ಕುಂದಾಪ್ರ ಕನ್ನಡ ಅಕಾಡೆಮಿಗೆ ಸಚಿವರ ತಿರಸ್ಕಾರ – ರೊಚ್ಚಿಗೆದ್ದ ಕುಂದಗನ್ನಡಿಗರು – ಸಚಿವ ಸುನೀಲ್ ಕುಮಾರ್ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಆಗದಿದ್ದರೆ, ತಮ್ಮ ಸ್ಥಾನ ತೊರೆಯಲಿ- ಬಿ. ಅಪ್ಪಣ್ಣ ಹೆಗ್ಡೆ

ಕುಂದಾಪುರ, ಫೆ.೨೨: ಕರ್ನಾಟಕ ರಾಜ್ಯಕ್ಕೆ, ಭಾರತ ದೇಶಕ್ಕೆ ಸರ್ವ ರಂಗಗಳಲ್ಲೂ ಅದ್ಭುತವಾದ ಕೊಡುಗೆಗಳನ್ನು ನೀಡಿದ ವಿಶಿಷ್ಟ ಊರು ಕುಂದಾಪುರದ ಹೆಮ್ಮೆಯಾದ ವಿಶಿಷ್ಟ ಭಾಷೆಯಾದ ಕುಂದಾಪ್ರ ಕನ್ನಡ ಭಾಷೆಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು ತಿಳುವಳಿಕೆಯ ಕೊರತೆಯಿಂದ ಮತ್ತು ಉದ್ಧಟತನದಿಂದ ಎಕಾಎಕಿ ತಿರಸ್ಕರಿಸಿದ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರ ವರ್ತನೆಯು ಮೂವತ್ತು ಲಕ್ಷಕ್ಕೂ ಹೆಚ್ಚು ಕುಂದಾಪ್ರ ಕನ್ನಡ ಭಾಷಿಗರನ್ನು ರೊಚ್ಚಿಗೆಬ್ಬಿಸಿದೆ.

ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಯ ದಶಕಗಳ ಬೇಡಿಕೆಯ ಕುರಿತು ಶಾಸಕ ಮಂಜುನಾಥ ಭಂಡಾರಿಯವರು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸಾರ್ವಜನಿಕ ಮಹತ್ವದ ಜರೂರು ವಿಷಯವಾಗಿ ಪರಿಗಣಿಸಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಮನವಿ ಸಲ್ಲಿಸಿದ್ದರು. ಆದರೆ, ವಿಶಿಷ್ಟವಾದ ಕುಂದಾಪ್ರ ಕನ್ನಡದ ಮಹತ್ವವನ್ನರಿಯದೆ, ಈ ಬಗ್ಗೆ ಯಾವ ಅಧ್ಯಯನವನ್ನೂ ಮಾಡದೆ, ಪರಿಣತರ ಸಲಹೆಗಳನ್ನೂ ಪಡೆದುಕೊಳ್ಳದೆ, ಸಚಿವರು ವಿರೋಧ ಪಕ್ಷದವರಿಂದ ಪ್ರಸ್ತಾವನೆ ಎಂಬ ಒಂದೇ ಕಾರಣದಿಂದ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದು ಲಕ್ಷಾಂತರ ಮಂದಿ ಕುಂದ ಕನ್ನಡಿಗರಿಗೆ ಅತೀವ ಬೇಸರ ತರಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರ ನಡೆಯನ್ನು ಖಂಡಿಸಿ ಮಾಜಿ ಶಾಸಕ, ಹಿರಿಯ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಕುಂದಾಪುರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿ ನಡೆಸಿ, ಸಚಿವ ಸುನಿಲ್ ಕುಮಾರ್ ಅವರ ವರ್ತನೆಯನ್ನು ಖಂಡಿಸಿದ್ದಾರೆ.

ನಿನ್ನೆ ಸಂಜೆ 4 ಗಂಟೆಗೆ ಹರಿಪ್ರಸಾದ್ ಅಕ್ಷತ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮುತ್ಸದಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆಯವರು ಪತ್ರಿಕಾ ಗೋಷ್ಟಿಯಲ್ಲಿ ನೀಡಿದ ಹೇಳಿಕೆಯ ಪೂರ್ಣಪಾಠ ಇಂತಿದೆ –


“ಮೊತ್ತ ಮೊದಲು ನಾನು ಕನ್ನಡ ಸಂಸ್ಕ್ರತಿ ಇಲಾಖೆಯ ಮತ್ತು ವ್ಯಿದ್ಯುತ್ ಮಂತಿ ಸುನೀಲ್ ಕುಮಾರ್ ಇವರ ಬೆಜವಾಬ್ದಾರಿ ಕುಂದಾಪ್ರ ಕನ್ನಡಕ್ಕೆ ಕುಂದಾಪ್ರ ಅಕಾಡೆಮಿ ನೀಡಲಿಕೆ ಆಗುವುದಿಲ್ಲ ಎಂದು ವಿಧಾನ ಸಭೆಯಲ್ಲಿ ನೀಡಿದ ಲಿಖಿತ ಉತ್ತರವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಪತ್ರಿಕೆ ಗೋಷ್ಟಿಯಲ್ಲಿ ತಿಳಿಸಿ ಸಚಿವ ಸುನೀಲ್ ಕುಮಾರ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಆಗದಿದ್ದರೆ, ತಮ್ಮ ಸ್ಥಾನ ತೊರೆಯಲಿ “ಎಂದು ಹೇಳಿದರು.

ಮುಂದುವರೆಸಿ ಅವರು ಕುಂದಾಪುರ ಶುದ್ಧ ಕನ್ನಡದ ನೆಲ. ಇದರ ಮೇಲೆ ಬೇರೆ ಭಾಷೆಯ ಪ್ರಭಾವವಿಲ್ಲ. ಕರ್ನಾಟಕ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಕನ್ನಡದ ಉಚ್ಚಾರ ಮಾಡಲಾಗುತ್ತಿದೆಯಾದರೂ ಕುಂದಾಪ್ರ ಕನ್ನಡದ ಪರಿಶುದ್ಧತೆ, ಜಾನಪದ ಸಾಹಿತ್ಯದ ವೈಶಿಷ್ಟ್ಯ, ಸಂಸ್ಕೃತಿ ಬೇರೆಲ್ಲೂ ಇಲ್ಲ. ಸಾವಿರಾರು ವರ್ಷಗಳಿಂದ ತನ್ನತನ ಉಳಿಸಿಕೊಂಡಿರುವ ಈ ಭಾಷೆಯ ವೈಶಿಷ್ಟ್ಯ ಮತ್ತು ಚೆಲುವಿಗೆ ಇನ್ನೊಂದರ ಹೋಲಿಕೆ ಸಾಧ್ಯವಿಲ್ಲ. ಜನಪದ ಸಾಹಿತ್ಯದಲ್ಲಿ ಕುಂದಾಪ್ರ ಕನ್ನಡದಷ್ಟು ಸೊಗಡು ಎಲ್ಲಿಯೂ ಇಲ್ಲ. ಸಾವಿರಾರು ಪದಗಳ ಕುಂದಾಪ್ರ ಕನ್ನಡ ನಿಘಂಟು ಮಾಡಿದವರಿಗೂ ಈ ಭಾಷೆಯ ಎಲ್ಲ ಹಳೆಯ ಪದ ಪ್ರಯೋಗಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕುಂದಾಪ್ರ ಕನ್ನಡದ ಆಳ-ಅಗಲ ಅಷ್ಟು ವಿಸ್ತಾರವಾದುದು. ಈ ವಿಶಿಷ್ಟ ಭಾಷೆಯ ಉಳಿವು, ಅಧ್ಯಯನಕ್ಕಾಗಿ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿಯನ್ನು ಸರ್ಕಾರ ಸ್ಥಾಪಿಸಬೇಕು ಎಂದು ಬಹುತೇಕ ಸಾಹಿತ್ಯ ಸಮ್ಮೇಳನ, ಸಮಾವೇಶಗಳಲ್ಲಿ ಆಗ್ರಹಪಡಿಸಲಾಗುತ್ತಿದೆ.

ಈ ವಿಷಯವಾಗಿ ಸರ್ಕಾರಕ್ಕೆ ಮನವಿಯನ್ನೂ ನೀಡಲಾಗಿತ್ತು. ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆ ಬಗ್ಗೆ ವಿವಿಧ ವಿಧ್ವಾಂಸರಿಂದ ಮಾಹಿತಿ ಸಂಗ್ರಹಿಸಿ ವಿಧಾನ ಪರಿಷತ್ ನಲ್ಲಿ ಶಾಸಕ ಮಂಜುನಾಥ ಭಂಡಾರಿಯವರು ಪ್ರಸ್ತಾಪ ಮಾಡಿ, ಸರ್ಕಾರದಿಂದ ಉತ್ತರ ಬಯಸಿದ್ದರು. ಆದರೆ, ಸಚಿವ ಸುನಿಲ್ ಕುಮಾರ್ ಈ ಬಗ್ಗೆ ನಿರಾಶಾದಾಯಕ ಉತ್ತರ ನೀಡಿದ್ದಲ್ಲದೆ, ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂಬ ಅಸಮರ್ಪಕ ಹೇಳಿಕೆಯನ್ನು ನೀಡಿದ್ದಾರೆ.

ಈ ಬಗ್ಗೆ ಯಾರೊಂದಿಗೂ ಸಮಾಲೋಚಿಸದೆ, ಅಧ್ಯಯನ ಮಾಡದೆ, ಕರ್ನಾಟಕದಲ್ಲಿ ವಿವಿಧ ರೀತಿಯ ಕನ್ನಡ ಮಾತನಾಡುವುದು ಸಾಮಾನ್ಯ ಎಂಬಂತೆ ಉತ್ತರ ನೀಡಿರುವುದು ತಿಳುವಳಿಕೆ ಇಲ್ಲದವರ ಉತ್ತರ ಎಂದೇ ತಿಳಿಯಬೇಕಾಗುತ್ತದೆ. ಸಚಿವರು ಉಡುಪಿ ಜಿಲ್ಲೆಯವರೇ ಆಗಿದ್ದು, ಅವರ ಕ್ಷೇತ್ರದ ಬಹಳಷ್ಟು ಗ್ರಾಮಗಳಲ್ಲಿ ಕುಂದಾಪ್ರ ಕನ್ನಡ ಭಾಷೆಯ ಜನರೇ ಇದ್ದರೂ ಈ ರೀತಿಯ ಅಸಡ್ಡೆಯ ಉತ್ತರ ನೀಡಿರುವುದು ಖಂಡನೀಯ.

ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಹಾಗೂ ಮಂಗಳೂರು ವಿ ವಿ ಯಲ್ಲಿ ಕುಂದಾಪ್ರ ಕನ್ನಡ ಪೀಠಕ್ಕೆ ಅನುದಾನ ಮಂಜೂರಾತಿ ಬಗ್ಗೆ ಮುಖ್ಯ ಮಂತ್ರಿಗಳನ್ನು ಒತ್ತಾಯಿಸುವ, ಮತ್ತು ಹೋರಾಟ ನಡೆಸುವುದು ಅನಿವಾರ್ಯವಾಗಿದೆ.

ರಾಜ್ಯದ ಧಾರವಾಡ, ಬಳ್ಳಾರಿ, ಮಂಗಳೂರು, ಮಡಿಕೇರಿ ಮೊದಲಾದ ಪ್ರದೇಶಗಳಲ್ಲಿ ಕನ್ನಡದ ಮೇಲೆ ಮರಾಠಿ, ತೆಲುಗು, ತಮಿಳು, ಮಲಯಾಳಮ್ ಇತ್ಯಾದಿ ಅನ್ಯಭಾಷೆಗಳ ಪ್ರಭಾವವಿದೆ. ಆದರೆ ಕುಂದಾಪ್ರ ಕನ್ನಡದ ಮೇಲೆ ಯಾವುದರ ಪ್ರಭಾವವೂ ಇಲ್ಲದೆ ಶುದ್ಧವಾಗಿದೆ. ಹಿಂದಿನ ರಾಜ ಮಹಾರಾಜರ ಕಾಲದಲ್ಲೂ ಕುಂದಾಪ್ರ ಕನ್ನಡಕ್ಕೆ ಮಹತ್ವವಿತ್ತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ಲಕ್ಷ್ಮೇಶ್ವರದಲ್ಲಿನ ಶಾಸನವೊಂದರಲ್ಲೂ ಕುಂದಾಪ್ರ ಕನ್ನಡದ ಉಲ್ಲೇಖವಿದೆ. ಪಂಪ, ರನ್ನರ ಕಾವ್ಯಗಳಲ್ಲೂ ಕುಂದಾಪ್ರ ಕನ್ನಡದ ಪದಗಳಿವೆ. ಇಷ್ಟೆಲ್ಲಾ ಸಮೃದ್ಧಿಯಾದ ಭಾಷೆಯ ಬಗ್ಗೆ ಅರಿವಿಲ್ಲದೆ ಉತ್ತರಿಸಿರುವುದು ಸಚಿವರ ಜ್ಞಾನದ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅಪ್ಪಣ್ಣ ಹೆಗ್ಡೆ ಖಂಡಿಸಿದ್ದಾರೆ. ಮಾತ್ರವಲ್ಲ ಚುನಾವಣೆಯೊಳಗೆ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಯ ಘೋಷಣೆ ಮಾಡದಿದ್ದರೆ, ಸಮಾನ ಮನಸ್ಕರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿಯೂ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೊಂಡ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಟಿ. ಗಣಪತಿ ಶ್ರೀಯಾನ್, ಕುಂದಾಪುರ ಜಿಲ್ಲಾ ರಚನೆ ಹೋರಾಟ ಸಮಿತಿ ಅಧ್ಯಕ್ಷ ಮುಂಬಾರು ದಿನಕರ ಶೆಟ್ಟಿ, ಶಂಕರನಾರಾಯಣ ತಾಲ್ಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸ್ವಾವಲಂಬನಾ ಸಂಘದ ಅಧ್ಯಕ್ಷ ಪ್ರೊ. ವೆಂಕಟೇಶ ಪೈ, ಬಂಟರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಕುಂದಾಪ್ರ ಕನ್ನಡದ ವಿಶಿಷ್ಟತೆಯ ಬಗ್ಗೆ ವಿವರಿಸಿ, ಅಕಾಡೆಮಿ ಸ್ಥಾಪನೆಯ ಬಗ್ಗೆ ಒತ್ತಾಯಿಸಿದರು. ಚುನಾವಣೆ ಸಮೀಪಸುತ್ತಿರುವ ಈ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ನೀಡಿದ ಈ ಬಾಲಿಶ ಹೇಳಿಕೆ ಮೂವತ್ತು ಲಕ್ಷಕ್ಕೂ ಹೆಚ್ಚು ಕುಂದಾಪ್ರ ಕನ್ನಡಿಗರನ್ನು ಕೆರಳಿಸಿದೆ. ಮಾತ್ರವಲ್ಲ ವಿರೋಧ ಪಕ್ಷಗಳಿಗೆ ಒಂದು ಅಸ್ತ್ರವನ್ನೂ ನೀಡಿದಂತಾಗಿದೆ. ಈ ಪ್ರದೇಶದ ವಿವಿಧ ಹೋರಾಟ ಸಮಿತಿಗಳಿಗೆ ಹೊಸ ಕೆಚ್ಚು ತುಂಬಿದೆ. ಪತ್ರಕರ್ತ ಯು. ಎಸ್. ಶೆಣೈ ಸ್ವಾಗತಿಸಿ, ವಂದಿಸಿದರು.

ಮಕ್ಕಳ ಅಪಕರಣ- ಸದನದಲ್ಲಿ ಗೋವಿಂದರಾಜು ಪ್ರಶ್ನೆಗೆ ಗೃಹ ಸಚಿವರ ಉತ್ತರ:ಐದು ವರ್ಷಗಳಲ್ಲಿ 6160 ಪೋಕ್ಸೋ,12532 ಬಾಲ್ಯವಿವಾಹ ಪ್ರಕರಣ ದಾಖಲು

ಕೋಲಾರ:- ರಾಜ್ಯದಲ್ಲಿ ನಡೆಯುತ್ತಿರುವ ಮಕ್ಕಳ ಅಪಹರಣ, ದೌರ್ಜನ್ಯ ಪ್ರಕರಣಗಳ ಮಾಹಿತಿ ಹಾಗೂ ತಡೆಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಪ್ರಶ್ನಿಸಿದ ವಿಧಾನಪರಿಷತ್‍ನಲ್ಲಿ ಸದಸ್ಯ ಇಂಚರ ಗೋವಿಂದರಾಜು ಅವರಿಗೆ ಉತ್ತರಿಸಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಕಳೆದ ಐದು ವರ್ಷಗಳಲ್ಲಿ 6160 ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಸದನಕ್ಕೆ ಉತ್ತರ ನೀಡಿದರು.
ಎಂಎಲ್‍ಸಿ ಗೋವಿಂದರಾಜು ವಿಧಾನಪರಿಷತ್‍ನಲ್ಲಿ ಮಾತನಾಡಿ, ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ ಮಕ್ಕಳ ಅಪಹರಣ ಮತ್ತು ಅಪರಾಧಗಳ ಪ್ರಕರಣಗಳು, ಹಾಗೂ ಕಳೆದ ಎಂಟು ವರ್ಷಗಳಲ್ಲಿ ಸುಮಾರು ಐದು ಪಟ್ಟು ಹೆಚ್ಚು ಮಕ್ಕಳ ಮೇಲೆ ಅಪರಾಧಗಳು ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಸರ್ಕಾರ ಇದುವರೆಗೂ ತೆಗೆದುಕೊಂಡ ಕ್ರಮ, ಎಷ್ಟು ಪ್ರಕರಣಗಳನ್ನು ಇತ್ಯಾರ್ಥಪಡಿಸಲಾಗಿದೆ ಇದರಲ್ಲಿ ಎಷ್ಟು ಜನರು ಶಿಕ್ಷೆಗೆ ಒಳಗಾಗಿದ್ದಾರೆ ಮಾಹಿತಿ ನೀಡುವಂತೆ ಕೋರಿದರು.
ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆಗಳ ಪ್ರಕಾರ 2013 ರಲ್ಲಿ ರಾಜ್ಯದಲ್ಲಿ 1353 ಪ್ರಕರಣಗಳಿದ್ದರೆ, 2021 ರಲ್ಲಿ 7261 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 2020 ರಿಂದ ಸುಮಾರು 2563 ಪ್ರಕರಣಗಳನ್ನು ಪೊಲೀಸರು ಇನ್ನೂ ತನಿಖೆ ಮಾಡಬೇಕಿದೆ ಹಾಗೂ 2022 ರಲ್ಲಿ ತನಿಖೆ ಮಾಡಬೇಕಾದ ಒಟ್ಟು ಪ್ರಕರಣ ಸಂಖ್ಯೆಯು ಇದೀಗ 9824 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
ಇದಲ್ಲದೇ ಮಕ್ಕಳ ವಿರುದ್ದ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು 13,903 ಪ್ರಕರಣಗಳು ನ್ಯಾಯಾಲಗಳಲ್ಲಿ ವಿಚಾರಣೆ ಬಾಕಿ ಉಳಿದಿದ್ದು, 4673 ಪ್ರಕರಣಗಳನ್ನು 2021 ರಲ್ಲಿ ವಿಚಾರಣೆಗೆ ಕಳುಹಿಸಲಾಗಿರುತ್ತದೆ. ಇನ್ನು ಸೈಬರ್ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದ್ದು, 2019ಕ್ಕೆ ಹೋಲಿಸಿದರೆ 2020 ರಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳಲ್ಲಿ 400 ಪ್ರತಿಶತದಷ್ಟು ಹೆಚ್ಚಾಗಿರುವ ಬಗ್ಗೆ ರಾಷ್ಟ್ರೀಯ ಅಪರಾಧ ಬ್ಯೂರೋ ವರದಿಯಲ್ಲಿದೆ ಎಂದು ಸರ್ಕಾರದ ಗಮನಕ್ಕೆ ತಂದರು.
ಇದರ ಅಂಕಿ-ಅಂಶಗಳಂತೆ ಮಕ್ಕಳ ಮೇಲಿನ ಆನ್‍ಲೈನ್ ಅಪರಾಧಗಳ 842 ಪ್ರಕರಣಗಳಲ್ಲಿ 738 ಪ್ರಕರಣಗಳು ಮಕ್ಕಳನ್ನು ಲೈಂಗಿಕವಾಗಿ ಆಶ್ಲೀಲವಾಗಿ ಚಿತ್ರಿಸುವ, ಪ್ರಕಟಿಸುವ ಅಥವಾ ರವಾನಿಸುವ ಪ್ರಕರಣವಾಗಿದೆ ಎಂಬುದಾಗಿ ಇದಲ್ಲದೇ ಮಕ್ಕಳು ಸ್ಮಾರ್ಟ್‍ಫೋನ್ ಮತ್ತು ಇಂಟರ್‍ನೆಟ್‍ಗೆ ದಾಸರಾಗುತ್ತಿರುವುದರಿಂದ ಮಕ್ಕಳ ಮೇಲೆ ಆಗುತ್ತಿರುವಂತಹ ಅಪರಾಧ ಪ್ರಕರಣಗಳು ಏರುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮೊಬೈಲ್ ಕೊಡಿಸುವ ಪೋಷಕರು ತಮ್ಮ ಮಕ್ಕಳ ಚಲನವಲನದತ್ತ ಗಮನ ಹರಿಸಬೇಕಾಗಿರುತ್ತದೆ ಎಂಬುದಾಗಿ ಸುದೀರ್ಘವಾಗಿ ಗೋವಿಂದರಾಜುರವರು ಗೃಹ ಸಚಿವರ ಗಮನಕ್ಕೆ ಬಂದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವರಾದ ಅರಗಜ್ಞಾನೇಂದ್ರ, ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಕಳೆದ 5 ವರ್ಷದಲ್ಲಿ, ಗಂಡು ಮಕ್ಕಳ ಸಂಖ್ಯೆ: 2858, ಹೆಣ್ಣು ಮಕ್ಕಳ ಸಂಖ್ಯೆ: 6160, ಪೋಕ್ಸೋ ಪ್ರಕರಣಗಳ ಸಂಖ್ಯೆ:12532, ಬಾಲ್ಯ ವಿವಾಹ ತಡೆ ಕಾಯ್ದೆ ಪ್ರಕರಣಗಳ ಸಂಖ್ಯೆ:853, ಬಾಲ ಕಾರ್ಮಿಕ ತಡೆ ಕಾಯ್ದೆ ಪ್ರಕರಣಗಳು:319, ಜೆ.ಜೆ. ಕಾಯ್ದೆ ಪ್ರಕರಣಗಳ ಸಂಖ್ಯೆ:292, ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ವರದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಅಂಕಿ-ಅಂಶಗಳನ್ನು ಗಮನಿಸಿದಲ್ಲಿ ಸರಾಸರಿ 10 ರಿಂದ 20 ಶೇಕಡಾ ಹೆಚ್ಚಾಗಿರುವುದು ಕಂಡುಬಂದಿರುತ್ತದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಜೆ.ಜೆ. ಕಾಯ್ದೆ ಪ್ರಕರಣಗಳ ಸಂಖ್ಯೆ:292, ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ವರದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಅಂಕಿ-ಅಂಶಗಳನ್ನು ಗಮನಿಸಿದಲ್ಲಿ ಸರಾಸರಿ 10 ರಿಂದ 20 ಶೇಕಡಾ ಹೆಚ್ಚಾಗಿರುವುದು ಕಂಡುಬಂದಿರುತ್ತದೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವರ ಉತ್ತರಕ್ಕೆ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದಾಗ ಮಾತನಾಡಿದ ಸಚಿವರು, ಸದಸ್ಯರು ಸಂಕ್ಷೀಪ್ತವಾಗಿ ವಿವರಗಳನ್ನು ನೀಡಿರುತ್ತಾರೆ. ಇದನ್ನು ನಾನು ಒಪ್ಪುತ್ತೇನೆ. ಈ ಸಂಬಂಧವಾಗಿ ಅತ್ಯಾಚಾರ, ಪೋಕ್ಸೋ ಪ್ರಕರಣಗಳ ತನಿಖೆಯನ್ನು ಅಪರಾಧ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ, 2018 ರಲ್ಲಿನ ತಿದ್ದುಪಡಿಯಂತೆ ನಿಗದಿಪಡಿಸಿರುವ 60 ದಿನಗಳ ಕಾಲಮಿತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆಯ ಮೂಲಕ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.
ಚಾಲ್ತಿಯಲ್ಲಿರುವ ಸಾಮಾಜಿಕ ಜಾಲತಾಣಗಳಾದ ಬ್ಲಾಗ್, ಟ್ವಿಟರ್, ಫೇಸ್ ಬುಕ್, ಪೊಲೀಸ್ ವೆಬೆ ಸಸೈಟ್ ಹಾಗೂ ಇತರೆ ಜಾಲತಾಣಗಳ ಮೂಲಕ ಮಾನವ ಕಳ್ಳ ಸಾಗಾಣಿ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಪ್ರಕಟಿಸುವ ಕಾರ್ಯವನ್ನು ಚುರುಕುಗೊಳಿಸುವುದಾಗಿ ಸದನಕ್ಕೆ ಸಚಿವರು ಉತ್ತರ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಮೇಲೆ ವಿಚಾರಸಂಕಿರಣ

ಕ್ರೈಸ್ತ ವಿದ್ಯಾಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಋಷಿವನ, ಆಧ್ಯಾತ್ಮಿಕತೆಯ ಸಂಸ್ಥೆ-ಕುತ್ತಾರು ಇವುಗಳ ಜಂಟಿ ಆಶ್ರಯದಲ್ಲಿ 18 ಫೆಬ್ರವರಿ 2023 ರಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ಎಂಬ ವಿಷಯದ ಮೇಲೆ ವಿಚಾರಸಂಕಿರಣವು ಜರಗಿತು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣವು ಕೇವಲ ಒಂದು ತರಗತಿ ಅಥವಾ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ಬದುಕುವ ಕಲೆಯನ್ನು ಕಲಿಸಬೇಕು ಹಾಗೂ ನಮ್ಮನ್ನು ಸಮಾಜದ ಕೆಡುಕುಗಳ ವಿಮೋಚನೆಗಾಗಿ ಪ್ರೇರೇಪಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸಂತ ಅಲೋಷಿಯಸ್ ಕಾಲೇಜಿನ ಲೊಯೋಲಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ರಿಚ್ಚರ್ಡ್ ಗೊನ್ಸಾಲ್ವಿಸ್ ರವರು ಶಿಕ್ಷಣ ನೀತಿಯ ಸಮಗ್ರ ನೋಟವನ್ನು ನೀಡಿದರೆ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ವಲೇರಿಯನ್ ರೊಡ್ರಿಗಸ್ ರವರು ಶಿಕ್ಷಣ ನೀತಿಯ ವಿಮರ್ಶೆ ಮಾಡಿದರು.

ಮೊದಲನೆಯ ಗೋಷ್ಠಿಯ ಚರ್ಚೆಯನ್ನು ಸಂತ ಅನ್ನ ಬಿಎಡ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಪ್ಲೋಸಿ ಡಿಸೋಜ ಹಾಗೂ ಎರಡನೆಯ ಗೋಷ್ಠಿಯ ಚರ್ಚೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ವಂ. ಡಾ. ಗ್ರೆಗರಿ ಡಿಸೋಜರವರು ನಿರ್ವಹಿಸಿದರು.

ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಲಾವಿಭಾಗದ ಮುಖ್ಯಸ್ಥರಾದ ಪ್ರೊ. ಜಯರಾಜ್ ಅಮೀನ್ ರವರು ಶಿಕ್ಷಣ ನೀತಿಯ ಬಗ್ಗೆ ಕೆಲವು ವಿಚಾರಗಳನ್ನು ಮಂಡಿಸಿದರು. ಋಷಿವನದ ನಿರ್ದೇಶಕರಾದ ವಂ. ಡಾ. ಅರ್ಚಿಬಾಲ್ಢ್ ಗೊನ್ಸಾಲ್ವಿಸ್ ಮತ್ತು ಕ್ರೈಸ್ತ ಪೀಠದ ಮುಖ್ಯಸ್ಥರಾದ ವಂ. ಡಾ. ಐವನ್ ಡಿ’ಸೋಜರವರ ಮಾರ್ಗದರ್ಶನದಲ್ಲಿ ಜರಗಿದ ಈ ಗೋಷ್ಠಿಯಲ್ಲಿ ಸುಮಾರು 250 ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವವರು ಭಾಗವಹಿಸಿದ್ದರು. ಋಷಿವನದ ಭೋದಕ ವೃಂದ ಹಾಗೂ ವಿದ್ಯಾರ್ಥಿಗಳು ವಿಚಾರಸಂಕಿರಣದ ಎಲ್ಲಾ ವ್ಯವಸ್ಥೆಯನ್ನು ಮಾಡಿದರು.

ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯರಿಂದ ಕುಂದಾಪುರ ಗಡಿಯಾರ ಗೋಪುರವನ್ನು ಆಕರ್ಷಣೆ ಶೈಲಿಯಲ್ಲಿ ನವೀಕರಣ

ಕುಂದಾಪುರ:ಇನ್ನರ್ ವ್ಹೀಲ್ ಕ್ಲಬ್ ಕುಂದಾಪುರ ದಕ್ಷಿಣ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಸವಿ ನೆನಪಿಗಾಗಿ ಈಗಾಗಲೇ ನಂದಿಕೇಶ್ವರ ಫ್ರೇಂಡ್ಸ್ ನಿರ್ಮಿಸಿದ್ದ ಗಡಿಯಾರ ಗೋಪುರವನ್ನು ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯರು ವಿನೂತನ ರೀತಿಯ ಆಕರ್ಷಣೆ ಶೈಲಿಯಲ್ಲಿ ನವೀಕರಣಗೊಳಿಸಿದ್ದಾರೆ.

ಇನ್ನರ್ ವ್ಹೀಲ್ ಕ್ಲಬ್ಬಿನ ಜಿಲ್ಲಾ ಸಭಾಪತಿ ಶ್ರೀಮತಿ ಕವಿತಾ ನಿಯತ್ ನವೀಕರಿಸಿದ ಗಡಿಯಾರ ಗೋಪುರ ಉದ್ಘಾಟಿಸಿ, ನಗರ ಸೌಂದರ್ಯ ಹೆಚ್ಚಿಸುವಲ್ಲಿ ವೃತ್ತಗಳು, ಗಡಿಯಾರ ಗೋಪುರಗಳು ಸಹಕಾರಿ ಎಂದು ಹೇಳಿದರು.

ಇನ್ನರ್ ವ್ಹೀಲ್ ಕ್ಲಬ್ಬಿನ ಅಧ್ಯಕ್ಷರಾದ ಸುಮಾ ಪುತ್ರನ್ ಸ್ವಾಗತಿಸಿ, ಕಾರ್ಯದರ್ಶಿ ರಶ್ಮಿ ಶೇಟ್ ವಂದಿಸಿದರು.

ಪುರಸಭಾ ಸದಸ್ಯರಾದ ಮೋಹನದಾಸ ಶೆಣೈ, ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಪುಷ್ಪಾ ಶೇಟ್, ರೋಟರಿ ವಲಯ ಒಂದರ ಸಹಾಯಕ ಗವರ್ನರ್ ರೊ ಡಾ ಉಮೇಶ್ ಪುತ್ರನ್, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಇನ್ನರ್ ವ್ಹೀಲ್ ನ ಸದಸ್ಯರು ಹಾಗೂ ಹೂವಿನ ಮಾರುಕಟ್ಟೆಯವರು ಉಪಸ್ಥಿತರಿದ್ದರು.

ನಿವೇದಿತಾ ಪ್ರೌಢ ಶಾಲೆಗೆ ಸಹಾಯ ಧನ ಕೊಡುಗೆ ಹಾಗೂ ವೃತ್ತಿ ಮಾರ್ಗದರ್ಶನ

ರೋಟರಿ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ರೊ ಕೆ. ಪಾಂಡುರಂಗ ಭಟ್ ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವೃತ್ತಿ ಮಾರ್ಗದರ್ಶನ ನೀಡಿ, ಶಾಲಾ ವಾಹನದ ನಿರ್ವಹಣೆಗೆ ಸಹಾಯ ಧನ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯ ಶ್ರೀ ಸುಬ್ಬು ಮಾಸ್ಟರ್ , ಇಂಟರ್ಯಾಕ್ಟ ಕ್ಲಬ್ಬಿನ ಸಂಯೋಜಕ ಪ್ರದೀಪ್ ಕುಮಾರ್ ಶೆಟ್ಟಿ, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Sad  Demise Mr. George Braganza (68) (kundapur, St.Antony ward, Herikudru)

Mr. George Braganza (68) (kundapur, St.Antony ward, Herikudru)

Passed away today 20th Feb. 2023.

H/O Olivia (Veera) Braganza

F/O  Reena / Renias Braganza & Rithesh Braganza

Grand father of Royden Braganza

Funeral rites will take place tomorrow on 21-02-2022, Tuesday at 3:30 p.m. at his residence and thereafter mass at 4:00 p.m. at Holy Rosary Church, Kundapur.

Contact : 9611730205, 6366277909

ಕವಿತೆಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ; ಕುಂದಾಪುರ ತಾಲೂಕು 18 ನೇ ಕನ್ನಡ ಸಾಹಿತ್ಯ ಸಮ್ಮೇಳದ ಕವಿ ಗೋಷ್ಟಿಯಲ್ಲಿ ಅಭಿಪ್ರಾಯ

ಗ೦ಗೊಳ್ಳಿ. ಫೆ. 20 : ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮೇಳನ “ಗಂಗಾವಳಿ” ಕಾರ್ಯಕ್ರಮದ ಎರಡನೇ ಗೋಷ್ಠಿಯಾಗಿ ಕವಿ ಗೋಷ್ಟಿ ನಡೆಯಿತು. ಈ ಕವಿ ಗೋಷ್ಟಿಯಲ್ಲಿ ಬರ್ನಾಡ್‌ ಡಿ’ಕೋಸ್ತಾ, ಅವರು “ಎಂತಹ ಕಂಪನ” ಭೂಕಂಪನದ ಬಗ್ಗೆ ಮಾರ್ಮಿಕವಾಗಿ ತಮ್ಮ ಕವಿತೆಯನ್ನು ಪ್ರಚುರ ಪಡಿಸಿದರು.  ಜಗದೀಶ ದೇವಾಡಿಗ ಮುಳ್ಳಿಕಟ್ಟೆ ಸೌರ್ಹಾದತೆಯ ಬಗ್ಗೆ,  ದೇವಿ ಪ್ರಸಾದ್ ಶೆಟ್ಟಿ ಬೈಲೂರು ಸಮಾಜದ ಬಗ್ಗೆ, ಶ್ರೀಮತಿ ಸುಪ್ರಸನ್ನಾ ನಕ್ಕತ್ತಾಯ ಕೋಟೇಶ್ವರ ಬಾಲ್ಯದ ಬಗ್ಗೆ,  ನಾಗರಾಜ್‌ ಖಾರ್ವಿ ಕಂಚುಗೋಡು, ತಗ್ಗುವಿಕೆಯ ಬಗ್ಗೆ, ಜಗದೀಶ ದೇವಾಡಿಗ ಮುಳ್ಳಿಕಟ್ಟೆ, ಬುದ್ದ, ಕ್ರಷ್ಣ ರಾದೆಯ ಬಗ್ಗೆ,  ದೀಪಿಕಾ ಟಿ. ಮೂಡುಬಗೆ, ಸಮಾಜದ ಬಗ್ಗೆ  ಸಾಧನಾ ಕುಂದಾಪುರ, ಅರೆವಾಸ್ತವದ ಬಗ್ಗೆ ಕವನ ವಾಚಿಸಿದರು.

    ಸಮ್ಮೇಳನದ ಗಂಗಾವಳಿ ಕವಿಗೋಷ್ಠಿಯ ಸಮನ್ವಯಕಾರರಾದ ವಂಡ್ಸೆ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ರಾಜೀವ ನಾಯ್ಕ್  “ಕಾವ್ಯ ಓದುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ, ಹಾಗೇ ಕವನಗಳು ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಯುವ ಕವಿಗಳು ಹಿಂದಿನವರು ಬರೆದುದನ್ನು ಓದುವ ಮೂಲಕ ಪದ ಸಂಪತ್ತು ಗಳಿಸಿಕೊಂಡು ಕವಿತೆಗಳನ್ನು ರಚಿಸಬೇಕು, ಪದ ಸಂಪತ್ತಿನ ಭಂಡಾರ ಬೆಳಸಿಕೊಳ್ಳಬೇಕು. ಕವಿ ಬಳಸುವ ಶಬ್ದ ಹಿತವಾದಷ್ಟೂ ಕಾವ್ಯ ಉತೃಷ್ಟವಾಗಿರುತ್ತದೆ ಎಂದು ಹೇಳಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ಸ್ವಾಗತಿಸಿ, ಸತೀಶ್ ಶೆಟ್ಟಿ ನಿರ್ವಹಿಸಿದ ಕವಿ ಗೋಷ್ಟಿಯಲ್ಲಿ ಶಾರ್ಲೆಟ್ ಲೋಬೊ ಗುಜ್ಜಾಡಿ ವಂದಿಸಿದರು.

    ಎರಡನೆ ಗೋಷ್ಠಿಯಾಗಿ ಕುಂದಾಪ್ರ ಕನ್ನಡ ಸಂವಾದ ನಡೆಯಿತು. ಮೂರನೇ  ಗೋಷ್ಠಿಯಾಗಿ ಕೋ.ಶಿವಾನಂದ ಕಾರಂತರ ಬದುಕು ಮತ್ತು ಬರಹ, ಮೂರನೇ ಗೋಷ್ಟಿಯಾಗಿ ಕಂದಾಪ್ರ ಕನ್ನಡ ನಡೆಯಿತು.

ಕುಂದಾಪುರ ಸಾಹಿತ್ಯ ಸಮ್ಮೇಳನ :25 ಲಕ್ಷಕ್ಕೂ ಹೆಚ್ಚುಮಂದಿ ಕುಂದಕನ್ನಡದದು, ಕುಂದಾಪ್ರ ಕನ್ನಡಕ್ಕೆ ಅಕಾಡೆಮಿ, ಅಧ್ಯಯನ ಪೀಠ ಬೇಕು, ಕುಂದಾಪುರ-ಗಂಗೊಳ್ಳಿ ಸೇತುವೆಯಾಗಬೇಕು

ಗ೦ಗೊಳ್ಳಿ, ಫೆ. 20 : ಮತ್ಸ್ಯ ನಗರಿ ಗಂಗೊಳ್ಳಿಯಲ್ಲಿ ಕುಂದಾಪುರ ತಾಲೂಕು ೧೮ ನೇ ಸಾಹಿತ್ಯ ಸಮ್ಮೇಳನ ಫೆ. 19 ರಂದು ಇಲ್ಲಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಜ್ರಂಭಣೆಯಿಂದ ನಡೆಯಿತು  

     ಸಮ್ಮೇಳನದ ಸರ್ವಾಧ್ಯಕ್ಷೆತೆ ವಹಿಸಿದ್ದ ನಿವ್ರತ್ತ ಅಧ್ಯಾಪಕ, ಸಾಹಿತಿ ಖ್ಯಾತ ಅಂಕಣಗಾರ ಕೋಣಿ ಶಿವಾನಂದ ಕಾರಂತರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಕುಂದ ಕನ್ನಡ ಆಕಾಡೆಮಿ ಸ್ಥಾಪನೆಯಾಗ ಬೇಕು, ಹಾಗೇ ಕುಂದಾಕನ್ನಡ ಅಧ್ಯಯನ ಪೀಠ ಸ್ವಾಪನೆಯಾಗಬೇಕು,  ಸರಕಾರ ತಮ್ಮ ಸರಕಾರಿ ಕನ್ನಡ ಶಾಲೆಗಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಕನ್ನಡ ಶಾಲೆಗಳಿಗೆ ನೀಡಬೇಕು, ಮತ್ತು ಕುಂದಾಪುರ ಗಂಗೊಳ್ಳಿ ಸೇತುವೆ ನಿರ್ಮಾಣ ಮಾಡಬೇಕು” ಎಂದು ಕರೆ ನೀಡಿದರು.

“ಭಾಷೆ ಬೆಳವಣಿಗೆಯಲ್ಲಿ ಇತ್ತೀಚೆಗೆ ಯುವ ಜನರು ಆಸಕ್ತಿ ವಶಿಸುತ್ತಿದ್ದಾದೆ. ಅಪಾರ ಸಾಹಿತ್ಯಕ, ಸಾಂಸ್ಕೃತಿಕ ಸಂಪತ್ತು ಹೊಂದಿರುವ 300ಕ್ಕೂ ಹೆಚ್ಚು ಗ್ರಾಮದ, 25 ಲಕ್ಷಕ್ಕೂ ಹೆಚ್ಚುಮಂದಿ ಮಾತನಾಡುವ ಕುಂದಾಪುರ ಭಾಷೆಗೆ ಸರಕಾರ ವಿಶೇಷವಾದ  ಸ್ಥಾನಮಾನ ನೀಡಬೇಕು.ಪ್ರವಾಸೊದ್ಯೋಮ, ಅಭಿವ್ರಧ್ದಿಗೊಳಿಸಿ ಉದ್ಯೋಗ ನೇಡಬೇಕು,ಕುಂದಾಪುರ ಜನರು ಸಾಹಿತ್ಯ,ಕ್ರೀಡೆ, ರಂಭೂಮಿ, ಚಲನಚಿತ್ರ, ಹೋಟೆಲ್, ಕೈಗಾರಿಕೋದ್ಯಮ, ಶಿಕ್ಷಣ, ಬ್ಯಾಂಕಿಂಗ್, ವೈಧ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿದ್ದಾರೆ, ಇವಗಳನ್ನು ತಿಳಿಸುವ ವಸ್ತು ಪ್ರದರ್ಶನ ಕೇಂದ್ರ ಸ್ತಾಪಿಸಬೇಕೆಂದು” ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.

ಸಮ್ಮೇಳನ ಉದ್ಘಾಟಿಸಿದ  ಉದ್ಯಮಿ ಜಗನ್ನಾಥ ಏ. ಪೈ ಗಂಗೊಳ್ಳಿ ಕರ್ನಾಟಕದ ಸರಕಾರ ಎಲ್ಲರಿಗೂ ಕನ್ನಡ ಕಲಿಕೆ ಕಡ್ಡಾಯ ಮಾಡಬೇಕು ಎಂದು ಹೇಳಿ ಹಳ್ಳಿಗಳಲ್ಲಿ ಭಾಷಾಭಿಮಾನ ಇದ್ದದೂ ನಗರಗಳಲ್ಲಿ ಇಲ್ಲ ಎಂದು ತಿಳಿಸಿದರು.

    ಕ್ಯಾಂಪ್ಳೋ ಅಧ್ಯಕ್ಷ! ಕಿಶೋರ್‌ ಕುಮಾರ್‌ ಕೊಡ್ಗಿ ಬೆಳಗೋಡು ರಮೇಶ್‌ ಭಟ್‌ ಬರೆದ ಕೋ.ಶಿ. ಕಾರಂತರ ವಾಸ್‌ ವ್ರೆಖರಿ ಪುಸ್ತಕ ಬಡುಗಡೆ ಮಾಡಿ, ಕುಂದಾಪ್ರ ಕನ್ನಡ ಅಭಿಯಾನ ಇನ್ನಷ್ಟು ಹೆಚ್ಚಾಗಬೇಕು ಎಂದು ಹೇಳಿ ಕ್ಯಾಂಪ್ಕೋ ಕನ್ನಡಾಕ್ಕಾಗಿ ನೆರವು ನೀಡುತ್ತದೆ’ ಎಂದರು.

     ವಿಮರ್ಶಕ, ಸಾಹಿತಿ ಬೆಳಗೋಡು ರಮೇಶ್‌ಭಟ್‌, ಕಾರಂತರುಪಂಚಮುಖಿ ವ್ಯಕ್ತಿತ್ವದವರು. ಸಾಹಿತ್ಯ, ಅಧ್ಯಾಪನ, ನಾಟಕ, ಸಂಘಟನೆ, ನಿರ್ದೇಶನ ಎಲ್ಲಕ್ಷೇತ್ರದಲ್ಲೂ ತೊಡಗಿಸಿಕೊಂಡವರು. 5 ಸಾವಿರ ಅಂಕಣ ಬರೆಹ ಬರೆದಂತಹ ಖ್ಯಾತಿವೆತ್ತವರು, ಅವರ ಈ ಸಾಧನೆ ಹಿಂದೆ ಯಾರೂ ಮಾಡಲಿಲ್ಲಾ, ಮುಂದೆಯು ಯಾರೂ ಮಾಡುವುದಿಲ್ಲಾ ಎಂದು ಅವರ ಪರಿಚಯ ನೀಡಿದರು.

 ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗೆ, ಕುಂದಾಪ್ರ ಕನ್ನಡ ಅಕಾಡೆಮಿ ಸ್ಟಾಪನೆ ಯಾಗಬೇಕು. ಜಿಲ್ಲೆಯಲ್ಲಿ ಹಾಗೂ ಎಲ್ಲ ತಾಲೂಕುಗಳಲ್ಲಿ ಕನ್ನಡ ಭವನಗಳು ನಿರ್ಮಾಣವಾಗಬೇಕು. ಜಿಲ್ಲಾ ಭವನಕ್ಕೆ ಅನುದಾನ ಬಿಡುಗಡೆಯಾಗಬೇಕು. ಅಡಿಗರ ಸ್ಥಾರಕ ಮಂದಿರ ಕೆಲಸ ಬೇಗ ಪೂರ್ಣವಾಗಬೇಕು. ಸರಕಾರಿ ಶಾಲೆಗಳ ಕುರಿತಾಗಿ ಸರಕಾರದ ಜಾಣಕುರುಡು ನೀತಿ ನಿಲ್ಲಬೇಕು. ಕನ್ನಡ ಶಾಲೆ ಉಳಿದರೆ ಕನ್ನಡದ ಬೇರುಗಳನ್ನು ಬಲಪಡಿಸಲು ಆಗುತ್ತದೆ. ಶಿಕ್ಷಕರ ನೇಮಕಾತಿ ನಡೆಸಿ ಅನುದಾನಿತ ಹಾಗೂ ಸರಕಾರಿ ಶಾಲೆಗಳಿಗೆ ಒಂದೇ ನಿಯಮ ಮಾಡಬೇಕು ಎಂದು ಅವರು ಒತ್ತಾಯಿಸಿದರು.    ಬೆಳಗೋಡು ವಿರಚಿತ ವೈಖರಿ ಪುಸ್ತಕ, ಸಮ್ಮೇಳನಾಧ್ಯಕ್ಷರು ಬರೆದ. ಹತ್ತು ಮುತ್ತುಗಳು, ಅರಿವಿಗೆ ಬಾರದವರು ಎಂಬ ಪುಸ್ತಕಗಳ ಬಿಡುಗಡೆ ನಡೆಯಿತು.

     ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್‌. ಗಣೇಶ ಕಾಮತ್‌, ಕಾರ್ಯದರ್ಶಿ ಯು.ಎಸ್‌. ಶೆಣೈ, ಕಾಲೇಜಿನ ಪ್ರಾಂಶುಪಾಲೆ ಎಂ.ಸಿ. ಕವಿತಾ, ಪಂಚಾಯತ್‌ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ, ಮನೋಹರ್‌ ಪಿ. ಕಸಾಪ ಬೈಂದೂರು ಅಧ್ಯಕ್ಷ ಡಾ। ರಘು ನಾಯ್ಕ್‌ ಕಾರ್ಕಳ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಬ್ರಹ್ಮಾವರ ಅಧ್ಯಕ್ಷ ರಾಮಚಂದ್ರ ಐತಾಳ್‌, ತಾಲೂಕು. ಕಾರ್ಯದರ್ಶಿ ಅಕ್ಷತಾ ಗಿರೀಶ್‌, ಜಿಲ್ಲಾಕಸಾಪ ಮಾಜಿ ಅಧ್ಯಕ್ಷ ಎ.ಎಸ್‌.ಎನ್‌. ಹೆಬ್ಬಾರ್‌, ಕೋ.ಶಿವಾನಂದ ಕಾರಂತರ ಪತ್ನಿ ಕುಸುಮಾ ಕಾರಂತ ಇನ್ನಿತರರು ಉಪಸ್ಥಿತರಿದ್ದರು.

ಶ್ರೀನಿವಾಸಪುರ: ತಾಲ್ಲೂಕಿನ ಶಿವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಭಕ್ತಾಧಿಗಳು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ

ಶ್ರೀನಿವಾಸಪುರ: ತಾಲ್ಲೂಕಿನ ಶಿವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಜನರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ತಾಲ್ಲೂಕಿನ ಅರಿಕೆರೆಯಲ್ಲಿ ಶಿವರಾತ್ರಿ ಪ್ರಯುಕ್ತ ಶನಿವಾರ ನಾಗನಾಥೇಶ್ವರಸ್ವಾಮಿ ರಥೋತ್ಸವ ಏರ್ಪಡಿಸಲಾಗಿತ್ತು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಬಿಸಿಲನ್ನು ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿದ್ದರು. ಸರಿತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗ್ರಾಮಗಳಿಂದ ಎತ್ತಿನ ಗಾಡಿಗಳಲ್ಲಿ ತಂದಿದ್ದ ಪಾನಕ ಕುಡಿದು ದಣಿವು ತೀರಿಸಿಕೊಂಡರು. ದೇವಾಲಯ ಅಭಿವೃದ್ಧಿ ಸಮಿತಿ ಹಾಗೂ ಸಮಾಜ ಸೇವಾ ಸಂಸ್ಥೆಗಳಿಂದ ಭಕ್ತಾದಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು.
ರಾಯಲ್ಪಾಡ್ ಗ್ರಾಮದ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ದೇವತಾ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಾಲ್ಲೂಕಿನ ದೂರ ದೂರದ ಗ್ರಾಮಗಳಿಂದ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶದ ಗ್ರಾಮಗಳಿಂದಲೂ ಜನರು ಬಂದು ದೇವರ ದರ್ಶನ ಪಡೆದರು. ದರ್ಶನ ಪಡೆದವರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಶ್ರೀನಿವಾಸಪುರದ ನಗರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ ಅಂಗವಾಗಿ ಲಿಂಗಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಶಂಕರ ಮಠ ಸಮೀಪದ ಶಿವಾಲಯದಲ್ಲಿ ಕುಂಭಾಭಿಷೇಕ ಏರ್ಪಡಿಸಲಾಗಿತ್ತು. ವಿಶೇಷ ಪೂಜೆ ನಡೆಯಿತು. ಶಿರಿಡಿ ಸಾಯಿಬಾಬ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ವತಿಯಿಂದ ಶಿವೋತ್ಸವ ಏರ್ಪಡಿಸಲಾಗಿತ್ತು. ಪಟ್ಟನದ ಮುಖ್ಯ ರಸ್ತೆಗಳಲ್ಲಿ ಶಿವೋತ್ಸವ ಮೆರವಣಿಗೆ ಏರ್ಪಡಿಸಲಾಗಿತ್ತು. ದಳಸನೂರಿನ ಶಿವಾಲಯದಲ್ಲಿ ವಿಶೇಷ ಪೂಜಾ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ದೇವರ ದರ್ಶನ ಪಡೆದರು. ತಾಲ್ಲೂಕಿನ ಬಹುತೇಕ ಗ್ರಾಮಗಳ ಸ್ಥಳೀಯ ದೇವಾಲಯಗಳಲ್ಲಿ ಪೂಜೆ, ಆಭಿಷೇಕ, ಏರ್ಪಡಿಸಲಾಗಿತ್ತು.