇತಿಹಾಸ ಇಡೀ ದೇಶಕ್ಕೆ ಒಂದು ಮಾದರಿ , ನೀವೆಲ್ಲಾ ಶ್ರಮ ಜೀವಿಗಳು , ಬೆಂಗಳೂರು ಕರ್ನಾಟಕಕ್ಕೆ ಹಾಲು , ತರಕಾರಿ , ರೇಷ್ಮೆ ಕೊಡುತ್ತಿದ್ದೀರಿ. ಇಡೀ ರಾಜ್ಯಕ್ಕೆ ದೇಶಕ್ಕೆ ಚಿನ್ನ ಕೊಟ್ಟ ಜಿಲ್ಲೆ , ಹಿರಿಯರ ತ್ಯಾಗ , ಹೋರಾಟ ಮರೆಯಲು ಸಾಧ್ಯವಿಲ್ಲ ಎಂದರು. ಲಕ್ಷಾಂತರ ಮಂದಿ ಬೆಂಗಳೂರಿಗೆ ಬಂದು ಉದ್ಯೋಗ ಮಾಡುತ್ತಿದ್ದೀರಿ , ಕೋಲಾರ ಜಿಲ್ಲೆ ಹಸಿರು ಕಂಗೊಳಿಸುತ್ತಿದೆ. ಕಾರಣ ನೀವೆ ಅರ್ಥ ಮಾಡಿಕೊಳ್ಳಿ , ಸಮಸ್ಯೆ ಅರಿತು ಅಭಿಪ್ರಾಯ ತಿಳಿದು ನೋವು ನಲಿವು ಆಚಾರವಿಚಾರ ಅರಿಯಲು ಈ ಯಾತ್ರೆ ಮಾಡುತ್ತಿದ್ದೇವೆ ಎಂದರು.

ಡಬಲ್ ಇಂಜಿನ್ ಸರಕಾರ ಇದೆ . ಕೇಂದ್ರದಲ್ಲಿ ಬಲಿಷ್ಠ ಸರಕಾರ , ಇಲ್ಲಿ ಆಪರೇಷನ್ ಲೋಟಸ್ ಸರಕಾರದಿಂದ ಅಭಿವೃದ್ಧಿಯಾಗಿದೆಯೇ , ವಿಮರ್ಶೆ ಮಾಡಲು ರಾಜ್ಯ ಪ್ರವಾಸ ಮಾಡುತ್ತಿದ್ದೇವೆ ಎಂದರು. ಜನ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ , ನೋವು ತಿಳಿಸಿದ್ದಾರೆ. ಆಡಳಿತದ ವೈಫಲ್ಯಗಳನ್ನು ಗಮನಕ್ಕೆ ತಂದಿದ್ದಾರೆ. ಬಲಿಷ್ಠ ಸರಕಾರ , ಅಚ್ಛೇ ದಿನ ಸರಕಾರ ಬಂದಿದೆಯೇ ಕೇಳುತ್ತಿದ್ದೇವೆ , 15 ಜಿಲ್ಲೆ ಪ್ರವಾಸ ಮಾಡಿದ್ದೇವೆ . ಎಲ್ಲಿ ಹೋದರೂ ಜನ ಭಾರೀ ಪ್ರಮಾಣದಲ್ಲಿ ಸೇರುತ್ತಿದ್ದಾರೆ , ಹಾಸನದಲ್ಲಿ ಶಾಸಕರಿಲ್ಲದಿದ್ದರೂ 1 ಲಕ್ಷ ಮಂದಿ ಬಲ ಪ್ರದರ್ಶನ ಮಾಡಿ ಬದಲಾವಣೆ ಬಯಸುತ್ತಿದ್ದಾರೆ.

ಜನ ಸಂತೋಷವಾಗಿಲ್ಲ , ಬಿ ಜೆ ಪಿ 600 ಭರವಸೆ ನೀಡಿತ್ತು . 50 ಈಡೇರಿಸಿದ್ದಾರೆ. 550 ಈಡೇರಿಸಿಲ್ಲ . ಹಿಂದೆ ನಾವು 169 ರಲ್ಲಿ 165 ಭರವಸೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ .

ಮುಖ್ಯಮಂತ್ರಿಗೆ ದಿನಕ್ಕೊಂದು ಪ್ರಶ್ನೆ , ಒಂದಕ್ಕೂ ಉತ್ತರ ನೀಡಿಲ್ಲ . ಜೆಡಿಎಸ್ ಬಗ್ಗೆ ಮಾತನಾಡಲ್ಲ , ಜೆಡಿಎಸ್‌ನವರನ್ನು ಕೇಳಿ , ಕೆರೆತುಂಬಿಸುವ ಯೋಜನೆ ಎತ್ತಿನ ಹೊಳೆ ವಿರೋಧಿಸಿ ರೈತರ ಪರ ಎಷ್ಟು ಪ್ರೀತಿ ಎಂದು ತೋರಿಸಿದ್ದಾರೆ. ಜನರಿಗೆ ಶಕ್ತಿತುಂಬಿ , ಉತ್ತರ ನೀಡಿ ಬಲ ತುಂಬುವುದೇ ಪ್ರಜಾಧ್ವನಿ ಎಂದರು.

ಕೊರೋನಾ ಪರಿಹಾರವಾಗಿ 20 ಲಕ್ಷ ಕೋಟಿ ನಿರ್ಮಲ ಸೀತಾರಾಮ್ 19 ಸಾವಿರ ಕೋಟಿ ಯಡಿಯೂರಪ್ಪ ಘೋಷಣೆ ಯಾರಿಗೂ ಅನುಕೂಲವಾಗಿಲ್ಲ , 2 ಕೋಟಿ ಉದ್ಯೋಗ ಕೊಡುತ್ತೀವಿ ಎಂದರು ಇಲ್ಲ , ಜೆಡಿಎಸ್ ಬದುಕು ಹಸನುಮಾಡುತ್ತೀವಿ ಎಂದು ಭರವಸೆ ನೀಡಿತ್ತು. 19 ತಿಂಗಳು ಅಧಿಕಾರ ಕೊಟ್ಟರೂ ನಡೆಸಲು ಆಗಲಿಲ್ಲ .

ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿತು , ಎರಡು ಬಾರಿ ಮುಖ್ಯಮಂತ್ರಿ ಮಾಡಿತ್ತು. ನಾವು ಅಂತರ್ಜಲ ಹೆಚ್ಚಿಸಿದ್ದೇವೆ , ಬದುಕು ಬದಲಾವಣೆ ತಂದಿದ್ದೇವೆ.

ನಾ ನಾಯಕಿಗೆ ಹೆಚ್ಚು ಜನ ಬ್ಯಾಲಹಳ್ಳಿಗೆ ಅಭಿನಂದನೆ

ಇಂದಿನ ಪ್ರಜಾಧ್ವನಿ ಕಾರ್ಯಕ್ರಮಕ್ಕೆ 60 ಸಾವಿರ ಜನರನ್ನು ಸೇರಿಸುವುದಾಗಿ ಕೊಚ್ಚಿಕೊಂಡಿದ್ದ ಕಾಂಗ್ರೆಸ್‌ನ ಘಟಬಂಧನ್ ನಾಯಕರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರದೇ ಮುಜುಗರವಾಯಿತು. ವೇದಿಕೆಯಡಿ ಹಾಕಿದ್ದ 8 ಸಾವಿರ ಚೇರ್ ತುಂಬಲು ಸಾಕು ಸಾಕಾಯಿತು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ನಾ ನಾಯಕಿ ಕಾರ್ಯ ಕ್ರಮಕ್ಕೆ ಅತಿ ಹೆಚ್ಚು ಜನರನ್ನು ಸಂಘಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡರನ್ನು ಅಭಿನಂದಿಸಿದ್ದು , ಕೋಲಾರದಲ್ಲಿ ಬ್ಯಾಲಹಳ್ಳಿ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು. ಜಿ.ಎಸ್‌ಟಿ ಹಣ ತನ್ನಿ ಸಿಎಂಗೆ ಸವಾಲು ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ , ಮುಖ್ಯಮಂತ್ರಿ ಬೊಮ್ಮಾಯಿ ಅವರೇ ತಾಕತ್ತಿದ್ದರೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ತನ್ನಿ ಎಂದು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತು ಕೊಂಡಿರುವ ನಾರಾಯಣಸ್ವಾಮಿ ಸವಾಲು ಹಾಕಿದರು.

ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ , ಶೇ .40 ಲಂಚವಿಲ್ಲದೆ ಬಿಜೆಪಿ ಸರಕಾರದಲ್ಲಿ ಯಾವುದೇ ಕೆಲಸ ನಡೆಯಲ್ಲ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಟೀಕಿಸಿದರು .

ಶಾಸಕ ಕೆ.ವೈ.ನಂಜೇಗೌಡ , ಜಡ್ಡುಗಟ್ಟಿ ಹೋಗಿರುವ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರಜಾಧ್ವನಿ ನಡೆಸುತ್ತಿದ್ದು , ಬಿಜೆಪಿಯ ಕೆಟ್ಟ ಆಡಳಿತವನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕು ಎಂದು ಕೋರಿದರು . ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ , ನಾಗಪುರದ ಸಂವಿಧಾನ ಬೇಕೋ ಭಾರತದ ಅಂಬೇಡ್ಕರ್‌ ಸಂವಿಧಾನ ಬೇಕೋ ಎಂಬುದನ್ನು ಜನತೆ ನಿರ್ಧರಿಸಬೇಕಿದೆ ಎಂದರು . ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ , ಎಐಸಿಸಿಯ ಸುರ್ಜೇವಾಲಾ , ಮಾಜಿ ಸಚಿವರಾದ ರಮೇಶ್ ಕುಮಾರ್ , ಎಂ.ಬಿ.ಪಾಟೀಲ್ , ಕೃಷ್ಣಬೈರೇಗೌಡ , ರಾಮಲಿಂಗಾರೆಡ್ಡಿ , ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ , ಕೆ.ಶ್ರೀನಿವಾಸ ಗೌಡ , ನಸೀರ್ ಅಹಮದ್ , ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್‌ , ಮಾಜಿ ಶಾಸಕ ಕೊತ್ತೂರು ಮಂಜುನಾಥ್ , ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತಿತರರಿದ್ದರು .

ರಾಜ್ಯಕ್ಕೆ ನೂರು ಬಾರಿ ಅಮಿತ್ ಶಾ , ಮೋದಿ ಬಂದ ಕಾಂಗ್ರೆಸ್ ಅಧಿಕಾರಕ್ಕೇರುವದು ಖಚಿತ : ಸಿದ್ದರಾಮಯ್ಯ

ಕೋಲಾರ : ಪ್ರಜಾಧ್ವನಿ ಯಾತ್ರೆಯಲ್ಲಿ ಸೇರಿದ ಜನರನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ನೂರು ಬಾರಿ ಅಮಿತ್ ಶಾ , ಮೋದಿ ಬಂದ ಕಾಂಗ್ರೆಸ್ ಅಧಿಕಾರಕ್ಕೇರುವದು ಖಚಿತ ಎಂದರು.

ನಗರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಮಾತನಾಡಿದ ಅವರು , 13 ನೇ ಜಿಲ್ಲೆಯ ಪ್ರವಾಸ ಪ್ರತಿ ಜಿಲ್ಲೆಯಲ್ಲಿಯೂ ಪ್ರಜಾಧ್ವನಿಗೆ ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಸ್ಪಂದನೆ ಜನಸಮೂಹದಿಂದ ಹರಿದು ಬರುತ್ತಿದೆ.

ರಾಜ್ಯದ ಜನ ಬಿಜೆಪಿ ಸರಕಾರದ ಆಡಳಿತದಿಂದ ಬೇಸತ್ತಿದ್ದಾರೆ , ನೊಂದಿದ್ದಾರೆ , ಅನೇಕ ಕಷ್ಟಗಳ ಅನುಭವಿಸುತ್ತಿದ್ದಾರೆ , ಯಾವುದೇ ಕೆಲಸ ಲಂಚ ನೀಡದೆ ಆಗುತ್ತಿಲ್ಲ ಎಂದು ಟೀಕಿಸಿದರು .

ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರಕಾರ ಬಿಜೆಪಿ ಸರಕಾರದ್ದಾಗಿದೆ . ಶೇ .40 ಪರ್ಸೆಂಟ್ ಕಮೀಷನ್ ಬಗ್ಗೆ ಮೂರು ಬಾರಿ ಸದನದಲ್ಲಿ ಚರ್ಚೆಗೆ ಕೋರಿದರೂ ಅವಕಾಶ ನೀಡಲಿಲ್ಲ , ಹೋಟೆಲ್ ತಿಂಡಿಗಳ ಮಾದರಿ ಪ್ರತಿ ಕೆಲಸಕ್ಕೂ ಲಂಚ ನಿಗದಿಪಡಿಸಲಾಗಿದೆ , ವಿಧಾನಸೌಧದ ಗೋಡೆ ಲಂಚ ಲಂಚ ಎಂದು ಪಿಸುಗುಡುತ್ತಿದೆ. ತಮ್ಮ ಅವಧಿಯ ಲಂಚದ ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದರು .

ದೇಶದ ಯುವಕರೇ ಉದ್ಯೋಗ ಕೊಡದ ಬಿಜೆಪಿಯನ್ನು ನಂಬಬೇಡಿ , ಸಣ್ಣ ಕೈಗಾರಿಕೆ , ಮಧ್ಯಮ ಕೈಗಾರಿಕೆಗಳು ಮುಚ್ಚಿ ಹೋದವು. 60 ಲಕ್ಷ ಉದ್ಯೋಗಳು ಕಡಿತಗೊಂಡವು ಎಂದರು. 2 ವರ್ಷ 10 ತಿಂಗಳು ಮುಖ್ಯಮಂತ್ರಿ ಯಾಗಿದ್ದಾಗ ಕುಮಾರಸ್ವಾಮಿಗೆ ರೈತರು ಜ್ಞಾಪಕ ಬರಲಿಲ್ಲವಾ , ಈಗ ಜೆಡಿಎಸ್ ಪಂಚರತ್ನ ಎಂದು ಓಡಾಡುತ್ತಿದೆ.

ಕೆಸಿ ವ್ಯಾಲಿಗಾಗಿ ಜಿಲ್ಲೆಯ ಎಲ್ಲಾ ಮುಖಂಡರು ಬೇಡಿಕೆ ಮೇರೆಗೆ 1400 ಕೋಟಿ ನೀಡಿ ಕೆ.ಸಿ.ವ್ಯಾಲಿ ನೀರಿನಿಂದ ಕೆರೆಗಳ ತುಂಬಿಸಿದ್ದೇ ಕಾರಣ. ಈ ನೀರು ವಿಷ ಎನ್ನುತ್ತಿದ್ದಾರೆ ಕುಮಾರಸ್ವಾಮಿ , ಎತ್ತಿನ ಹೊಳೆಗೂ ವಿರೋಧ ಮಾಡಿದವರು ಕುಮಾರಸ್ವಾಮಿಯೇ ,
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎತ್ತಿನ ಹೊಳೆ ನೀರು ಹರಿಸಿ ಕುಡಿಯುವ ನೀರು ಕೊಡುತ್ತೇನೆ ಎಂದರು.

ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಮೋದಿ ಭರವಸೆ ಮಾಡಿದರು . ರೈತರ ಸಾಲ ಮನ್ನಾ ಮಾಡದೆ ಉದ್ಯಮಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ , ಮನಮೋಹನ್‌ಸಿಂಗ್ 78 ಸಾವಿರಕೋಟಿ ಸಾಲವನ್ನು ಮನ್ನಾ ಮಾಡಿದ್ದರು.

ರಾಜ್ಯದಲ್ಲಿ 27 ಲಕ್ಷ 27 ಸಾವಿರ ರೈತರಿಗೆ 50 ಸಾವಿರ ರೂ ಸಾಲ 8150 ಕೋಟಿ ಸಾಲ ಮನ್ನಾ ಮಾಡಿದ್ದೆ . ಎಸ್‌ ಸಿ ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುವಂತೆ ಕಾನೂನು ಮಾಡಿದ್ದು , ನಮ್ಮ ಸರಕಾರ ಹಿಂದೆ ಯಾವ ಸರಕಾರವೂ ಮಾಡಿಲ್ಲ . ಪರಿಶಿಷ್ಟ ಜಾತಿ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ , ಬಡ್ಡಿ ಮೀಸಲಾತಿ , ದಲಿತರ ಕೈಗಾರಿಕೋದ್ಯಮಕ್ಕೆ ಸಹಕರಿಸಿದ್ದು ನಮ್ಮಸರಕಾರ ಎಂದು ವಿವರಿಸಿದರು.

ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವೆ

ಕೋಲಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ , ಕೆ.ಸಿ ವ್ಯಾಲಿ ಮೂರನೇ ಬಾರಿಸಂಸ್ಕರಣೆ , ಸಹಕಾರ ಸಂಘಗಳ ಮೂಲಕ ಸ್ತ್ರೀಶಕ್ತಿ ಸಂಘಗಳು ಪಡೆದುಕೊಂಡಿರುವ ಸಾಲವನ್ನು ಮನ್ನಾ ಮಾಡುವ ತೀರ್ಮಾನ ಮಾಡುತ್ತೇವೆ. ಮತ್ತೇ ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ರೂಗಳನ್ನು ಅಲ್ಪಸಂಖ್ಯಾತರಿಗೆ ನೀಡುತ್ತೇವೆ ಎಂದರು.

ಜೆಡಿಎಸ್ ಬಿಜೆಪಿಯನ್ನು ಸೋಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿ , ಕೋಲಾರದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕು , ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಪುನರುಚ್ಛರಿಸಿ ಭಾಷಣ ಮುಗಿಸಿದರು.

ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯ ವೈಶ್ಯ ಸಮುದಾಯದ ವತಿಯಿಂದ ಕನ್ಯಕಾಪರಮೇಶ್ವರಿ ಆತ್ಮಾರ್ಪಣಾ ದಿನೋತ್ಸವ

ಶ್ರೀನಿವಾಸಪುರ: ಇಲ್ಲಿನ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯ ವೈಶ್ಯ ಸಮುದಾಯದ ವತಿಯಿಂದ ಕನ್ಯಕಾಪರಮೇಶ್ವರಿ ಆತ್ಮಾರ್ಪಣಾ ದಿನೋತ್ಸವ ಆಚರಿಸಲಾಯಿತು. ಆತ್ಮಾರ್ಪಣಾ ದಿನಾಚರಣೆ ಪ್ರಯುಕ್ತ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ದೇವಿ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಿಗೆ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ. ದೇವಿ ಮೂಲ ವಿಗ್ರಹಕ್ಕೆ 108 ಕಳಶಗಳಿಂದ ವಿಶೇಷ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಸಂಜೆ ಉಯ್ಯಾಲೋತ್ಸವ ಹಾಗೂ ಪ್ರಾಕಾರೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಕನ್ಯಕಾಪರಮೇಶ್ವರಿ ಆತ್ಮಾರ್ಪಣೆ ದಿನೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ಆರ್ಯವೈಶ್ಯ ಸಮುದಾಯದ ಅಂಗಡಿಗಳಿಗೆ ರಜೆ ಘೋಷಿಸಲಾಗಿತ್ತು.

ಓದಿನ ಜತೆ ವಿದ್ಯಾರ್ಥಿ ಜೀವನದಿಂದ ಮೌಲ್ಯಯುತ ಗುಣಗಳೊಂದಿಗೆ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು:ಪ್ರಾಂಶುಪಾಲ ಪ್ರಾಣೇಶ್

ಶ್ರೀನಿವಾಸಪುರ: ಓದಿನ ಜತೆ ವಿದ್ಯಾರ್ಥಿ ಜೀವನದಿಂದ ಮೌಲ್ಯಯುತ ಗುಣಗಳೊಂದಿಗೆ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಶ್ರೀನಿವಾಸಪುರ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್ ಹೇಳಿದರು.
ಗೊರವಿಮಾಕಲಪಲ್ಲಿ ಸಫಲಮ್ಮ ಸಮುದಾಯ ಭವನದಲ್ಲಿ ಬೆಂಗಳೂರಿನ ಋಷಿ ಪ್ರಭಾಕರ್ ವಿದ್ಯಾಕೇಂದ್ರದ ಸಹಯೋಗದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ದಿನದ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಬೆಳವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳಿಗೆ ವಿದ್ಯಾರ್ಥಿಗಳ ಸೃಜನಶೀಲ ಅಭಿವೃದ್ಧಿ ಆಧುನಿಕ ಶಿಕ್ಷಣದ ಅತ್ಯಂತ ತುರ್ತು ಕಾರ್ಯಾಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾದ ಪ್ರಸ್ತುತ ದಿನಗಳನ್ನು ಅರ್ಥೈಸಿಕೊಂಡು ಶಿಕ್ಷಣವನ್ನು ಪಡೆಯಬೇಕು ಸಲಹೆ ನೀಡಿದರು .
ಸಿದ್ಧಿಸಮಾಜ ಯೋಗದ ಗುರುಗಳಾದ ಗೋಪಾಲ ಗುರೂಜಿ ಮಾತನಾಡಿ ವಿದ್ಯೆ ಎಂದರೆ ಕೇವಲ ಪದವಿ ಸಂಪಾದನೆ ಮಾತ್ರವಲ್ಲ. ವಿದ್ಯೆಗೆ ವಿನಯವೇ ಭೂಷಣವಾಗಿದ್ದು ತಾನು ಮಾತ್ರವೇ ಬದುಕಬೇಕೆಂಬ ಸ್ವಾರ್ಥ ಬಿಟ್ಟು ಎಲ್ಲರೂ ಬದುಕಬೇಕೆಂಬುದನ್ನು ಅಳವಡಿಸಿಕೊಂಡಾಗ ಮಾತ್ರ ಅದು ವಿದ್ಯೆಯಾಗುತ್ತದೆ. ವಿದ್ಯಾರ್ಥಿಗಳು ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಕನಸುಗಳನ್ನು ಕಟ್ಟಿಕೊಂಡು ಶಿಕ್ಷಣ ಕೊಡಿಸುವ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು . ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಚುಟುಕ ಸಾಹಿತ್ಯ ತಾಲೂಕು ಅಧ್ಯಕ್ಷ ವೆಂಕಟಾಚಲಪತಿಗೌಡ ಮಾತನಾಡಿ ಒಬ್ಬ ಮನಷ್ಯನಿಗೆ ಕೇವಲ ವಿದ್ಯೆ ನೀಡಿದರಷ್ಟೇ ಸಾಲದು .ಅದಕ್ಕೆ ಪೂರಕವಾಗಿ ತೀರಾ ಅಗತ್ಯವಿರುವ ಜೀವನಧರ್ಮವನ್ನು ಕಲಿಸುವುದು ಹಾಗೂ ತಲಾತಲಾಂತರದಿಂದ ಉಳಿಸಿಕೊಂಡು ಬೆಳಸಿಕೊಂಡು ಬಂದಿರುವ ನಮ್ಮ ಸನಾತನ ಸಂಸ್ಕøತಿ-ಪರಂಪರೆಯ ಅರಿವು ಮೂಡಿಸುವುದು ಅತ್ಯವಶ್ಯಕ. ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತನ್ನು ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯಿರಬೇಕು .
ಈ ಕಾರ್ಯಕ್ರಮದಲ್ಲಿ ಲಕ್ಷ್ಮೀಪುರ, ರಾಯಲ್ಪಾಡು, ಶ್ರೀನಿವಾಸಪುರ ಸರ್ಕಾರಿ ಬಾಲಕೀಯರ ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಪತಾಂಜಲಿ ಯೋಗ ಗುರು ಸುದರ್ಶನ್‍ರವರಿಂದ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನವನ್ನ ಮಾಡಿಸಲಾಯಿತು. ಚಿಂತನಕಾರಕರಾದ ಜಗದೀಶ್, ಶ್ರೀನಿವಾಸ್, ಸಿ.ಆರ್.ರಾಜಗೋಪಾಲ್ ಮಾತನಾಡಿದರು. ಮುಖ್ಯ ಶಿಕ್ಷಕರಾದ ಪಿ.ಮಾರಣ್ಣ, ಶ್ರೀನಿವಾಸಗುಪ್ತ, ಉಪನ್ಯಾಸಕ ಎಂ.ಜಿ.ಗಿರೀಶ್, ಎಸ್‍ಡಿಎಂಸಿ ಅಧ್ಯಕ್ಷರಾದ ರೆಡ್ಡಿಶ್ರೀನಿವಾಸ್, ಚಂದ್ರಶೇಖರ್, ಗೊರವಿಮಾಕಲಪಲ್ಲಿ ಸಫಲಮ್ಮ ದೇವಾಲಯದ ಆಡಳಿತ ಮಂಡಲಿ ಸದಸ್ಯರಾದ ಕಾಳಾಚಾರಿ, ಮಂಜುನಾಥರೆಡ್ಡಿ, ನಾಗೇಂದ್ರ, ರಾಜ, ಎಸ್‍ಎಸ್‍ವೈ ಯೋಗ ಸಮಿತಿಯ ಸದಸ್ಯರಾದ ಸತ್ಯೇಂದ್ರಬಾಬು, ವೆಂಕಟರಮಣಪ್ಪ, ಜಿ.ಎಸ್.ನಾರಾಯಣಸ್ವಾಮಿ, ಆಂಜನಪ್ಪ , ವಿರೇಶ್‍ಕೊಮ್ಮನೂರು ಇದ್ದರು.

The First Profession of Apostolic Carmel Novices held at Maryhill

 “I want you in the Garden of Carmel”, was the voice heard by the twelve young girls who said ‘Yes Lord’ and entered the Apostolic Carmel four years back.  After a period of intense prayer, preparation and discernment, today on the 21st of January, these twelve bold and beautiful brides of Christ, seal their choice of life in their first profession by setting aside the allurements of an attractive world.  

The jubilation commenced with the solemn Eucharistic celebration by Rev Fr Daniel Veigas O.P, the Episcopal Vicar for Religious of Mangalore Diocese along with the other priests at Maryhill Chapel.  During the Eucharistic celebration, the novices were given their religious dress.   The Superior General of the Apostolic Carmel Sr Maria Nirmalini A.C. received their vows.  Fr Daniel in his homily encouraged the young sisters to remain faithful to Christ and to become the evangelizing presence in the society. 

Further, the celebration continued in the auditorium with the felicitation and rejoicing.  The twelve celebrities were accorded a graceful welcome by the students of Mount Carmel Central School through the graceful welcome dance. The felicitation song by the junior novices had in it melody and heartwarming lyrics which made the newly professed sisters to rejoice over their choice.  God couldn’t be present in person today to hold the hands of our twelve brides, but he remembered to send the Superior General Sr Maria Nimalini A.C., who in love and promise enveloped her flock of sheep and along with them cut the cake.  Sr Lathika A.C compered the felicitation programme and as she introduced the 12 young brides to the gathering, Superior General Sr Nirmalini felicitated them with a garland. In her message, Sr Nirmalini invited the newly professed sisters to recall their first call from time to time and encouraged them to live this call till the end and to share the merciful love of Jesus to the least and the lost.

The celebration magnified as the newly professed sisters partook in the fellowship meal along with their family members and sisters.

Kindly click on the link https://www.youtube.com/watch?v=oWI9jO0hVIQ

Jananudi.com “Muddu Yesu” Photo Contest 2022-23 (Category 1) Contestant No. 012 – Amos Thomas Dmello

It gives us immense pleasure that many children have participated in the Muddu Yesu Photo Contest 2022-33 organised by our News Website. At this point we would also like to appreciate parents who have worked hard to get their children ready to participate in this competition.

If you like the photo of the contestant you can click on the like button and submit form. Also you can share this link with others. The kids who get most likes will get the first ,second and third prize.

Last date to like the photo will be 22nd February 2023