Jananudi.com “Muddu Yesu” Photo Contest 2022-23 (Category 2) Contestant No. 029 Oniel Jude Rebello

It gives us immense pleasure that many children have participated in the Muddu Yesu Photo Contest 2022-33 organised by our News Website. At this point we would also like to appreciate parents who have worked hard to get their children ready to participate in this competition.

If you like the photo of the contestant you can click on the like button and submit form. Also you can share this link with others. The kids who get most likes will get the first ,second and third prize.

Last date to like the photo will be 22nd February 2023

ಸಂತ ಮೇರಿ ಮಹಾವಿದ್ಯಾಲಯದ 74 ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ

ಶಿರ್ವ:ಪ್ರತೀ ವರ್ಷದಂತೆ ಈ ವರ್ಷವೂ 74ನೆ ಗಣರಾಜ್ಯೋತ್ಸವ ದಿನಾಚರಣೆಯನ್ನು ಕಾಲೇಜಿನ ಎನ್.ಸಿ.ಸಿಯ ಭೂಯುವ ಸೇನಾದಳ ನೇತೃತ್ವದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಸಂತ ಮೇರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಅಮಂಡಾ ಮ್ಯೂರಲ್ ಸಿಕ್ವೇರಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಇಂದು ಈ ಗಣರಾಜ್ಯೋತ್ಸವ ದಿನಾಚರಣೆಯನ್ನು 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ಸರ್ಕಾರದ ಆದೇಶದಂತೆ ಶಾಲಾ-ಕಾಲೇಜಿನಲ್ಲಿ ಮಾರ್ಗಸೂಚಿ ಅನ್ವಯ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಆಚರಿಸುತ್ತಿದ್ದೇವೆ. ಇಂದು ನಮ್ಮ ರಾಷ್ಟ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು ಪ್ರತಿಯೊಬ್ಬ ಭಾರತೀಯನಲ್ಲೂ ದೇಶದ ಬಗ್ಗೆ ಕಾಳಜಿ,ದೇಶಪ್ರೇಮ ಸದಾಜಾಗೃತವಾಗಿರಬೇಕು, ಎಲ್ಲ ರಂಗಗಳಲ್ಲಿ ಸರ್ಕಾರದ ಜೊತೆಗೆ ಸಹಕರಿಸಬೇಕು ಮತ್ತು ಮುಂದಿನ ಪೀಳಿಗೆಗಳಿಗೆ ಹಿಂದಿನ ಅಳಿದ ಮಹಾತ್ಮರ ಬಗ್ಗೆ ಗೌರವ, ಅಭಿಮಾನ ಅವರ ಸಾಧನೆಯ ಅರಿವು ಮಾಡಿಸಿಕೊಡುವುದು, ಶಿಕ್ಷಣದ ಜೊತೆಗೆ ವೈಜ್ಞಾನಿಕ ಮನೋಭಾವನೇ ಬೆಳೆಸಿಕೊಂಡು ಅನ್ನ ನೀಡುವ ರೈತರ – ದೇಶ ಕಾಯುವ ಯೋಧರ ಬಗ್ಗೆ ಅಪಾರ ಒಲವು ತೋರಿಸಬೇಕು ಎಂದು ಗಣರಾಜ್ಯೋತ್ಸವ ಸಂದೇಶ ನಿಡಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್, ಹೈ ಸ್ಕೂಲ್ ವಿಭಾಗ ಹಿರಿಯ ಶಿಕ್ಷಕಿ ಸಬೀನಾ ಪ್ರಿಯ ನೊರೊನ್ಹಾ, ಡಾನ್ ಬಾಸ್ಕೋ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪೌಲಿನ್ ಲೋಬೋ, ವಿವಿಧ ಘಟಕಗಳಾದ ಎನ್.ಸಿ.ಸಿ, ಎನ್.ಎಸ್.ಎಸ್, ರೊವರ್ಸ್-ರೇಂಜರ್ಸ್, ಪದವಿಕಾಲೇಜು, ಪದವಿ ಪೂರ್ವ ಕಾಲೇಜು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದ ಹಾಗು ಕಛೇರಿ ಸಿಬಂದಿಗಳು ಉಪಸ್ಥಿತರಿದ್ದರು. ಸೀನಿಯರ್ ಅಂಡರ್ ಆಫೀಸರ್ ಮೋಹಿತ್ ಎನ್ ಸಾಲಿಯಾನ್ ಪರೆಡ್ ಕಮಾಂಡಿಂಗ್ ನೀಡಿದ್ದರು.
ಜೂನಿಯರ್ ಅಂಡರ್ ಆಫೀಸರ್ ಧೀರಜ್ ಆಚಾರ್ಯ, ಲೋಬೋ ಆನ್ ರಿಯಾ ನೇವಿಲ್,ಕಂಪನಿ ಸರ್ಜೆಂಟ್ ಕ್ವಾರ್ಟರ್ ಮಾಸ್ಟರ್ ಆಶಿಶ್ ಪ್ರಸಾದ್, ಸರ್ಜೆಂಟ್ ದೀಪಕ್, ರಿಯಾನ ಡಿಸೋಜಾ, ಕಾರ್ಪೊರಲ್ ರಿಯಾ ಸೆರೀನಾ ಡಿಸೋಜಾ, ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್, ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಕ್ಯಾಡೆಡ್ಗಳಾದ ಅನುಪ್ ನಾಯಕ, ಅಲಿಸ್ಟಾರ್ ಸುಜಯ್ ಡಿಸೋಜಾ ಮತ್ತಿತರರು ಸಹಕರಿಸಿದರು. ಸೆಕೆಂಡ್ ಆಫೀಸರ್ ಜಾನ್ ವಿಲಿಯಂ ವೇಗಾಸ್ ರವರು ವಂದಿಸಿದರು.ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್‌ಕುಮಾರ್ ರವರು ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿ

ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾರೀಖು 25 ರಂದು ಯುವ ರೆಡ್ ಕ್ರಾಸ್ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಶ್ರೀ ಉಮೇಶ್ ಶೆಟ್ಟಿ ವಹಿಸಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾದ ಡಾ. ಸೋನಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ ಹಾಗೂ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ ಸಂಯೋಜಕ ರಾದ ಯೋಗೀಶ್ ಶಾನುಭಾಗ್ ಇವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಇನ್ನೊಬ್ಬರು ಸಂಯೋಜಕ ರಾದ ಅವಿತಾ ಕೊರಿಯಾ ಇವರು ವಂದನಾರ್ಪಣೆ ಗೈದರು. ಕುಮಾರಿ ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು

“ಬೈಬಲ್ ಪ್ರದರ್ಶನ” ಮಂಗಳೂರಿನ ಜೆಪ್ಪುವಿನಲ್ಲಿ ಜ.26 ರಿಂದ ಜ. 28, ಮೂರು ದಿನಗಳ ಪ್ರದರ್ಶನ / Three-day Bible Exhibition in Mangaluru, Jeppu (J.26 to J.28)

ಮಂಗಳೂರು, ಜನವರಿ.24:ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕಸಂಪರ್ಕ ಮತ್ತು ಕಿರು ಕ್ರೈಸ್ತ ಸಮುದಾಯದ ಆಯೋಗಗಳ ಸಹ-ಭಾಗಿತ್ವದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್‍ಗಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಗುರುವಾರ, ಜನವರಿ 26, 2023 ರಿಂದ ಮೂರು ದಿನಗಳ ಬೈಬಲ್ ಪ್ರದರ್ಶನವನ್ನು ಆಯೋಜಿಸಿವೆ.
ಕಥೊಲಿಕ ಕ್ರೈಸ್ತರ ಪೂಜಾವಿಧಿಯ ಕ್ಯಾಲೆಂಡರ್‍ನ ಮೂರನೇ ಭಾನುವಾರದಂದು‘ಬೈಬಲ್ ಭಾನುವಾರ’ವನ್ನು ಸಾರ್ವತ್ರಿಕವಾಗಿಆಚರಿಸಲಾಗುತ್ತಿದೆ. ಈ ವರ್ಷ ಜನವರಿ 22, 2023 ರಂದು ಇದನ್ನು ಆಚರಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬೈಬಲ್ ಪ್ರದರ್ಶನವನ್ನುವಿಶೇಷವಾಗಿ ನಡೆಸಲಾಗುತ್ತದೆ.
ಸಂತ ಆಂತೋನಿ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಮತ್ತು ಪ್ರದರ್ಶನದ ಸಂಚಾಲಕ ವಂದನೀಯ ಜೆ. ಬಿ.ಕ್ರಾಸ್ತಾ ಮಾತನಾಡಿ, “ಬೈಬಲ್ ಸಾರ್ವಕಾಲಿಕ ಹೆಚ್ಚು ಮಾರಾಟವಾದ ಪುಸ್ತಕವಾಗಿದೆ, ಇಲ್ಲಿಯವರೆಗೆ ಸುಮಾರು 5 ಬಿಲಿಯನ್ ಪ್ರತಿಗಳು ಮಾರಾಟವಾಗಿವೆ. ಇದು ಮಾನವ ಇತಿಹಾಸದಲ್ಲಿ ಅತಿ ಹೆಚ್ಚು ಅನುವಾದಿತ ಪುಸ್ತಕವಾಗಿದೆ,” ಹೇಳಿದರು.
“ಈ ಪ್ರದರ್ಶದಲ್ಲಿ ಕ್ರೈಸ್ತ ಪವಿತ್ರ ಗ್ರಂಥ-ಬೈಬಲ್‍ನ್ನು ಸಾರ್ವಜನಿಕ ಓದುವಿಕೆಯ ಮೂಲಕ ಹಾಗೂ ಬೈಬಲ್‍ನ ಕಲೆ, ಚಿತ್ರಕಲೆ, ವೀಡಿಯೊ ಪ್ರಸ್ತುತಿ, ರಸಪ್ರಶ್ನೆ, ಹಾಡುಗಳು, ನಾಟಕಗಳು ಮತ್ತು ನೃತ್ಯಗಳ ಮೂಲಕ ಹೆಚ್ಚಿನಜನರನ್ನು ಆಕರ್ಷಿಸಿ ಜನರಿಗೆ ವಿಶೇಷ ಆನುಭವ ಹಾಗೂವಿಶ್ವಾಸದ ಪ್ರಯಾಣವನ್ನು ನೀಡಲು ಉದ್ದೇಶಿಸಿದೆ” ಎಂದು ವಂದನೀಯ ಕ್ರಾಸ್ತಾರವರು ನುಡಿದರು.
ಪಾದುವದ ಸಂತ ಅಂತೋನಿಯವರು ‘ದೇವರ ವಾಕ್ಯ’ದ ಉತ್ಕಟ ಬೋಧಕರಾಗಿದ್ದರು ಮತ್ತು ಅದನ್ನು ಎಲ್ಲರಿಗೂ ಘೋಷಿಸಲು ಹೆಚ್ಚಿನ ಉತ್ಸಾಹವನ್ನು ತೋರಿಸಿದವರು. ಆದ್ದರಿಂದ, ಈ ಪ್ರದರ್ಶನವನ್ನು ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ನಡೆಸಲಾಗುತ್ತದೆ ಎಂದು ವಂದನೀಯ ಕ್ರಾಸ್ತಾರವರು ನುಡಿದರು.
ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ವಂದನೀಯ ರೂಪೇಶ್‍ ತಾವ್ರೊರವರು ಮಾತಾನಾಡಿ, “ಈ ಪ್ರದರ್ಶನದಲ್ಲಿ ಬೈಬಲ್ ಪ್ರತಿಗಳ ವಿವಿಧ ಭಾಷಂತರ ಬೈಬಲ್ ಗಳು, ಬೈಬಲ್ ಕಲೆ, ಬೈಬಲ್ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಬೈಬಲ್ ಕಲೆ ಮತ್ತು ಬೈಬಲ್ ಘಟನೆಗಳ ಕಾಲ ಘಟ್ಟಗಳನ್ನು ಪ್ರದರ್ಶಿಸಲಾಗುವುದು. ಜೊತೆಗೆ ಬೈಬಲ್ ಗೀತೆಗಳು, ನಾಟಕಗಳು, ಬೈಬಲ್ ವರ್ಣಚಿತ್ರಗಳು, ಬೈಬಲ್ ಕ್ವಿಜ್‍ಮತ್ತು ಪ್ರಮುಖ ಬೈಬಲ್ ಘಟನೆಗಳ ಪ್ರದರ್ಶನ ಇರುವುದು” ಎಂದುಹೇಳಿದರು.
ಪ್ರದರ್ಶನದ ಉದ್ಘಾಟನಾ ಸಮಾರಂಭವು ಗುರುವಾರ, ಜನವರಿ 26, 2023 ರಂದು ಬೆಳಿಗ್ಗೆ 10 ಗಂಟೆಗೆ ಆಶ್ರಮದಆವರಣದಲ್ಲಿ ನಡೆಯಲಿದೆ. ಇಂಗ್ಲಿಷ್ನಿಂದ ಕೊಂಕಣಿಗೆ ಬೈಬಲ್ (ಹೊಸ ಓಡಂಬಡಿಕೆ) ಅನುವಾದಕ ವಂದನೀಯ ಡಾ. ವಿಲಿಯಮ್‍ ಬರ್ಬೋಜಾ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಪ್ರದರ್ಶನವುಜ. 26 ರಿಂದ ಜ. 28 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.
ಪ್ರತಿದಿನ ಸಂಜೆ 4.30ರಿಂದ 7ರವರೆಗೆ ಬೈಬಲ್ ಆಧಾರಿತಸಾಂಸ್ಕøತಿಕಕಾರ್ಯಕ್ರಮ ನಡೆಯಲಿದೆ.
ಪ್ರದರ್ಶನದಸಮಾರೋಪ ಸಮಾರಂಭವನ್ನುಜನವರಿ 28ರ ಶನಿವಾರ ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭವನ್ನುಆಯೋಜಿಸಲಾಗಿದೆ
.

ಸಂಪರ್ಕಿಸಿ:
ವಂದನೀಯ. ಜೆ. ಬಿ ಕ್ರಾಸ್ತಾ, ಸಂಚಾಲಕರು–ಮೊ: 9448724276
ವಂದನೀಯ ರೂಪೇಶ್‍ ತಾವ್ರೊ, ಕಾರ್ಯಕ್ರಮ ಸಂಯೋಜಕರು–ಮೊ: 8762784733
ವಂದನೀಯ ಲ್ಯಾರಿ ಪಿಂಟೋ, ಕಾರ್ಯಕ್ರಮ ಸಂಯೋಜಕರು–ಮೊ: 9611502489ಮಾಧ್ಯಮ ಮತ್ತು ಪ್ರಚಾರ: ಕೆನರಾ ಸಂಪರ್ಕಕೇಂದ್ರ, ಮಂಗಳೂರು 8277937790

Three-day Bible Exhibition in Mangaluru

MANGALURU, JAN 24: The Commissions for Bible, Proclamation, Social Communication and Small Christian Community of the Diocese of Mangalore along with St Anthony Ashram, St Joseph Seminary, Cascia, Jeppu and Valencia parishes jointly organise a three-day Bile Exhibition at St Anthony Ashram, Jeppu, Mangaluru from Thursday, January 26, 2023.

The exhibition is held on the occasion of ‘Bible Sunday’ celebrated universally on the third Sunday of the Liturgical calendar which marked this year on January 22, 2023.

Rev. Fr J B Crasta, Director of St Anthony Charitable Institutions and the convener of the exhibition said, “The Bible, is the best-selling book of all time, having sold around 5 billion copies to date. It is also the most translated book in human history.”

Fr Crasta further said, “This exhibition intends to draw more people to experience a faith journey while going through a public reading of the Sacred Scripture, biblical art, painting, video presentation, quiz, songs, skits and dances.

He noted that St Anthony of Padua was an ardent preacher of the ‘Word of God’ and showed a great zeal to proclaim it to all. Hence, this exhibition is held in St Anthony’s Ashram, Jeppu.

Rev. Fr RupeshTauro, diocesan secretary of Commission for proclamation and the co-ordinator of the programme said, “The exhibition will showcase different translations of the Bible copies, Bible art, Bile paintings, iconography, Indian art, and display of Biblical timeline, Bible verses, Bible paintings and the demonstration ofimportant Bible events.

The inaugural ceremony of the exhibition will be held on Thursday, January 26, 2023 at 10 am in the Ashram Premises. Rev. Dr William Barboza, Bible (NT) translator from English to Konkani, will be inaugurating the exhibition.

The exhibition will be open for the public on all the three days from 9 am in the morning to 7 pm in the evening.

There will be a biblical cultural programme every evenings from 4.30 pm to 7 pm.

The concluding ceremony of the same is scheduled on Saturday, January 28 at 6 pm.

Contact:

Rev. Fr J. B Crasta, Convenor – Mob: 9448724276

Rev. Fr RupeshTauro, Programme Coordinator – Mob: 8762784733

Rev. Fr Larry Pinto, Programme Coordinator – Mob: 9611502489

Media and Publicity: Canara Communication Centre, Mangalore, 8277937790

“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದಕಸಬಾ ವಲಯದ ಬಗಳಹಳ್ಳಿ ಗ್ರಾಮ “ಶ್ರೀಆಂಜನೇಯ ಸ್ವಾಮಿ”ದೇವಸ್ಥಾನಕ್ಕೆ 200,000/-ರೂ ಡಿ.ಡಿ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಶ್ರೀನಿವಾಸಪುರ ತಾಲೂಕಿನ ವ್ಯಾಪ್ತಿಯ ಕಸಬಾ ವಲಯದ ಬಗಳಹಳ್ಳಿ ಗ್ರಾಮದಲ್ಲಿ “ಶ್ರೀಆಂಜನೇಯ ಸ್ವಾಮಿ ದೇವಸ್ಥಾನ”ದಜೀರ್ಣೋಧ್ಧಾರಕ್ಕಾಗಿ ರೂ.200,000/- ಡಿ.ಡಿ ವಿತರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಶ್ರೀನಿವಾಸಪುರ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಶ್‍ ಗೌಡ.ಎಸ್ ಹಾಗೂ ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ನೇತಾಜಿ ಗೌಡ ಹಾಗೂ ಕಮಿಟಿ ಸದಸ್ಯರಾದ ನಾಚೇಗೌಡ, ಮುಕುಂದ ಕುಮಾರ ಮತ್ತು ಊರಿನ ಮುಖಂಡರಾದ ಬದ್ರಿನಾಥ್‍ ಹಾಗೂ ಕಸಬಾ ವಲಯದ ಮೇಲ್ವಿಚಾರಕರಾದ ಕಲಾವತಿ ಬಿ ಟಿ ಹಾಗೂ ಕಸಬಾ ವಲಯದ ಸೇವಾ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು & ಸ್ವ-ಸಹಾಯ ಸಂಘದ ಸದಸ್ಯರ ಸಮ್ಮುಖದಲ್ಲಿರೂ.200,000/-ರೂ ಡಿ.ಡಿವಿತರಿಸಲಾಯಿತು.

ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಕೈಜೋಡಿಸಿ ; ನ್ಯಾ. ಸುನಿಲ ಹೊಸಮನಿ

ಕೋಲಾರ ಜನವರಿ 25 : ಸ್ವಾತಂತ್ರ್ಯ ಭಾರತ ದೇಶದಲ್ಲಿ ಸಾಮಾಜಿಕ ಪಿಡುಗಾಗಿರುವ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಿದರೆ ದೇಶದ ಸಮಗ್ರ ಸಮಾನತೆಯ ಬೆಳವಣಿಗೆಗೆ ಸಹಕಾರಿಯಾಗುವುದು ಎಂದು ಸಿವಿಲ್ ನ್ಯಾಯಮೂರ್ತಿಗಳಾದ ಸುನಿಲ ಹೊಸಮನಿ ತಿಳಿಸಿದರು.
ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕೇರಿಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕೋಲಾರ ಇವರ ಸಹಯೋಗದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ ಕಾರ್ಮಿಕರಿಗೆ ಕಾನೂನು ಮತ್ತು ಸರ್ಕಾರದ ಸೌಲಭ್ಯಗಳ ಕುರಿತಾದ ಕಾನೂನಿನ ಅರಿವು ನೆರವು ಕಾರ್ಯಕ್ರಮ ಬಡ ಪೋಷಕರ ಆರ್ಥಿಕ ಸ್ಥಿತಿ ಮತ್ತಿತರ ಅನಿವಾರ್ಯ ಕಾರಣಗಳಿಂದ ಶಿಕ್ಷಣ ಪಡೆಯದೇ ವಂಚಿತರಾಗಿ ಅನೇಕ ಮಕ್ಕಳು ಒತ್ತಾಯ ಪೂರಕವಾಗಿ ಹೊಟೆಲ್, ಕಾರ್ಖಾನೆ, ವರ್ಕ್‍ಶಾಪ್, ಇಟ್ಟಿಗೆ ಪ್ಯಾಕ್ಟರಿ ಮತ್ತಿತರೆ ಕಡೆಗಳಲ್ಲಿ ಬಾಲ ಕಾರ್ಮಿಕರಾಗುತ್ತಿದ್ದು ಇದು ಅಪರಾಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು
6ನೇ ವಯಸ್ಸಿನಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಆಗ ದೇಶ ಅಭಿವೃದ್ಧಿ ಸಾಧ್ಯ. ದೇಶದ ಅಭಿವೃದ್ಧಿ ರೂಪಿಸುವ ಮಕ್ಕಳು ಬಾಲ್ಯದಲ್ಲಿ ದುಡಿಮೆಗೆ ಹೋಗುವುದನ್ನು ತಡೆಯಲು ನಾಗರೀಕ ಸಮಾಜ ಶ್ರಮಿಸಬೇಕು ಎಂದರು
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಕೀಲ ಧನರಾಜ್ ಮಾತನಾಡಿ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಯ ಪ್ರಮಾಣ ವಚನ ಬೋಧಿಸಿದರು. ದೇಶದ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದ್ದು, 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ತಳ್ಳುವುದು ಅಪರಾದ. ಪಾಲಕ ಪೋಷಕರು ಇನ್ನು ಚೆನ್ನಾಗಿ ಅರಿತುಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಮೂಲಕ ಅವರಿಗೆ ಉತ್ತಮ ವ್ಯಕ್ತಿಗಳಾಗಿ ರೂಪಿಸಿ ಜವಬ್ದಾರಿ ಹೊರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ವಕೀಲ ಸತೀಶ್, ಕುಡುವನಹಳ್ಳಿ ಗಣೇಶಪ್ಪ, ರಾಷ್ಟ್ರಪ್ರಶಸ್ತಿ ವಿಜೇತರಾದ ಮುಳವಾಗಲಪ್ಪ, ಕಲಾವಿದ ಈನೆಲ ಈಜಲ ವೆಂಕಟಾಚಲಪತಿ ತಂಡದಿಂದ ಜಾಗೃತಿ ಗೀತೆಗಳ ಕಾರ್ಯಕ್ರಮ ನಡೆಯಿತು.

ಅತ್ತೂರು ಮಹೋತ್ಸವದ 4 ನೇ ದಿನ “ದೇವರನ್ನು ಅಖಂಡವಾಗಿ ಪ್ರೀತಿಸುವವರು ಮಾತ್ರ ಅವರ ಸಾಕ್ಷಿಗಳಾಗಲು ಸಾಧ್ಯ” ಬಿಷಪ್ ಆಲೋಶಿಯಸ್ ಪಾವ್ಲ್ ಡಿಸೋಜಾ

ಅತ್ತೂರು: “ನಮ್ಮನ್ನು ಪ್ರೀತಿಯಿಂದ ಸಲಹುವ ದೇವರು ಎಲ್ಲಾ ವೇಳೆಯಲ್ಲಿಯೂ ನಮ್ಮೊಡನೆ ಇರುತ್ತಾರೆ. ದೈನಂದಿನ ಚಟುವಟಿಕೆಗಳಲ್ಲಿ ನಮ್ಮೊಡನೆ ದೇವರ ಇರುವಿಕೆಯನ್ನು ಗುರುತಿಸಿ, ಅವರನ್ನು ಅಖಂಡವಾಗಿ ಪ್ರೀತಿಸಿ, ಪರರಿಗೆ ಒಳಿತು ಮಾಡಿದಾಗ, ನಾವು ಅವರ ಸಾಕ್ಷಿಗಳಾಗಲು ಸಾಧ್ಯ. ಪರಮ ಪ್ರಸಾದದಲ್ಲಿರುವ ಪ್ರಭು ಕ್ರಿಸ್ತರು, ನಾವು ದೇವರ ಸಾಕ್ಷಿಗಳಾಗಲು ನಮಗೆ ಕೃಪೆ ನೀಡುತ್ತಾರೆ. ಅವರನ್ನು ಅನುಸರಿಸಿ ಈ ಪ್ರಪಂಚದಲ್ಲಿ ನೈಜ ವಿಶ್ವಾಸಿಗಳಾಗಿ ಬಾಳಿದಾಗ ನಾವು ಅವರ ಸಾಕ್ಷಿಗಳಾಗುತ್ತೇವೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ| ಅಲೋಶಿಯಸ್ ಪಾವ್ಲ್ ಡಿ’ಸೋಜಾರವರು ಸಂದೇಶ ನೀಡಿದರು. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ನಾಲ್ಕನೇ ದಿನ ಬುಧವಾರದಂದು ಪ್ರಮುಖ ಬಲಿಪೂಜೆಯನ್ನು ಅರ್ಪಿಸಿ ಪ್ರಬೋಧನೆಯನ್ನು ನೀಡುತ್ತಿದ್ದರು.
ಜನವರಿ 22 ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನದಂದು ದೇವರ ವಾಕ್ಯವನ್ನು ಧ್ಯಾನಿಸಿ ವಿಶೇಷ ಪೂಜೆ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು.
ದಿನದ ಪ್ರಮುಖ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಡೊ| ಅಲೋಶಿಯಸ್ ಪಾವ್ಲ್ ಡಿ’ಸೋಜಾರವರು ನೆರವೇರಿಸಿದರು. ದಿನದ ಇತರ ಬಲಿಪೂಜೆಗಳನ್ನು ವಂದನೀಯ ಹೆರಾಲ್ಡ್ ಪಿರೇರಾ, ಉಡುಪಿ; ವಂದನೀಯ ಸಂತೋಶ್ ಮಿನೇಜಸ್, ಮಂಗಳೂರು; ವಂದನೀಯ ಸ್ಟ್ಯಾನಿ ಡಿಸೋಜಾ, ಶಿವಮೊಗ್ಗ; ವಂದನೀಯ ಸುನಿಲ್ ಡಿಸಿಲ್ವ, ಸಾಸ್ತಾನ ಇವರು ನೆರವೇರಿಸಿದರು.
ಬಸಿಲಿಕಾದ ನಿರ್ದೇಶಕರಾದ ಅತಿ ವಂದನೀಯ ಆಲ್ಬನ್ ಡಿಸೋಜಾರವರು ಕನ್ನಡ ಬಲಿಪೂಜೆಯನ್ನು ಅರ್ಪಿಸಿ, ರೋಗಿಗಳಿಗಾಗಿ ವಿಶೇಸ ಪ್ರಾರ್ಥನೆಯನ್ನು ಸಲ್ಲಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ಅತಿ ವಂದನೀಯ ವಲೇರಿಯಮ್ ಮೆಂಡೋನ್ಸಾ, ಕಲ್ಯಾಣ್‍ಪುರ ಇವರು ನೆರವೇರಿಸುವುದರೊಂದಿಗೆ ಮಹೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮಗಳಿಗೆ ತೆರೆ ಬಿದ್ದಿತು.
ಮಹೋತ್ಸವದ ಐದನೇ ಮತ್ತು ಅಂತಿಮ ದಿನ ಗುರುವಾರ ಬೆಳಿಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಬೆಳಿಗ್ಗೆ 10 ಗಂಟೆಯ ವಿಶೇಷ ಸಾಂಭ್ರಮಿಕ ಬಲಿಪೂಜೆಯನ್ನು ಬೆಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಡೊ| ಬರ್ನಾರ್ಡ್ ಮೋರಸ್‍ರವರು ನೆರವೇರಿಸಿ ಪ್ರಬೋಧನೆ ನೀಡಲಿದ್ದಾರೆ. ಮಹೋತ್ಸವದ ಅಂತಿಮ ಪೂಜೆ ಸಂಜೆ 8 ಗಂಟೆಗೆ ನೆರವೇರಲಿದೆ.
ಮಂಗಳೂರು ವಿಭಾಗದ ಲೋಕಾಯುಕ್ತ ಎಸ್ಪಿ ಶ್ರೀ ಸೈಮನ್, ಡಿವೈಎಸ್‍ಪಿ ಮತ್ತಿತರ ಗಣ್ಯರು ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತು ಪ್ರಾರ್ಥಿಸಿದರು.

ವರದಿ: ಫಾದರ್ ರೊಯ್ಸನ್ ಫೆರ್ನಾಂಡಿಸ್, ನಿರ್ದೇಶಕರು, ಸಂಪರ್ಕ ಕೇಂದ್ರ,ಉಡುಪಿ ಧರ್ಮಪ್ರಾಂತ್ಯ

ಶ್ರೀನಿವಾಸಪುರ ತಾಲ್ಲೂಕಿನ ಆಲಂಬಗಿರಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಕೆ.ಆರ್.ರಮೇಶ್ ಕುಮಾರ್ ಉದ್ಘಾಟಿಸಿದರು

ಶ್ರೀನಿವಾಸಪುರ ತಾಲ್ಲೂಕಿನ ಆಲಂಬಗಿರಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಕೆ.ಆರ್.ರಮೇಶ್ ಕುಮಾರ್ ಮಂಗಳವಾರ ಉದ್ಘಾಟಿಸಿದರು.
ಶ್ರೀನಿವಾಸಪುರ: ಅಂತರ್ಜಲ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಮಾತ್ರ ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಲಾಗುತ್ತಿದೆ. ಸಧ್ಯಕ್ಕೆ ಎರಡು ಹಂತದಲ್ಲಿ ಶುದ್ಧೀಕರಿಸಲಾಗುತ್ತಿದೆ. ಆ ಬಗ್ಗೆ ಅನಗತ್ಯ ಮಾತು ಬೇಕಾಗಿಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಆಲಂಬಗಿರಿಯಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೆಸಿ ವ್ಯಾಲಿ ಯೋಜನೆಯನ್ನು ಮಧ್ಯಪ್ರದೇಶ ಸರ್ಕಾರ ಮಾದರಿಯಾಗಿ ಸ್ವೀಕರಿಸಿ ಜಾರಿಗೆ ತರುತ್ತಿದೆ ಎಂದು ಹೇಳಿದರು.
ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾಗುತ್ತಿರುವ ಬಡ್ಡಿ ರಹಿತ ಸಾಲ ಮತಗಳಿಕೆಗಾಗಿ ಅಲ್ಲ. ಅವರನ್ನು ಖಾಸಗಿ ಲೇವಾದೇವಿಗಾರರ ಶೋಷಣೆಯಿಂದ ತಪ್ಪಿಸುವ ಹಾಗೂ ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ನೀಡಲಾಗಿದೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ್ಡಿರಹಿತ ಸಾಲದ ಮೊತ್ತ ಹೆಚ್ಚಿಸಲಾಗುವುದು ಎಂದು ಹೇಳಿದರು.
ಹಾಲು ಜಿಲ್ಲೆಯ ರೈತರ ಜೀವನಾಡಿ. ರೈತರು ವೈಜ್ಞಾನಿಕ ಪದ್ಧತಿ ಅನುಸರಿದಿ ಹಾಲು ಉತ್ಪಾದಿಸಬೇಕು. ಹಸು ಸಾಕಾಣಿಕೆಯಲ್ಲಿ ಮಹಿಳೆಯರ ಪಾತ್ರ ಹಿರಿದು. ಹಾಗಾಗಿ ಮಹಿಳೆ ಹೈನುಗಾರಿಕೆಗೆ ಜೀವಾಳ ಎಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ವಿ.ಅಯ್ಯಪ್ಪ, ಕೋಮುಲ್ ನಿರ್ದೇಶಕ ಎನ್.ಹನುಮೇಶ್, ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಉಪ ವ್ಯವಸ್ಥಾಪಕ ಕೆ.ಎಂ.ಮುನಿರಾಜು, ಮೋಹನ್ ಬಾಬು, ರತ್ನಮ್ಮ ವೆಂಕಟರವಣಪ್ಪ, ವಿ.ಮನೋಹರ್, ಬಿ.ಎಲ್.ವೆಂಕಟರೆಡ್ಡಿ, ಮುಖಂಡರಾದ ನಾಗರಾಜ್, ಬಿ.ವಿ.ವೆಂಕಟರೆಡ್ಡಿ, ಕೆ.ಕೆ.ಮಂಜು, ಎಂ.ಶ್ರೀನಿವಾಸನ್, ನಾರಾಯಣಸ್ವಾಮಿ, ಸಂಜಯ್‍ರೆಡ್ಡಿ, ಅನ್ಕೀಸ್ ಅಹ್ಮದ್, ಕೃಷ್ಣಾರೆಡ್ಡಿ, ಮಂಜುನಾಥರೆಡ್ಡಿ ಇದ್ದರು.

ಬಲಿಜ ಸಮುದಾಯಕ್ಕೆ ಸರ್ಕಾರ ಪೂರ್ಣ ಪ್ರಮಾಣದ 2ಎ ಮೀಸಲಾತಿ ಹಿಂದಿರುಗಿಸಬೇಕು : ಎಲ್.ವಿ.ಗೋವಿಂದಪ್ಪ ಆಗ್ರಹಿ

ಶ್ರೀನಿವಾಸಪುರ: ಬಲಿಜ ಸಮುದಾಯಕ್ಕೆ ಸರ್ಕಾರ ಪೂರ್ಣ ಪ್ರಮಾಣದ 2ಎ ಮೀಸಲಾತಿ ಹಿಂದಿರುಗಿಸಬೇಕು ಎಂದು ತಾಲ್ಲೂಕು ಬಲಿಜ ಸಮುದಾಯದ ಮುಖಂಡ ಎಲ್.ವಿ.ಗೋವಿಂದಪ್ಪ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬಲಿಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡಲಾಗಿತ್ತು. ಆದರೆ ಸಮುದಾಯದ ಗಮನಕ್ಕೆ ತರದೆ 3ಎ ಮೀಸಲಾತಿಗೆ ಸೇರಿಸಲಾಗಿತ್ತು. ಆದರೆ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ, ಸಮುದಾಯದ ಮನವಿಗೆ ಸ್ಪಂದಿಸಿ, ಶಿಕ್ಷಣಕ್ಕೆ ಮಾತ್ರ 2ಎ ಮೀಸಲಾತಿ ನೀಡಲಾಯಿತು. ಆದರೆ ಉದ್ಯೋಗ ಮತ್ತಿತರ ವಿಷಯಗಳಿಗೆ 3ಎ ಮೀಸಲಾತಿಯೇ ಇತ್ತು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್ ಮಾತನಾಡಿ, ಬಲಿಜ ಸಮುದಾಯ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ. ಈ ಸಮುದಾಯವನ್ನು 3ಎ ಮೀಸಲಾತಿಗೆ ಸೇರಿಸುವುದರ ಮೂಲಕ ಅನ್ಯಾಯ ಮಾಡಲಾಗಿದೆ. ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಮತ್ತೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಹಿಂದಿರುಗಿಸುವಂತೆ ಆಗ್ರಹಿಸಿ ಜ.27 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬಲಿಜ ಸಂಕಲ್ಪ ಸಭೆ ಏರ್ಪಡಿಸಲಾಗಿದೆ. ಅದು ರಾಜ್ಯ ಮಟ್ಟದ ಸಭೆಯಾಗಿದ್ದು ತಾಲ್ಲೂಕಿನ ಬಲಿಜ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಂದು ಬೆಳಿಗ್ಗೆ ಪಟ್ಟಣದಿಂದ ಫ್ರೀಡಂ ಪಾರ್ಕ್‍ಗೆ ಹೋಗಲು ಬಸ್ ಹಾಕಲಾಗಿದೆ ಎಂದು ಹೇಳಿದರು.
ತಾಲ್ಲೂಕು ಬಲಿಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಂ.ರಾಮಚಂದ್ರಯ್ಯ, ಮುಖಂಡರಾದ ರಾಮಪ್ಪ, ಕೃಷ್ಣಪ್ಪ, ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಅರ್ಜುನ್, ಮುರಳಿ, ಕಲಾ ಶಂಕರ್ ಇದ್ದರು.