ಕುಂದಾಪುರ: ಸಂತ ಜೋಸೆಫ್ ವಾಜ್ ವಾಳೆಯವರಿಂದ ಪಾಲಕರ ಹಬ್ಬ


ಕುಂದಾಪುರ, ಜ.31: ಕುಂದಾಪುರ ರೋಜರಿ ಮಾತಾ ಇಗರ್ಜಿಗೆ ಸಂಬಂಧ ಪಟ್ಟ ಸಂತ ಜುಜೆ ವಾಜ್ ಇವರಿಗೆ ಸಮರ್ಪಿತಗೊಂಡ ಸಂತ ಜುಜೆ ವಾಜ್ ವಾಳೆಯವರು, ತಮ್ಮ ಪಾಲಕರ ಹಬ್ಬವನ್ನು ಭಾನುವಾರ ಜ. 29 ರಂದು ಇಗರ್ಜಿಯಲ್ಲಿ ಬೆಳಿಗ್ಗೆ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು. ಪವಿತ್ರ ಬಲಿದಾನವನ್ನು ಮಂಗಳೂರಿನ ಧರ್ಮಗುರು ವಂ|ಐವನ್ ಮಾಡ್ತಾ ಇವರ ನೇತ್ರತ್ವದಲ್ಲಿ ಅರ್ಪಿಸಲಾಯಿತು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಸಹಬಲಿದಾನವನ್ನು ಅರ್ಪಿಸಿ ಶುಭ ಕೋರಿದರು.
ಸಂಜೆ ಜೇಕಬ್ ಡಿಸೋಜಾ ಇವರ ನಿವಾಸದಲ್ಲಿ ಹಬ್ಬದ ಆಚರಣೆ ನಡೆಯಿತು. ವಾಳೆಯ ಗುರಿಕಾರ ಬರ್ನಾಡ್ ಡಿಕೋಸ್ತಾ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರೋಜರಿ ಮಾತೆಯ ಜಪಮಾಲೆ ಪ್ರಾರ್ಥನೆಯನ್ನು ನೆಡಸಾಲಾಯಿತು, ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಸಂತ ಜೋಸೆಫ್ ವಾಜ್‍ರ ನೊವೆನಾವನ್ನು ನಡೆಸಿಕೊಟ್ಟು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಸಂತ ಜೋಸೆಫ್ ವಾಜರ ಬಗ್ಗೆ ಅವರು ಮಾಡಿದ ಅದ್ಬುತಗಳ ಬಗ್ಗೆ ವಿವರಿಸಿ, ರೋಜರಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳು ಆಗುವುದಂದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಯಾಕೆಂದರೆ ಈ ಸ್ಥಾನ ಸಂತ ಜೋಸೆಫ್ ಅಂತಾ ಮಹಾನ್ ಸಂತರದಾಗಿತ್ತು’ ಎನ್ನುತ್ತಾ ನಿಮ್ಮ ವಾಳೆ ಪ್ರತಿಭಾವಂತರಾಗಿದೆ ಎಂದರು.
ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಕಿರು ಸಮುದಾಯದ ಸಂಚಾಲಕಿ ಝಿಟಾ ಕರ್ವಾಲ್ಲೊ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಪಾಲನ ಮಂಡ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಉಪಸ್ಥಿರಿದ್ದರು. ಕಿರು ಸ್ಫರ್ಧೆಗಳನ್ನು ನೆಡಸಲಾಯಿತು, ಚಿಕ್ಕ ಮಕ್ಕಳು ನ್ರತ್ಯ ಪ್ರದರ್ಶಗಳನ್ನು ನೀಡಿದರು
. ದೇವ ಸ್ತುತಿಯ ಸಂಚಾಲಕಿ ವಿನಯಾ ಡಿಕೋಸ್ತಾ, ಜಪಮಾಲೆ ಪ್ರಾಥನೆಯನ್ನು ನಡೆಸಿಕೊಟ್ಟರು. ವಾಳೆಯ ಪ್ರತಿನಿಧಿ ಫೆರ್ಮಿನ್ ಡಿಸೋಜಾ ವಂದಿಸಿದರು. ಅಂತೋನಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ತೆರೆ-ಬಹುಮಾನ ವಿತರಣೆ- ಕ್ರೀಡೆಗಳಿಂದ ಉತ್ತಮ ಆರೋಗ್ಯದ ಜತೆ ಹಣ ಗೌರವವೂ ಸಾಧ್ಯ-ರಮೇಶ್‍ಕುಮಾರ್

ಕೋಲಾರ:- ಅಕ್ಷರ ಕಲಿಕೆಯಲ್ಲಿ ಸೋತರೂ ಕ್ರೀಡೆಯನ್ನೇ ನಂಬಿ ವಿಶ್ವಮಟ್ಟದಲ್ಲಿ ಹೆಸರುಗಳಿಸಿರುವ ಅನೇಕರು ನಮ್ಮ ಕಣ್ಮುಂದೆ ಇದ್ದು, ಆಟೋಟಗಳಿಂದ ಉತ್ತಮ ಆರೋಗ್ಯ ಮಾತ್ರವಲ್ಲ ಹಣ,ಗೌರವವನ್ನು ಸಂಪಾದಿಸಬಹುದಾಗಿದೆ ಎಂದು ಅಬಕಾರಿ ಜಿಲ್ಲಾ ಉಪ ಆಯುಕ್ತ ಹೆಚ್.ರಮೇಶ್‍ಕುಮಾರ್ ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಎರಡು ದಿನಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿ, ಅಂಗಡಿಯೊಂದರಲ್ಲಿ ಅಳಿದುಳಿದ ಬ್ರೆಡ್,ಬರ್ಗರ್ ಪಡೆದು ತಿಂದು ಕಷ್ಟದ ಜೀವನ ನಡೆಸುತ್ತಿದ್ದ ವಿಶ್ವ ಪುಟ್‍ಬಾಲ್ ಆಟಗಾರ ರೊನಾಲ್ಡೋ ಕೊನೆಗೆ ವಿಶ್ವಮಾನ್ಯರಾದರು ಎಂದು ಉದಾಹರಿಸಿ, ಜಿಲ್ಲಾ ಕ್ರೀಡಾಕೂಟವನ್ನು ಇಷ್ಟೊಂದು ಯಶಸ್ವಿಯಾಗಿ ನಡೆಸಿದ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು ಅಭಿನಂದನಾರ್ಹರು ಎಂದರು.
ಸರ್ಕಾರಿ ನೌಕರರು ಒತ್ತಡದಿಂದ ಮುಕ್ತರಾಗಲು ಕ್ರೀಡೆಗಳು ಅತಿ ಮುಖ್ಯ ಎಂದು ಸಲಹೆ ನೀಡಿದ ಅವರು, ಕ್ರೀಡೆ,ವ್ಯಾಯಾಮ ನಿರಂತರವಾಗಿದ್ದರೆ ಮಾತ್ರ ನಿವೃತ್ತಿ ನಂತರ ಉತ್ತಮ ಜೀವನ ನಡೆಸಲು ಸಾಧ್ಯ ಎಂಬ ಸತ್ಯ ಅರಿತು ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿ, ಗೆದ್ದವರಿಗೆ ಶುಭಾಷಯ ಸೋತವರಿಗೆ ಮುಂದಿನ ಗೆಲುವಿಗೆ ಪ್ರೋತ್ಸಾಹ ನೀಡೋಣ, ನೌಕರರ ಬದುಕು ಕ್ರೀಡಾಸ್ಪೂರ್ತಿಯಿಂದ ಕೂಡಿರಲಿ ಎಂದರು.
ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಇತ್ತೀಚೆಗೆ ಉತ್ತಮ ಸೇವಾ ಪ್ರಶಸ್ತಿ ಪಡೆದ ಜಿಪಂ ಸಿಇಒ ಯುಕೇಶ್‍ಕುಮಾರ್, ನೂತನ ಎಸ್ಪಿ ನಾರಾಯಣ ಈ ಮೂವರು ತ್ರಿಮೂರ್ತಿಗಳ ಪ್ರಯತ್ನದಿಂದ ಇಂದು ಜಿಲ್ಲೆ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿ ಅಭಿನಂದನೆ ಸಲ್ಲಿಸಿದರು.


ಕ್ರೀಡಾಕೂಟ ಯಶಸ್ವಿ ಸಂಘದ ಧನ್ಯವಾದ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಕ್ರೀಡಾಕೂಟ ಇಷ್ಟೊಂದು ಯಶಸ್ಸಿಗೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್ಪಿಯವರು ಸೇರಿದಂತೆ ಹಲವಾರು ಮಂದಿಯ ಶ್ರಮವಿದೆ,ಟೀ-ಶರ್ಟ್, ಕ್ಯಾಪ್‍ಗೆ ನಮ್ಮ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್,ನರಸಾಪುರ ಹರಿ ತಂಡದದ ನೆರವು,ಮೊಮೊಂಟೊಸ್ ತಂದು ಸಿದ್ದಪಡಿಸುವಲ್ಲಿ ಚೇತನ್‍ಮಧುರೆ, ವಿಜಿ ಸಹಕರಿಸಿದ್ದಾರೆ.
ಇಡೀ ಕಾರ್ಯಕ್ರಮದ ಎಲ್ಲಾ ದಾಖಲೆಗಳ ಡಿಟಿಪಿ ಕಾರ್ಯದಲ್ಲಿ ಹಗಲಿರುಳು ದುಡಿದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಉತ್ತಮ ಊಟ ಒದಗಿಸುವಲ್ಲಿ ಆಹಾರ ಇಲಾಖೆ ಡಿಡಿ ಶೃತಿ, ಇಇ ಮುನೀರ್, ಇಒ ವೆಂಕಟೇಶಪ್ಪ, ಆರ್‍ಟಿಒ ಇಲಾಖೆ ಮತ್ತಿತರ ಸಹಕಾರ ಪಡೆಯುವಲ್ಲಿ ಕೆಲಸ ಮಾಡಿದ ಸಂಘದ ಹಿರಿಯ ಉಪಾಧ್ಯಕ್ಷ ಸುಬ್ರಮಣಿ ಸೇವೆ ಸ್ಮರಣೀಯವಾಗಿದೆ, ಸದಾ ನನ್ನ ಬೆನ್ನಿಗೆ ನಿಂತು ಸಹಕರಿಸಿದ ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರುಗಳಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್ ಅವರ ಸೇವೆಯನ್ನು ಸ್ಮರಿಸುವುದಾಗಿ ತಿಳಿಸಿದರು.
ಕ್ರೀಡಾಂಗಣ ಸಿದ್ದತೆಯಲ್ಲಿ ಶ್ರಮಿಸಿದ ಕೋಚ್ ವೆಂಕಟೇಶ್,ಅರುಣ್ ತಂಡ, ನೋಂದಣಿ ಕಾರ್ಯದಲ್ಲಿ ಪದಾಧಿಕಾರಿಗಳಾದ ಶಿವಕುಮಾರ್, ಅನಿಲ್,ರವಿ, ಕ್ರೀಡಾ ಕಾರ್ಯದರ್ಶಿ ಶ್ರೀರಾಮ್ ಮತ್ತಿತರ ನೆರವು ಮರೆಯಲಾಗದು ಎಂದರು.
ವೇದಿಕೆ ನಿರ್ಮಾಣದಲ್ಲಿ ಆರೋಗ್ಯ ಇಲಾಖೆಯ ವಿಜಯಮ್ಮ ಪ್ರೇಮಾ,ಶಿಕ್ಷಣ ಇಲಾಖೆಯ ಭಾಗ್ಯ ತಂಡ, ಪೆಂಡಾಲ್ ಒದಗಿಸಿದ ಯೋಜನಾ ನಿರ್ದೇಶಕಿ ಭಾಗ್ಯಮ್ಮ, ನಗರಸಭಾ ಆಯುಕ್ತಪವನ್ ಕುಮಾರ್,ಆರೋಗ್ಯ ನಿರೀಕ್ಷ ನವಾಜ್, ಇಡೀ ಕಾರ್ಯಕ್ರಮದ ಸಿದ್ದತೆಯಲ್ಲಿ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ,ಟಿಪಿಒಗಳಾದ ಬಾಬು, ಚಂದ್ರಶೇಖರ್,ಗೋಪಾಲ್,ರಮೇಶ್,ನಾರಾಯಣಸ್ವಾಮಿ, ತಂಡದ ನೆರವನ್ನು ಸ್ಮರಿಸಿ, ಸಂಘದ ಧ್ವಜ ಸಿಗದಂತೆ ಮಾಡುವ ಕೆಲವರ ಪ್ರಯತ್ನ ವಿಫಲಗೊಳಿಸಿ ಸಕಾಲಕ್ಕೆ ಧ್ವಜ ಸಿದ್ದಪಡಿಸಿ ತಂದ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್,ತಿಲಕ್,ಮುನಿರಾಜು ನೆರವು, ಪ್ರತಿ ಹಂತದಲ್ಲೂ ಶ್ರಮಿಸಿದ ಸಂದೀಪ್ ತಂಡದ ಕಾರ್ಯ ಮರೆಯಲಾಗದು ಎಂದರು.
ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್ ಸ್ವಾಗತಿಸಿ, ಕೆ.ಟಿ.ಶಿವಕುಮಾರ್ ನಿರೂಪಿಸಿ, ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗಿರುವವರು ನಿರಂತರ ಅಭ್ಯಾಸ ಮುಂದುವರೆಸಿ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕಲ್ಲಂಡೂರು ನಾರಾಯಣಸ್ವಾಮಿ, ತಾಲ್ಲೂಕು ಸೇರಿದಂತೆ ಎಲ್ಲಾ ಜಿಲ್ಲಾ,ತಾಲ್ಲೂಕು ಸಂಘಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್, ಗೌರವಾಧ್ಯಕ್ಷ ರವಿಚಂದ್ರ, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಸುಬ್ರಮಣಿ, ನಂದೀಶ್,ಉಪಾಧ್ಯಕ್ಷ ರತ್ನಪ್ಪ, ಖಜಾಂಚಿ ವಿಜಯ್, ಸಹಕಾರ್ಯದರ್ಶಿ ವಿಜಯಮ್ಮ, ವಿವಿಧ ತಾಲ್ಲೂಕುಗಳ ಅಧ್ಯಕ್ಷರಾದ ನರಸಿಂಹಮೂರ್ತಿ, ಬಂಗವಾದಿ ನಾಗರಾಜ್,ದೈಹಿಕ ಶಿಕ್ಷಣಾಧಿಕಾರಿ ಬಾಬು, ಕ್ರೀಡಾ ಕಾರ್ಯದರ್ಶಿ ಶ್ರೀರಾಮ್, ಸಂಘಟನಾ ಕಾರ್ಯದರ್ಶಿ ಪಿಡಿಒ ನಾಗರಾಜ್,ರವಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಜರಿದ್ದು, ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ನೌಕರ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ಭಾರತ್ ಜೋಡೋ ಯಾತ್ರೆ ಸಮಾರೋಪ: ಕುಂದಾಪುರದಲ್ಲಿ ರಾಷ್ಟ್ರ ಧ್ವಜಾರೋಹಣ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆಯು 2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಹಾದು, ಆ ಮೂಲಕ 3970 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿ ಇಂದು ಕಾಶ್ಮೀರದ ಶ್ರೀನಗರದಲ್ಲಿ ಸಮಾರೋಪಗೊಳ್ಳುವ ಅಂಗವಾಗಿ ಇಂದು ದೇಶದಾದ್ಯಂತ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ರಾಷ್ಟ್ರಧ್ವಜ ಆರೋಹಣ ಕಾರ್ಯಕ್ರಮ ಆಯೋಜಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕರೆನೀಡಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 10ಗಂಟೆಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕಾಂಗ್ರೆಸ್ ಸೇವಾದಳದ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿಯವರು ಧ್ವಜಾರೋಹಣ ವನ್ನು ನೆರೆವೇರಿಸಿದರು.

ಈ ಸಂಧರ್ಭದಲ್ಲಿ ವಿಧಾನ ಸಭಾ ಚುನಾವಣಾ ಸ್ಪರ್ಧಾಕಾಂಕ್ಷಿಗಳಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಶ್ಯಾಮಲಾ ಭಂಡಾರಿ, ಕೊಳ್ಕೆಬೈಲು ಕಿಶನ್ ಹೆಗ್ಡೆ, ಕೆಪಿಸಿಸಿ ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ ಶೇರೆಗಾರ್, ಹಿರಿಯ ಕಾಂಗ್ರೆಸಿಗರಾದ ಬಳ್ಕೂರು ಕ್ರಷ್ಣಯ್ಯ ಶೆಟ್ಟಿ, ಬಿ. ಹಾರೂನ್ ಸಾಹೇಬ್, ಸುಭಾಷ್ ಪೂಜಾರಿ, ಅಬ್ದುಲ್ಲಾ ಕೋಡಿ, ಅಶೋಕ್ ಸುವರ್ಣ, ಆಶಾ ಕರ್ವಾಲೋ, ಕೇಶವ ಭಟ್, ಅಡಾಲ್ಫ್ ಡಿಕೋಸ್ಟಾ, ಹೇರಿಕುದ್ರು ಗಂಗಾಧರ ಶೆಟ್ಟಿ, ಚಂದ್ರಕಾಂತ್ ನಾಯ್ಕ್, ಧರ್ಮಪ್ರಕಾಶ್, ಪ್ರಭಾಕರ ಶೇರೆಗಾರ್, ಮೌರೀಶ್ ಕರ್ವಾಲೋ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಎಂ.ಅಶ್ಪಾಕ್, ಯುವ ಮುಖಂಡರಾದ ಕೋಡಿ ಸುನಿಲ್ ಪೂಜಾರಿ, ರಂಜಿತ್ ಭಂಡಾರಿ, ಶಿಶಿರ, ಮುನಾಫ್ ಕೋಡಿ, ಅಭಿಜಿತ್ ಪೂಜಾರಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಜಿಲ್ಲಾಧ್ಯಕ್ಷ ರೋಷನ್ ಶೆಟ್ಟಿ, ಎನ್‌ಎಸ್‌ಯುಐ ತಾಲೂಕು ಮುಖಂಡ ಸುಜನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮವನ್ನು ನಿರ್ವಹಿಸಿದರು. ಸೇವಾದಳದ ಕುಮಾರ ಖಾರ್ವಿ ಸ್ವಾಗತಿಸಿದರು. ಜ್ಯೋತಿ ನಾಯ್ಕ್ ವಂದಿಸಿದರು.

ಕುಂದಾಪುರ ತಾಲೂಕು 18 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಸಾಹಿತಿ ಕೋ.ಶಿವಾನಂದ ಕಾರಂತರು ಆಯ್ಕೆ

ಕುಂದಾಪುರ,ಜ.30: ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ.ಕಾಲೇಜು ವಠಾರದಲ್ಲಿ ಫೆ.19ರಂದು ನಡೆಯುವ ಕುಂದಾಪುರ ತಾಲೂಕು ಹದಿನೆಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಖ್ಯಾತ ಸಾಹಿತಿ,ಅಂಕಣಗಾರ,ರಂಗ ನಿರ್ದೇಶಕ,ನಿವ್ರೃತ್ತ ಪ್ರಾಧ್ಯಾಪಕ ಕೋ.ಶಿವಾನಂದ ಕಾರಂತರು ಆಯ್ಕೆಯಾಗಿದ್ದಾರೆ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಉಮೇಶ ಪುತ್ರನ್ ತಿಳಿಸಿದ್ದಾರೆ

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಗೌರವ ಕಾರ್ಯದರ್ಶಿ ಗಳಾದ ಸುಬ್ರಹ್ಮಣ್ಯ ಶೆಟ್ಟಿ,ನರೇಂದ್ರ ಕುಮಾರ್ ಕೋಟ,ಕೋಶಾಧ್ಯಕ್ಷ ಮನೋಹರ ಪಿ.,ತಾಲೂಕು ಪದಾಧಿಕಾರಿಗಳಾದ ದಿನಕರ ಶೆಟ್ಟಿ, ಅಕ್ಷತಾ ಗಿರೀಶ್ಐತಾಳ,ಕೆ.ಎಸ್.ಮಂಜುನಾಥ ಉಪಸ್ಥಿತರಿದ್ದರು

ಬೈಬಲ್ ಪ್ರದರ್ಶನ ಸಮಾರೋಪ “ಬೈಬಲ್ ಎಂದಿಗೂ ಖಾಲಿಯಾಗದನಿಧಿ” : ಶ್ರೇಷ್ಟಗುರು ವಂ. ಮ್ಯಾಕ್ಸಿಮ್ ನೊರೊನ್ಹಾ

ಮಂಗಳೂರು, ಜ 30: ಮಂಗಳೂರಿನ ಜೆಪ್ಪುವಿನ ಸಂತಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್ ಪ್ರದರ್ಶನ ಶನಿವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟ ಗುರುವಂದನೀಯ ಮ್ಯಾಕ್ಸಿಮ್‍ಎಲ್. ನೊರೊನ್ಹಾ ಮಾತನಾಡಿ, “ಬೈಬಲ್ ಎಂದಿಗೂ ಅಕ್ಷಯ ಪಾತ್ರೆಯಂತೆ ಖಾಲಿಯಾಗದ ಸಂಪತ್ತು. ಇದು ಹೊಸತನ ಮತ್ತು ಜೀವ ನೀಡುವ ಪುಸ್ತಕವಾಗಿದೆ ಮತ್ತು ಯಾವುದೇ ಸಂದರ್ಭಕ್ಕೂ, ಕಾಲಕ್ಕೂ ಸಕಾಲವಾದುದು. ಬೈಬಲ್ ಅನೇಕರಿಗೆ ಸ್ಫೂರ್ತಿ ನೀಡಿದೆ, ಅನೇಕರ ಜೀವನವನ್ನು ಪರಿವರ್ತಿಸಿದೆ, ನಾಸ್ತಿಕರು ಆಸ್ತಿಕರಾಗಿದ್ದಾರೆ, ಏಕೆಂದರೆ ಇದು ದೇವರ ವಾಕ್ಯವಾಗಿದೆ” ಎಂದು ಹೇಳಿದರು.
ಪ್ರದರ್ಶನದ ಸಮರೋಪ ಕಾರ್ಯಕ್ರಮದಲ್ಲಿ, ಪ್ರಸ್ತುತ ಸಂವಹನ ವಿಧಾನಗಳನ್ನು ಬಳಸಿಕೊಂಡು ದೇವರ ವಾಕ್ಯವನ್ನು ಪ್ರಸರಿಸುವ ಗುರುಗಳ ಅನನ್ಯ ಮತ್ತು ನಿಸ್ವಾರ್ಥ ಕೊಡುಗೆಗಳನ್ನು ಗುರುತಿಸಿ,ಶ್ರೇಷ್ಟಗುರು ವಂದನೀಯ ಮ್ಯಾಕ್ಸಿಮ್ ನೊರೊನ್ಹಾ ಇವರಿಂದಶಾಲು ಹೊದಿಸಿ ಪುಷ್ಪಗುಚ್ಛಗಳನ್ನು ನೀಡಿ ಸನ್ಮಾನಿಸಲಾಯಿತು.
ವೆಬ್‍ಬ್ಲಾಗ್‍ನಲ್ಲಿ ಬೈಬಲ್ ಸಂದೇಶ ಮತ್ತು ಯೂಟ್ಯೂಬ್‍ ಚಾನೆಲ್‍ನಲ್ಲಿ ವಿಡಿಯೊಗಳ ಮೂಲಕ ದೇವರ ವಾಕ್ಯವನ್ನು ಪ್ರಸರಿಸುವ ಜೆಪ್ಪುವಿನ ಸಂತ ಜೋಸೆಫ್ ಸೆಮಿನರಿಯಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ಹಾಗೂ ಜೆಪ್ಪುಇಗರ್ಜಿಯ ಧರ್ಮಗುರುಗಳಾದ ವಂದನೀಯ ಮ್ಯಾಕ್ಸಿಮ್‍ ಡಿಸೋಜಾರವರನ್ನು ಗೌರವಿಸಲಾಯಿತು.
ಪ್ರತಿದಿನ “ಶುಭ್‍ವರ್ತಮಾನ್” ಕಿರು ವೀಡಿಯೋ ಸರಣಿ ಮೂಲಕ ದೈನಂದಿನ ಸುವಾರ್ತೆ ವಾಚನಗಳ ಮೇಲೆ ಎರಡು ನಿಮಿಷಗಳ ಸಂದೇಶಗಳನ್ನು ನೀಡುವ, ಮತ್ತು ಹಳ್ಳಿಗಳಳ್ಳಿ ಬೈಬಲ್ ಆಧ್ಯಯನಕ್ಕೆ ತರಗತಿಗಳನ್ನು ಏರ್ಪಡಿಸಿದ ಮಂಗಳಜ್ಯೋತಿ ಕೇಂದ್ರದ ಸಹಾಯಕ ನಿರ್ದೇಶಕರಾದ, ಬೈಬಲ್ ಆಯೋಗದ ಕಾರ್ಯದರ್ಶಿ ಮತ್ತು ಸಂತ ಜೋಸೆಫ್ ಸೆಮಿನರಿಯಲ್ಲಿ ದೇವಶಾಸ್ತ್ರದ ಪ್ರಾಧ್ಯಾಪಕರಾದ ವಂದನೀಯಡಾ| ವಿನ್ಸೆಂಟ್ ಸಿಕ್ವೇರಾ ಅವರನ್ನು ಗೌರವಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ರಾಯ್‍ಕ್ಯಾಸ್ಟೆಲಿನೊ ಮತ್ತು ಆಶ್ರಮದ ಮಂಡಳಿಯ ಸದಸ್ಯರಾದಡಾ| ಜಾನ್ ಡಿಸಿಲ್ವಾ, ಅನೇಕ ಧರ್ಮಗುರುಗಳು , ಧಾರ್ಮಿಕ ಸಹೋದರಿಯರು, ವಿದ್ಯಾರ್ಥಿಗಳು ಮತ್ತು ಸಂತ ಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
ಎರಡನೆ ದಿನದ ಪ್ರದರ್ಶನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್‍ ಆತೀ ವಂದನೀಯಡಾ| ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಭೇಟಿ ನೀಡಿ ಪ್ರದರ್ಶನದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು.
ಆಶ್ರಮದ ನಿರ್ದೇಶಕ ಮತ್ತು ಪ್ರದರ್ಶನದ ಸಂಚಾಲಕರಾದ ವಂದನೀಯ ಜೆ. ಬಿ.ಕ್ರಾಸ್ತಾ ಮಾತನಾಡಿ, “ಸಿಎಸ್‍ಐ ಚರ್ಚ್‍ನ ಸದಸ್ಯರು, ಧಾರ್ಮಿಕ ಸಹೋದರಿಯರು, ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು, ಸ್ಥಳೀಯ ಶಾಲಾ-ಕಾಲೇಜುಗಳ ಕ್ಯಾಥೋಲಿಕ್ ವಿದ್ಯಾರ್ಥಿಗಳು, ಗುರುಮಠದ ಸಹೋದರರು, ಕನ್ಯಾಮಠದ ಸಹೋದರಿಯರು ಸೇರಿದಂತೆ ಸುಮಾರು 2500 ಜನರು ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ,” ಎಂದು ತಿಳಿಸಿದರು.
ಸೇಂಟ್‍ ಆಗ್ನೆಸ್‍ ಕಾನ್ವೆಂಟ್‍ನ ಸಿಸ್ಟರ್ ಜಾನೆಟ್ ಸಿಕ್ವೇರಾರವರು ತಮ್ಮಆನುಭವವನ್ನು ಹಂಚಿಕೊಳ್ಳುತ್ತಾ, “ಬೈಬಲ್ ಪ್ರದರ್ಶನದಿಂದ ನನಗೆ ಅದ್ಭುತಅನುಭವ ಸಿಕ್ಕಿದೆ. ಬೈಬಲಿನ ವಿವಿಧ ಭಾಷೆಗಳ ಆವೃತ್ತಿಗಳನ್ನು ನೋಡಿ, ನಾನು ಹೆಚ್ಚು ಅಧ್ಯಯನ ಮಾಡದಿರಬಹುದು, ಆದರೆ ಆ ಬೈಬಲ್‍ಗಳನ್ನು ಸ್ಪರ್ಶಿಸುವ ಒಂದು ಅನನ್ಯ ಅವಕಾಶ ನನಗೆ ಸಿಕ್ಕಿತು” ಎಂದು ಹೇಳಿದರು.
ಮೋರ್ಗಾನ್ಸ್‍ ಗೇಟ್‍ನ ಜೆನಿಟಾ ಡಿಸೋಜಾ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಾ, “ಬೈಬಲ್ ಇಷ್ಟು ವಿಸ್ತಾರವಾಗಿದೆಎಂದು ನನಗೆ ಈವರೆಗೂ ತಿಳಿದಿರಲಿಲ್ಲ. ಈ ಪುಸ್ತಕಜ್ಞಾನ ಮತ್ತು ಬುದ್ಧಿವಂತಿಕೆಯ ದೊಡ್ಡ ನಿಧಿಯಾಗಿದೆ. ಇದು ಸ್ಫೂರ್ತಿಯ ಮೂಲವಾಗಿದೆ. ಚಿಕ್ಕ ಮಕ್ಕಳ ವರ್ಣಚಿತ್ರಗಳು ಸೇರಿದಂತೆ ಬೈಬಲ್ ವೈವಿಧ್ಯತೆಯ ಪ್ರಸ್ತುತಿಯಿಂದ ನಾನು ಪ್ರಭಾವಿತನಾಗಿದ್ದೇನೆ.” ಎಂದು ಹೇಳಿದರು.
ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರುಕ್ರೈಸ್ತ ಸಮುದಾಯದ ಆಯೋಗಗಳ ಸಹಯೋಗದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚಗಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಜನವರಿ 26 ರಿಂದ 28 ರ ಸಂಜೆ ತನಕ ಆಯೋಜಿಸಿದ್ದ ಪ್ರದರ್ಶನವು ಯಶಸ್ವಿಯಾಗಿ ಪ್ರಸ್ತುತ ಪಡಿಸಲಾಯಿತು.
ಜೆಪ್ಪು, ಕಾಸ್ಸಿಯಾ ಮತ್ತು ವಾಲೆನ್ಸಿಯಾ ಇಗರ್ಜಿಗಳ ವತಿಯಿಂದ ಮೂರು ದಿನಗಳ ಕಾಲ ಸಂತ ಮಾರ್ಕನು ಬರೆದ ಯೇಸು ಕ್ರಿಸ್ತರ ಸುವಾರ್ತೆಯನ್ನು ಓದಿದರು.
ಪ್ರತಿದಿನ ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ‘ಮೇರಿ ಮ್ಯಾಗ್ಡಲೀನ್’ (ಜೋಶಲ್‍ಡಿಸೋಜಾ), ‘ಜೋಸೆಫ್‍ ಆಫ್‍ ಅರಿಮಥಿಯಾ’ (ಸಹೋ. ಲಾಯ್ಡ್, ಜೆಪ್ಪು ಸೆಮಿಯನರಿ), ಮತ್ತು ‘ಬರಬ್ಬಾಸ್’ (ಅಲ್ವಿನ್ ಮಿರಾಂಡಾ, ಜೆಪ್ಪು) ಕುರಿತ ಬೈಬಲ್ ಏಕಪಾತ್ರ ಕಿರುನಾಟಕಗಳನ್ನು ಪ್ರಸ್ತುತಪಡಿಸಲಾಯಿತು.
ಬೈಬಲ್ ವಿಷಯಗಳ ಮೇಲೆ ವಿಶಿಷ್ಟವಾದ ಮ್ಯಾಜಿಕ್ ಪ್ರದರ್ಶನವನ್ನು ವಾಲೆನ್ಸಿಯಾದ ವಂದನೀಯ ಪಾವ್ಲ್ ಸೆಬಾಸ್ಟಿಯನ್ ಡಿಸೋಜಾ ಅವರು ಪ್ರಸ್ತುತ ಪಡಿಸಿದರು.ಜೊತೆಗೆ,ನಗರದ ಜೆಪ್ಪು ಹೋಲಿ ರೋಜರಿ ಕಾನ್ವೆಂಟ್, ಪಾನೀರ್ ‘ಸಮರ್ಪಣ್’ ಕಾನ್ವೆಂಟ್‍ ಆರ್ಸುಲಾ ಧರ್ಮಭಗಿನಿಯರಿಂದ ಹಾಗೂ ಮಂಗಳೂರಿನ ಆಶಾನಿಕೇತನ ಕಾನ್ವೆಂಟ್ ಮತ್ತು ಗ್ಲ್ಯಾಡ್ಸಮ್ ಹೋಮ್ ಮೈನರ್ ಸೆಮಿನರಿ ವಿದ್ಯಾರ್ಥಿಗಳಿಂದ ಬೈಬಲ್ ನೃತ್ಯ, ಬೈಬಲ್ ಹಾಡುಗಳು, ಹತ್ತು ಕನ್ಯೆಯರ ಸಾಮತಿ, ಬಿತ್ತುವವನ ಸಾಮತಿ, ಸ್ವರ್ಗದ ಸಾಮ್ರಾಜ್ಯದ ಸಾಮತಿ, ದಾರಿ ತಪ್ಪಿದ ಮಗ, ಒಳ್ಳೆಯ ಸಾಮಾರಿತನನ ಸಾಮತಿ ಮತ್ತು ಶಿಷ್ಯರ ಕರೆಯನ್ನು ತೋರ್ಪಡಿಸುವ ನೃತ್ಯ ನಾಟಕಗಳು ಪ್ರದರ್ಶನಗೊಂಡವು.
ಪ್ರದರ್ಶನವು 300 ವಿಧದ ಬೈಬಲ್‍ಗಳು, 150 ವರ್ಣಚಿತ್ರಗಳು, 20 ಬೈಬಲ್ ಮಾದರಿಗಳು, 30 ನಿಮಿಷಗಳ ಸಾಕ್ಷ್ಯಚಿತ್ರ ವೀಡಿಯೊ, ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ಒಳಗೊಂಡಿತ್ತು.
ಪ್ರದರ್ಶನಕ್ಕೆ ಸಂಬಂದಿಸಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಬಹುಮಾನ ನೀಡಿ ಗೌರವಿಸಲಾಯಿತು.

ಬೀಜಾಡಿ ಮಿತ್ರ ಸಂಗಮಕ್ಕೆ ರಜತ ಮಹೋತ್ಸವದ ಸಂಭ್ರಮ
ಫೆ.3ರಂದು ನಾಡೋಜ ಡಾ.ಜಿ.ಶಂಕರ್ ಅವರಿಂದ ರಜತ ಮಹೋತ್ಸವ ಉದ್ಘಾಟನೆ


ಬೀಜಾಡಿ: ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕøತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ರಜತ ಮಹೋತ್ಸವವು ಫೆ.3ರಿಂದ ಫೆ.5 ತನಕ ಮೂರು ದಿನಗಳ ಕಾಲ ಬೀಜಾಡಿ ಮಿತ್ರಸೌಧದ ವಠಾರದಲ್ಲಿ ಸಂಭ್ರಮದಿಂದ ಜರುಗಲಿದೆ.
25 ಸಾರ್ಥಕ ವಸಂತಗಳ ಸಂಭ್ರಮಾಚರಣೆ “ರಜತಪಥ” ನೆರಳು-ಬೆಳಕಿನ ಸಹಯಾನವನ್ನು ಫೆ.3ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದು, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಜತ ಮಹೋತ್ಸವದ ನೆನಪಿಗಾಗಿ ಸ್ವಉದ್ಯೋಗಕ್ಕಾಗಿ ಗೋ(ದನ) ಒಂದನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿತರಣೆ ಮಾಡಲಿದ್ದಾರೆ. ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್‍ಕುಮಾರ್ ಕೊಡ್ಗಿ ಸಂಸ್ಥೆಯ ವೆಬ್‍ಸೈಟ್ ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಆರಾಧ್ಯ ದೇವರಾದ ಮಠದಕೆರೆ ಶ್ರೀ ಗೋಪಾಲಕೃಷ್ಣ ದೇವರಿಗೆ ಬೆಳ್ಳಿಯ ಕವಚ ಮತ್ತು ಪ್ರಭಾವಳಿ ಸಮರ್ಪಣೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಗಾಯಕರಾದ ಸುಷ್ಮಾ ಆಚಾರ್ಯ, ಮಾಧವ ಬೀಜಾಡಿ ಇವರಿಂದ ಸಂಗೀತ ಸುಧೆ ನಡೆಯಲಿದೆ.
ಫೆ.4ರಂದು ಶನಿವಾರ ಸಂಜೆ 6.30ಕ್ಕೆ ನಡೆಯುವ 2ನೇ ದಿನ ಸಮಾರಂಭದಲ್ಲಿ 25 ಮಂದಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 25 ಮಂದಿ ಸಾಧಕರಿಗೆ ಸನ್ಮಾನ, ರಜತಪಥ ಸ್ಮರಣ ಸಂಚಿಕೆ ಬಿಡುಗಡೆ, ವಿಕಲಚೇತನರಿಗೆ ಗಾಲಿಕುರ್ಚಿ ವಿತರಣೆ ನಡೆಯಲಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ, ಬರಮಸಾಗರ ಡಿ.ವಿ.ಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರದೀಪ್ ಡಿವಿಎಸ್, ಉದ್ಯಮಿಗಳಾದ ಗೋಪಾಡಿ ಶ್ರೀನಿವಾಸ ರಾವ್, ಸುಗ್ಗಿ ಸುಧಾಕರ ಶೆಟ್ಟಿ, ಪ್ರಗತಿಪರ ಕೃಷಿಕರು ರಾಮಕೃಷ್ಣ ಬಾಯರಿ ಮೊದಲಾದವರು ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಮತ್ತು ಅಂಗನವಾಡಿ ಪುಟಾಣಿಗಳಿಂದ ವಿವಿಧ ವಿನೋದಾವಳಿ ಹಾಗೂ ಉಡುಪಿಯ ಅಭಿನಯ ಕಲಾವಿದರಿಂದ ನಾಟಕ ಶಾಂಭವಿ ಜರುಗಲಿದೆ.
ಫೆ.5ರಂದು ಸಂಜೆ 6.30ಕ್ಕೆ ರಜತ ಮಹೋತ್ಸವ ಸಮರೋಪ, ಅಶಕ್ತರಿಗೆ ಸಹಾಯಧನ ವಿತರಣೆ, ಸ್ವ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ, ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ, ಸಾಧಕ ಸಂಸ್ಥೆಗಳಿಗೆ ಪುರಸ್ಕಾರ, ಸಂಸ್ಥೆಯ 26ನೇ ವಾರ್ಷಿಕೋತ್ಸವ ಜರುಗಲಿದ್ದು, ಸಚಿವರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಆಗಮಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕೋಟೇಶ್ವರ ಶ್ರೀ ಕೋಟಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುರೇಶ್ ಬೆಟ್ಟಿನ್ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹೋಟೆಲ್ ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಕೋಟೇಶ್ವರದ ವೈದ್ಯ ಡಾ.ಶ್ರೀಪಾದ ಹೆಗ್ಡೆ ಅವರಿಗೆ ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಲ್ಲದೇ
ಶ್ರೀ ರಾಮ ಭಜನಾ ಮಂಡಳಿ, ಬೀಜಾಡಿ-ಗೋಪಾಡಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಹೆಲ್ಪಿಂಗ್‍ಹ್ಯಾಂಡ್ ಕುಂದಾಪುರ ಈ ಮೂರು ಸಾಧಕ ಸಂಸ್ಥೆಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಬೀಜಾಡಿ ಮೂಡು ಇಲ್ಲಿನ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ಕೆ.ನವೀನಚಂದ್ರ ಕೊಪ್ಪ ನೇತ್ವತ್ವದ ಶಿವಾನಿ ಮ್ಯೂಸಿಕಲ್ಸ್ ಆರ್ಕೆಸ್ಟ್ರಾ ಇವರಿಂದ ಅದ್ದೂರಿ ಯ
ಸಂಗೀತ ರಸಮಂಜರಿ ನಡೆಯಲಿದೆ.
ಬಾಕ್ಸ್ ಮಾಡಿ ಹಾಕಿ
1997ರಲ್ಲಿ ಬೀಜಾಡಿ ಪರಿಸರದಲ್ಲಿ ಸುಮ್ಮನೆ ಸರಿದು ಹೋಗುತ್ತಿದ್ದ ಸಂಜೆಗಳನ್ನು ಫಲಪ್ರದಗೊಳಿಸಬೇನ್ನುವ ಉದ್ದೇಶದಿಂದ ಬೀಜಾಡಿ-ಗೋಪಾಡಿಯಲ್ಲಿ ಆಟವಾಡುತ್ತಾ ಕಳೆಯುತ್ತಿದ್ದ ಸಮಾನ ಮನಸ್ಕರ ತರುಣ ಮನಸ್ಸುಗಳು ಮಿತ್ರ ಸಂಗಮವಾಗಿ ರೂಪಗೊಂಡ ಬೆರಗಿಗೆ ಇದೀಗ 25 ವರ್ಷಗಳು ತುಂಬಿದೆ! ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ, ಧಾರ್ಮಿಕ ಸಂಗತಿಗಳಿಂದಾಗಿ ಪರಿಸರದ ಜನಮಾನಸದಲ್ಲಿ ಜಾಗ ಪಡೆದು ತನ್ನ ಧ್ಯೇಯೋದ್ದೇಶಗಳಿಗೆ ಕಟಿಬದ್ದವಾಗಿ ಈ ಸತ್ಪರತೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಉತ್ಸುಕವಾಗಿದೆ. ಸಂಸ್ಥೆಯ ದಶಮಾನೋತ್ಸವದ ಸಂದರ್ಭದಲ್ಲಿ ಸುಂದರವಾದ ದಶಮಾನೋತ್ಸವ ಭವನ ಮಿತ್ರಸೌಧವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿದ್ದು, ಇದೀಗ ಮಿತ್ರಸೌಧ ಊರಿನ ಸಾಂಸ್ಕøತಿಕ ಕೇಂದ್ರವಾಗಿ ರೂಪಗೊಂಡಿರುವುದು ನಮಗೆ ಹೆಮ್ಮೆ ಎನಿಸಿದೆ. ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ, ಜಿಲ್ಲಾ ಕಸಾಪದಿಂದ ವಿಶೇಷ ಸನ್ಮಾನ ಸಹಿತ ಅನೇಕ ಪ್ರಶಸ್ತಿಗಳು ಸಂಸ್ಥೆಗೆ ಸಂದಿದೆ. ಬೃಹತ್ ಆಧರ್ ಕಾರ್ಡ್ ಅಭಿಯಾನ, ಆರೋಗ್ಯ ಶಿಬಿರ ಸಹಿತ ವರ್ಷಪೂರ್ತಿ ಸಮಾಜಪರ ಕಾರ್ಯಕ್ರಮಗಳನ್ನು ಸಂಘಟಿಸಿ ಸೈ ಎನಿಸಿಕೊಂಡ ಸಂಸ್ಥೆಯಾಗಿದ್ದು, ಇದೀಗ ಸಂಸ್ಥೆ ಎರಡೂವರೆ ದಶಕಗಳನ್ನು ಹಾದು ಹೋದ ಹಾದಿಯ ಸಾರ್ಥಕತೆಯನ್ನು ಅರ್ಥಪೂರ್ಣವಾಗಿ ಸಂಭ್ರಮಿಸುವರೆ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಎಲ್ಲರ ಸಹಕಾರ ಬಯಸಿದೆ. ಈಗ ಮಿತ್ರ ಸಂಗಮದ ಗೌರವಾಧ್ಯಕ್ಷರಾಗಿ ಬಿ.ವಾದಿರಾಜ ಹೆಬ್ಬಾರ್, ಅಧ್ಯಕ್ಷರಾಗಿ ಚಂದ್ರಶೇಖರ ಬೀಜಾಡಿ, ಉಪಾಧ್ಯಕ್ಷ ನಾಗರಾಜ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಬೀಜಾಡಿ,ಜೊತೆ ಕಾರ್ಯದರ್ಶಿ ಪ್ರದೀಪ್ ದೇವಾಡಿಗ, ಕೋಶಾಧಿಕಾರಿ ರಾಜೇಶ್ ಆಚಾರ್ಯ ಗೋಪಾಡಿ, ಹಾಗೂ ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಶಂಕರನಾರಾಯಣ ಬಾಯರಿ, ಗೌರವಾಧ್ಯಕ್ಷರಾಗಿ ವಿಶ್ವನಾಥ ಹೆಗ್ಡೆ, ಅಧ್ಯಕ್ಷರಾಗಿ ದೀಪಾನಂದ ಉಪಾಧ್ಯ, ಉಪಾಧ್ಯಕ್ಷರಾಗಿ ಅನುಪಕುಮಾರ್ ಬಿ.ಆರ್, ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್, ಕೋಶಾಧಿಕಾಧಿ ಬಿ.ಜಿ.ನಾಗರಾಜ ಕಾರ್ಯನಿರ್ವಹಿಸುತ್ತಿದ್ದಾರೆ.

Golden Jubilee Celebration of Religous life of Sr Benignus BS

January 28th 2023 the Golden Jubilee of Religious Profession of Sr Benignus BS belonging to St Joseph’s Convent, Shubadha, Suralpady was celebrated at Ozanam Home for the Aged, Santhekatte, Kallianpur. The thanksgiving Eucharistic Celebration was held at 11.00am. it was officiated by Rev Fr Valerian Mendonca the Rector of Milagres Cathedral, Kallianpur and co-officiated by Rev Fr Charles Menezes, Rev Fr Elias Martis, Rev Fr Patrick  and Rev Fr Aloysius Lewis. In his homily Fr Charles Menezes highlighted the faith response of Sr Benignus to commit herself to God through Religious life. He appreciated her committed life of 50 years in the service of the Lord and His people in different parts of India and Africa.

After the Mass there was felicitation programme held in the Ozanam Campus. Mr Charles Gomes, the nephew of Sr Benignus welcomed the guests and the gathered members on the occasion. Along with Sr Benignus, Mr Thomas Aranha, her brother, Rev Fr Valerian Mendonca, Sr Herita Monthi BS, the Superior of St Joseph’s Convent, Shubadha, Suralpady were present on the dais. Sr Benignus carved the Jubilee cake. She was felicitated with greeting song by St Joseph’s Community members. Later she was honoured with shawl and garland along with citation. Mr Jerald Aranha the nephew of Sr Benignus shared the reminiscences of her life in the family. Sr Anna Maria BS acknowledged the compassionate services of Sr Benignus in Bethany Family and her compassionate service towards humanity. Rev Fr Valerian Mendonca applauded her notable service in the Church and int he Society. He acknowledged her accompaniment at Ozanam Old age home with the inmates. At the outset the programme began with Prayer dance by Sharal Lobo. The programme was winded with the grateful note by the Jubilarian appreciating the role played by the parents, family members and the members of the Congregation in shaping her life. She also thanked all the members responsible to hold the day’s programme. It was followed by fellowship meal arranged by the family. Her family members, friends, Bethany Sisters and the inmates of Ozanam Old Age Home graced the occasion.

Report by; Sr Anna Maria BS, St Joseph’s Convent, Shubadha, Suralpady

ಕುಂದಾಪುರದ ಆರ್. ಎನ್. ಶೆಟ್ಟಿ‌ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

ಕುಂದಾಪುರ: ‘ರಾಷ್ಟ್ರದಲ್ಲಿ ಆಗಬೇಕಾದ ಇನ್ನೂ ಹೆಚ್ಚಿನ ಸಾಧನೆಗೆ, ಅಭಿವೃದ್ಧಿಗೆ ಅಗತ್ಯವಿದ್ದಾಗ ಪ್ರತಿಯೊಬ್ಬರೂ ತಮ್ಮಿಂದಾದ ಸೇವೆ, ಕೊಡುಗೆಗಳನ್ನು ನೀಡಬೇಕು. ಆ ಮೂಲಕ ನಾವು ನಿಜವಾದ ಅರ್ಥದಲ್ಲಿ ಒಳ್ಳೆಯ ನಾಗರೀಕರಾಗಬೇಕು’ ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ‌ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕರೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ‌.ಬಿ ಯವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಹಿಂದಿ ವಿಭಾಗ ಮುಖ್ಯಸ್ಥೆಯಾದ ಶ್ರೀಮತಿ ಜಯಶೀಲಾ ಪೈಯವರು ವಂದನಾರ್ಪಣೆಗೈದರು.  

ದಿಂಬಾಲ:ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ವೆಂಕಟರಮಣಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

ಶ್ರೀನಿವಾಸಪುರ: ದಿಂಬಾಲ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಗುರುವಾರ ಶ್ರೀದೇವಿ, ಭೂದೇವಿ ಸಮೇತ ವೆಂಕಟರಮಣಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಲಾಗಿತ್ತು.
ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ದೇವರ ದರ್ಶನ ಪಡೆದರು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಗಿತ್ತು. ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಡಾ. ವೈ.ವಿ.ವೆಂಕಟಾಚಲ ಹರಾಜಿನಲ್ಲಿ ದೇವರ ಲಾಡು ಖರೀದಿಸಿ ವಿತರಿಸಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಾಸಕ ಕೆ.ಆರ್.ರಮೇಶ್ ಕುಮಾರ್ ಮತ್ತಿತರ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.