8th day – Novena preceding the Feast of Relic St. Anthony was held at Mangaluru Milagres Church

Mangaluru : Theme for the Day  “Tounge is a help to our mission, it has got different talents”  The Novena Mass for the relic feast of St Anthony was held at Milagres Church at 6:00 p.m. Rev Fr clany Dsouza Rector of Krupa sadhan Minor seminary Bajpe was the main celebrant for mass. In his homily he spoke on the theme by highlighting different examples from the Bible,    Rev Fr. J B Crasta, and  Rev Fr Larry Pinto con-celebrated the mass. At the end of the mass Fr Larry  Conducted the Novena in honour of St Anthony during which special prayers were offered for inmates of St Anthony Ashram. St Anns Frairy choir Group sang and Joined in Thanksgiving

ಗಂಗಾವಳಿ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿರುವ “ಆತಿಥ್ಯರತ್ನ” ಜಗನ್ನಾಥ ಪೈ

ಕನ್ನಡ ಸಾಹಿತ್ಯ, ಸಂಸ್ಕøತಿ ಬಗ್ಗೆ ಅಪಾರ ಅಭಿಮಾನ ಇರುವ “ಆತಿಥ್ಯರತ್ನ” ಪ್ರಶಸ್ತಿ ಪುರಸ್ಕøತ ಹೋಟೆಲ್ ಉದ್ಯಮಿ ಜಗನ್ನಾಥ ಪೈ ಗಂಗೊಳ್ಳಿಯಲ್ಲಿ ಫೆ.19 ರಂದು ರವಿವಾರ ನಡೆಯಲಿರುವ “ಗಂಗಾವಳಿ” ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿದ್ದ ಶ್ರೀಯುತ ಜಗನ್ನಾಥ್ ವಿ. ಪೈಯವರು 27ನೇ ಅಕ್ಟೋಬರ್ 1947ರಂದು ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿ ದಿ. ವಾಮನ ಪೈ ಹಾಗೂ ಆನಂದಿ ಪೈ ದಂಪತಿಗಳ 4ನೇ ಸುಪುತ್ರರಾಗಿ ಜನಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಗಂಗೊಳ್ಳಿಯ ಎಸ್. ವಿ. ಹೈಸ್ಕೂಲಿನಲ್ಲಿ ಮುಗಿಸಿದರು.
ಹೋಟೆಲ್ ಉದ್ಯಮದಲ್ಲಿ ಕೆಲವು ವರ್ಷ ಅನುಭವ ಪಡೆದು 1973ರಲ್ಲಿ ತಮ್ಮದೇ ಸ್ವಂತ ಹೋಟೆಲನ್ನು ಬೆಂಗಳೂರಿನ ಗಾಂಧಿ ಬಜಾರಿನಲ್ಲಿ “ಸನ್ಮಾನ್ ಕೆಫೆ” ಎಂಬ ಹೆಸರಿನಲ್ಲಿ ಪ್ರಾರಂಭಿಸಿದರು. ರುಚಿಕರವಾದ ತಿಂಡಿ ತಿನಿಸುಗಳನ್ನು ಶುಚಿಯಾದ ವಾತಾವರಣದಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಒದಗಿಸಿ ಸನ್ಮಾನ್ ಕೆಫೆಯನ್ನು ಬಹು ಬೇಗ ಯಶಸ್ವಿ ಹೋಟೆಲಾಗಿ ಬೆಳೆಸಿದರು. 1973 ರಿಂದ ಇಂದಿನವರೆಗೆ ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಹೊಸ ಹೋಟೆಲುಗಳನ್ನು ಪ್ರಾರಂಭಿಸಿ ಪೈ ಹೋಟೆಲ್ ಸಮೂಹವನ್ನು ಯಶಸ್ವಿಯಾಗಿ ಬೆಳೆಸಿಕೊಂಡು ಬಂದ ಕೀರ್ತಿ ಶ್ರೀಯುತ ಜಗನ್ನಾಥ್ ವಿ. ಪೈಯವರಿಗೆ ಸಲ್ಲುತ್ತದೆ. ಇಂದು ಪೈ ಹೋಟೆಲ್ ಸಮೂಹ 10 ಶಾಖೆಗಳನ್ನು ಹೊಂದಿ ಒಂದು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ಬೆಂಗಳೂರಿನಲ್ಲಿ 7 ಶಾಖೆಗಳ ಜೊತೆಗೆ ಮೈಸೂರು, ಹುಬ್ಬಳ್ಳಿ ಹಾಗೂ ಆಂಧ್ರಪ್ರದೇಶದ ತಿರುಪತಿಗಳಲ್ಲಿ ಶಾಖೆಗಳನ್ನು ಹೊಂದಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಸಂಸ್ಥೆಯ 11 ಶಾಖೆಯನ್ನು ತಮ್ಮ ಸ್ವಂತ ಜಮೀನಲ್ಲಿ ಪ್ರಾರಂಭಿಸುವ ದಿಸೆಯಲ್ಲಿ ಈಗ ಶ್ರೀಯುತ ಜಗನ್ನಾಥ್ ವಿ. ಪೈಯವರು ಕಾರ್ಯಪ್ರವೃತ್ತರಾಗಿದ್ದಾರೆ.
ಇಂದು ಒಂದು ಹೆಮ್ಮರವಾಗಿ ಬೆಳೆದು ನಿಂತಿರುವ ಪೈ ಹೋಟೆಲ್ ಸಮೂಹ ಸುಮಾರು 2000 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ. ಪೈ ಹೋಟೆಲ್ ಸಮೂಹದ ಏಳಿಗೆಯಲ್ಲಿ ಸಿಬ್ಬಂದಿಗಳ ಪಾಲು ಮಹತ್ವದ್ದಾಗಿದೆ. ಎಲ್ಲಾ ಕಾರ್ಮಿಕರೊಂದಿಗೆ ಪೈ ಹೋಟೆಲ್ ಸಮೂಹ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿದೆ. ಹೊರ ಊರುಗಳಿಂದ ಬಂದ ಸಿಬ್ಬಂದಿಗಳಿಗೆ ಉಳಿದುಕೊಳ್ಳುವ ವಸತಿ ಸೌಲಭ್ಯದ ವ್ಯವಸ್ಥೆಯನ್ನು ಮಾಡಿಕೊಟ್ಟಿರುವುದು ಪೈ ಹೋಟೆಲ್ ಸಮೂಹದ ಒಂದು ಹೆಗ್ಗಳಿಕೆ. 25-30 ವರ್ಷಗಳಿಂದ ಸತತವಾಗಿ ಜೊತೆಗಿರುವ ಸುಮಾರು 10 ಸಿಬ್ಬಂದಿಗಳಿಗೆ ಕುಟುಂಬ ಸಮೇತವಾಗಿರಲು ಉಚಿತ ವಸತಿ ಸೌಲಭ್ಯ ಒದಗಿಸಿ ಕೊಟ್ಟಿದೆ.
ಸಮಾಜ ಸೇವೆಯಲ್ಲಿ ಪೈ ಹೋಟೆಲ್ ಸಮೂಹದ ರೂವಾರಿಯಾಗಿರುವ ಶ್ರೀಯುತ ಜಗನ್ನಾಥ್ ವಿ. ಪೈಯವರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿರುತ್ತಾರೆ. ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವುದರಲ್ಲಿ ಶ್ರೀಯುತ ಜಗನ್ನಾಥ್ ವಿ. ಪೈಉವರು ಎತ್ತಿದ ಕೈ. ತಾವು ಓದಿದ ಗಂಗೊಳ್ಳಿಯ ಶಾಲೆಯ ಹೊಸ ಕಟ್ಟಡ ಪ್ರಾರಂಭಿಸಲು ಕೊಡುಗೈಯಿಂದ ದೇಣಿಗೆ ಕೊಡುವುದರ ಜೊತೆಗೆ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತಾರೆ. ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರತಿವರ್ಷ ಧನ ಸಹಾಯ ಮಾಡುತ್ತಿದ್ದಾರೆ. ತಮ್ಮ ಧರ್ಮಪತ್ನಿ ಶ್ರೀಮತಿ ಶಾಂತ ಪೈಯವರು ಓದಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕಾಲೇಜಿನ ಹೊಸ ಕಟ್ಟಡಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮ ಕೈಲಾದ ಧನಸಹಾಯ ಮಾಡಿರುತ್ತಾರೆ. ಹಲವಾರು ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಉಚಿತವಾಗಿ ಸಭಾಂಗಣವನ್ನು ಒದಗಿಸಿ ಕೊಟ್ಟಿರುತ್ತಾರೆ. ಕನ್ನಡ ಸಾಹಿತ್ಯದ ಅಭಿವೃದ್ಧಿಗಾಗಿ ಯುವ ಬರಹಗಾರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಶ್ರೀಯುತ ಜಗನ್ನಾಥ್ ವಿ. ಪೈಯವರಿಗೆ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ.
1) 2001ರಲ್ಲಿ ಕರ್ನಾಟಕ ಹೋಟೆಲ್ ಅಸೋಸಿಯೇಶನ್‍ರವರ “ಆತಿಥ್ಯ ರತ್ನ” ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
2) 2012, 2013, 2014 ಸತತವಾಗಿ ಮೂರು ವರ್ಷ ಶ್ರೀಯುತರಿಗೆ ಬೆಂಗಳೂರಿನ ಅಭಿನಂದನಾ ಸಾಂಸ್ಕøತಿಕ ಟ್ರಸ್ಟ್‍ನವರು “ಪ್ರತಿಷ್ಠಿತ ವ್ಯಕ್ತಿ” ಎಂಬ ಬಿರುದನ್ನು ಕೊಟ್ಟು ಅಭಿನಂದಿಸಿದ್ದಾರೆ.
3) 2013ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಪ್ರತಿಷ್ಠಿತ “ಕೆಂಪೇಗೌಡ ಪ್ರಶಸ್ತಿ” ಇವರಿಗೆ ಲಭ್ಯವಾಗಿದೆ.
4) 2014ರಲ್ಲಿ ಬೆಂಗಳೂರು ಜಿ.ಎಸ್.ಬಿ. ಸಮಾಜದಿಂದ “ಅತ್ಯುತ್ತಮ ಬಿಜಿನೆಸ್ ಮ್ಯಾನ್” ಎಂಬ ಬಿರುದು ದೊರಕಿದೆ.
ಹೀಗೆ ಅವರ ಸಮಾಜ ಸೇವೆಯನ್ನು ಗುರುತಿಸಿ ಹತ್ತು ಹಲವಾರು ಪ್ರಶಸ್ತಿಗಳು ಶ್ರೀಯುತ ಜಗನ್ನಾಥ್ ವಿ. ಪೈಯವರಿಗೆ ಲಭಿಸಿವೆ.
ಸದಾ ಹಸನ್ಮುಖಿಯಾಗಿರುವ ಶ್ರೀ ಜಗನ್ನಾಥ್ ವಿ. ಪೈ ರವರು 75ನೇ ಹರೆಯದಲ್ಲೂ ಉತ್ಸಾಹದ ಚಿಲುಮೆಯಾಗಿದ್ದಾರೆ. ಸಮಾಜಕ್ಕೆ ತನ್ನ ಕೈಲಾದ ಸಹಾಯವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಬೇಕೆನ್ನುವುದೇ ಅವರ ಹೆಬ್ಬಯಕೆ.
ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು. ಕುಂದ ಕನ್ನಡ ಭಾಷೆ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಡಬೇಕು. ಕುಂದಾಪ್ರ ಕನ್ನಡದ ಸಂಸ್ಕøತಿ ಉಳಿಯಬೇಕು ಎನ್ನುವ ಆಶಯವನ್ನು ಹೊಂದಿರುವ ಸಾಹಿತ್ಯಾಭಿಮಾನಿ ಜಗನ್ನಾಥ ಪೈ ಯವರು ಅವರು ಕಲಿತ ಶಾಲೆಯ ವಠಾರದಲ್ಲಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ತಾಲೂಕು ಸಮ್ಮೇಳನ ಉದ್ಘಾಟನೆಗೆ ಆಗಮಿಸುತ್ತಿರುವುದು ವಿಶೇಷವಾಗಿದೆ.

ಮಂಗಳೂರು ಮಿಲಾಗ್ರಿಸ್: ಫೆಬ್ರವರಿ 15, ಸಂ. 6.00 ಘಂಟೆಗೆ, ನಡೆಯಲಿರುವ ಸಂತ ಆಂತೊನಿಯ ಸ್ಮರಣಿಕಾ ಹಬ್ಬಕ್ಕೆ ಅಹ್ವಾನ -ಫಾ. ಜೆ. ಬಿ. ಕ್ರಾಸ್ತ

ಮಂಗಳೂರು: ನಾಳೆ, ಫೆಬ್ರವರಿ 15 ರಂದು ಸಾಯಂಕಾಲ 6.00 ಘಂಟೆಗೆ, ಸಂತ ಆಂತೊನಿಯ ಸ್ಮರಣಿಕೆ ಹಬ್ಬದ ಮಹಾಪೂಜೆಯು ಮಿಲಾಗ್ರಿಸ್ ತೆರೆದ ಮೈದಾನಿನಲ್ಲಿ, ಅತೀ ವಂದನೀಯ ಎಲೊಶಿಯಸ್ ಪೌಲ್ ಡಿ’ಸೋಜ, ಮಂಗಳೂರು ಧರ್ಮಪ್ರಾಂತ್ಯದ, ನಿವೃತ್ತ ಧರ್ಮ ಅಧ್ಯಕ್ಷರು ನಡೆಸಿಕೊಡಲಿರುವರು. ಅಂದು ಘಂಟೆ 7.00 ಕ್ಕೆ ಇತ್ತೀಚಿಗೆ ಟರ್ಕಿ ಮತು ಸಿರಿಯಾ ದೇಶದಲ್ಲಿ ನಡೆದ ಭೀಕರ ಭೂಕಂಪಕ್ಕೆ ಸಿಲುಕಿ, ಮೃತಪಟ್ಟªರ ಆತ್ಮಕ್ಕೆ ಶಾಂತಿ ಕೋರಿ, ನಿರಾಶ್ರಿತರಾದ ಜನರಿಗೆ ನಮ್ಮ ಸಾಂತ್ವಾನದೊಂದಿಗೆ ಅನುಕಂಪ ತೋರಿಸಲು ಬೊಂಬತ್ತಿ ಬೆಳಗಿಸಿ ವಿಶೇಷ ಪ್ರಾರ್ಥನಾ ವಿಧಿಯನ್ನು ಅತೀ ವಂದನೀಯ ಎಲೋಶಿಯಸ್ ಪೌಲ್ ಡಿ’ಸೋಜರವರು ನಡೆಸಿಕೊಡುವರು ಎಂದು ಸಂತ ಆಂತೊನಿ ಆಶ್ರಮದ ನಿರ್ದೇಶರು ವಂ. ಜೆ. ಬಿ. ಕ್ರಾಸ್ತರವರು ತಿಳಿಸಿರುತ್ತಾರೆ
ವಂದನೆಗಳು: ಫಾ. ಜೆ. ಬಿ. ಕ್ರಾಸ್ತ, ನಿರ್ದೇಶಕರು

ಕೊಡಗು ಜಿಲ್ಲೆಯಲ್ಲಿ ಮೊಮ್ಮಗ ಅಜ್ಜನನ್ನು ಬಲಿ ಪಡೆದಿದ್ದ ನರಭಕ್ಷಕ ವ್ಯಾಘ್ರನ ಸೆರೆ

ಕೊಡಗು : ಫೆ.14: ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ವ್ಯಾಘ್ರನನ್ನು  ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ ಪೊನ್ನಂಪೇಟೆ ನಾಣಚ್ಚೆಗೇಟ್‌ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಾಹಸದಿಂದ ಸೆರೆ ಹಿಡಿದಿದ್ದಾರೆ.

    ದಸರಾ ಅನೆ ಅಭಿಮನ್ಯು ನೇತೃತ್ವದಲ್ಲಿ ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನರಭಕ್ಷಕ ವ್ಯಾಘ್ರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅಲ್ಲಿನ ಜನ ಈಗ ನಿಟ್ಟುಸಿರು ಬಿಡುವಂತೆ ಆಗಿದೆ.

    ನರಭಕ್ಷಕ ವ್ಯಾಘ್ರ ಮೊದಲು ಜಾನುವಾರುಗಳನ್ನು ಭೇಟೆಯಾಡಿ ಕೊಲ್ಲುತಿತ್ತು, ಇದೀಗ ಜನರ ಮೇಲೆ ಆಕ್ರಮಣ ಮಾಡತೊಡಗಿದ್ದು, ೧೮ ಗಂಟೆಗಳ ಅಂತರದಲ್ಲಿ ಮೊಮ್ಮೊಗ ಮತ್ತು ಅಜ್ಜನನ್ನು ಕೊಂದು ಹಾಕಿತ್ತು. ಮಗನ ಶವವನ್ನು ಹುಡಕಲು ಹೋದ ತಂದೆಯ ಮೇಲೆ ಕೂಡ ಆಕ್ರಮಣ ಮಾಡಿದ್ದು. ನರಭಕ್ಷಕ ವ್ಯಾಘ್ರನಿಂದ ಹತರಾದ ಕುಟುಂಬಕ್ಕೆ ತುಂಬಲಾರದ ನಶ್ಟವಾಗಿದೆ.

ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯ ಪಾಲನೆ ಇಂದಿನ ಅಗತ್ಯವಾಗಿದೆ : ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್

ಶ್ರೀನಿವಾಸಪುರ: ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ದಲಿತ ಮುಖಂಡರ ಸಭೆಯಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಶಕ್ತಿ ಹಾಗೂ ಜ್ಞಾನ ಸರ್ವಕಾಲಿಕ ಮಾದರಿಯಾಗಿದೆ ಎಂದು ಹೇಳಿದರು.
ದಲಿತ ಸಮುದಾಯ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕು. ಅದಕ್ಕೆ ಬಾಬಾಸಾಹೇಬರಿಂದ ಪ್ರೇರಣೆ ಪಡೆದುಕೊಳ್ಳಬೇಕು. ಅದಕ್ಕೆ ಅವರ ಬದುಕು ತಿಳಿಯಬೇಕು. ಭಾವ ಅರಿಯಬೇಕು. ಆಶಯ ನಿಜಗೊಳಿಸಬೇಕು ಎಂದು ಹೇಳಿದರು.
ಫೆ.19 ರಂದು ಮಾಲೂರಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಬರಹಗಳು, ಭಾಷಣಗಳು ಹಾಗೂ ಅನುಭವಗಳ ಧ್ವನಿಸುರಳಿ ಬಿಡುಗಡೆ ಮಾಡಲಾಗುವುದು. ಆ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅದರಲ್ಲೂ ಯುವ ಸಮುದಾಯ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಶಾಮ್ ಆಡಿಯೋಸ್ ಸಂಸ್ಥಾಪಕ ಸಿದ್ಧಾರ್ಥ ಆನಂದ್ ಮಾತನಾಡಿ, ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಉದ್ದೇಶದಿಂದ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವಿಷಯಗಳ ಕುರಿತು ಆಡಿಯೋ ಮಾಡಲಾಗಿದೆ. ಅದು ಹೆಮ್ಮೆಯ ಸಂಗತಿಯಾಗಿದೆ. ಬಾಬಾಸಾಹೆಬರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ರಚಿಸಿದ ಮಾದರಿ ಸಂವಿಧಾನ ದೇಶದ ಜನರ ಆಶಾಕಿರಣವಾಗಿದೆ. ಜನರು ಕಾರ್ಯಕ್ರಮ ಯಶಸ್ಸಿಗೊಳಿಸಬೇಕು ಎಂದು ಹೇಳಿದರು.
ಮುಖಂಡರಾದ ಎನ್.ತಿಮ್ಮಯ್ಯ, ಈರಪ್ಪ, ರಾಮಮೂರ್ತಿ, ಸದಾಶಿವ, ನರಸಿಂಹಮೂರ್ತಿ, ನಿರಂಜನ್, ನರಸಿಂಹ, ಎಂ.ವೆಂಕಟೇಶ್, ಎನ್.ರಾಮಕೃಷ್ಣಪ್ಪ, ಶಿವಕುಮಾರ್, ವೇಣು, ಅಪ್ಪಲ್ಲ ಇದ್ದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 1 ಲಕ್ಷ, ರೈತರಿಗೆ 5 ಲಕ್ಷ ಶೂನ್ಯ ಬಡ್ಡಿ ಸಾಲ ಸೌಲಭ್ಯ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಸಿದ್ದರಾಮಯ್ಯ ಘೋಷಣೆ

ಕೋಲಾರ:ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 1 ಲಕ್ಷದವರೆಗೂ, ರೈತರಿಗೆ 5 ಲಕ್ಷದವರೆಗೂ ಶೂನ್ಯ ಬಡ್ಡಿ ಸಾಲ ಸೌಲಭ್ಯ, ಸಾಲದ ಕಂದು ಸಮರ್ಪಕವಾಗಿ ಪಾವತಿಸುವ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ತಾಲ್ಲೂಕಿನ ವೇಮಗಲ್ ಕ್ರೀಡಾಂಗಣದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಶಕ್ತಿಪ್ರದರ್ಶನವೆಂಬಂತೆ ಆಯೋಜಿಸಿದ್ದ ರೈತ ಮಹಿಳೆಯರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿ. ‘ಹಿಂದೆ ಮುಚ್ಚಿಹೋಗಿದ್ದ ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕಾಗಿ ಮಹಿಳೆಯರಿಗೆ ಬಡ್ಡಿರಹಿತ 50 ಸಾವಿರ ಸಾಲ ನೀಡಿದ್ದೇನೆ, ಮುಂದಿನ ದಿನಗಳಲ್ಲಿ 10 ಲಕ್ಷದವರೆಗೂ ನೀಡುತ್ತಿದ್ದ ಶೇ.3 ಬಡ್ಡಿ ಸಾಲವನ್ನು 20 ಲಕ್ಷಕ್ಕೇ ಏರಿಸುವುದಾಗಿ ಘೋಷಿಸಿದರು.


ಕೋಲಾರದಲ್ಲಿ ರೈತರಿಗೆ ಅನುಕೂಲವಾಗುವಂತೆ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಜಮೀನು ಮಂಜೂರು, ಟೊಮೇಟೊ, ಮಾವು ಸಂಸ್ಕರಣಾ ಘಟಕ ಮಾಡಿಕೊಡ್ತೇವೆ. ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ಮಸೂದೆ ವಾಪಸ್ ಪಡೆಯುತ್ತೇವೆ ಎಂದರು.
ಹಾಲಿನ ಪ್ರೋತ್ಸಾಹ ಧನ 5 ರೂ ಇದ್ದು 6 ರೂ ನೀಡಲಾಗುವುದು ಎಂದ ಅವರು, ಕೆ.ಎಚ್.ಮುನಿಯಪ್ಪ ಮನವಿಯಂತೆ 3ನೇ ಹಂತದ ಶುದ್ಧೀಕರಣ ಮಾಡಿ ಕೆಸಿ ವ್ಯಾಲಿ ನೀರು ಹರಿಸಲು ಕ್ರಮವಹಿಸುವುದಾಗಿ ತಿಳಿಸಿದ ಅವರು, ಎತ್ತಿನಹೊಳೆ ಯೋಜನೆ ನಾವು ಆರಂಭಿಸಿದ್ದೆವು ಈಗಿನ ಸರಕಾರ ನಿಲ್ಲಿಸಿದೆ ನಾವು ಬಂದರೆ ಮತ್ತೆ ಚಾಲನೆ ನೀಡಿ 2 ವರ್ಷಗಳಲ್ಲಿ ಪೂರ್ಣಗೊಳಿಸಿ ಶುದ್ಧ ಕುಡಿಯುವ ನೀರು ನೀಡುತ್ತೇವೆ ಎಂದರು.
ಕೆಸಿವ್ಯಾಲಿಗೆ 1400 ಕೋಟಿ ರೂ ನೀಡಿ ಜಾರಿಗೆ ಮಾಡಿದ್ದೆವು ಆಗ ಬಿಜೆಪಿಯವರು, ಜೆಡಿಎಸ್ ನವರು ಜಾರಿ ಬದಲು ವಿರೋಧ ಮಾಡಿದ್ದರು ಎಂದು ಟೀಕಿಸಿದ ಅವರು, 200 ಯುನಿಟ್, 2 ಸಾವಿರರೂ ಜೀವನ ನಿರ್ವಹಣೆಗೆ ನೀಡ್ತೇವೆ. 7 ಕೆಜಿ ಅಕ್ಕಿ 5 ಕೆಜಿ ಆಗಿದೆ 10 ಕೆಜಿ ಕೊಡ್ತೇವೆ ಎಂದರು.
ಯಡಿಯೂರಪ್ಪ ಅವರನ್ನು ಕೇಳಿದರೆ ಹಣ ಇಲ್ಲ ಅಕ್ಕಿ ಕೊಡೋಕೆ ಅಂತಾರೆ. ಲೂಟಿ ಮಾಡಿಲ್ವಾ ಆ ಹಣ ಖರ್ಚು ಮಾಡಿ ಅಂತ ಹೇಳಿದ್ದೇನೆ. ನಾವು ಅಧಿಕಾರದಲ್ಲಿದ್ದಾಗ ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ಮೊಸಳೆ ಕಣ್ಣೀರು ಹಾಕಿ ದ್ವೇಷ ಹುಟ್ಟು ಹಾಕ್ತಾರೆ. ಹಿಂದೂ ಮುಸ್ಲಿಂ ಮೇಲೆ. ಮಾತು ಮಾತ್ರ ಸಬ್ ಕಾ ಸಾತ್ ಅಂತಾರೆ. ದಲಿತರು, ಹಿಂದುಳಿದವರು, ಬಡವರು ಅಲ್ಪಸಂಖ್ಯಾತರು ಅದರ ಒಳಗೆ ಬರಲ್ವಾ. ಮುಂದಿನ ಚುನಾವಣೆಯಲ್ಲಿ ಕೋಲಾರ ಕ್ಷೇತ್ರ ಅಲ್ಲದೆ ಜಿಲ್ಲೆಯ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಗೋವಿಂದಗೌಡರ ಆಹ್ವಾನದಂತೆ ಬಂದೆ


ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರು ಕೆಲವು ದಿನಗಳ ಹಿಂದೆ ಬಂದು, ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶಕ್ಕೆ ಆಹ್ವಾನಿಸಿದ್ದರು. ಯಾವುದೇ ಸಮಾಜ ಪುರುಷರು, ಮಹಿಳೆಯರ ನಡುವೆ ಸಮಾನತೆ ಇಲ್ಲದಿದ್ದರೆ ಶೋಷಣೆ ಆಗುತ್ತದೆ. ಈ ರೀತಿಯಲ್ಲಿ ಮಹಿಳೆಯರು ಸೇರಲು, ಸಮಾವೇಶ ಯಶಸ್ವಿಯಾಗಲು ಗೋವಿಂದಗೌಡರೇ ಕಾರಣ ಎಂದು ಧನ್ಯವಾದ ಸಲ್ಲಿಸಿದರು.
ಮಹಿಳೆಯರಿಗೆ ಶಕ್ತಿ ನೀಡಿದರೆ ದೇಶದ ಸಮಗ್ರ ಅಭಿವೃದ್ಧಿ ಆಗುತ್ತದೆ. ಈಗಾಗಲೇ ಅಗತ್ಯವಸ್ತುಗಳು, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಹೆಚ್ಚಿನ ತೆರಿಗೆ ವಿಧಿಸುವ ಪ್ರಮೇಯವನ್ನು ಬಿಜೆಪಿ ಸರಕಾರ ಚಿತೆರಿಗೆ ಕಡಿಮೆಮಾಡಬೇಕು, ಮೋದಿ ಬಂದ ಮೇಲೆ ಅಂಬಾನಿ, ಅದಾನಿಯಂತಹ ಕುಳಗಳು, ಉದ್ಯಮಿಗಳು, ಬಂಡವಾಳ ಶಾಹಿಗಳ 14 ಲಕ್ಷಕೋಟಿ ಸಾಲ ಮನ್ನಾ. ಬಡವರು, ಮಹಿಳೆಯರದ್ದು 1 ರೂಪಾಯಿ ಸಾಲಮನ್ನಾ ಮಾಡಿಲ್ಲ ಎಂದರು.
ಸಾಲ ಮನ್ನಾ ನರೇಂದ್ರ ಮೋದಿ, ಬಿಎಸ್ ವೈ, ಬೊಮ್ಮಾಯಿ ಮಾಡಲಿಲ್ಲ. ಮನಮೋಹನ್ ಸಿಂಗ್ 72 ಸಾವಿರ ಕೋಟಿ ಮನ್ನಾ ಮಾಡಿದ್ದರು. ಇತ್ತೀಚೆಗೆ ತೇಜಸ್ವಿ ಸೂರ್ಯ ಹೇಳಿದ್ದಾನೆ ರೈರ ಸಾಲ ಮನ್ನಾದಿಂದ ಏನೂ ಪ್ರಯೋಜನವಾಗಲ್ಲವೆಂದು. ಸಂಸದಾನಗಿರುವ ನೀನು ಬಡವರ ಮೇಲೆ ಯಾಕೆ ಕೆಟ್ಟು ಕಣ್ಣು ಇಟ್ಟುಕೊಂಡಿದ್ದೀಯ. ಬಡವರು, ರೈತರು, ಮಹಿಳೆಯರ ವಿರೋಧಿ ಧೋರಣೆ ಬಿಡಬೇಕಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಭಿವೃದ್ಧಿ ಶೂನ್ಯವಾಗಿದ್ದು ಜನರು ಕಾಂಗ್ರೆಸ್ ಬೆಂಬಲಿಸಲು ತೀರ್ಮಾನಿಸಿದ್ದಾರೆ. ಜನರ ಆಶೀರ್ವಾದ ಪಡೆದು ಸರಕಾರ ರಚಿಸಿದ ಬಳಿಕ 10 ಲಕ್ಷರೂ ಬಡ್ಡಿ ರಹಿತ ಸಾಲದ ಘೋಷಣೆ ಮಾಡಬೇಕು. ಎಲ್ಲಾ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಘೋಷಣೆ ಮಾಡಬೇಕು. ನಾವೆಲ್ಲರೂ ಈಗಾಗಲೇ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇವೆ. ಎಲ್ಲರೂ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ವೈಫಲ್ಯಗಳ ವಿರುದ್ಧ ಆಕ್ರೋಶ ಜೋರಾಗಿದೆ ಎಂದರು.
ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, 6.42ಲಕ್ಷ ಮಹಿಳೆಯರಿಗೆ ಅವಿಭಜಿತ ಜಿಲ್ಲೆಗಳಲ್ಲಿ ಬಡ್ಡಿ ರಹಿತ ಸಾಲ ನೀಡಲಾಗಿದೆ. ಕೋಲಾರ ಡಿಸಿಸಿ ಬ್ಯಾಂಕ್ 7-8 ವರ್ಷಗಳ ಹಿಂದೆ ಮುಚ್ಚಿ ಹೋಗಿತ್ತು ಅಂತಹ ಸಮಯದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಸಮಸ್ಯೆ ವಿವರಿಸಿ, ಬ್ಯಾಂಕ್ ಮುಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಯಾರಿಗೂ ಸಾಲ ಸಿಗುತ್ತಿಲ್ಲ ಎಂದು ಹೇಳಿದ್ದೆವು.
ಕೂಡಲೇ ಆದೇಶ ಮಾಡಿ ಪುನಶ್ಚೇತನಕ್ಕೆ ಸೂಚಿಸಿದ್ದರು. ಇದೀಗ ಸಾಲ ಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ಸಿದ್ದರಾಮಯ್ಯ. ಮನೆಯಲ್ಲಿ ಪ್ರತಿಯೊಂದು ಕೆಲಸ ಮಹಿಳೆಯರು ಮಾಡ್ತಾರೆ. ಹೈನೋದ್ಯಮದಲ್ಲಿ ಪ್ರಮುಖ ಪಾತ್ರ. ಆದರೆ ಬಟವಾಡೆಗೆ ಹೋಗೋದು ಮಾತ್ರ ಪುರುಷರು. ಮಹಿಳೆಯರಿಂದಲೇ ಸಂಸಾರ ನಡೆಯಿತ್ತಿದೆ. ರೈತರಂತೆಯೇ ಮಹಿಳೆಯರಿಗೂ ಬಡ್ಡಿರಹಿತ ಸಾಲ ನೀಡಿದ ವ್ಯಕ್ತಿ ಸಿದ್ದರಾಮಯ್ಯ. ಜಿಲ್ಲೆಗೆ ಸಂಬಂಧಿಸಿದ 360 ಕೋಟಿರೂ ರೈತರ ಸಾಲಮನ್ನಾ ಆಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಕಾಲು ಮೇಲೆ ತಾವು ನಿಂತು ಜೀವನ ನಡೆಸಲು ಅವರೇ ಕಾರಣ.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕೆಸಿವ್ಯಾಲಿ ನೀರು ಕೊಟ್ಟ ಮಹಾನುಭಾವರು. ಯಾವ ಕೆರೆ ನೋಡಿದರೂ ನೀರು ಹರಿಯುತ್ತಿದೆ. ಸಿದ್ದರಾಮಯ್ಯ ಹೊಸದಾಗಿ ಶಾಸಕ, ಸಚಿವರಾವರಲ್ಲ. ಅನೇಕಬಾರಿ ಗೆದ್ದಿದ್ದಾರೆ. ಮುಖ್ಯಮಂತ್ರಿಯೂ ಆಗಿದ್ದಾರೆ. ಮೊದಲ ಮುಖ್ಯಮಂತ್ರಿ ನೀಡಿದ ಜಿಲ್ಲೆಯಿಂದ ಸಿದ್ದರಾಮಯ್ಯರನ್ನು ಗೆಲ್ಲಿಸಿ ಎರಡನೇ ಮುಖ್ಯಮಂತ್ರಿ ನೀಡಬೇಕೆಂದು ಕೋರಿದರು.
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಡಿಸಿಸಿ ಬ್ಯಾಂಕ್ ಎರಡೂ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ಬಡ್ಡಿ ಇಲ್ಲದೆ ಸಾಲ ನೀಡುವುದು ಸುಲಭದ ಕೆಲಸವಲ್ಲ, ಸರಕಾರ ಬಡ್ಡಿ ನೀಡುತ್ತದೆ. ಜಾಮೀನು, ಆಧಾರ ಇಲ್ಲದೆ ಸಾಲಕೊಡುವ ವ್ಯವಸ್ಥೆಯನ್ನು ಯುಪಿಎ ಸರಕಾರ ಮಾಡಿಕೊಟ್ಟಿತ್ತು ಎಂದರು.
ಕೆಸಿವ್ಯಾಲಿ, ಎತ್ತಿನಹೊಳೆ ಸೇರಿದಂತೆ ಅನೇಕ ಯೋಜನೆಗಳ ರೂವಾರಿ ಸಿದ್ದರಾಮಯ್ಯ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಕೊಂಡರೆ ಸಾಕಷ್ಟು ಅನುಕೂಲವಿದೆ ಎಂದರು.

ಬಿಕೆಎಸ್ ಟ್ರಸ್ಟ್‍ಗೆ ಸಿದ್ದರಾಮಯ್ಯ ಭೇಟಿ


ಸಮಾವೇಶಕ್ಕೂ ಮುನ್ನಾ ಮೊದಲು ಸಿದ್ದರಾಮಯ್ಯ ತಾಲ್ಲೂಕಿನ ಬೆಳ್ಳೂರಿನಲ್ಲಿರುವ ವಿಶ್ವವಿಖ್ಯಾತ ಪದ್ಮವಿಭೂಷಣ ಯೋಗಗುರು ಬಿಕೆಎಸ್ ಅಯ್ಯಂಗಾರ್ ಅವರ ಸಂಸ್ಥೆಗೆ ಭೇಟಿ ನೀಡಿ, ಅಲ್ಲಿ ಬಿಕೆಎಸ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ನಂತರ ವೇಮಗಲ್‍ನಲ್ಲಿ ರೇಣುಕಾ ಯಲ್ಲಮ್ಮ, ಧರ್ಮರಾಯಸ್ವಾಮಿ ದೇವಾಲಯಗಳು, ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಸಭೆಯಲ್ಲಿ ಶಾಸಕರಾದಕೆ.ಆರ್.ರಮೇಶ್ ಕುಮಾರ್, ಕೆ.ವೈ.ನಂಜೇಗೌಡ, ಎಂಎಲ್ಸಿಗಳಾದ ನಜೀರ್ ಅಹಮದ್, ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಚಿವರಾದ ಎಂ.ಆರ್.ಸೀತಾರಾಂ, ಎಚ್.ಎಂ.ರೇವಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಮಂಗಳೂರು:ಮಿಲ್ಲಾಗ್ರಿಸ್ ಚರ್ಚಿನಲ್ಲಿ ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ಎಂಟನೆಯ ದಿನದ ನೊವೆನಾ

ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ಇಂದು , ಎಂಟನೆಯ ದಿನದ  ನೊವೆನಾ     ಪ್ರಾರ್ಥನೆಯು ಮಿಲ್ಲಾಗ್ರಿಸ್ ಚರ್ಚಿನಲ್ಲಿ ನೆರವೇರಿತು ಬಜ್ಪೆ ಕೃಪಾಸಾಧನ್ ಮೈನರ್ ಸೆಮಿನರಿಯ ರೆಕ್ಟರ್ ವಂದನೀಯ  ಕ್ಲಾನಿ ಡಿಸೋಜಾ  ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಅವರು ದಿನದ  ವಿಷಯವಾದ  ನಾಲಿಗೆ ಸುವಾರ್ತೆ ಪ್ರಸಾರಕ್ಕೆ ಆಧಾರ , ಅದಕ್ಕೆ ನೀಡಿದ್ದಾರೆ ವರಗಳು ಅಪಾರ ಎಂಬ ವಿಷಯದ ಮೇಲೆ   ಪ್ರವಚನ ವಿತ್ತರು. ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ಲ್ಯಾರಿ ಪಿಂಟೊ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡರು. ಎಂಟನೆಯ ದಿನದ ನೊವೆನಾ ಪ್ರಾರ್ಥನೆಯಲ್ಲಿ , ಸಂತ ಅಂತೋನಿ ಆಶ್ರಮದ ನಿವಾಸಿಗಳಿಗೋಸ್ಕರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕುಂದಾಪುರ ಸರಕಾರಿ ತಾಯಿ ಮಕ್ಕಳ ಆಸ್ಪತ್ರೆಗೆ “ಲಕ್ಷ್ಯ್” ಪ್ರಶಸ್ತಿ – ಇಲ್ಲಿನ ಸೇವೆ ಗಮನಾರ್ಹವಾಗಿದ್ದರಿಂದ ಪ್ರಶಸ್ತಿ ಲಭ್ಯ: ಡಾ.ರಾಬರ್ಟ್‌ ರೆಬೆಲ್ಲೋ, ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರು

ಕುಂದಾಪುರ, ಫೆ.14: ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‌ ಎಚ್‌ಎಂ) ಅಭಿಯಾನದಡಿಯಲ್ಲಿ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯ ಮೂಲ ಸೌಕರ್ಯ ಬಲವರ್ಧನೆ ನಿಟ್ಟಿನಲ್ಲಿ ಹಮ್ಮಿ ಕೊಳ್ಳಲಾದ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದ್ದರಿಂದ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆ ವಿಭಾಗಕ್ಕೆ 2022-23ನೇ ಸಾಲಿನ ರಾಷ್ಟ್ರ ಮಟ್ಟದ ‘ಲಕ್ಷ್ಯ್ ಅವಾರ್ಡ್‌’ ಲಭಿಸಿದೆ.

ಆಸ್ಪತ್ರೆಯ ಮೂಲಸೌಕರ್ಯ ಬಲವರ್ಧನೆ, ಶುಚಿತ್ವಕ್ಕೆ ಒತ್ತು. ಉತ್ತಮ ನಿರ್ವಹಣೆ ಮೂಲಕವಾಗಿ ತಾಯಿ ಮತ್ತು ಶಿಶುಗಳ ಮರಣ ತಪ್ಪಿಸಲು ಆಗತ್ಯ ಕ್ರಮಕೈಗೊಳ್ಳಬೇಕು ಎಂಬುದು ಈ ಅಭಿಯಾನದ ಉದ್ದೇಶವಾಗಿದೆ. ರಾಜ್ಯದಲ್ಲಿನ 289 ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗಳಲ್ಲಿ 104 ಆಸ್ಪತ್ರೆಗಳನ್ನು ಶಿಫಾರಸು ಮಾಡಿದ್ದು. ಇದರಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿನ ತಾಯಿ-ಮಕ್ಕಳ  ಈ ಪುರಸ್ಥಾರ ಲಭಿಸಿದೆ.

   ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ಶಕ್ತ್ರಚಿಕಿತ್ಸಕ ಡಾ.ರಾಬರ್ಟ್‌ ರೆಬೆಲ್ಲೋ: ಮಾರ್ಗದರ್ಶನದಲ್ಲಿ ಇಬ್ಬರು ಪ್ರಸೂತಿ ತಜ್ಞರು, ಇಬ್ಬರುಮಕ್ಕಳ ತಜ್ಞರು, ಇಬ್ಬರು. ಅರಿವಳಿಕೆ ತಜ್ಞರು, ಶುಶ್ರೂಷಕ ಅಧಿಕ್ಷಕರು ಹಾಗೂ ಸಿಬ್ಬಂದಿಯನ್ಹೊಳಗೊಂಡ ತಂಡ ಈ ಹೆರಿಗೆ ಆಸ್ಪತ್ರೆಯಲ್ಲಿ ಗುಣಮಟ್ಟದ  ನೀಡುತ್ತಿದ್ದು, ಒಂದು ತಿಂಗಳಿನಲ್ಲಿ ಸರಾಸರಿ 100-120 ಹೆರಿಗೆಗಳನ್ನು ಮಾಡಲಾಗುತ್ತದೆ.ಉಡುಪಿ ಜಿಲ್ಲೆಯ ಬೈಂದೂರು, ಹೆಬ್ರಿ, ಕುಂದಾಪುರ ಮತ್ತು ಗ್ರಾಮೀಣ ಭಾಗದಿಂದ ಬರುವರಿಗೆ ಇಲ್ಲಿನ ಸೇವೆ ವರದಾನವಾಗಿದೆ. ಮಾತ್ರವಲ್ಲದೆ ಹೊರ ಜಿಲ್ಲೆಯ ಭಟ್ಕಳ, ನಗರ, ಹೊಸನಗರ, ನಿಟ್ಟೂರು ಮತ್ತು ಮೊದಲಾದಕಡೆಯಿಂದ ಇಲ್ಲಿ ಹೆರಿಗಾಗಿ ಬರುತ್ತಾರೆ.

ಲಕ್ಷ್ಯ್ ಪ್ರಶಸ್ತಿ  ಆಯ್ಕೆ ಪ್ರಕ್ರೀಯೆ ಹೇಗೆ?

80-100ಕ್ಕೂ ಅಧಿಕ ಹೆರಿಗೆ ನಡೆಯುವ ಆಸ್ಪತ್ರೆಗಳಿಗೆ ರಾಜ್ಯದ ಮೌಲ್ಯ ಮಾಪನ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತದೆ. ಅಲ್ಲಿ ಆಯ್ಕೆಯಾದ ಆಸ್ಪತ್ರೆಗಳಿಗೆ ಕೇಂದ್ರದಿಂದ ಬಾಹ್ಯ ಮೌಲ್ಯ ಸಮಾಪನ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತದೆ. ಹೆರಿಗೆ ವಾರ್ಡ್‌ನಲ್ಲಿ 300 ಅಂಶಗಳು ಹಾಗೂ ಶಸ್ತ್ರ ಚಿಕಿತ್ಸಾ ‘ಕೊಠಡಿಯಲ್ಲಿ 300 ಅಂಶಗಳನ್ನು ಪರಿಶೀಲಿಸಿ. ಅದರ ನಿರ್ವಹಣೆ ಮೇಲೆ ಮೌಲ್ಯಾಂಕನ ಮಾಡಲಾಗುತ್ತದೆ. ” ಔಷಧಿ, ಉಪಕರಣಗಳ ಲಭ್ಯತೆ, ಆರೈಕೆ, ಶುಚಿತ್ವ, ಆಸ್ಪತ್ರೆ ನಿರ್ವಹಣೆ, ದಾಖಲಾತಿ ನಿರ್ವಹಣೆ ಸಹಿತ ಒಟ್ಟು 600 ಪ್ರಕ್ರಿಯೆಗಳ ಮಾನದಂಡ ಇರುತ್ತದೆ. ರಾಜ್ಯ ತಂಡ ಈಗಾಗಾಲೇ 104 ಆಸ್ಪತ್ರೆಗಳನ್ನು ಶಿಫಾರಸು ಮಾಡಿದೆ. ಬಾಹ್ಯ ಮೌಲ್ಯ ಮಾಪನ ತಂಡ ಅದರಲ್ಲಿ ಭಾಗಶಃ ಸಮೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಿದ್ದು, 104 ಆಸ್ಪತ್ರೆಗಳಲ್ಲಿ ಕುಂದಾಪುರ ಆಸ್ಪತ್ರೆ ಕೂಡ ಸೇರಿದೆ.

“ಹೆರಿಗೆ ಸಂದರ್ಭದಲ್ಲಿ ತಾಯಿ ಹಾಗೂ ಮಗುವಿನ ರಕ್ಷಣೆ ಹೊಣೆಗಾರಿಕೆಗಾಗಿ ಸಂಬಂಧಿಸಿದ ಆಸ್ಪತ್ರೆಗಳ ಗುಣಮಟ್ಟ ಸುಧಾರಣೆ ಈ ಅಭಿಯಾನದ ಗುರಿ. ಉಡುಪಿ, ಕುಂದಾಪುರ, ದ.ಕ, ಶಿವಮೊಗ್ಗ ಸಹಿತ ರಾಜ್ಯದ  ವಿವಿಧ ಜಿಲ್ಲೆಗಳ 104 ಆಸ್ಪತ್ರೆಗಳನ್ನು  ಗುರುತಿಸಿ ಬಾಹ್ಯ ಮೌಲ್ಯಮಾಪನಾ ತಂಡಕ್ಕೆ ಕಳುಹಿಸಲಾಗಿದೆ. ಲಕ್ಷ್ಮ ಪ್ರಮಾಣಪತ್ರ ಸಿಕ್ಕಿದ ಈ ಎಲ್ಲಾ 104 ಆಸ್ಪತ್ರೆಗಳಿಗೆ. ವರ್ಷಕ್ಕೆ 4 ಲಕ್ಷ ರೂ. ಅನುದಾನ ಸಿಗುವುದರಿಂದ ಆಸ್ಪತ್ರೆಗಳ ಬಲವರ್ಧನೆ ಹೆಚ್ಚಲು ಸಾಧ್ಯವಿದೆ. ಗುಣಮಟ್ಟದ ಮಾನ್ಯತೆ ಇರುವ ತನಕ ಈ ಯೋಜನೆಯಡಿ ಪ್ರತಿವರ್ಷ ಈ ಅನುದಾನ ಸಿಗಲಿದೆ”

-ಡಾ.ರಾಜಕುಮಾರ್‌, ಉಪನಿರ್ದೇಶಕರು, ತಾಯಿ ಆರೋಗ್ಯ ಮತ್ತು ಗುಣಮಟ್ಟ ಖಾತ್ರಿ ವಿಭಾಗ

“ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಈಗಾಗಲೇ ರಾಜ್ಯದ ಕಾಯಕಲ್ಪ ಪ್ರಶಸ್ತಿ ಮುಡಿ ಗೇರಿಸಿಕೊಂಡಿದ್ದು, ಇದೀಗ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಗೊಂಡ ಒಂದೇ ವರ್ಷಕ್ಕೆ ಎನ್‌ಎಚ್‌ ಎಂ ನಡಿಯಲ್ಲಿ ನೀಡುವ ಪ್ರತಿಷ್ಠಿತ “ಲಕ್ಷ್ಯ್” ಪ್ರಶಸ್ತಿ ಲಭಿಸಿದೆ. ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಶುಶ್ರೂಷಕ ಅಧೀಕ್ಷಕರು ಹಾಗೂ ಸಿಬ್ಬಂದಿಯ ಸೇವೆ ಇಲ್ಲಿ ಗಮನಾರ್ಹವಾಗಿದೆ. ಈ ಪ್ರಶಸ್ತಿ ಲಭಿಸಿದ್ದರಿಂದ ವರ್ಷಕ್ಕೆ 4 ಲಕ್ಷರೂ. ಅನುದಾನ ಸಿಗಲಿದ್ದು, ಆಸತ್ರೆಯನ್ನು ಇನ್ನಷ್ಟು ಬಲವರ್ಧನೆ ಗೊಳಿಸಲು ಸಾಧ್ಯವಾಗಲಿದೆ”

– ಡಾ.ರಾಬರ್ಟ್‌ ರೆಬೆಲ್ಲೋ, ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರು 

ಬಾಲವನದ ಜಾದೂಗಾರ ನಿರ್ಮಾಪಕರಿಗೆ ಪ್ರಶಸ್ತಿ


ಕೇರಳದ ಕಣ್ಣೂರಿನ ಯುನಿಕ್ ಫಿಲ್ಮ್ ಪ್ರೊಡಕ್ಷನ್ ಕಂಪೆನಿ ಏರ್ಪಡಿಸಿದ ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವ 2022ರಲ್ಲಿ ಕುಂದಾಪುರ ವಸಂತ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿದ “ಬಾಲವನದ ಜಾದೂಗಾರ” ಶ್ರೇಷ್ಠ ಕಿರು ಚಿತ್ರ ಪ್ರಶಸ್ತಿ ಪಡೆಯಿತು.
ಚಿತ್ರದ ನಿರ್ದೇಶಕ ಇ. ಎಂ. ಅಶ್ರಫ್ ಅವರು ಕುಂದಾಪುರಕ್ಕೆ ತಂದ ಈ ಪ್ರಶಸ್ತಿಯನ್ನು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕೆರಾಡಿ ಅವರು ನಿರ್ಮಾಪಕ ಕೆ. ಪಿ. ಶ್ರೀಶನ್ ಅವರಿಗೆ ಕಂಭಾಸಿ ಆನೆಗುಡ್ಡೆ ದೇವಸ್ಥಾನದ ವಠಾರದಲ್ಲಿ ಹಸ್ತಾಂತರಿಸಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಶುಭ ಹಾರೈಸಿದರು.
ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಕಸಾಪ ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ ಹಾಗೂ ಕೆ. ಪಿ. ಶ್ರೀಶನ್ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಯು. ಎಸ್. ಶೆಣೈ ನಿರೂಪಿಸಿದರು.