ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ಗೆ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡ ಭೇಟಿ


ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ಗೆ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ 100 ವಿದ್ಯಾರ್ಥಿಗಳ ತಂಡ ಭೇಟಿ ನೀಡಿ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನಿಕಟ ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ಯಾಕಲ್ಟಿ ಈರಪ್ಪ ಮೆದರ್, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಅರುಣ್ ಕುಮಾರ್ ನಿಟ್ಟೆ, ಸಮಾಜ ಸೇವಕಿ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ವಿಜೇತ ಪೈ, ಕಾರ್ಕಳ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗಿರೀಶ್ ರಾವ್, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಪೂರ್ವಾಧ್ಯಕ್ಷರಾದ ಕಾಸ್ರಬೈಲು ಸುರೇಶ್, ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ವಿದ್ಯಾರ್ಥಿ ನಾಯಕರು ಹಾಗೂ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸದಸ್ಯರುಗಳು ಉಪಸ್ಥಿತಿತರಿದ್ದರು.

ರಾಜ್ಯ ಬಜೆಟ್‍ನಲ್ಲಿ ಮಾವು ಬೆಳೆಗಾರರಿಗೆ ಹೆಚ್ಚಿನ ಆದ್ಯತೆ ಜೊತೆಗೆ ಮಾರುಕಟ್ಟೆ ಔಷಧಿ,ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 300 ಕೋಟಿ ಅನುದಾನ ಮೀಸಲಿಡಬೇಕು – ರೈತ ಸಂಘ

ಶ್ರೀನಿವಾಸಪುರ; ಫೆ.16: ರಾಜ್ಯ ಬಜೆಟ್‍ನಲ್ಲಿ ಮಾವು ಬೆಳೆಗಾರರಿಗೆ ಹೆಚ್ಚಿನ ಆದ್ಯತೆ ಜೊತೆಗೆ ಮಾರುಕಟ್ಟೆ ಔಷಧಿ ಹಾಗೂ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 300 ಕೋಟಿ ಅನುದಾನ ಮೀಸಲಿಡಬೇಕೆಂದು ರೈತಸಂಘದಿಂದ ಉಪ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಮನವಿ ನೀಡಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ವಿಶ್ವ ವಿಖ್ಯಾತಿ ಮಾವಿನ ನಗರಿ ಶ್ರೀನಿವಾಸಪುರ ವ್ಯಾಪ್ತಿಯಲ್ಲಿ ಅತಿ ಹೆಚ್ಚಾಗಿ ಮಾವು ಬೆಳೆದು ದೇಶ ವಿದೇಶಗಳಿಗೆ ರಫ್ತು ಮಾಡುವ ಮಾವು ಬೆಳೆಗಾರರ ಸ್ಪಂದನೆಗೆ ಯಾವುದೇ ಬಜೆಟ್‍ನಲ್ಲಿ ಅನುದಾನ ನೀಡದೇ ಇರುವುದು ವಿಷಾಧಕರ ಸಂಗತಿ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅದರಂತೆ ಇತ್ತೀಚೆಗೆ ಹವಾಮಾನ ವೈಫರೀತ್ಯ ಮುಂಗಾರುಮಳೆ ಆರ್ಭಟಕ್ಕೆ ಮಾವಿನ ಫಸಲು ಸಹ ಬರುತ್ತಿಲ್ಲ. ಹೆಚ್ಚುತ್ತಿರುವ ರೋಗಗಳ ನಿಯಂತ್ರಣಕ್ಕೆ ಔಷಧಿ ಖರೀದಿ ಮಾಡಲು ರೈತರು ಪರದಾಡುವ ಜೊತೆಗೆ ಪ್ರಧಾನಮಂತ್ರಿ ಫಸಲ್ ಭಿಮಾ ವಿಮಾ ಕಂಪನಿ ಸಹ ರೈತರಿಗೆ ಅಷ್ಟಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಮಾವು ಮಾರುಕಟ್ಟೆಯ ಜಾಗದ ಸಮಸ್ಯೆಯಿಂದ ಅಭಿವೃದ್ಧಿಯಾಗದೆ ಪ್ರತಿವರ್ಷ ಕುಡಿಯುವ ನೀರಿನಿಂದ ಊಟದವರೆಗೂ ಪರದಾಡುವ ಜೊತೆಗೆ ಬದುಕು ಕಟ್ಟಿಕೊಳ್ಳಲು ಕೂಲಿಗಾಗಿ ಬರುವ ಕಾರ್ಮಿಕರಿಗೆ ಮಾರುಕಟ್ಟೆಯಲ್ಲಿ ಉಚಿತವಾದ ಅನಾರೋಗ್ಯ ನೀಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾವು ಬೆಲೆ ಕುಸಿತವಾದಾಗ ಫಸಲನ್ನು ಸಂರಕ್ಷಣೆ ಮಾಡಲು ಮಾವು ಸಂಸ್ಕರಣಾ ಘಟಕವಿಲ್ಲ ಹಾಗೂ ಮಾವು ಆಧಾರಿತ ಕೈಗಾರಿಕೆಗಳಿಲ್ಲದೆ ಬೆಲೆ ಇಲ್ಲದಾಗ ಮಾವನ್ನು ರಸ್ತೆಗಳಲ್ಲಿ ಸುರಿಯಬೇಕಾದ ಪರಿಸ್ಥಿತಿಯಿದೆ. ಈ ಬಜೆಟ್‍ನಲ್ಲಾದರೂ ಮಾವು ಬೆಳೆಗಾರರಿಗೆ ರಕ್ಷಣೆಗೆ 300 ಕೋಟಿ ಅನುದಾನವನ್ನು ಮೀಸಲಿಟ್ಟು ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ರಕ್ಷಣೆಗೆ ಸರ್ಕಾರ ನಿಲ್ಲಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್, ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಷೇಕ್ ಶಫೀಉಲ್ಲಾ, ಆಲವಾಟ ಶಿವ, ಸಂತೋಷ್, ಹರೀಶ್, ವೆಂಕಟೇಶ್, ಗಂಗಾಧರ್, ಯಲ್ದೂರು ಮೋಹನ್ ಗೌಡ, ಸಹದೇವಣ್ಣ, ವೆಂಕಟ್ ಮುಂತಾದವರಿದ್ದರು.

ಶ್ರೀನಿವಾಸಪುರ: ಪಟ್ಟಣಾಭಿವೃದ್ಧಿಗೆ ಸರ್ಕಾರ ನೀಡಿರುವ ರೂ.15 ಕೋಟಿ ಖರ್ಚು ಮಾಡುವ ಬಗ್ಗೆ ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ವಿಶೇಷ ಸಭೆ

ತಾಲ್ಲೂಕಿನ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕರಿಸಬೇಕು ಎಂದು ಸಲಹೆ ಮಾಡಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ರೂ.3 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಿಸುವಂತೆ ಶಾಸಕರು ಹೇಳಿದಾಗ, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ವಿರೋಧ ವ್ಯಕ್ತಪಡಿಸಿದರು. ಸಧ್ಯದ ಪರಿಸ್ಥಿತಿಯಲ್ಲಿ ಅಷ್ಟು ಹಣ ಖರ್ಚು ಮಾಡಿ ಈಜುಕೊಳ ನಿರ್ಮಿಸುವುದು ಬೇಡ. ಅದಕ್ಕೆ ಬದಲಾಗಿ ಪಟ್ಟಣದಲ್ಲಿ ಬೀದಿ ದೀಪ ಅಳವಡಿಸಲು, ಸ್ವಚ್ಛತೆ ಕಾಪಾಡಲು, ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲು, ರಸ್ತೆ, ಚರಂಡಿ ದುರಸ್ತಿ ಮಾಡಲು ಬಳಸಿಕೊಳ್ಳೋಣ ಎಂದು ಸಲಹೆ ಮಾಡಿದರು.
ಅದಕ್ಕೆ ಶಾಸಕ ರಮೇಶ್ ಕುಮಾರ್, ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಪುರಸಭೆ ಅಥವಾ ನಗರ ಸಭೆಗೆ ಸೇರಿದ ಈಚುಕೊಳ ನಿರ್ಮಿಸಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಅದರ ಅಗತ್ಯವಿದೆ. ಸಮಗ್ರ ಅಭಿವೃದ್ಧಿ ಯೋಜನೆಯಲ್ಲಿ ಈಜುಕೊಳವೂ ಸೇರುತ್ತದೆ. ವಿರೋಧ ವ್ಯಕ್ತಪಡಿಸುವುದು ಬೇಡ. ಪ್ರಸ್ತಾವನೆ ಜಿಲ್ಲಾಧಿಕಾರಿಗೆ ಕಳುಗಿಸಿ, ಅವರು ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ಸೂಚಿಸಿದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿರೋಧಗಳ ನಡುವೆ ಅಭಿವೃಧ್ದಿ ಕುಂಠಿತಗೊಳ್ಳುತ್ತಿದೆ. ಹಳೆ ಬಸ್ ನಿಲ್ದಾಣದಲ್ಲಿ ರವೀಂದ್ರ ಕಲಾಕ್ಷೇತ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕೆಲವರು ಅದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ. ಪಟ್ಟಣದ ಸರ್ಕಾರಿ ಕರ್ನಾಟಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 400 ವಿದ್ಯಾರ್ಥಿಗಳು ದಾಖಲಾಗಿದ್ದು, ಕಟ್ಟಡ ಹಾಗೂ ಮೂಲ ಸೌಕರ್ಯದ ಕೊರತೆ ಇದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥ ಮಾದರಿ ಶಾಲಾಭಿವೃದ್ಧಿಗೆ ಎಲ್ಲರು ಸಹಕರಿಸಬೇಕು ಎಂದು ಹೇಳಿದರು.
ಪುರಸಭಾಧ್ಯಕ್ಷರು ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿ ಮಾಡಬೇಕು. ಯಾವುದೇ ಕಾರಣಕ್ಕೂ ಸದಸ್ಯರ ಅವಗಣನೆ ಮಾಡಬಾರದು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ 13 ಸದಸ್ಯರು ಕೈ ಎತ್ತುವುದರ ಮೂಲಕ ಪುರಸಭೆ ಕೈಗೊಂಡ ನಿರ್ಣಯಕ್ಕೆ ಬೆಂಬಲ ಸೂಚಿಸಿದರು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಎಂಜಿನಿಯರ್ ನಾಗರಾಜ್, ಕಂದಾಯ ಅಧಿಕಾರಿ ವಿ.ನಾಗರಾಜ್ ಮತ್ತು ಸದಸ್ಯರು ಇದ್ದರು.

ಕೋಲಾರ:ಪತ್ರಕರ್ತರಿಗೆ ಸ್ವಾಭಿಮಾನವೇ ಸರ್ವಶ್ರೇಷ್ಟವಾಗಬೇಕು-ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ

ಕೋಲಾರ : ಪತ್ರಕರ್ತರಿಗೆ ಸ್ವಾಭಿಮಾನವೇ ಸರ್ವಶ್ರೇಷ್ಟವಾಗಿದೆ. ಅದನ್ನು ಪ್ರತಿಯೊಬ್ಬರೂ ತಮ್ಮ ವೃತ್ತಿಯಲ್ಲಿ ಮಾತ್ರವಲ್ಲ ಜೀವನದಲ್ಲೂ ಅಳವಡಿಸಿಕೊಂಡು ಬೆಳೆಸುವಂತಾಗಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಥಮವಾಗಿ ಆಯೋಜಿಸಿದ್ದ ಡಿ.ವಿ.ಗುಂಡಪ್ಪನವರು ಮುಂಚೂಣಿಯಲ್ಲಿ ಪ್ರಪ್ರಥಮವಾಗಿ ರಾಜ್ಯದಲ್ಲಿ ಪತ್ರಕರ್ತರ ಸಂಘವನ್ನು ಸಂಘಟಿಸಿ ಸ್ಥಾಪಿಸಿದ 91ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಭೌತಿಕ ಗುಣಮಟ್ಟವನ್ನು ಕಾಯ್ದಕೊಂಡಾಗ ಮಾತ್ರ ಪತ್ರಿಕೆಗಳಿಗೊಂದಿಗೆ ತಮಗೂ ಸಮಾಜದಲ್ಲಿ ಗೌರವ ಲಭಿಸುವುದು, ಪತ್ರಿಕಾ ವೃತ್ತಿಯಲ್ಲಿ ವೈವಿಧ್ಯತೆಗಳನ್ನು ಕಾಪಾಡಿಕೊಳ್ಳುವ ಮೂಲಕ ಸಾರ್ಥಕಗೊಳಿಸಬೇಕು. ಪತ್ರಕರ್ತರಿಗೆ ಆತ್ಮ ಸಾಕ್ಷಿಗಿಂತ ಮತ್ತೊಂದು ಪ್ರಶಸ್ತಿಯ ಅಗತ್ಯವಿಲ್ಲ ಎಂದು ಕಿವಿ ಮಾತು ಹೇಳಿದರು.

ಇಂದು ಪತ್ರಿಕಾ ಕ್ಷೇತ್ರದಲ್ಲಿ ಗುಣ ಮಟ್ಟವನ್ನು ಕಾಯ್ದುಕೊಳ್ಳದೆ ಶೂನ್ಯವಾಗಿದ್ದು, ಪತ್ರಿಕಾ ಕ್ಷೇತ್ರವು ಒಂದು ಫ್ಯಾಷನ್ ಅಗಿ ಪರಿವರ್ತನೆಯಾಗುತ್ತಿದೆ. ಸಂಘದಲ್ಲಿನ ಸ್ಥಾನಮಾನಗಳನ್ನು ಅಧಿಕಾರವೆಂದು ಬಾವಿಸದೆ ಜವಾಬ್ದಾರಿ ಎಂದು ಭಾವಿಸಬೇಕು. ಸಂಘ, ಸಂಸ್ಥೆಗಳಲ್ಲಿ ಭಿನ್ನಮತಗಳು ಸಹಜವಾದರೂ ಸಂಘಟನೆಗೆ ಚ್ಯುತಿ ಬಾರದಂತೆ ಜಾಗೃತರಾಗಿ ಕೆಲಸ ನಿರ್ವಹಿಸ ಬೇಕೆಂದು ತಿಳಿಸಿದರು.

ಪತ್ರಿಕೆಗಳು ಸಮಾಜದ ಕಾವಲು ನಾಯಿಗಳಂತೆ ಕಾರ್ಯನಿರ್ವಹಿಸಬೇಕೆಂದು ಪತ್ರಕರ್ತರ ಸಂಘದ ಸಂಸ್ಥಾಪಕ ಡಿ.ವಿ.ಗುಂಡಪ್ಪನವರ ನಾಣ್ಮುಡಿಯನ್ನು ಪ್ರತಿಯೊಬ್ಬ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಾರ್ಯನಿರ್ವಹಿಸುವಂತಾಗಬೇಕಾಗಿದೆ ಎಂದು ಕರೆ ನೀಡಿದರು. ಅದರೆ ಇಂದು ಪತ್ರಕರ್ತರ ವೃತಿಯಲ್ಲಿ ಯಾರ ಕಾವಲು ನಾಯಿಗಳಾಗಿ ಕೆಲಸ ನಿರ್ವಹಿಸಲಾಗುತ್ತಿದೆಯೇ? ಎಂದು ಆತ್ಮವಿಮರ್ಷೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮಾತನಾಡಿ ಕಳೆದ 1938ರಲ್ಲಿ ಏಕಿಕರಣದ ಮೊದಲು ಮೈಸೂರು ಪತ್ರಕರ್ತರ ಸಂಘವನ್ನು ಅಂದಿನ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಸಲಹೆ ಮೇರೆಗೆ ಪತ್ರಕರ್ತರ ಸಂಘವನ್ನು ಸ್ಥಾಪಿಸಿದರು, ಆಗ ನಮ್ಮ ಜಿಲ್ಲೆಯಲ್ಲಿ 2-3 ಮಂದಿ ಮಾತ್ರ ಇದ್ದರೂ ರಾಜ್ಯಾದಾದ್ಯಂತ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಬೀದರ್‌ನಿಂದ ಕೋಲಾರದ ಉದ್ದಗಲಕ್ಕೂ ಹೆಮ್ಮರವಾಗಿ ಬೆಳೆದು ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಅಧಿಕೃತ ಪತ್ರಕರ್ತರು ಸಂಘದ ಸದಸ್ಯರಾಗಿದ್ದಾರೆ ಎಂದರು.

ಸ್ವಾತಂತ್ರ್ಯದ ನಂತರ ರಾಜ್ಯದ ಏಕೀಕರಣ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಎಂದು ಸಂಘದ ಹೆಸರು ಬದಲಾಯಿಸಿತು, ಪತ್ರಕರ್ತರ ಸಂಘದ ಹಿತರಕ್ಷಣೆ ಜೂತೆಗೆ ಪತ್ರಕರ್ತ ಕಲ್ಯಾಣದ ಕಾರ್ಯಕ್ರಮಗಳಿಗೆ ಗಮನ ಹರಿಸಿ ಕಾರ್ಮಿಕ ಕಾಯ್ದೆಗಳನ್ನು ಸಂಘದ ವ್ಯಾಪ್ತಿಗೆ ಒಳಪಡೆಸಲಾಯಿತು ಎಂದ ಅವರು ಕಳೆದ 1982ರಲ್ಲಿ ಜಿ.ಕೆ. ಸತ್ಯ ನೇತೃತ್ವದಲ್ಲಿ ನಡೆದ ಹೋರಾಟದಿಂದಾಗಿ 62 ದಿನಗಳ ಪತ್ರಿಕಾ ಕಛೇರಿಯನ್ನು ಮುಚ್ಚಿಸುವ ಮೂಲಕ ಪಾಠ ಕಲಿಸಿದ ಸಂದರ್ಭವನ್ನು ನೆನಪಿಸಿಕೊಂಡ ಅವರು ಇಂದು ಪತ್ರಕರ್ತರಿಗೆ ದೊಡ್ಡ ಪತ್ರಿಕೆಗಳಲ್ಲಿ, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರಿಗೆ ಸೇವಾ ಭದ್ರತೆ ಇಲ್ಲದೆ ಇರುವುದು ಸೇರಿದಂತೆ ಇಂದು ಬಿ.ಬಿ.ಸಿ. ಮೇಲೆಯೇ ಐ.ಟಿ. ದಾಳಿ ಮಾಡಿಸಿ ಬೆದರಿಸುವಂತ ಮಟ್ಟಕ್ಕೆ ಇಳಿದಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.

ಕನ್ನಡ ಏಕೀಕರಣ ಸಂದರ್ಭದಲ್ಲಿ ಅಂದಿನ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್  ಅವರ ಸಲಹೆ ಮೇರೆಗೆ ಡಿ.ವಿ.ಜಿ. ಅವರು ಕೋಲಾರದಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಿದ ಪತ್ರಕರ್ತರ ಸಂಘದಿಂದಾಗಿ ರಾಜ್ಯದಲ್ಲಿ ಇಂದು ಕೆ.ಡಬ್ಲೂಜೆ.ಸಿ.ಸ್ಥಾಪಸಿಲು ಕಾರಣವಾಯಿತು. ಕೋಲಾರಕ್ಕೆ ಪ್ರಪ್ರಥಮ ಮುಖ್ಯಮಂತ್ರಿ ನೀಡಿದ್ದು ಹಾಗೂ ಪ್ರಥಮವಾಗಿ ಪತ್ರಕರ್ತರ ಸಂಘ ಸ್ಥಾಪಿಸಿದ್ದು ಕೋಲಾರ ಜಿಲ್ಲೆಯಾಗಿದೆ ಎಂದು ಹೆಮ್ಮೆಯಿಂದ ನುಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ  ವಿ.ಮುನಿರಾಜು ಮಾತನಾಡಿ, ಡಿ.ವಿ.ಜಿ.ಅವರು ಕೋಲಾರದ ಮುಳಬಾಗಿಲು ತಾಲ್ಲೂಕಿನವರು ಆಗಿದ್ದು ಪತ್ರಕರ್ತರ ಸಂಘವನ್ನು ಪ್ರಪ್ರಥಮವಾಗಿ ಸ್ಥಾಪಿಸುವ ಮೂಲಕ ಪತ್ರಿಕಾ ರಂಗಕ್ಕೆ ಶಕ್ತಿ ತುಂಬಿದರು, ಅವರು ಸಂಘ ಸ್ಥಾಪಿಸಿದ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ನಮ್ಮ ಸಂಘದ ಮೂಲಕ ಪ್ರಥಮವಾಗಿ ಆಚರಿಸುತ್ತಿರುವುದು ತಡವಾದರೂ ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಎಸ್.ಸಚ್ಚಿದಾನಂದ ಮಾತನಾಡಿ, ಡಿ.ವಿ.ಜಿ. ಅವರು ಪತ್ರಕರ್ತರ ಸಂಘವನ್ನು ಸ್ಥಾಪಿಸಿದ ದಿನವನ್ನು ಪತ್ರಿಕಾ ದಿನಾಚರಣೆಯನ್ನು  ಆಚರಿಸಿದಂತೆ ಸಂಸ್ಥಾಪನಾ ದಿನವನ್ನು ಆಚರಿಸುವಂತಾದರೆ ಅರ್ಥಪೂರ್ಣವಾಗುವುದು ಎಂದು ಅಭಿಪ್ರಾಯಪಟ್ಟರು. 

ಹಿರಿಯ ಪತ್ರಕರ್ತ ಸಾಕ್ಷಿ ಮಂಜುನಾಥ್ ಮಾತನಾಡಿ, ಪತ್ರಕರ್ತರ ಸಂಘವು ಇಂದು ಬೃಹದಾಕಾರವಾಗಿ ಬೆಳೆದಿರುವುದಕ್ಕೆ ಭಗವದ್ಗೀತೆಯಲ್ಲಿ ವಾಮನಮೂರ್ತಿಯ ಮೂರನೇ ಹೆಜ್ಜೆ ಇಡಲು ಬೃಹದಕಾರವಾಗಿ ಬೆಳೆದಂತೆ ಪತ್ರಿಕಾ ಕ್ಷೇತ್ರವಾಗಿ ಬೆಳೆದು ಸಮಾಜದಲ್ಲಿ ಲೋಪ ದೋಷಗಳನ್ನು ಮೆಟ್ಟಿ ನಿಲ್ಲುವಂತಾಗಬೇಕೆಂದು ಆಶಿಸಿದರು. 

ಕೆ. ಪ್ರಕಾಶ್(ಮಾಮಿ) ಸ್ವಾಗತಿಸಿ, ಕೆ.ಆಸೀಫ್‌ಪಾಷ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಅಬ್ಬಣಿ ಶಂಕರ್, ಬಿ.ಎಸ್.ಸ್ಕಂದಕುಮಾರ್, ಓಂಕಾರಮೂರ್ತಿ, ಸಿ.ವಿ.ನಾಗರಾಜ್, ಬಂಗಾರಪೇಟೆ ಎಂ.ಸಿ.ಮಂಜುನಾಥ್, ಕೆ.ರಮೇಶ್, ವೆಂಕಟೇಶಪ್ಪ, ಮುಕ್ತಿಯಾರ್ ಅಹಮದ್, ಸೈಯುದ್ ಪರ್ವೀಜ್, ಎ.ಬಾಲನ್, ಎನ್.ಗಂಗಾಧರ್ ಉಪಸ್ಥಿತರಿದ್ದರು.

St Anthony’s Ashram Jeppu organizes the feast of Relic of Saint Anthony / ಸಂತ ಅಂತೋನಿಯವರ ಆಶ್ರಮ – ಜೆಪ್ಪು ಸಂತ ಅಂತೋನಿಯವರ ಪುಣ್ಯ ಸ್ಮರಣೆಯ ಹಬ್ಬ

Mangaluru:, f.15: Most Rev Dr Aloysius Paul D’Souza the emeritus Bishop of Mangalore offered the Holy Mass in honour of the Relic of Saint Anthony. The Bishop in his message said that St Anthony in his short life through his tounge ,  preached the word of God continuously. He sacrificed his life and made other’s life beautiful. He called on the people gathered to take example from the life of Saint Anthony and contribute to make other’s life comfortable.

Rev. Boniface Pinto professor of  prepedutic year St Jospeh’s Seminary Jeppu preached the homily during the mass. He spoke on the days theme tounge is gift from God, Saint Anthony made use of his tongue  to preach the word of God and to fill hope in the life of people. He spent himself fully in performing miracles, all for God in return has blessed Saint Anthony by keeping his tongue fresh even after eight centuries of his demise. This is an indication that whenever people obey God, love Him  and serve Him, He in return blesses them.Earlier during the day a Holy Mass was offered for the inmates at the Ashram at 6 am by Fr Larry pinto. At 8.15 am Holy Mass was offered in Milagres Fr Rupesh Tauro . Very Rev Fr Daniel Veigas offered Holy Mass at the Ashram for all the benefactors and invites. After which food was served to all.  4.30 pm in Malayalam at Milagres Church for all malayalm speaking people. 

All donors were honoured with a candle as a gratitude. Special prayers were offered for the souls of all those who  died in turkey and syria    earthquake by lighting up the candles. A number of priests from and around Mangalore City, Religious Sisters and thousands of people participated in the Celebration.

Fr Jb. Crasta the director of the Ashram thanked all those extended their support to organize the feast. Fr Rupesh Tauro and Fr Larry Pinto the Asst directors co-operated to make the celebration successful.

ಸಂತ ಅಂತೋನಿಯವರ ಆಶ್ರಮ – ಜೆಪ್ಪು ಸಂತ ಅಂತೋನಿಯವರ ಪುಣ್ಯ ಸ್ಮರಣೆಯ ಹಬ್ಬ

 15.2.2023 ಬುಧವಾರದಂದು ಸಂತ ಅಂತೋನಿ ಆಶ್ರಮ ಜಪ್ಪು ವತಿಯಿಂದ ಸಂತ ಅಂತೋನಿಯರ ಪುಣ್ಯ ಸ್ಮರಣೆಗೆ ಹಬ್ಬವನ್ನು ಆಚರಿಸಲಾಯಿತು  ಮಂಗಳೂರಿನ ವಿಶ್ರಾಂತ ಬಿಷಪ್ ವಂದನೀಯ ಡಾ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಸಂತ ಅಂತೋನಿಯವರ ಪುಣ್ಯ ಸ್ಮರಣೆಯ ಹಬ್ಬದ ಬಲಿ ಪೂಜೆಯನ್ನು ನೆರವೇರಿಸಿದರು. ಬಿಷಪ್ ತಮ್ಮ ಸಂದೇಶದಲ್ಲಿ ಸಂತ ಅಂತೋನಿಯವರು ತಮ್ಮ ಅಲ್ಪಾವಧಿಯಲ್ಲಿ ತಮ್ಮ ನಾಲಿಗೆಯ ಮೂಲಕ ನಿರಂತರವಾಗಿ ದೇವರ ವಾಕ್ಯವನ್ನು ಬೋಧಿಸಿದರು ಎಂದು ಹೇಳಿದರು. ಅವರು ತಮ್ಮ ಜೀವನವನ್ನು ತ್ಯಾಗ ಮಾಡಿದರು ಮತ್ತು ಇತರರ ಜೀವನವನ್ನು ಸುಂದರಗೊಳಿಸಿದರು. ಸಂತ ಅಂತೋನಿಯವರ ಜೀವನದಿಂದ ಉತ್ತಮ ಮಾದರಿಯನ್ನು ತೆಗೆದುಕೊಂಡು ಇತರರ ಜೀವನವನ್ನು ಆರಾಮದಾಯಕವಾಗಿಸಲು ಸಹಕರಿಸುವಂತೆ ಅವರು ನೆರೆದವರಿಗೆ ಕರೆ ನೀಡಿದರು.

ಸಂತ ಜೋಸೆಫ್ ಸೆಮಿನರಿ ಜೆಪ್ಪು  ಪ್ರಾಧ್ಯಾಪಕರಾದ ರೆ.ಫಾ.ಬೋನಿಫೇಸ್ ಪಿಂಟೊ ದೇವರ ವಾಕ್ಯದ ಮೇಲೆ ಪ್ರವಚನ ನೀಡಿದರು. ದಿನದ ವಿಷಯವಾಗಿ ಮಾತನಾಡಿದ ಅವರು, ನಾಲಿಗೆಯು ದೇವರ ಕೊಡುಗೆಯಾಗಿದೆ, ಸಂತ ಅಂತೋನಿಯವರು ದೇವರ ವಾಕ್ಯವನ್ನು ಬೋಧಿಸಲು ಮತ್ತು ಜನರ ಜೀವನದಲ್ಲಿ ಭರವಸೆಯನ್ನು ತುಂಬಲು ತಮ್ಮ ನಾಲಿಗೆಯನ್ನು ಬಳಸಿದರು. ಪವಾಡಗಳನ್ನು ಮಾಡುವುದರಲ್ಲಿ ಅವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡನು, ಅದಕ್ಕೆ ಪ್ರತಿಯಾಗಿ ದೇವರು ಸಂತ ಅಂತೋನಿಯವರ ನಿಧನದ ಎಂಟು ಶತಮಾನಗಳ ನಂತರವೂ ಅವರ ನಾಲಿಗೆಯನ್ನು ತಾಜಾವಾಗಿರಿಸುವ ಮೂಲಕ ಆಶೀರ್ವದಿಸಿದ್ದಾನೆ. ಜನರು ದೇವರಿಗೆ ವಿಧೇಯರಾದಾಗ, ಆತನನ್ನು ಪ್ರೀತಿಸಿ ಮತ್ತು ಆತನಿಗೆ ಸೇವೆ ಸಲ್ಲಿಸಿದಾಗ, ಆತನು ಪ್ರತಿಯಾಗಿ ಅವರನ್ನು ಆಶೀರ್ವದಿಸುತ್ತಾನೆ ಎಂಬುದಕ್ಕೆ ಇದು ಸೂಚನೆಯಾಗಿದೆ. ಎಂದು ಹೇಳಿದರು.

ಇದಕ್ಕೂ ಮೊದಲು ಆಶ್ರಮದಲ್ಲಿ ನಿವಾಸಿಗಳಿಗೆ ಬೆಳಿಗ್ಗೆ 6 ಗಂಟೆಗೆ ಫಾದರ್ ಲ್ಯಾರಿ ಪಿಂಟೊ ಅವರು ಪೂಜೆ ನೆರವೇರಿಸಿದರು. ಬೆಳಿಗ್ಗೆ 8.15  ಮಿಲಾಗ್ರಿಸ್‌ನಲ್ಲಿ ಚರ್ಚಿನಲ್ಲಿ ಫಾದರ್ ರೂಪೇಶ್   ವೂರೊ ಪವಿತ್ರ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ 11 ಗಂಟೆಗೆ ಅತಿ ವಂದನೀಯ  ಡೇನಿಯಲ್ ವೆಗಾಸ್ ಆಶ್ರಮದಲ್ಲಿ ಎಲ್ಲಾ  ಆಹ್ವಾನಿತರಿಗೆ ಪವಿತ್ರ ಪೂಜೆ ಅರ್ಪಿಸಿದರು. ಬಳಿಕ ಎಲ್ಲಾ ಭಕ್ತಾದಿಗಳಿಗೆ ಹಬ್ಬದ ಊಟ  ಬಡಿಸಲಾಯಿತು. ಎಲ್ಲಾ ಮಲಯಾಳಂ ಮಾತನಾಡುವ ಭಕ್ತರಿಗೆ ಮಿಲಾಗ್ರೆಸ್ ಚರ್ಚ್‌ನಲ್ಲಿ ಮಲಯಾಳಂನಲ್ಲಿ ಸಂಜೆ 4.30 ಪೂಜೆ ನೆರವೇರಿತು.

ಎಲ್ಲಾ ದಾನಿಗಳಿಗೆ ಧನ್ಯತಾ ಭಾವದಿಂದ ಮೇಣದ ಬತ್ತಿ ನೀಡಿ ಗೌರವಿಸಲಾಯಿತು . ಟರ್ಕಿ ಮತ್ತು ಸಿರಿಯಾ ಭೂಕಂಪದಲ್ಲಿ ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿ ಮೇಣದಬತ್ತಿಗಳನ್ನು ಬೆಳಗಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಹಲವಾರು ಧರ್ಮಗುರುಗಳು, ಧರ್ಮ ಭಗಿನಿಯರು ಮತ್ತು ಸಾವಿರಾರು ಭಕ್ತರು ಸಂಭ್ರಮದಲ್ಲಿ ಪಾಲ್ಗೊಂಡರು.

 ಆಶ್ರಮದ ನಿರ್ದೇಶಕರಾದ ವಂದನೀಯ  ಜೆಬಿ ಕ್ರಾಸ್ತಾ ಅವರು ಹಬ್ಬವನ್ನು ಆಯೋಜಿಸಲು ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ವಂದನೀಯ ರೂಪೇಶ್ ತಾವ್ರೊ ಮತ್ತು ವಂದನೀಯ ಲ್ಯಾರಿ ಪಿಂಟೊ ಸಹಾಯಕ ನಿರ್ದೇಶಕರು ಆಚರಣೆಯನ್ನು ಯಶಸ್ವಿಗೊಳಿಸಲು ಸಹಕರಿಸಿದರು.

ಕೆರೆಕಟ್ಟೆ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಪುಣ್ಯಸ್ಮರಣೆಯ ಸಂಭ್ರಮದ ಹಬ್ಬ- ನಿರ್ಗತಿಕರ ಆಶ್ರಮಕ್ಕೆ ಶಿಲಾನ್ಯಾಸ


ಫೆಬ್ರುವರಿ 16, 2023 ಕುಂದಾಪುರ ತಾಲೂಕಿನ ಹೊಸಂಗಡಿ,ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಪುಣ್ಯಸ್ಮರಣೆಯ ಹಬ್ಬ, ಅವರ ನಾಲಿಗೆಯ ಅವಶೇಷದ ಹಬ್ಬವನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಫೆ.15 ರಂದು ಆಚರಿಸಲಾಯಿತು. ಜೊತೆಗೆ ನಿರ್ಗತಿಕರ ಆಶ್ರಮಕ್ಕೆ ಶಿಲಾನ್ಯಾಸವನ್ನು ನೇರವೆರಿಸಲಾಯಿತು..
ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿದರು.
“ದೇವರ ವಾಕ್ಯಗಳನ್ನು ಪಾಲಿಸುವರು ಭಾಗ್ಯಶಾಲಿಗಳು” ಎಂಬುದು ಹಬ್ಬದ ವಿಷಯವಾಗಿದ್ದು, ಶಿರ್ವ ವಲಯ ಪ್ರಧಾನ ಅ|ವಂ|ಡಾ| ಲೆಸ್ಲಿ ಡಿಸೋಜ ದೇವರ ವಾಕ್ಯವನ್ನು ಪಠಿಸಿ ಸರ್ವ ಶಕ್ತ ದೇವರಿಗೆ ಅಸಾಧ್ಯವಾದುದು ಎಂಬುದೇ ಇಲ್ಲ. ಅಬ್ರಹಾಂ, ಅವನ ಮಗ ಜಾಕೋಬ್ ಮತ್ತು ಅವನ ಮಗ ಐಸಾಕ್ ದೇವರಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದರು, ಅಬ್ರಹಾಮನಿಗೆ ದೇವರಲ್ಲಿ ಬಲವಾದ ನಂಬಿಕೆ ಇತ್ತು ಶತಾಯುಷಿಯಾದ ಅವನಿಗೆ, ಮತ್ತು 90 ವರ್ಷದ ಅವಳ ಹೆಂಡತಿ ಸಾರಳಿಗೆ ಪುತ್ರನನ್ನು ಕರುಣಿಸಿ ತನಗೆ ಅಸಾಧ್ಯಾವಾದುದು ಏನೂ ಇಲ್ಲವೆಂದು ತೋರಿಸಿಕೊಡುತ್ತಾನೆ. ದೇವರು ಪುನ: ಅಬ್ರಾಂಮನನ್ನು ಪರೀಕ್ಷೆ ಮಾಡಲಿಕ್ಕಾಗಿ, ನಿನ್ನ ಮಗನನ್ನು ನನಗೆ ಬಲಿದಾನ ಅರ್ಪಿಸಬೇಕೆಂದು ಅಜ್ನಾಪಿಸುತ್ತಾನೆ, ಆದರೆ ದೇವರ ಮೆಲೆ ಅಪಾರ ನಂಬಿಕೆಯಿಟ ಅಬ್ರಾಂಮ್ ತನ್ನ ಒಬ್ಬನೆ ಒಬ್ಬ ಪುತ್ರನನ್ನು ಬಲಿದಾನ ನೀಡಲು ಮುಂದಾಗುತ್ತಾನೆ, ಆದರೆ ದೇವರು ಆತನನ್ನು ತಡೆದು, ಅಬ್ರಾಹಾಂಮನ ಸಂತತಿಯನ್ನು ಆಕಾಶದ ತಾರೆಗಳಂತೆ ಹೆಚ್ಚಿಸಿದನು. ಅವರ ನಂಬಿಕೆಯಂತೆ ನಮ್ಮ ನಂಬಿಕೆಯಾಗಲಿ. ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಸಂತ ಅಂತೋನಿಯವರು ದೇವರ ಮೇಲೆ ಅಚಲ ನಂಬಿಕೆಯುಳ್ಳವರು, ಸಂತ ಅಂತೋನಿಯವರು ಪ್ರವಚನ ನೀಡುವಲ್ಲಿ ಅತ್ಯಂತ ಖ್ಯಾತರು. ನೀವು ತಮ್ಮ ಶರೀರದ ಬಗ್ಗೆ, ಅಥವ ಆಸ್ತಿ, ಪಾಸ್ತಿ, ನಗನಾಣ್ಯಗಳ ಬಗ್ಗೆ ನೀವು ಕೋರಿಕೆ ಕೇಳುವುದು ಮುಖ್ಯವಾದ ಉದ್ದೇಶವನ್ನಾಗಿಟ್ಟುಕೊಳ್ಳುವುದು ಬೇಡ, ಇವೆಲ್ಲಾ ಇಹ ಲೋಕಗಳ ಆಶೆಗಳು ಅವು ಶಾಶ್ವತವಲ್ಲ, ನೀವು ನಮಗೆ ಶಾಶ್ವತವಾದ ಪರಲೋಕದ ಸ್ವರ್ಗಸುಖ ಪಡೆಯುವುದೇ ಉದ್ದೇಶವನ್ನಾಗಿಟ್ಟುಕೊಂಡು ದೇವರ ವಾಕ್ಯಗಳನ್ನು ಪಾಲಿಸಿ ವೀವು ಭಾಗ್ಯಶಾಲಿಗಳಾಗಬೇಕು” ಎಂದು ಅವರು ಪ್ರವಚನ ನೀಡಿದರು.
ಅದಕ್ಕೂ ಮೊದಲು ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ ಪ್ರಸ್ತಾವಿಸಿ ಸಂತ ಅಂತೋನಿಯವರು ಅನೇಕ ಪವಾಡ ಮಾಡಿದ ಶ್ರೇಷ್ಟರು. ಅವರು ದೇವರ ವಾಕ್ಯಗಳನ್ನು ಪ್ರವಚನ ಮಾಡಲು ಸುಪ್ರಸಿದ್ದರು. ಅದಕ್ಕಾಗಿ ದೇವರು ಅವರಿಗೆ ಅಮರವಾದ ನಾಲಿಗೆಯನ್ನು ನೀಡಿದ್ದರು. ಅವರ ಸತ್ತು 35 ವರ್ಷದ ನಂತರ ಅವರ ಶವವನ್ನು ಹೊರ ತೆಗೆದು ಪರೀಕ್ಷೆ ಮಾಡಿದಾಗ ಅವರ ದೇಹದ ಎಲ್ಲಾ ಭಾಗಗಳು ಕೊಳೆತರೂ, ಅವರ ನಾಲಿಗೆ ಮಾತ್ರ ಎನೊಂದು ಕೆಡದೆ, ಜೀವವಿತ್ತು, (ಅದೇ ನಾಲಿಗೆಯ ಚಿಕ್ಕ ಭಾಗ ಅವಶೇಷದದ ರೂಪದಲ್ಲಿ ಈ ಕೆರೆಕಟ್ಟೆಯ ಪುಣ್ಯ ಕ್ಷೇತ್ರದಲ್ಲಿ ಇದೆ) ಈ ಕೆರೆಕಟ್ಟೆಯಲ್ಲಿ ಜೂನ್ 13, 2013 ರಂದು ಸಂತ ಅಂತೋನಿಯವರ ನಡೆದ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರವೆಂದು ಅಧಿಕೃತವಾಗಿ ಘೋಷಿಸಲಾಯಿತು” ಎಂದು ತಿಳಿಸಿದದು. ಅವರು ಹಬ್ಬದ ಕೊನೆಯ ಭಾಗದಲ್ಲಿ ನಿರ್ಗತಿಕರ ಆಶ್ರಮಕ್ಕೆ ಅವರು ಶಿಲಾನಾಸ್ಯನ ಗೈದು ಆಶಿರ್ವಚನ ಮಾಡಿ ಸಂತ ಅಂತೋನಿ ಈ ಪುಣ್ಯ ಕ್ಷೇತ್ರದ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಅವರು ಶ್ಲಾಘಿಸಿದರು. ಅವರನ್ನು ಪುಣ್ಯಕ್ಷೇತ್ರದ ಪರವಾಗಿ ಸನ್ಮಾನಿಸಲಾಯಿತು. ಕುಂದಾಪುರ ವಲಯ ಪ್ರಧಾನ ಅ|ವಂ| ವಂದನೀಯ ಫಾ. ಸ್ಟ್ಯಾನಿ ತಾವ್ರೊ, ಮಂಗಳೂರು ಧರ್ಮಪ್ರಾಂತ್ಯದಲ್ಲಿ ಸಂತ ಅಂತೋನಿಯವರ ನಿರ್ಗತಿಕರ ಆಶ್ರಮದಂತೆ ಕೆರೆಕಟ್ಟೆಯ ಸಂತ ಅಂತೋನಿ ನಿರ್ಗತಿಕರ ಆಶ್ರಮ ಬೆಳೆಯಲಿ, ಸಂತ ಅಂತೀನಿಯವರು ಖಂಡಿತವಾಗಿ ಈ ಆಶ್ರಮವನ್ನು ಮುನ್ನೆಡೆಸುತ್ತಾರೆ’ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ನಿರ್ಗತಿಕರ ಆಶ್ರಮಮದ ಸಮಿತಿಯ ಪಿಲಿಫ್ ಡಿಕೋಸ್ತಾ ಉಪಸ್ಥಿಅರಿದ್ದರು.
ಕುಂದಾಪುರ ರೋಜರಿ ಮಾತಾ ಚರ್ಚಿನ ಗಾಯನ ತಂಡವು ದೇವರ ಸ್ಥುತಿ ಗೀತೆಗಳನ್ನು ಹಾಡಿ ದಿವ್ಯ ಬಲಿದಾನಕ್ಕೆ ಸಹಕರಿಸಿತು. ಈ ಪುಣ್ಯ ಕ್ಷೇತ್ರಕ್ಕೆ ದಾನ ನೀಡಿದವರನ್ನು ಸನ್ಮಾನಿಸಲಾಯಿತು. ಹಬ್ಬದ ಬಲಿ ಪೂಜೆಯಲ್ಲಿ ಕುಂದಾಪುರ ವಲಯದ ಹೆಚ್ಚಿನ ಧರ್ಮಗುರುಗಳು, ಇತರ ವಲಯದ ಧರ್ಮಗುರುಗಳು ಸಹಬಲಿದಾನವನ್ನು ಅರ್ಪಿಸಿದರು. ಧರ್ಮಭಗಿನಿಯವರು ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿದ್ದು ಇತರ ಜಿಲ್ಲೆಯವರು ಭಾಗವಹಿಸಿದ್ದ ಹಬ್ಬದಲ್ಲಿ, ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ಧನ್ಯವಾದಗಳನ್ನು ಸಮರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದ ನಿಲಯದ ಧರ್ಮಗುರು ವಂ| ಸಿರಿಲ್ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು.
ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು

ಕೋಲಾ:ಅರಣ್ಯ ರಕ್ಷಣೆಗೆ ಮುಂದಾಗುವಂತೆ ಅರಣ್ಯ ಇಲಾಖೆಗೆ ಸಾರ್ವಜನಿಕರ ಒತ್ತಾಯ

ಕೋಲಾರ,ಫೆ.14: ಕಾಶಿ ವಿಶ್ವನಾಥ ದೇವಸ್ಥಾನ (ಅಂತರಗಂಗೆ) ಕೋಲಾರ ಬೆಟ್ಟದ ತಪ್ಪಲಿನಲ್ಲಿ ಬೆಳಗ್ಗೆ 5 ಗಂಟೆ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಾಕಿರುವ ಘಟನೆ ನಡೆದಿದೆ.
ಇದೇ ಮಾರ್ಗದಲ್ಲಿ ವಾಕಿಂಗ್ ತೆರಳಿದ್ದ ಕೆ.ಎನ್.ಎನ್.ಟಮೊಟೊ ಮಂಡಿ ಮಾಲೀಕರಾದ ಪ್ರಕಾಶ, ಖಾದ್ರಿಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಲಿಂಗಪ್ಪ, ಶಿಕ್ಷಕ ಶ್ರೀರಾಮ, ವಿಧಾನಸೌಧ ರಮೇಶ್, ಮೇಸ್ತ್ರಿ ಸೀನಪ್ಪ, ಕೆ.ಎಸ್.ಆರ್.ಟಿ.ಸಿ.ರಮೇಶ್ ಸೇರಿದಂತೆ ಸ್ನೇಹಿತರು ಬೆಂಕಿಯನ್ನು ಪೂರ್ತಿಯನ್ನು ನಂದಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮುಂದೆ ಇಂತಹ ಅವಘಡಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

9th day     – Novena preceding the Feast of Relic St. Anthony was held at Mangaluru Milagres Church

Theme for the Day  “ Saint Anthony gave glory to God through his Tounge” The Novena Mass for the relic feast of St Anthony was held at Milagres Church at 6:00 p.m. Rev Fr stany Pinto campus Director Of St philomena college Puttur was the main celebrant for mass. In his homily he spoke on the theme by highlighting different examples from the Bible and the life of St Anthony’s,    Rev Fr. J B Crasta, and  Rev Fr Rupesh Tauro con-celebrated the mass. At the end of the mass Fr Rupesh  Conducted the Novena in honour of St Anthony during which special prayers were offered for Benefactors of St Anthony Ashram. St Anthony’s Ashram students choir Group sang and Joined in Thanksgiving

ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸಾಯ್ಸಸ್, ಹಾಗೂ ಎಸ್.ಸಿ.ಎಸ್. ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಾಯ್ಸಸ್‍ನ ಪ್ರಮಾಣವಚನ


ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸಾಯ್ಸಸ್, ಹಾಗೂ ಎಸ್.ಸಿ.ಎಸ್. ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಾಯ್ಸಸ್‍ನ ಪ್ರಮಾಣವಚನ ಸ್ವೀಕಾರ ಸಮಾರಂಭವು ತಾರೀಕು 14.02.2023ನೇ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಶೋಕನಗರದಲ್ಲಿರುವ ಕೆ.ಎ.ಎಂ.ಸಿ. ಕಟ್ಟಡದ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಸಿಸ್ಟರ್ ದೀಪಾ ಪಿಟರ್, ಪ್ರಾಂಶುಪಾಲರು, ಅಥೆನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್, ಮಂಗಳೂರು ಇವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಡಾ| ಅಭಿನಯ್ ಸೊರಕೆ, ಕಾರ್ಯದರ್ಶಿ, ಎಸ್.ಸಿ.ಎಸ್. ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ಸ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಮಾರಿ ದೀಪಾ ಇವರು ಬಂದ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ. ಡೆನ್ಸಿಲ್ ಡಿಸೋಜ, ಸಹಾಯಕ ಉಪನ್ಯಾಸಕ, ಇವರು ಈ ದಿನದ ಮಹತ್ವದ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಸಿಸ್ಟರ್ ದೀಪಾ ಪಿಟರ್, ಅವರು ವಿದ್ಯಾರ್ಥಿಗಳನ್ನು ಕುರಿತು ಈ ಉದಾತ್ತ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ರೋಗಿಗಳ ಆರೈಕೆಯಲ್ಲಿ ಸ್ಪರ್ಶದ ಮಹತ್ವ ಮತ್ತು ರೋಗಿಗಳ ಆರೈಕೆಯಲ್ಲಿ ಶುಶ್ರೂಷಕಿಯರ ಜವಾಬ್ದಾರಿಗಳನ್ನು ಒತ್ತಿ ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೊಲಿಟ ಎಸ್. ಎಮ್. ಡಿಸೋಜ, ಇವರು ಹೊಸ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ಕುಮಾರಿ ಪವೆಲಾ ಮೆಂಡೋನ್ಸ, ಸಹಾಯಕ ಉಪನ್ಯಾಸಕಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭದಲ್ಲಿ ಎಸ್.ಸಿ.ಎಸ್. ಗೂಫ್ ಆಫ್ ಇನ್ಸ್ಟಿಟ್ಯೂಟಿನ ಆಡಳಿತಾಧಿಕಾರಿ ಶ್ರೀ.ಯು. ಕೆ. ಖಾಲಿದ್, ಉಪ ಆಡಳಿತಾಧಿಕಾರಿಗಳಾಗಿರುವ ಶ್ರೀ.ಸಾಜು, ಉಪಪ್ರಾಂಶುಪಾಲರು ಶ್ರೀ.ಅನಿಲ್ ಕುಮಾರ್, ಶ್ರೀಮತಿ ಪ್ರಮೀಳಾ ಎಚ್.ವಿ. ಮತ್ತು ಶ್ರೀಮತಿ ದಿವ್ಯ ಅವರು ಉಪಸ್ಥಿತರಿದ್ದರು. ಕು. ಮನೀಷಾ, ಸಹಾಯಕ ಉಪನ್ಯಾಸಕಿ, ಅವರು ವಂದನಾರ್ಪಣೆಗೈದರು. ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.