ಆಲ್ಫ್ರೆಡ್ ಬೆನೀಸ್ ಕ್ರಿಯೇಷನ್ಸ್ ಆಯೋಜಿಸಲಾದ 15 ನೇ ಸ್ಟ್ಯಾನಿ ನೈಟ್ ನಡೆಯಿತು

ಮಂಗಳೂರು: 15 ನೇ ಸ್ಟ್ಯಾನಿ ನೈಟ್ ಕುಲಶೇಖರ್‌ನಲ್ಲಿರುವ ಚರ್ಚ್ ಮೈದಾನದಲ್ಲಿ, ಫೆಬ್ರುವರಿ 5,2023 ರಂದು ಕೆಲರಾಯ್, ನೀರುಮಾರ್ಗದ ಸೇಂಟ್ ಆನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚಕ್ಕೆ ಸಹಯಾರ್ಥ  ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.

ಸ್ಟ್ಯಾನಿ ಮೆಂಡೋನ್ಜಾ, ಜೋಸೆಫ್ ಮಥಿಯಾಸ್, ಎಲ್ಟನ್ ಪಿಂಟೋ, ಅಡ್ಲಿನ್ ಪಿಂಟೋ, ವರ್ಣ ಡಿಸೋಜಾ, ಬಿಂದು ಕುಟಿನ್ಹಾ, ಸಾಶಾ ಡಿಸೋಜಾ, ಜೋಸ್ವಿನ್ ಗಾಯಕರ ಜೊತೆ ಪಾಪನ್ ಕ್ಯಾಲಿಕಟ್ ಅವರು ತಮ್ಮ ಮೋಡಿಮಾಡುವ ಸಂಗೀತ ಮತ್ತು ಕೊಂಕಣಿ ಮಾಧುರ್ಯದ ರಸ ಮಂಜರಿಯನ್ನು ರಂಜಿಸಿದರು.

 ಹಾಸ್ಯ ಕಲಾವಿದರು ತಮ್ಮ ಹಾಸ್ಯಮಯ ನಟನೆಯಿಂದ ನಗುವ ವಾತಾವರಣವನ್ನು ಸ್ರಷ್ಟಿಸಿದರು. ದೀಪಕ್ ಬೆಂದೂರ್‌ವೆಲ್ ನೇತೃತ್ವದ ಡ್ಯಾನ್ಸ್ ಕ್ರಿಯೇಟರ್ ಅವರ ಅದ್ಭುತ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು.

ಕೊರ್ಡೆಲ್ ಚರ್ಚ್‌ನ ಧರ್ಮಗುರು ರೆ.ಫಾ.ಕ್ಲಿಫರ್ಡ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಯ್ ಕ್ಯಾಸ್ಟೆಲಿನೊ ಮುಖ್ಯ ಅತಿಥಿಯಾಗಿದ್ದರು ಮತ್ತು ಶ್ರೀ ಆಸ್ಟಿನ್ ಪೆರಿಸ್ (ಡಾ.ರೊನಾಲ್ಡ್ ಕೊಲಾಕೊ ಪ್ರತಿನಿಧಿ) ಶ್ರೀ ಅನಿಲ್ ಲೋಬೊ (ಅಧ್ಯಕ್ಷರು, ಎಂಸಿಸಿ ಬ್ಯಾಂಕ್), ಲೂಯಿಸ್ ಜೆ ಪಿಂಟೊ (ಅಧ್ಯಕ್ಷರು, ಮಾಂಡ್ ಸೊಭಾಣ್) ಶ್ರೀ ಜೋಸೆಫ್ ಮಥಿಯಾಸ್ (ಉದ್ಯಮಿ) ಶ್ರೀ ಪ್ರವೀಣ್ ತಾವ್ರೊ ಪ್ರತಿನಿಧಿ, ಡೈಜಿ ವರ್ಲ್ಡ್) ಶ್ರೀ ಆಲ್ಫ್ರೆಡ್ ಬೆನಿಸ್ (ಸಂಘಟಕರು), ಸ್ಟ್ಯಾನಿ ಮೆಂಡೋನ್ಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಆಲ್ಫ್ರೆಡ್ ಬೆನಿಸ್ (ಸಂಘಟಕರು), ಮತ್ತು ಸ್ಟ್ಯಾನಿ ಮೆಂಡೋನ್ಸಾ ಕೆಲರಾಯ್  ಅವರು .ಸೈಂಟ್ ಆನ್ನೆ ಚರ್ಚಿನ ಧರ್ಮಗುರು ವಂ| ಜೋಸೆಫ್ ಮಸ್ಕರೇನ್ಹಾಸ್ ಅವರಿಗೆ 5ಲಕ್ಷಗಳ ಚೆಕ್ನ್ನು ಹಸ್ತಾಂತರಿಸಿದರು.

     ರಸಮಂಜರಿಯನ್ನು ವೀಕ್ಷಕರು ಮೆಚ್ಚಿದ ಈ ಕಾರ್ಯಕ್ರಮವನ್ನು ಶ್ರೀ ಲೆಸ್ಲಿ ರೆಗೊ ಮತ್ತು ಶೆಲ್ಡನ್ ಕ್ರಾಸ್ಟಾ ಸಂಯೋಜಿಸಿದರು. ಫೆಲಿಕ್ಸ್ ಮೊರಾಸ್ ವಂದಿಸಿದರು.

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ -ಸವಿತಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಸೇವಾ ಸಂಗಮ ವಿದ್ಯಾ ಕೇಂದ್ರಕ್ಕೆಊಟದ ಬಾಬ್ತು ದೇಣಿಗೆ

ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಸವಿತಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರಕ್ಕೆ ಒಂದು ದಿನದ ಮಧ್ಯಾಹ್ನದ ಊಟದ ಬಾಬ್ತು ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ರೋ. ಸಚಿನ್ ನಕ್ಕತ್ತಾಯ, ಮಾಜಿ ಅಧ್ಯಕ್ಷ ರೋ. ಕೆ.ಪಿ. ಭಟ್, ರೋ. ಶೋಭಾ ಭಟ್, ರೋ. ಮನೋಹರ ಪಿ, ರೋ ಸುರೇಖ ಪುರಾಣಿಕ ಹಾಗೂ ಸೇವಾ ಸಂಗಮದ ಮುಖ್ಯೋಪಾಧ್ಯಾಯರು ವಿಷ್ಣುಮೂರ್ತಿ ಭಟ್ ಮತ್ತು ಸಂಚಾಲಕ ಶ್ರೀ. ಚಂದ್ರಶೇಖರ ಪಡಿಯಾರ ಉಪಸ್ಥಿತರಿದ್ದರು.

ಭಂಡಾರ್‍ಕಾರ್ಸ್ ಪದವಿ ಪೂರ್ವಕಾಲೇಜುಕುಂದಾಪುರ ಮಾನವ ಜನ್ಮ ಸಾರ್ಥಕತೆಯಲ್ಲಿ ಸಾಧಕ ಬದುಕಿನ ಅಗತ್ಯತೆ-ಡಿ.ಐ.ಜಿ. ರವಿ ಡಿ. ಚನ್ನಣ್ಣನವರ್

ದಿನಾಂಕ 02..02.2023ರಂದು ಭಂಡಾರ್‍ಕಾರ್ಸ್ ಕಲಾ ಮತ್ತು ವಿಜ್ಞಾನಕಾಲೇಜಿನಲ್ಲಿಆರ್‍ಎನ್ ಶೆಟ್ಟಿ ಸಭಾಂಗಣದಲ್ಲಿ ಸೃಷ್ಠಿ ಇನ್‍ಫೋಟೆಕ್‍ಕುಂದಾಪುರ ಹಾಗೂ ಭಂಡಾರ್‍ಕಾರ್ಸ್‍ಕಾಲೇಜುಕುಂದಾಪುರಇದರ ಸಂಯುಕ್ತಆಶ್ರಯದಲ್ಲಿಒಂದು ದಿನದತರಬೇತಿ ವಿವರಗಳ ಕಾರ್ಯಾಗಾರ ಹಾಗೂ ಉನ್ನತ ಮಟ್ಟಿದತರಬೇತಿ ಪ್ರಮಾಣ ಪತ್ರ ವಿತರಣೆಕಾರ್ಯಕ್ರಮಜರುಗಿತು.
ಸಭಾಧ್ಯಕ್ಷರಾಗಿಕಾಲೇಜಿನ ಹಿರಿಯ ವಿಶ್ವಸ್ಥರಾದ ಶ್ರೀ ಕೆ ಶಾಂತಾರಾಮ ಪ್ರಭು ಉಪಸ್ಥಿತರಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಉದ್ಘಾಟಕರಾಗಿಕಿಯೋನಿಕ್ಸ್‍ಚೇರ್‍ಮೆನ್‍ರಾದ ಶ್ರೀ ಹರಿಕೃಷ್ಣ ಬಂಟ್ವಾಳ್ ಉದ್ಘಾಟಕ ನುಡಿಗಳನ್ನಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿರುವ ದಕ್ಷ ಪೋಲೀಸ್‍ಅಧಿಕಾರಿಯಾಗಿರುವ ಶ್ರೀ ರವಿ ಡಿ ಚೆನ್ನಣ್ಣನವರ್ ಸಮಾರಂಭವನ್ನುದ್ದೇಶಿಸಿ ಮಾತನ್ನಾಡುತ್ತಾ“ಮಾನವಜನ್ಮ ಸಾರ್ಥಕ ಗೊಳಿಸಬೇಕಾದರೆ ಸಾಧನೆಯ ಬದುಕಿನೆಡೆಗೆ ನಿಮ್ಮ ಪ್ರಯಾಣ ಸಾಗಲಿ ಎನ್ನುವರಾಷ್ಟ್ರೀಯ ಪ್ರಜ್ಞೆಯ ಮಾತುಗಳನ್ನಾಡಿದರು. ಡಾ. ಸರಿತ್‍ಕುಮಾರ ಐ ಐ ಎಂ ಮತ್ತುಐ ಐ ಟಿ ಮತ್ತುಕೋರ್ಸ್‍ಡೈರೆಕ್ಟರ್‍ಕಿಯೋನಿಕ್ಸ್‍ಇವರು ಸಭೆಯನ್ನುದ್ದೇಶಿಸಿ ಸಾಕಷ್ಟು ಮಾಹಿತಿಯನ್ನು ನೀಡಿದರು. ಅತಿಥಿ ಶ್ರೀ ಕುಮರ್ ಎ ಡೈರೆಕ್ಟರ್‍ಅಪರೇಶನ್‍ಕಿಯೋನಿಕ್ಸ್ ಸೃಷ್ಠಿ ಇನ್ಫೋಟಕ್‍ನ ಮುಖ್ಯಸ್ಥರಾದ ಹರ್ಷವರ್ಧನ್ ಶೆಟ್ಟಿ, ಕಿಯೋನಿಕ್ಸ್‍ಯು.ವ.ಕಾಂನ ಮುಖ್ಯಸ್ಥರಾದ ಶ್ರೀ ಧೀರಜ್ ಹೆಜಮಾಡಿ ಮತ್ತುಕಿಯೋನಿಕ್ಸ್ ಸಂಸ್ಥೆಯ ಸರ್ವ ಸಿಬ್ಬಂದಿವರ್ಗ ಹಾಗೂ ವಿವಧ ಕಾಲೇಜುಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭಂಡಾರ್‍ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದಡಾ. ಜಿ.ಎಂ.ಗೊಂಡರವರು ಸರ್ವರನ್ನು ಸ್ವಾಗತಿಸಿದರು. ಡಾ.ಬಿ.ಬಿ. ಹೆಗ್ಡೆ ಕಾಲೇಜಿನಕನ್ನಡಉಪನ್ಯಾಸಕಿರೇಷ್ಮಾ ಶೆಟ್ಟಿಕಾರ್ಯಕ್ರಮನಿರೂಪಿಸಿದರು. ವೆಂಕಟರಮಣ ಪದವಿ ಪೂರ್ವಕಾಲೇಜಿನಆಂಗ್ಲಭಾಷಾಉಪನ್ಯಾಸಕಿಕು.ಅಮೃತಾಅತಿಥಿ ಪರಿಚಯ ಮಾಡಿದರು. ಭಂಡಾರ್‍ಕಾರ್ಸ್‍ಕಾಲೇಜಿನಕನ್ನಡಉಪನ್ಯಾಸಕಿರೇಣುಕಾ ವಂದನಾರ್ಪಣೆ ಸಲ್ಲಿಸಿದರು.

ಕುಂದಾಪುರದಲ್ಲಿ ಜನವರಿ 5 ರಂದು ವೇಣುನಾದ ಲಹರಿ


ಭಾರತದ ಖ್ಯಾತ ಬಾನ್ಸುರಿ ವಾದನ ಕಲಾವಿದ ಪರಿಷತ್ ರಾಜೇಂದ್ರ ಪ್ರಸನ್ನ ನವದೆಹಲಿಯವರ “ವೇಣುನಾದ ಲಹರಿ” ಕುಂದಾಪುರದಲ್ಲಿ ಜ. 5 ರಂದು ರವಿವಾರ ನಡೆಯಲಿದೆ.
ಸಂಗೀತ ಭಾರತಿ ಟ್ರಸ್ಟ್ (ರಿ.) ಆಶ್ರಯದಲ್ಲಿ ಕುಂದಾಪುರ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ತಬಲಾವಾದಕರಾಗಿ ಖ್ಯಾತ ಕಲಾವಿದ ಪಂಡಿತ್ ರವೀಂದ್ರ ಯಾವಗಲ್, ಬೆಂಗಳೂರು ಭಾಗವಹಿಸಲಿದ್ದಾರೆ.
ಸಂಗೀತಾಸಕ್ತರು ಈ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಗೀತ ಭಾರತಿ ಟ್ರಸ್ಟ್ ಆಹ್ವಾನಿಸಿದೆ.

ಜೆಸಿಐ ಕುಂದಾಪುರ ಸಿಟಿ : ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ರೂಪಶ್ರೀ ಯವರಿಗೆ ತೆರೆ ಮರೆಯ ಸಾದಕಿ ಪ್ರಶಸ್ತಿ

ಜೆಸಿಐ ಕುಂದಾಪುರ ಸಿಟಿ ಯಾ ವತಿಯಿಂದ ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಯಾ ಕಾನ್ಸ್ಟೆಬಲ್ ರೂಪಶ್ರೀ ಯವರಿಗೆ ತೆರೆ ಮರೆಯಾ ಸಾದಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಮುಖ್ಯ ಅತಿಥಿ ಯಾಗಿ ಆಗಮಿಸಿದ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುಧಾ ಪ್ರಭು ಮಾತನಾಡಿ ಸಾಮಾನ್ಯವಾಗಿ ಶ್ರೀಮಂತರು ಅಥವಾ ಉಳ್ಳವರು ಏನಾದ್ರು ಸಾಧನೆ ಮಾಡಿದರೆ ಅದು ಕೂಡಲೇ ಪ್ರಚಾರ ಕ್ಕೆ ಬರುತ್ತದೆ
ವಿಶೇಷ ವಾಗಿ ಗ್ರಾಮೀಣ ಭಾಗದಲ್ಲಿ ಸಾಧನೆ ಮಾಡಿದ ವರಿಗಿಂತ ನಗರ ಪ್ರದೇಶದಲ್ಲಿ ಸಾಧನೆ ಮಾಡಿದವರು ಕೂಡಲೇ ಗುರುತಿಸಲ್ಪಡುತ್ತಾರೆ
ಇಂಥ ಸಂದರ್ಭದಲ್ಲಿ ಇವತ್ತು ಸಂಚಾರಿ ಠಾಣೆಯ ಕಾನ್ ಸ್ಟೇಬಲ್ ಆಗಿ ತಮ್ಮ ಕ್ರತ್ಯವ್ಯ ದಲ್ಲಿ ಶ್ರದ್ದೆ ಯಿಂದ ಎಲ್ಲೂ ಚುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದ ರೂಪಶ್ರೀ ಯವರಿಗೆ ಜೇಸಿ ಯವರು ಮಾಡಿದ ಸನ್ಮಾನ ಇದು ಅರ್ಥ ಪೂರ್ಣ ವಾಗಿದ್ದು ಅಂತ ನುಡಿದರು
ಜೇಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಅತಿಥಿಗಳನ್ನು ಸ್ವಾಗತಿಸಿದರು
ಸಮಾರಂಭ ದಲ್ಲಿ ಏ ಎಸ್ ಐ ಚಂದ್ರ ಶೇಖರ್ ಜನಾರ್ದನ್ ಕಾನ್ಸ್ಟೆಬಲ್ ಸುಪ್ರಿತಾ ಶೆಟ್ಟಿ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷರಾದ ಗಿರೀಶ್ ಹೆಬ್ಬಾರ್ ಜಯಚಂದ್ರ ಶೆಟ್ಟಿ ಪ್ರಶಾಂತ್ ಹವಾಲ್ದಾರ್ ವಿಜಯ ಭಂಡಾರಿ ವಕೀಲರಾದ ದಿನಕರ್ ಲೇಡಿ ಜೇಸಿ ಸಂಯೋಜಕಿ ಪ್ರೇಮ, ಸದ್ಯಸ್ಯರಾದ ಗುರುರಾಜ್ ಕೊತ್ವಾಲ್, b ದಿನೇಶ್ ಪುತ್ರನ್, ವಿಠಲ್ ಹೆಬ್ಬಾರ್, ರೇಷ್ಮಾ ಕೋಟ್ಯಾನ್, ಐರಿನ್ ಬೆರೆಟ್ಟೋ ಸೌರಬಿ ಇನ್ನಿತರರು ಉಪಸ್ಥಿತರಿದ್ದರು

ಹೈನುಗಾರಿಕೆಗೆ ರಾಮಕೃಷ್ಣ ಕೊಠಾರಿ ಹಾಗೂ ಮುಕಾಂಬು ಕೊಠಾರಿ ದಂಪತಿಗೆ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದಿಂದ ಸಮ್ಮಾನ

“ವೃತ್ತಿಪರ ಸೇವೆಯ ಮಾಸ”ದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣವು ಹೈನುಗಾರಿಕೆಯಲ್ಲಿ ಜೀವನ ಸಾಗಿಸುತ್ತಿರುವ ಶ್ರಮ ಜೀವಿಗಳಾದ ಹಂಗಳೂರಿನ ರಾಮಕೃಷ್ಣ ಕೊಠಾರಿ ಹಾಗೂ ಮುಕಾಂಬು ಕೊಠಾರಿ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ರೊ. ಸುರೇಖ ಪುರಾಣಿಕ, ಮಾಜಿ ಅಧ್ಯಕ್ಷರುಗಳಾದ ರೊ.ಯು. ಎಸ್. ಶೆಣೈ , ರೊ. ಪಾಂಡುರಂಗ ಭಟ್, ತಲ್ಲೂರು ಸಮುದಾಯ ದಳದ ಅಧ್ಯಕ್ಷ ಜಗದೀಶ ಆಚಾರ್ಯ, ಕಾರ್ಯದರ್ಶಿ ಸದಾನಂದ ಆಚಾರ್ಯ ಹಾಗೂ ರೋಟರಿ ಮತ್ತು ಸಮುದಾಯ ದಳದ ಸದಸ್ಯರು ಉಪಸ್ಥಿತರಿದ್ದರು.

ಫೆ.5ರಂದು ಕುಲಶೇಖರ ಚರ್ಚ್ ಸಭಾಭವನದಲ್ಲಿ 15ನೇ ಸ್ಟ್ಯಾನ್ ನೈಟ್

ನೀರುಮಾರ್ಗ ಕೆಲರಾಯ್ ಸಂತ ಅನ್ನ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಆಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಪ್ರಸ್ತುತಪಡಿಸುವ  15ನೇ  ಸ್ಟ್ಯಾನ್  ನೈಟ್ ಕಾರ್ಯಕ್ರಮವನ್ನು ಫೆಬ್ರವರಿ 5ರಂದು ಆದಿತ್ಯವಾರ ಕುಲಶೇಖರ ಚರ್ಚ್ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಸಂಜೆ ಗಂಟೆ. 6.೦೦ರಿಂದ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಮಂಗಳೂರಿನ ಹೆಸರಾಂತ ಗಾಯಕ-ಗಾಯಕಿರಿಂದ ಸಂಗೀತ ರಸಮಂಜರಿ, ಜೊಪ್ಪಿನ್ ಪಪ್ವಾನರಿಂದ ಸಂಗೀತ , ಮೆಮರಿ ಮಂಗಳೂರು ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ದೀಪಕ್ ಬೆಂದೂರ್‌ವೆಲ್ ಅವರಿಂದ ನೃತ್ಯ . ಒಂದೇ ವೇದಿಕೆಯಲ್ಲಿ ಪ್ರೇಕ್ಷಕರಿಗೆ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಕೊಂಕಣಿ ಭಾಷಿಕರ ಹೆಸರಾಂತ ಕಾರ್ಯನಿರ್ವಾಹಕ ಶ್ರೀಯುತ ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಲಿದ್ದಾರೆ.  ಸರ್ವರಿಗೂ ಉಚಿತ ಪ್ರವೇಶಾವಕಾಶ ಇರುತ್ತದೆ.

ಕೋಲಾರ ಎಸ್.ಎನ್.ಆರ್.ಜಿಲ್ಲಾಸ್ಪತ್ರೆ ಆರವಣದಲ್ಲಿದ್ದ ಹಳೆಯ ಎತ್ತರದ ನೀರಿನ ಟ್ಯಾಂಕನ್ನು ಸುರಕ್ಷಿತವಾಗಿ ಧರೆಗುರುಳಿಸಿ ಧ್ವಂಸಗೊಳಿಸಲಾಯಿತು


ಸುಮಾರು ೩೦ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ೫೦ ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಈ ಟ್ಯಾಂಕ್‌ನ ೫ ಆಧಾರಸ್ಥಂಬಗಳು ಬಹುತೇಕ ಶಿಥಿಲಾವಸ್ಥೆ ತಲುಪಿದ್ದವು. ಜೊತೆಗೆ ಪಕ್ಕದ ಪಾರ್ಕಿಂಗ್ ಜಾಗದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣದ ಕಾಮಗಾರಿಯು ನಡೆಯಲಿದ್ದು, ಈಗಾಗಲೇ ಇದ್ದ ಮರಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ.
ಗುರುವಾರ ಬೆಳಗ್ಗೆ ಟ್ಯಾಂಕ್‌ನ ಸಮೀಪದ ಪಾರ್ಕಿಂಗ್‌ನಲ್ಲಿದ್ದ ವಾಹನಗಳನ್ನು ಹಾಗೂ ಸಾರ್ವಜನಿಕರನ್ನು ಮತ್ತು ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ಜನರನ್ನು ತೆರವುಗೊಳಿಸಿ, ಹಿಟಾಚಿ ಮೂಲಕ ಟ್ಯಾಂಕ್‌ನ ಎರಡು ಆಧಾರ ಕಂಬಗಳನ್ನು ಜಖಂಗೊಳಿಸಿ ನಂತರ ಲೋಹದ ಹಗ್ಗ ಕಟ್ಟಿ ಎಳೆಯುವ ಮೂಲಕ ಟ್ಯಾಂಕನ್ನು ಧರೆಗುರುಳಿಸಲಾಯಿತು. ಈ ಸಂದರ್ಭದಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ.

ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ಸಿನಿಮಾ ವೀಕ್ಷಕರ ಸಂವಾದ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಸಿ.ಎಚ್.ನಾಯಕ್ : ಕಿರು ಚಿತ್ರಗಳು ಹೆಚ್ಚು ಜನಪ್ರಿಯ

ಶ್ರೀನಿವಾಸಪುರ: ಸಾಮಾಜಿಕ ಜಾಲತಾಣದಲ್ಲಿ ಸುಲಭವಾಗಿ ಸಿಗುವ ಕಿರು ಚಿತ್ರಗಳು ಹಾಗೂ ಲಿರಿಕಲ್ ವೀಡಿಯೋಗಳು ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಚಲನಚಿತ್ರ ನಿರ್ದೇಶಕ ಸಿ.ಎಚ್.ನಾಯಕ್ ಹೇಳಿದರು.
ಪಟ್ಟಣದ ಎಸ್‍ವಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ಸಿ.ಎಚ್.ನಾಯಕ್ ಕ್ರಿಯೇಷನ್ಸ್ ವತಿಯಿಂದ ಏರ್ಪಡಿಸಿದ್ದ ಸಿನಿಮಾ ವೀಕ್ಷಕರೊಂದಿಗೆ ಸಂವಾದ ಕಾರ್ಯಕ್ರದಲ್ಲಿ ಮಾತನಾಡಿದರು.
ಈಗ ಕನ್ನಡ ಚಲನ ಚಿತ್ರಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಭಾರತೀಯ ಚಿತ್ರರಂಗ ಚಂದನ ವನದ ಕಡೆ ತಿರುಗಿ ನೋಡುತ್ತಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಇದರಲ್ಲಿ ಪ್ರೇಕ್ಷಕರ ಪಾಲು ದೊಡ್ಡದು. ಅವರ ಬೆಂಬಲವೇ ಚಿತ್ರ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರಿಗೆ ಶಕ್ತಿ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಉತ್ತರ ಭಾಗದ ಗುಡ್ಡಗಾಡು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಅಲ್ಲಿನ ಕಾಡು, ಕಣಿವೆ, ಬೆಟ್ಟ, ಗುಡ್ಡ, ಕೆರೆ, ಕಾಲುವೆಗಳು ಚಿತ್ರೀಕರಣಕ್ಕೆ ಯೋಗ್ಯವಾಗಿವೆ. ಚಿತ್ರೀಕರಣಕ್ಕೆ ಹೊಸ ಸ್ಥಳ ಹುಡುಕುವ ನಿರ್ಮಾಪಕರು ಬಳಸಿಕೊಳ್ಳಬಹುದಾಗಿವೆ. ನಿತ್ಯ ನಿಸರ್ಗ ಸೌಂದರ್ಯದ ನಡುವೆ ಜೀವಿಸುವ ಸ್ಥಳೀಯರು ನಿಜಕ್ಕೂ ಧನ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೀತಿ ಮತ್ತು ಭ್ರಮೆ ನಡುವೆ ಸಾಗುವ ‘ಮತ್ತೆ ಸಿಗುವಳೇನೋ’ ಎಂಬ ಹೆಸರಿನ ಕಿರು ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದಲ್ಲಿ ಈಗಾಗಲೇ ತಮ್ಮ ಗೀತೆಗಳ ಮೂಲಕ ಜನಪ್ರಿಯವಾಗಿರುವ ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರ ಭಾವಗೀತೆಯೊಂದನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.
ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ತೆಲುಗು ಭಾಷೆ ಪ್ರಭಾವ ಹೆಚ್ಚಾಗಿರುವ ಗಡಿ ಪ್ರದೇಶದಲ್ಲಿ, ಜನರು ಕನ್ನಡ ಚಿತ್ರಗಳ ವೀಕ್ಷಣೆಗೆ ಆದ್ಯತೆ ನೀಡಬೇಕು. ಕನ್ನಡ ಭಾಷೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಿರುಚಿತ್ರಗಳ ವೀಕ್ಷಣೆಯಿಂದ, ಇದ್ದಲ್ಲಿಯೇ ಕಡಿಮೆ ಅವಧಿಯಲ್ಲಿ ಪೂರ್ಣ ಚಿತ್ರವೊಂದನ್ನು ವೀಕ್ಷಿಸಿದ ತೃಪ್ತಿ ದೊರೆಯುತ್ತಿದೆ. ಚಿತ್ರದ ಸಂದೇಶ ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಚಿತ್ರ ಪ್ರೇಮಿಗಳೊಂದಿಗೆ ಸಂವಾದ ನಡೆಸಲಾಯಿತು.
ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ, ಸಹಾಯಕ ನಿರ್ದೇಶಕ ರಾಜಶೇಖರ್, ಸಂಕಲನಕಾರ ನಿಶಾಂತ್ ಕುಮಾರ್, ಚಂದನ್ ಇದ್ದರು.