ಸರ್ಕಾರಿ ಶಾಲಾ ಮಕ್ಕಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ
ಮಕ್ಕಳಲ್ಲಿ ಪ್ರಾಚ್ಯಪ್ರಜ್ಞೆ ಬೆಳೆಸಲು ಸಹಕಾರಿ-ವೆಂಕಟಾಚಲಪತಿ

ಕೋಲಾರ:- ಸರ್ಕಾರಿ ಶಾಲೆಗಳ ಹಿಂದುಳಿದ, ಅಲ್ಪಸಂಖ್ಯಾತ,ಇತರೆ ವರ್ಗಗಳ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಶುಕ್ರವಾರ ಬೆಳಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣ ಸಂಯೋಜಕರಾದ ವೆಂಕಟಾಚಲಪತಿ ಹಾಗೂ ರಾಘವೇಂದ್ರ ಚಾಲನೆ ನೀಡಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಹೊತ್ತ ಸಾರಿಗೆ ಸಂಸ್ಥೆ ಬಸ್ಸಿಗೆ ಪೂಜೆ ಸಲ್ಲಿಸುವ ಮೂಲಕ ಕರ್ನಾಟಕ ದರ್ಶನ ಪ್ರವಾಸಕ್ಕೆ ಶುಭ ಕೋರಲಾಯಿತು.

ಜ್ಞಾನಾಭಿವೃದ್ದಿಗೆ ಪ್ರವಾಸ ಸಹಕಾರಿ


ಈ ಸಂದರ್ಭದಲ್ಲಿ ಮಾತನಾಡಿದ ಇಸಿಒ ವೆಂಕಟಾಚಲಪತಿ, ಮಕ್ಕಳಲ್ಲಿ ಪ್ರಾಚ್ಯಪ್ರಜ್ಞೆ ಹೆಚ್ಚಲು ಹಾಗೂ ಸಾಮಾನ್ಯ ಜ್ಞಾನ ವೃದ್ದಿಗೆ ಈ ಪ್ರವಾಸ ಸಹಕಾರಿಯಾಗಿದ್ದು, ನಮ್ಮ ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪ್ರವಾಸದಲ್ಲಿ ಮಕ್ಕಳ ಆರೋಗ್ಯ, ಊಟ ವಸತಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ತಲಾ ಇಬ್ಬರು ಪುರುಷ ಹಾಗೂ ಮಹಿಳಾ ಶಿಕ್ಷಕರು ಪ್ರವಾಸದಲ್ಲಿ ಮಕ್ಕಳ ನೇತೃತ್ವ ವಹಿಸಿದ್ದು, ಯಾವುದೇ ಸಮಸ್ಯೆ ಎದುರಾಗದಂಗೆ ಕ್ರಮವಹಿಸಲಾಗಿದೆ ಎಂದರು.
ಇಸಿಒ ರಾಘವೇಂದ್ರ ಮಾತನಾಡಿ, ತಾವೂ ಮಕ್ಕಳೊಂದಿಗೆ ಪ್ರವಾಸ ತೆರಳುತ್ತಿದ್ದು, ಮಕ್ಕಳಿಗೆ ಶೈಕ್ಷಣಿಕವಾಗಿ ಮಾಹಿತಿ ಪಡೆಯಲು ಅಗತ್ಯವಿರುವ ಐತಿಹಾಸಿಕ ಕ್ಷೇತ್ರಗಳ ದರ್ಶನ ಮಾಡಿಸಲಾಗುತ್ತಿದೆ, ಕಲೆ,ಸಾಂಸ್ಕøತಿಕ ಪರಿಚಯ ಈ ಪ್ರವಾಸದ ಮೂಲಕ ಮಾಡಿಸಲಾಗುತ್ತಿದೆ ಎಂದರು.
ಈ ಪ್ರವಾಸದಲ್ಲಿ ಮಕ್ಕಳ ಪಠ್ಯಕ್ಕೆ ಅನುಕೂಲವಾಗುವಂತೆ ಪ್ರೇಕ್ಷಣೀಯ ಸ್ಥಳಗಳ ಆಯ್ಕೆ ಮಾಡಿದ್ದು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರುಗಳಾದ ಸಿ.ಎನ್.ಪ್ರದೀಪ್ ಕುಮಾರ್, ನಾಗರಾಜ್, ಜಿಲ್ಲಾ ಶಿಕ್ಷಕರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಎಂ.ಮುನಿಯಪ್ಪ,ವಿವಿಧ ಶಾಲೆಗಳ ಶಿಕ್ಷಕರಾದ ಮಂಜುನಾಥ್, ಸುಬ್ರಮಣಿ,ವೆಂಕಟರೆಡ್ಡಿ, ಪದ್ಮಾವತಿ, ರಮೇಶ್ ಮತ್ತಿತರರಿದ್ದರು.

ವೇತನ ಆಯೋಗ ಜಾರಿ,ಎನ್‍ಪಿಎಸ್ ರದ್ದತಿಗಾಗಿ ಮಾ.1ರಿಂದ ಅನಿರ್ಧಿಷ್ಠ ಮುಷ್ಕರ`- ಭವಿಷ್ಯದ ಬದುಕಿಗಾಗಿ ಕರ್ತವ್ಯಕ್ಕೆ ಗೈರಾಗಿ’-ಸರ್ಕಾರಿ ನೌಕರರಿಗೆ ಸುರೇಶ್‍ಬಾಬು ಕರೆ

ಕೋಲಾರ:- ಏಳನೇ ವೇತನ ಆಯೋಗದ ವರದಿ ಜಾರಿ, ಎನ್‍ಪಿಎಸ್ ರದ್ದತಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಮಾ.1 ರಿಂದ ಅನಿರ್ಧಿಷ್ಟ ಮುಷ್ಕರಕ್ಕೆ ಕರೆ ನೀಡಿದ್ದು, ಭವಿಷ್ಯದ ಬದುಕಿಗಾಗಿ ಕರ್ತವ್ಯಕ್ಕೆ ಗೈರಾಗಿ' ಎಂದು ಸರ್ಕಾರಿ ನೌಕರರಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‍ಬಾಬು ಕರೆ ನೀಡಿ, ಸಾರ್ವಜನಿಕರೂ ಸಹಕಾರ ನೀಡಲು ಮನವಿ ಮಾಡಿದರು. ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮುಷ್ಕರದ ಭಿತ್ತಿಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಿದ್ದಲ್ಲದೇ ನಂತರ ಪ್ರತಿ ಇಲಾಖೆ ಕಚೇರಿಗೂ ತೆರಳಿ ನೌಕರರಿಗೆ ಕರಪತ್ರ ವಿತರಿಸಿ, ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ಅವರು, ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಈ ಕಠಿಣ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸಂಘದ ಅಧ್ಯಕ್ಷ ಷಡಕ್ಷರಿ ಸೂಚನೆಯಂತೆ ಎಲ್ಲಾ ಇಲಾಖೆಗಳ, ಶಾಲಾ ಕಾಲೇಜು ಶಿಕ್ಷಕರು, ನೌಕರರು, ವಿಶ್ವವಿದ್ಯಾಲಯ, ನಿಗಮ,ಮಂಡಳಿ ಸಿಬ್ಬಂದಿ ಮಾ.1 ರಿಂದ ಕರ್ತವ್ಯಕ್ಕೆ ಗೈರಾಗುವಂತೆ ಮನವಿ ಮಾಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 8 ಸಾವಿರ ಚುನಾಯಿತ ಪ್ರತಿನಿಧಿಗಳಿದ್ದತುರ್ತು ರಾಜ್ಯ ಕಾರ್ಯಕಾರಿಣಿ ಸಭೆ’ಯಲ್ಲಿ ಮುಷ್ಕರಕ್ಕೆ ನೀಡಿರುವ ಕರೆಗೆ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಸರ್ಕಾರಿ ನೌಕರರು ಒಕ್ಕೊರಲಿನಿಂದ ಸಮ್ಮತಿ ನೀಡಿದ್ದು, ತುರ್ತು ಸೇವೆ, ಐಸಿಯು ಸೇವೆಗಳ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ, ಉಳಿದಂತೆ ಸ್ವಾಭಿಮಾನದ ಬದುಕಿಗಾಗಿ ನಡೆಯುತ್ತಿರುವ ಈ ಮುಷ್ಕರದಲ್ಲಿ ಎಲ್ಲರೂ ಪಾಲ್ಗೊಳ್ಳಲು ಕೋರಿದರು.
ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ಜುಲೈ 1 ರಿಂದ ರಿಂದ ಪರಿಷ್ಕøತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿ ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ. 40% ಫಿಟ್‍ಮೆಂಟ್ ಸೌಲಭ್ಯವನ್ನು 2022ರ ಜುಲೈ ಒಂದರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸುತ್ತಿರುವುದಾಗಿ ತಿಳಿಸಿದರು.
ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕ್ಲಿಷ್ಟವಾಗಿದೆ, ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತಿಸ್‍ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವವರೂ ನಾವೇ, ಈ ಬಜೆಟ್ ಸಿದ್ದಪಡಿಸಿರುವುದು ನೌಕರರೇ ಆದರೆ ರಾಜ್ಯದ 2023-24ನೇ ಸಾಲಿನ ಆಯ-ವ್ಯಯದಲ್ಲಿ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವುದು ಅತ್ಯಂತ ನೋವುಂಟು ಮಾಡಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರವು ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‍ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿದ್ದು, ಆಯೋಗದ ಮುಂದೆ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಸ್ತøತ ವರದಿ ಸಿದ್ದಪಡಿಸಿ ಸಲ್ಲಿಸಿದ್ದರೂ ಸರ್ಕಾರ ಬಜೆಟ್‍ನಲ್ಲಿ ನೌಕರರ ಬೇಡಿಕೆಗಳಿಗೆ ಸ್ಪಂದಿಸುವ ಪ್ರಸ್ತಾಪ ಮಾಡದಿರುವುದು ನೌಕರರ ಆಕ್ರೋಷಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರು ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ಮೂಲಭೂತ, ನ್ಯಾಯಸಮ್ಮತ ಹಕ್ಕಾಗಿದೆ ಎಂದರು.
ಈ ಹಿನ್ನಲೆಯಲ್ಲಿ ಮಾ.1 ರಿಂದ ರಾಜ್ಯ ಸಂಘದ ನಿರ್ದೇಶನದಂತೆ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ `ಅನಿರ್ಧಿಷ್ಟಾವಧಿ ಮುಷ್ಕರ’ವನ್ನು ಬೆಂಬಲಿಸುವುದೊಂದರಿಗೆ ಯಶಸ್ವಿಗೊಳಿಸಿ, ಯಾವುದೇ ಒತ್ತಡಕ್ಕೆ ಮಣಿಯದಿರಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ವಿಮಾಧಿಕಾರಿ ಶ್ರೀನಿವಾಸ್,ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್‍ಕುಮಾರ್,ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ಹಾಲಿ ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಮಂಜುನಾಥ್,ಪದಾಧಿಕಾರಿಗಳಾದ ಕೋರ್ಟ್ ನಾಗರಾಜ್, ಪಿಡಿಒ ನಾಗರಾಜ್, ಕದಿರಪ್ಪ, ಶ್ರೀನಿವಾಸಲು,ಚೆನ್ನಪ್ಪ, ಎಡಿಎಲ್‍ಆರ್ ಮೇರಿ ಒರೋನಿಕಾ, ಅಧೀಕ್ಷಕ ಚಂದ್ರಶೇಖರ್,ನಮ್ರತಾ,ಶೋಭಾ,ಸಂಧ್ಯ, ವಿಜಿ, ಕೆಜಿಐಡಿ ಮುರಳಿ, ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಾರುತಿಕುಮಾರ್ ಸೇರಿದಂತೆ ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳ ಸಿಬ್ಬಂದಿ ಹಾಜರಿದ್ದರು.

ಮಂಗಳೂರು ಕೊಂಕಣಿ ನಾಟಕ ಸಭಾ-80 ವರುಷದ ಸಂಭ್ರಮ- ಕೊಂಕಣಿ ಭಾಷೆ ಸಂಸ್ಕøತಿ ಬೀಷ್ಮ ಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ


ಕೊಂಕಣಿ ನಾಟಕ ಸಭಾ ಮಂಗಳೂರು ಇದರ 80 ವರುಷದ ಸಂಭ್ರಮ ಮತ್ತು ಕೊಂಕಣಿ ಭಾಷೆ ಸಂಸ್ಕøತಿ ಹಾಗೂ ಬೀಷ್ಮ ಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಫೆಬ್ರವರಿ 19 ರಂದು ಸಂಜೆ ಡೋನ್ ಬೋಸ್ಕೋ ಸಭಾಂಗಣದಲ್ಲಿ ಜರುಗಿತು.
ಇದರ ಅಧ್ಯಕ್ಷತೆಯನ್ನು ವಂದನೀಯ ಧರ್ಮಗುರುಗಳಾದ ರೊಕ್ಕಿ ಡಿ ಕುನ್ನಾರವರು ವಹಿಸಿ ಶ್ರೀಮಾನ್ ಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಶ್ರೀ ಜೆ.ಆರ್ ಲೋಬೋ (ಮಂಗಳೂರು ದಕ್ಷಿಣಕ್ಷೇತ್ರ ಮಾಜಿ ಶಾಸಕರು) , ಶ್ರೀ ವಾಲ್ಟರ್ ನಂದಳಿಕೆ (ದಾಯ್ಜಿ ವಲ್ಡ್ ಮೀಡಿಯಾ ಸಂಸ್ಥಾಪಕರು) ಶ್ರೀ ರೋಹನ್ ಮೋಂತೆರೋ (ಮ್ಹಾಲಕರು ರೋಶನ್ ಕಾರ್ಪೊರೇಶನ್) ಉಪಸ್ಥಿತರಿದ್ದರು. ಕೊಂಕಣಿ ನಾಟಕ ಸಭಾ ಉಪಾಧ್ಯಕ್ಷರಾದ ಶ್ರೀ ಲಿಸ್ಟನ್ ಡಿ’ಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ಲೊಯ್ಡ್ ಡಿಮೆಲ್ಲೊ ಧನ್ಯವಾದ ವಿತ್ತರು. ಶ್ರೀ ಜೆರಾಲ್ಡ್ ಕೊನ್ಸೆಸೊ, ಶ್ರೀ ಕ್ಲಿಟಸ್ ಲೋಬೋ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಶ್ರೀ ಎಲೋಷಿಯಸ್ ಡಿ ಸೋಜಾ ಮತ್ತು ಶ್ರೀ ಸುನೀಲ್ ಎರಿಕ್ ಒಝೋರಿಯೋರವರ ವ್ಯಕ್ತಿ ಪರಿಚಯ ನೀಡಿದರು. ಮನು ಬಂಟ್ವಾಳ್ ಕಾರ್ಯ ನಿರ್ವಹಿಸಿದರು. 80 ವರುಷದ ಸಂಭ್ರಮ ಪ್ರಯುಕ್ತ ಪುಟ್ಟ ಮಕ್ಕಳಿಗಾಗಿ ಬೇಬಿ ಶೋ, ಮದುವೆಯಾದ ಜೋಡಿಗಳಿಗೆ ಭಾರತದ ಸಂಪ್ರದಾಯದ ಉಡುಗೆ ತೊಡುಗೆ ಮತ್ತು ನೃತ್ಯ ಸ್ಪರ್ಧೆ ಮತ್ತು ಕೇಕ್ ತಾಯಾರಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಸ್ಪರ್ಧೆಯಲ್ಲಿ ವಿಜೇತರಿಗೆ ಟ್ರೋಫಿಗಳನ್ನು ನೀಡಿ ಪುರಸ್ಕರಿಸಲಾಯಿತು.

Bethany Lay Associates Convention held at Sacred Heart Primary School Hall, Kulshekar / ಕುಲಶೇಖರ ಸೇಕ್ರೆಡ್ ಹಾರ್ಟ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಬೆಥನಿ ಲೇ ಅಸೋಸಿಯೇಟ್ಸ್ ಸಮಾವೇಶ

18 February 2023 Bethany Lay Associates (BLA) Convention was held at Sacred Hearts’ Primary Hall, Kulshekar, Mangalore at 9.00am. Sr Cicilia Mendonca BS the Provincial Superior of Bethany Sisters, Mangalore Province presided over the Programme. In her speech she invited the BLA members to be rooted in Christ and to follow the Bethany Spirituality. She gave some tips to make prayer as the fountain of life to draw spiritual strength for their lives.  She appreciated their regular BLA meetings held in their respective units and their zeal to carry on the mission of Christ through Bethany Spirituality and Charism. Later Rev Fr Rocky D’Cunha the Superior of St Ann’s Friary, Jail Road exhorted on Bethany Spirituality and family mission. He gave them the practical tips to live the Spirituality and inculcate Gospel values in their lives.

Sr Jessy Rita from Santa Cruz Convent, Kulshekar conducted a quiz based on Old and New Testament. Four women such as Mrs Molly Miranda, Mrs Mary Fernandes, Mrs Daisy, Mrs Jessy Nazareth shared their life experiences. There was cultural programme from four BLA units such as Vamanjoor, Badyar, Kulshekar and Mulki. They enacted skit, tableau and songs. Three spot games were conducted and winners were awarded with prizes. Sr Roshel, Sr Shubha, Sr Lilly Pereira the Provincial Councilors, Sr Ida Janet the Superior of Santa Cruz Convent, Kulshekar and Mrs Dulcine Sequeira were present on the dais. Sr Anna Maria the Coordinator for BLA at the Province level welcomed the gathering. Sr Herita Monthi, the Superior of St Joseph’s Convent, Suralpady compered the day’s programme. Mr Norbert Sequeira from Kaikamba expressed words of gratitude. The fellowship meal was served on the occasion. Sr Suma BS prayed the grace before meals. There were 150 participants along with BLA animators participated in the celebration. The programme was winded at 1.30pm.

Report by: Sr Anna Maria BS Bethany Provincialate, Vamanjoor

ಕುಲಶೇಖರ ಸೇಕ್ರೆಡ್ ಹಾರ್ಟ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಬೆಥನಿ ಲೇ ಅಸೋಸಿಯೇಟ್ಸ್ ಸಮಾವೇಶ


18 ಫೆಬ್ರವರಿ 2023 ಬೆಥನಿ ಲೇ ಅಸೋಸಿಯೇಟ್ಸ್ (BLA) ಸಮಾವೇಶವು ಮಂಗಳೂರಿನ ಕುಲಶೇಖರ, ಸೇಕ್ರೆಡ್ ಹಾರ್ಟ್ಸ್ ಪ್ರಾಥಮಿಕ ಸಭಾಂಗಣದಲ್ಲಿ ಬೆಳಿಗ್ಗೆ 9.00 ಗಂಟೆಗೆ ನಡೆಯಿತು. ಮಂಗಳೂರು ಪ್ರಾಂತ್ಯದ ಬೆಥನಿ ಸಿಸ್ಟರ್ಸ್ ಪ್ರಾಂತೀಯ ಸುಪೀರಿಯರ್ ಸಿಸಿಲಿಯಾ ಮೆಂಡೋನ್ಕಾ ಬಿಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತನ್ನ ಭಾಷಣದಲ್ಲಿ ಅವರು BLA ಸದಸ್ಯರನ್ನು ಕ್ರಿಸ್ತನಲ್ಲಿ ಬೇರೂರಲು ಮತ್ತು ಬೆಥನಿ ಆಧ್ಯಾತ್ಮಿಕತೆಯನ್ನು ಅನುಸರಿಸಲು ಆಹ್ವಾನಿಸಿದರು. ತಮ್ಮ ಜೀವನಕ್ಕೆ ಆಧ್ಯಾತ್ಮಿಕ ಶಕ್ತಿಯನ್ನು ಸೆಳೆಯಲು ಪ್ರಾರ್ಥನೆಯನ್ನು ಜೀವನದ ಚಿಲುಮೆಯನ್ನಾಗಿ ಮಾಡಲು ಅವರು ಕೆಲವು ಸಲಹೆಗಳನ್ನು ನೀಡಿದರು. ಆಯಾ ಘಟಕಗಳಲ್ಲಿ ನಡೆದ ಅವರ ನಿಯಮಿತ BLA ಸಭೆಗಳು ಮತ್ತು ಬೆಥನಿ ಆಧ್ಯಾತ್ಮಿಕತೆ ಮತ್ತು ವರ್ಚಸ್ಸಿನ ಮೂಲಕ ಕ್ರಿಸ್ತನ ಮಿಷನ್ ಅನ್ನು ಮುಂದುವರಿಸಲು ಅವರ ಉತ್ಸಾಹವನ್ನು ಅವರು ಶ್ಲಾಘಿಸಿದರು. ನಂತರ ಜೈಲ್ ರೋಡ್‌ನ ಸೇಂಟ್ ಆನ್ಸ್ ಫ್ರೈರಿಯ ಸುಪೀರಿಯರ್ ರೆ.ಫಾ.ರಾಕಿ ಡಿ’ಕುನ್ಹಾ ಬೆಥನಿ ಆಧ್ಯಾತ್ಮಿಕತೆ ಮತ್ತು ಕುಟುಂಬ ಧ್ಯೇಯೋದ್ದೇಶಗಳ ಕುರಿತು ಉಪದೇಶಿಸಿದರು. ಅವರು ಆಧ್ಯಾತ್ಮಿಕತೆಯನ್ನು ಜೀವಿಸಲು ಮತ್ತು ಅವರ ಜೀವನದಲ್ಲಿ ಸುವಾರ್ತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರಾಯೋಗಿಕ ಸಲಹೆಗಳನ್ನು ನೀಡಿದರು.
ಕುಲಶೇಖರ್‌ನ ಸಾಂತಾ ಕ್ರೂಜ್ ಕಾನ್ವೆಂಟ್‌ನಿಂದ ಸಿ. ಜೆಸ್ಸಿ ರೀಟಾ ಅವರು ಹಳೆಯ ಮತ್ತು ಹೊಸ ಒಡಂಬಡಿಕೆಯ ಆಧಾರದ ಮೇಲೆ ರಸಪ್ರಶ್ನೆ ನಡೆಸಿದರು. ಶ್ರೀಮತಿ ಮೋಲಿ ಮಿರಾಂಡಾ, ಶ್ರೀಮತಿ ಮೇರಿ ಫೆರ್ನಾಂಡಿಸ್, ಶ್ರೀಮತಿ ಡೈಸಿ, ಶ್ರೀಮತಿ ಜೆಸ್ಸಿ ನಜರೆತ್ ಮುಂತಾದ ನಾಲ್ವರು ಮಹಿಳೆಯರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು. ವಾಮಂಜೂರು, ಬದ್ಯಾರ್, ಕುಲಶೇಖರ್ ಮತ್ತು ಮೂಲ್ಕಿಯಂತಹ ನಾಲ್ಕು ಬಿಎಲ್‌ಎ ಘಟಕಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅವರು ಸ್ಕಿಟ್, ಟ್ಯಾಬ್ಲೋ ಮತ್ತು ಹಾಡುಗಳನ್ನು ಪ್ರದರ್ಶಿಸಿದರು. ಮೂರು ಸ್ಪಾಟ್ ಗೇಮ್ಸ್ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಪ್ರಾಂತೀಯ ಕೌನ್ಸಿಲರ್‌ಗಳಾದ ಸಿ. ರೋಶೆಲ್, ಸಿ. ಶುಭಾ, ಸಿ. ಲಿಲ್ಲಿ ಪಿರೇರಾ, ಸಾಂತಾಕ್ರೂಜ್ ಕಾನ್ವೆಂಟ್‌ನ ಸುಪೀರಿಯರ್ ಸಿ. ಇಡಾ ಜಾನೆಟ್, ಕುಲಶೇಖರ್ ಮತ್ತು ಶ್ರೀಮತಿ ಡುಲ್ಸಿನ್ ಸಿಕ್ವೇರಾ ಉಪಸ್ಥಿತರಿದ್ದರು. ಪ್ರಾಂತ ಮಟ್ಟದ ಬಿಎಲ್‌ಎ ಸಂಯೋಜಕಿ ಸಿ. ಅನ್ನಾ ಮರಿಯಾ ಸ್ವಾಗತಿಸಿದರು. ಸೂರಲ್ಪಾಡಿಯ ಸಂತ ಜೋಸೆಫ್ ಕಾನ್ವೆಂಟ್‌ನ ಸುಪೀರಿಯರ್ ಸಿ. ಹೆರಿತಾ ಮೊಂತಿ ಕಾರ್ಯಕ್ರಮ ನಿರೂಪಿಸಿದರು. ಕೈಕಂಬದ ಶ್ರೀ ನಾರ್ಬರ್ಟ್ ಸಿಕ್ವೇರಾ ಧನ್ಯವಾದಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಸುಮಾ ಬಿಎಸ್ ಅವರು ಊಟಕ್ಕೂ ಮುನ್ನ ಕೃಪೆಗೆ ಪಾತ್ರರಾದರು. ಆಚರಣೆಯಲ್ಲಿ BLA ಆನಿಮೇಟರ್‌ಗಳ ಜೊತೆಗೆ 150 ಭಾಗವಹಿಸುವವರು ಭಾಗವಹಿಸಿದ್ದರು. ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ:ಸಿ. ಅನ್ನಾ ಮಾರಿಯಾ ಬಿಎಸ್, ಬೆಥನಿ ಪ್ರಾಂತೀಯ, ವಾಮಂಜೂರು

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:17ನೇ ವರ್ಷದ ಸಾರ್ವಜನಿಕ ಶ್ರೀ ಮಹಾಶಿವರಾತ್ರಿ ಸಂಭ್ರಮ, ಅಬ್ಬನಡ್ಕ ಭಜನಾ ಮಂಡಳಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ

ಅಬ್ಬನಡ್ಕ: ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೇತೃತ್ವದಲ್ಲಿ ಆದಿತ್ಯವಾರ ಕುಂಟಲಗುಂಡಿಯಲ್ಲಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ವೇದಿಕೆಯಲ್ಲಿ 17ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಮಹಾಶಿವರಾತ್ರಿ ಸಂಭ್ರಮ, ದ್ವಿತೀಯ ವರ್ಷದ ಭಜನೋತ್ಸವ ಸಂಭ್ರಮ, ಸನ್ಮಾನ ಕಾರ್ಯಕ್ರಮ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಸದಸ್ಯರೆಲ್ಲರನ್ನೂ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾರ್ಕಳ ತಾಲೂಕು ಭಜನಾ ಒಕ್ಕೂಟದ ಅಧ್ಯಕ್ಷರಾದ ಪಳ್ಳಿ ಶ್ರೀಕಾಂತ್ ಪ್ರಭು, ಕಾರ್ಕಳ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷರಾದ ಎರ್ಲಪಾಡಿ ಶ್ರೀನಿವಾಸ ಪ್ರಭು, ಉದ್ಯಮಿ ಹರೀಶ್ ನಂದಳಿಕೆ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದ ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಭಜನಾ ಮಂಡಳಿಯ ಅಧ್ಯಕ್ಷರಾದ ಸುಲೋಚನಾ ಕೋಟ್ಯಾನ್, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನಿಕಟ ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್, ಕಾರ್ಯದರ್ಶಿ ಲಲಿತಾ ಆಚಾರ್ಯ ಉಪಸ್ಥಿತಿತರಿದ್ದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಪ್ರಾರ್ಥನೆಗೈದರು, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು, ಪೂರ್ವಾಧ್ಯಕ್ಷ ಸುರೇಶ್ ಕಾಸ್ರಬೈಲು ಹಾಗೂ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸನ್ಮಾನಿತರ ಪರಿಚಯ ವಾಚಿಸಿದರು, ಸಂಘದ ನಿರ್ದೇಶಕರಾದ ಕಿರಣ್ ಶೆಟ್ಟಿ ವಂದಿಸಿದರು.

ಪಕಲ ಮಂಜರಪಲ್ಕೆ ಸಂತ ಅಂತೋನಿಯವರ ದೇವಾಲಯದ ನೂತನ ಕಟ್ಟಡಕ್ಕೆ ಬಿಷಪ್ ಜೆರಾಲ್ಡರಿಂದ ಶಿಲಾನ್ಯಾಸ

ಕಾರ್ಕಳ, ಫೆ.21: ಇಲ್ಲಿನ ಪಾಕಳದ ಮಂಜರಪಲ್ಕೆ ಸಂತ ಅಂತೋನಿಯವರ ದೇವಾಲಯಕ್ಕೆ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಫೆ.21ರ ಮಂಗಳವಾರದಂದು ಜರುಗಿತು.

ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಅವರು ಇತರ ಗಣ್ಯರೊಂದಿಗೆ ಶಿಲಾನ್ಯಾಸವನ್ನು ನೆರವೇರಿಸಿದರು.

ಇಲ್ಲಿನ ಸೇಂಟ್ ಅಂತೋನಿ ದೇವಸ್ಥಾನವು ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ, ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯು ತೀವ್ರವಾಗಿ ಬೆಳೆದಿದೆ, ಹೊಸ ಮತ್ತು ವಿಶಾಲವಾದ ದೇಗುಲದ ಅಗತ್ಯವನ್ನು ಪರಿಗಣಿಸಿ, ಹೊಸ ಕಟ್ಟಡದ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ 6.5 ಕೋಟಿ ರೂ.

ಇದೇ ಸಂದರ್ಭದಲ್ಲಿ ಸಂತ ಅಂತೋನಿಯವರಿಗೆ ಪವಿತ್ರ ಮಹಾಮಸ್ತಕಾಭಿಷೇಕ ಮತ್ತು ನೊವೆನಾ ಪ್ರಾರ್ಥನೆಗಳು ನಡೆದವು.

ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಈ ದೇಗುಲದಲ್ಲಿ ಕೇವಲ ಕ್ರೈಸ್ತರು ಮಾತ್ರವಲ್ಲದೆ ಅನ್ಯ ಧರ್ಮೀಯರೂ ಸಹ ಸಂತ ಅಂತೋನಿಯವರ ಕೃಪೆಗೆ ಪಾತ್ರರಾಗಿದ್ದಾರೆ. ಸೇಂಟ್ ಅಂತೋನಿ ತನ್ನ ಪವಾಡಗಳಿಗೆ ಹೆಸರುವಾಸಿಯಾಗಿದ್ದಾನೆ, ಅವನು ನಮ್ಮಲ್ಲಿ ಪ್ರತಿಯೊಬ್ಬರನ್ನು ಆಕರ್ಷಿಸುತ್ತಾನೆ ಮತ್ತು ನಮ್ಮನ್ನು ಯೇಸುಕ್ರಿಸ್ತನ ಬಳಿಗೆ ಕರೆದೊಯ್ಯುತ್ತಾನೆ. ಈ ಪ್ರಾರ್ಥನಾ ಮಂದಿರವು ಪ್ರಾರಂಭವಾಗಿ 50 ವರ್ಷಗಳನ್ನು ಪೂರೈಸುತ್ತಿದೆ. ಈಗಾಗಲೇ ಅನೇಕರು ಈ ಯೋಜನೆಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ ಮತ್ತು ಇನ್ನೂ ಕೆಲವರು ತಮ್ಮ ಬೆಂಬಲವನ್ನು ಖಾತ್ರಿಪಡಿಸಿದ್ದಾರೆ, ಅವರೆಲ್ಲರ ಮೇಲೆ ಭಗವಂತನ ಅನುಗ್ರಹವನ್ನು ನಾನು ಬಯಸುತ್ತೇನೆ. ಇಂಜಿನಿಯರ್ ದೀಪಕ್ ಪ್ರಾರ್ಥನಾ ಮಂದಿರವನ್ನು ಸುಂದರವಾಗಿ ವಿನ್ಯಾಸಗೊಳಿಸಿದ್ದಾರೆ. ಈ ದೇಗುಲಕ್ಕೆ ಬರುವ ಭಕ್ತರಿಗೆ ಸ್ಥಳಾವಕಾಶದ ಕೊರತೆ ಉಂಟಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಇಂದು ಕಟ್ಟಡಗಳನ್ನು ನಿರ್ಮಿಸುವುದು ಅಷ್ಟು ಸುಲಭವಲ್ಲ. ಈ ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಮಗೆ ಭಕ್ತರ ಬೆಂಬಲವೂ ಬೇಕು.

ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ಮಣ್ ಚರ್ಚ್‌ನ ಪ್ಯಾರಿಷ್ ಪಾದ್ರಿ ಫ್ರೆಡ್ರಿಕ್ ಮಸ್ಕರೇನ್ಹಸ್ “ಈ ಸ್ಥಳದಲ್ಲಿ ನಾನು ತಿಂಗಳಿನಿಂದ ಪಡೆದ ಸಹಕಾರಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಸಂತ ಅಂತೋನಿ ನಮ್ಮೆಲ್ಲರಿಗೂ ಆಶೀರ್ವಾದವನ್ನು ಧಾರೆಯೆರೆಯಲಿ. ಎಲ್ಲಾ ಭಕ್ತರು ಮತ್ತು ದಾನಿಗಳಿಗೂ ನಾನು ಧನ್ಯವಾದ ಹೇಳುತ್ತೇನೆ.

ಸಹಾಯಕ ಪ್ಯಾರಿಷ್ ಪಾಧರ್ ಅಂಕಿತ್ ಡಿಸೋಜ, ಶಿರ್ವ ವಲಯ ಪ್ರಧಾನರಾದ ವಂ| ಡಾ ಲೆಸ್ಲಿ ಡಿಸೋಜಾ, ಫಾದರ್ ಕ್ಲೆಮೆಂಟ್ ಮಸ್ಕರೇನ್ಹಸ್ , ಫಾದರ್ ವಲೇರಿಯನ್ ಡಿಸಿಲ್ವಾ, ಫಾದರ್ ಸದಾನಂದ್, ಸಿಸ್ಟರ್ ಮರೀನಾ, ಸುಪೀರಿಯರ್ ಕಾನ್ವೆಂಟ್ ,ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಗ್ರೆಗೊರಿ ಮೆನೆಜಸ್, ಕಾರ್ಯದರ್ಶಿ ಡೊಮಿನಿಕ್ ಆಂಡ್ರೇಡ್, ಸಂಚಾಲಕ, ಡೊಮಿನಿಕ್ ಆಂಡ್ರೇಡ್, 20 ಆಯೋಗಗಳ ಸಂಚಾಲಕ, ರೆಮಿಡಿಯಾ ಡಿಸೋಜಾ, ಅಲ್ಫೋನ್ಸೋ ಅಗೇರಾ, ಸಂಸ್ಥಾಪಕ ಸಮಿತಿ ಸದಸ್ಯರು, ಐರಿನ್ ಕ್ಯಾಸ್ಟೆಲಿನೊ, ಕುಟುಂಬದ ಸದಸ್ಯರಾದ ಐರಿನ್ ಕ್ಯಾಸ್ಟೆಲಿನೊ ಪವಾಡ ಮೂರ್ತಿ, ವಾಸ್ತುಶಿಲ್ಪಿ ದೀಪಕ್ ಡಿಸೋಜ, ಕಟ್ಟಡ ಸಮಿತಿ ಮತ್ತು ಹಣಕಾಸು ಸಮಿತಿಯ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮತದಾರರು ರಾಜ್ಯದ ಹಿತಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು : ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮತದಾರರು ರಾಜ್ಯದ ಹಿತಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಜೆವಿ ಕಾಲೋನಿಯಲ್ಲಿ ಬುಧವಾರ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ನಡೆಯುತ್ತಿರುವ ವಾಕ್ಸಮರ ಹಾಗೂ ಕಿತ್ತಾಟದಲ್ಲಿ ನಾಗರಿಕರು ಬಡವಾಗಿದ್ದಾರೆ. ಅಭಿವೃದ್ಧಿ ಶೂನ್ಯವಾಗುತ್ತಿದೆ ಎಂದು ಹೇಳಿದರು.
ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗುವುದು ಶತಸಿದ್ಧ. ಅವರು ಮುಖ್ಯ ಮಂತ್ರಿಯಾದ 24 ಗಂಟೆಗಳಲ್ಲಿ ಸ್ತ್ರೀ ಶಕ್ತಿ ಸಂಘಗಳು ಪಡೆದುಕೊಂಡಿರುವ ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಅವರು ನುಡಿದಂತೆ ನಡೆಯುತ್ತಾರೆ. ಅವರ ಕೈ ಬಲಪಡಿಸುವ ಹೊಣೆ ಮತದಾರರ ಮೇಲಿದೆ ಎಂದು ಹೇಳಿದರು.
‘ನಾನು ನಾಲ್ಕು ಬಾರಿ ಶಾಸಕನಾಗಿದ್ದರೂ ನನ್ನ ಆಸ್ತಿ ಪ್ರಮಾಣ ಹೆಚ್ಚಿಲ್ಲ. ಬೆಂಗಳೂರಿನಲ್ಲಿ ಇರುವ ಒಂದು ನಿವೇಶನದಲ್ಲಿ ಮನೆ ಕಟ್ಟಲು ಸಾಧ್ಯವಾಗಿಲ್ಲ. ತಂದೆಯಿಂದ ಬಂದ ಆಸ್ತಿಯಲ್ಲಿ ನೀವನ ನಿರ್ವಹಿಸುತ್ತಿದ್ದೇನೆ. ಜನರಿಗೆ ಇದರ ಅರಿವಿದೆ. ಬೇರೆಯವರ ವಿಚಾರವೂ ಗೊತ್ತಿದೆ. ಮತದಾರರು ಚುನಾವಣೆಯಲ್ಲಿ ಆಶೀರ್ವಾದ ಮಾಡಿದಲ್ಲಿ, ಅವರ ಕ್ಷೇಮಾಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ, ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ಸಾಲವಾಗಿ ನೀಡುತ್ತಿರುವುದು ನಬಾರ್ಡ್ ಬ್ಯಾಂಕ್ ಹಣ. ಕೇಂದ್ರ ಸರ್ಕಾರದ ಕೊಡುಗೆ. ಆದರೆ ಕೆಲವರು ತಮ್ಮ ಜೇಬಿನಿಂದ ನೀಡಿದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮತದಾರರು ಎಚ್ಚರವಹಿಸಬೇಕು. ಜೆಡಿಎಸ್ ಗೆಲುವಿಗೆ ಮನಸ್ಸು ಮಾಡಬೇಕು ಎಂದು ಹೇಳಿದರು.
ಕೆಜಿಎಸ್ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ಎನ್.ಶ್ರೀನಿವಾಸ್, ಗಣೇಶ್, ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಮುಖಂಡರಾದ ನಾರಾಯಣಸ್ವಾಮಿ, ಟಿ.ವೆಂಕಟೇಶ್, ಪ್ರಸನ್ನ, ರಾಮಚಂದ್ರಗೌಡ, ರವಿ, ಗಣೇಶ್ ಇದ್ದರು.

ಶ್ರೀನಿವಾಸಪುರ: ಪಟ್ಟಣದಲ್ಲಿ ಪಕ್ಷಾತೀತವಾಗಿ ಎಲ್ಲ ವಾರ್ಡ್‍ಗಳ ಅಭಿವೃದ್ಧಿಗೆ ಒತ್ತುನೀಡಲಾಗುವುದು : ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್

ಶ್ರೀನಿವಾಸಪುರ: ಪಟ್ಟಣದಲ್ಲಿ ಪಕ್ಷಾತೀತವಾಗಿ ಎಲ್ಲ ವಾರ್ಡ್‍ಗಳ ಅಭಿವೃದ್ಧಿಗೆ ಒತ್ತುನೀಡಲಾಗುವುದು ಎಂದು ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ವಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುವುದು. ರಸ್ತೆ, ಚರಂಡಿ ದುರಸ್ತಿ ಹಾಗೂ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಮಾತನಾಡಿ, ಸರ್ವ ಸದಸ್ಯರ ಸಭೆಗೆ ಆದಾಯ ಮತ್ತು ಖರ್ಚಿನ ಮಾಹಿತಿ ನೀಡಬೇಕು. ಹಾಗೆ ಮಾಡದೆ ಸಭೆ ನಡೆಸುವುದು ಸರಿಯಾದ ಕ್ರಮವಲ್ಲ. ಪುರಸಭೆಯಲ್ಲಿ ಜನನ ಮರಣ ಮಾಹಿತಿ ಸಮರ್ಪಕವಾಗಿಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಿರು. ವಿರೋಧ ಪಕ್ಷದ ಸದಸ್ಯರು ಅದಕ್ಕೆ ಧ್ವನಿಗೂಡಿಸಿದರು. ಆ ಕುರಿತು ಕ್ರಮ ಕೈಗೊಳ್ಳುವ ಭರವಸೆ ದೊರೆತ ಮೇಲೆ ಸಭೆ ಮುಂದುವರಿಯಿತು.
ಪುರಸಭೆ ಕಚೇರಿ ಮುಂದೆ ಪಾರ್ಕ್ ನಿರ್ಮಾಣ, ಎಲ್ಲ ವಾರ್ಡ್‍ಗಳಿಗೆ ವಾರ್ಡ್ ಸಂಖ್ಯೆ ನೀಡಿಕೆ, ಪಾರ್ಕಿಂಗ್ ಟೈಲ್ಸ್ ಅಳವಡಿಕೆ, ಪುರಸಭೆ ಸಿಬ್ಬಂದಿ ವಿಶ್ರಾಂತಿ ಗೃಹಗಳ ನಿರ್ಮಾಣ, ನೀರು ಸರಬರಾಜಿಗೆ ಹೊರಗುತ್ತಿಗೆ ನೀಡಿಕೆ, ಪೌರ ಕಾರ್ಮಿಕರಿಗೆ ಬೆಳಿಗಿನ ಉಪಹಾರ ನೀಡಿಕೆ, ಘನ ತ್ಯಾಜ್ಯ ನಿರ್ವಹಣೆ ಮುಂತಾದ 27 ಅಂಶಗಳಿಗೆ ಅನುಮೋದನೆ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ನಿರೀಕ್ಷಕ ವಿ.ನಾಗರಾಜ್, ಎಂಜಿನಿಯರ್ ಶ್ರೀನಿವಾಸ್, ಸಂತೋಷ್, ಸುರೇಶ್ ಇದ್ದರು.

ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ : ಸೌಮ್ಯ

ಕೋಲಾರ : ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆಯ ನಿರ್ದೇಶಕರಾದ ಸೌಮ್ಯ ಅವರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ತಾ ಇಲಾಖೆ ಮತ್ತು ಮಾಧ್ಯಮಗಳ ನಡುವೆ ಸಮನ್ವಯತೆ ಮೂಢಿಸಲು ಮತ್ತು ಇಲಾಖೆಯಿಂದ ಪತ್ರಕರ್ತರಿಗೆ ಮತ್ತು ಸಣ್ಣ ಪತ್ರಿಕೆಗಳಿಗೆ ಆಗಬೇಕಾದ ಸೌಲಭ್ಯಗಳ ಕುರಿತು ಇಲಾಖೆಯ ನಿರ್ದೇಶಕರೊಂದಿಗೆ ಆಯೋಜಿಸಿದ್ದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಸಾರ್ವಜನಿಕರಿಗೆ ಮಾಹಿತಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತಿರುವ ಮಾದ್ಯಮಗಳಿಗೆ ಇರುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಜಿಲ್ಲಾಡಳಿತ ಕಚೇರಿಯು ನಗರದಿಂದ ಸುಮಾರು 8-10 ಕಿ.ಮಿ. ದೂರ ಇರುವುದರಿಂದ ಯಾವೂದೇ ಕಾರ್ಯಕ್ರಮಗಳ ಕುರಿತು ಮಾದ್ಯಮಗಳಿಗೆ ಒಂದು ದಿನದ ಮುಂಚೆ ಮಾಹಿತಿ ನೀಡಬೇಕು, ಪತ್ರಕರ್ತರಿಗೆ ಜಿಲ್ಲಾಡಳಿತ ಕಚೇರಿಯಲ್ಲಿ ವಿಶ್ರಾಂತಿ ಕೊಠಡಿ ಸೌಲಭ್ಯ ಅಗತ್ಯತೆ ಇದೆ. ಸಾಧ್ಯವಾದಷ್ಟು ಸಭೆಗಳನ್ನು ಪತ್ರಿಕಾ ಗೋಷ್ಠಿಗಳನ್ನು ಮಧ್ಯಾಹ್ನದ ಒಳಗೆ ಆಯೋಜಿಸಿದರೆ ಅನುವುಂಟಾಗುವುದು, ಸಂಜೆ ವೇಳೆ ಮಾಧ್ಯಮದವರಿಗೆ ಕೆಲಸದ ಹೆಚ್ಚಿನ ಒತ್ತಡ ಇರುವುದನ್ನು ಜಿಲ್ಲಾ ಆಡಳಿತದ ಗಮನಕ್ಕೆ ತರಲಾಗುವುದು, ಚುನಾವಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಹೊಂದಿಕೊಂಡು ಹೋಗಬೇಕಾಗಿರುವುದು ಅನಿವಾರ್ಯವಾಗುವುದು ಎಂದು ತಿಳಿಸಿದರು. 

ಟೆಂಡರ್‌ಗಳನ್ನು ಸುದ್ದಿ ರೂಪದಲ್ಲಿ ಕೊಡದೆ ಜಾಹಿರಾತು ರೂಪದಲ್ಲಿ ನೀಡಬೇಕೆಂದು ಸಂಬಂಧ ಪಟ್ಟ ಇಲಾಖೆಗೆ ತಿಳಿಸಲಾಗುವುದು. ಜಾಹಿರಾತುಗಳನ್ನು ನೇರವಾಗಿ ಮಾದ್ಯಮಗಳಿಗೆ ನೀಡದೆ ವಾರ್ತಾ ಮತ್ತು ಸಾರ್ವಜನಿಕರ ಸಂರ್ಪಕ ಇಲಾಖೆಯ ಮೂಲಕವೇ ನೇರವಾಗಿ ನೀಡಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು. 

ಎಂ.ಸಿ.ಎ. ಏಜೆನ್ಸಿ ಶೇ 15 ರಷ್ಟು ಕಮೀಷನ್ ಪಡೆದು ಸಹ ಜಾಹಿರಾತು ಬಿಲ್‌ಗಳನ್ನು ವರ್ಷಾನುಗಟ್ಟಲೇ ಬಾಕಿ ಇಟ್ಟಿಕೊಂಡಿರುವ ಕುರಿತು ಸಂಬಂಧಪಟ್ಟ ಎಂ.ಸಿ.ಎ. ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ಬೇಗನೆ ಪತ್ರಿಕೆಗಳ ಬಿಲ್‌ಗಳನ್ನು ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯ ಅಧಿಕಾರಿಗಳು ತುರ್ತು ಪತ್ರಿಕಾಗೋಷ್ಠಿ ಸಂದರ್ಭಗಳಲ್ಲಿ ವಾರ್ತಾಇಲಾಖೆಯ ಸಭಾಂಗಣದಲ್ಲಿ ಆಯೋಜಿಸಿದಲ್ಲಿ ಪತ್ರಕರ್ತರಿಗೆ ಹೆಚ್ಚಿನ ಅನುಕೂಲಕರವಾಗುವುದು ಎಂಬ ನಿಮ್ಮಗಳ ಸಲಹೆಯನ್ನು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು. 

ಕೆಲವೊಂದು ಸಭೆಗಳಲ್ಲಿ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ ಸಭೆಯ ನಂತರ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಸಭೆಯ ಮುಗಿಯುವುದು ಸಂಜೆ ಅಗುವುದರಿಂದ ಪತ್ರಕರ್ತರು ಜಿಲ್ಲಾಡಳಿತ ಕಚೇರಿಗೆ ಬರುವುದಕ್ಕೆ ತೊಂದರೆ ಅಗಲಿದೆ ಎಂಬುವುದು ನಿಜ. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯಿಂದಲೇ ಮಾಹಿತಿಯನ್ನು ರವಾನಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. 

ಮಾದ್ಯಮದವರನ್ನು ಹೊರಗಿನ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕಾದ ಸಂದರ್ಭದಲ್ಲಿ ಊಟ ,ತಿಂಡಿ, ನೀರುಗಳಿಗೆ ಕೊರತೆಯಾಗದಂತೆ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು ಶೀಘ್ರದಲ್ಲಿ ಪತ್ರಕರ್ತರಿಗೆ ಅಧ್ಯಯನ ಪ್ರವಾಸವನ್ನು ಆಯೋಜಿಸುವುದಾಗಿ ಆಶ್ವಾಸನೆ ನೀಡಿದರು. 

ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಪತ್ರಿಕೆಗಳ ಉಳಿವಿಗೆ ವಾರ್ತಾ ಇಲಾಖೆಯು ಕೈಗೊಳ್ಳಬೇಕಾದ ಕ್ರಮಗಳು, ಪತ್ರಕರ್ತರ ಜೊತೆ ವಾರ್ತಾ ಇಲಾಖೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಬಗ್ಗೆ, ಪತ್ರಕರ್ತರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಬಗ್ಗೆ, ಸಮರ್ಪಕವಾಗಿ ಜಾಹಿರಾತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಕ್ರಮ ವಹಿಸುವುದು,ಕೆಲವು ಕಾರ್ಯಕ್ರಮಗಳಿಗೆ ಪತ್ರಕರ್ತರು ಬರಲು ಸಾಧ್ಯವಾಗದ ಸಂದರ್ಭದಲ್ಲಿ ಕಾರ್ಯಕ್ರಮದ ಭಾವಚಿತ್ರ ಸುದ್ಧಿಯ ಜೊತೆಗೆ ವಿಡಿಯೋ ಕ್ಲಿಪಿಂಗ್‌ಗಳನ್ನು ಪತ್ರಕರ್ತರ ಸಂಘದ ವ್ಯಾಟ್ಸಾಫ್ ಗ್ರೂಪ್‌ಗಳಿಗೆ ಕಳುಹಿಸುವುದು, ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿ ಸಂಗ್ರಹಕ್ಕೆ ಬಂದ ಸಂದರ್ಭದಲ್ಲಿ ಪತ್ರಕರ್ತರು ಕುಳಿತುಕೊಳ್ಳಲು ಕೊಠಡಿ ವ್ಯವಸ್ಥೆ ಮಾಡಲು ವಾರ್ತಾ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ಸಂವಾದದಲ್ಲಿ ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್, ಹಿರಿಯ ಪತ್ರಕರ್ತರಾದ ಅಬ್ಬಣಿಶಂಕರ್, ಹೆಚ್.ಎನ್.ಮುರಳೀಧರ್, ಕೋ.ನಾ.ಮಂಜುನಾಥ್, ಎನ್.ಮುನಿವೆಂಕಟೇಗೌಡ, ಎಸ್.ರವಿಕುಮಾರ್, ಎಸ್.ಚಂದ್ರಶೇಖರ್, ಸಮೀರ್‌ಅಹಮದ್, ರಾಜೇಂದ್ರ ಸಿಂಹ, ಎಸ್.ರವಿಕುಮಾರ್, ಸಿ.ಜಿ.ಮುರಳಿ, ರಮೇಶ್, ನಾಗರಾಜ್,  ಮಾತನಾಡಿದರು,   

ವೇದಿಕೆಯಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಸ್ಕಂದಕುಮಾರ್,  ಎಸ್.ಸಚ್ಚಿದಾನಂದ, ಬೆಟ್ಟಣ್ಣ, ಆಸೀಫ್‌ಪಾಷ, ಸಿ.ಕೆ.ಲಕ್ಷ್ಮಣ್, ಶಮ್ಗರ್, ಎನ್, ಸತೀಶ್, ಕೆ.ಜಿ.ಮಂಜುನಾಥ್, ಎಂ.ಲಕ್ಷ್ಮಣ, ಮದನ್, ಎನ್.ಶಿವಕುಮಾರ್, ಎನ್.ಗಂಗಾಧರ್, ಗೋಪಿ, ಸುಹಾಸ್, ಚಂದ್ರು, ಜೆ.ಎಂಬರೀಶ್, ನವೀನ್ ವಾರ್ತಾಇಲಾಖೆಯ ಅಧಿಕಾರಿಗಳಾದ ಮಂಜೇಶ್, ಸುಧಾ ಮುಂತಾದವರು ಉಪಸ್ಥಿತರಿದ್ದರು.