ಜಿಲ್ಲಾದ್ಯಂತ ಕಳೆದುಹೋಗಿರುವ ಚೆಕ್ ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಟ್ಟು, ಭ್ರಷ್ಟಾಚಾರದ ಆಸ್ತಿ ಹರಾಜು ಹಾಕಿ,ಕಾಮಗಾರಿ ಪೂರ್ಣಗೊಳಿಸಿ – ಭೂಸೇನಾ ಇಲಾಖೆ ಎದುರು ರೈತಸಂಘ ಹೋರಾಟ

ಕೋಲಾರ; ಫೆ.27; ಕೆಆರ್‍ಐಡಿಎಲ್ ಇಲಾಖೆಯಡಿ ಜಿಲ್ಲಾದ್ಯಂತ ಕಳೆದುಹೋಗಿರುವ ಚೆಕ್ ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಟ್ಟು ಕೋಟಿಕೋಟಿ ಭ್ರಷ್ಟಾಚಾರವೆಸಗಿರುವ ಆಸ್ತಿಯನ್ನು ಹರಾಜು ಹಾಕಿ ಕಾಮಗಾರಿಗಳನನ್ನು ಪೂರ್ಣಗೊಳಿಸಬೇಕೆಂದು ರೈತಸಂಘದಿಂದ ಭೂಸೇನಾ ಇಲಾಖೆಯೆದುರು ಹೋರಾಟ ಮಾಡಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಟೆಂಡರ್ ಇಲ್ಲದೆ ಕಾಮಗಾರಿ ನಿರ್ವಹಿಸುವ ಭೂಸೇನಾ ಇಲಾಖೆ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಆನೆ ನಡೆದಿದ್ದೇ ದಾರಿ ಎಂಬಂತೆ ಅಲ್ಲಿನ ಎಂಜಿನಿಯರ್‍ಗಳಾದ ಕೋದಂಡರಾಮಯ್ಯ, ವಿಜಯ್‍ಕುಮಾರ್ ಅವರು ಇಲಾಖೆಯನ್ನೇ ಮಾರಾಟಕ್ಕೆ ಇಟ್ಟಿದ್ದರೂ ಕ್ರಮಕೈಗೊಳ್ಳಬೇಕಾದ ಜನಪ್ರನಿನಿಧಿಗಳು ನಾಪತ್ತೆಯಾಗಿದ್ದಾರೆ ಎಂದು ಅವ್ಯವಸ್ಥೆ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಜಿಲ್ಲಾದ್ಯಂತ ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ಇಲ್ಲದೆ ಕೋಟಿಕೋಟಿ ಅನುದಾನವನ್ನು ಕೆಆರ್‍ಐಡಿಎಲ್ ಸಂಸ್ಥೆಗೆ ಬಿಡುಗಡೆಯಾಗುವ ಜೊತೆಗೆ 6 ತಾಲೂಕಿನ ಶಾಸಕರು, ಸಂಸದರು, ಎಂಎಲ್ಸಿಗಳ ಅನುದಾನದಲ್ಲಿ ಸಿಸಿರಸ್ತೆ, ಹೈಮಾಸ್ಟ್ ಲೈಟ್, ಸಮುದಾಯ ಭವನಗಳು, ಚೆಕ್‍ಡ್ಯಾಂಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಇಲಾಖೆಗೆ ಬಿಡುಗಡೆಯಾಗುತ್ತಿದ್ದರೂ ಟೆಂಡರ್ ಇಲ್ಲದೆ ಕಾಮಗಾರಿ ಮಾಡುವುದನ್ನು ಬಂಡವಾಳವಾಗಿಸಿಕೊಂಡು ಅಲ್ಲಿನ ಅಧಿಕಾರಿಗಳು ಕೋಟಿಕೋಟಿ ಹಣ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಲೂಟಿ ಮಾಡಿರುವುದಕ್ಕೆ ಇತ್ತೀಚೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೋದಂಡಪ್ಪ ಹಾಗೂ ವಿಜಯ್ ಕುಮಾರ್ ಅವಧಿಯಲ್ಲಿ ನಡೆದಿರುವ ಹಗರಣಗಳ ಸರಮಾಲೆ ವಿಧಾನಸೌಧದಲ್ಲಿ ಚರ್ಚೆಯಾಗಿ ಇಲಾಖೆಯ ಗೌರವ ಕಳೆದುಕೊಂಡಿದ್ದರೂ ಇನ್ನೂ ಸಹ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣವಿಲ್ಲದಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಸಮುದಾಯ ಭವನಗಳ ನಿರ್ಮಾಣದಲ್ಲಿ ಕೋಟಿಕೋಟಿ ಹಗರಣವನ್ನು ನಡೆಸಿ ವರ್ಗಾವಣೆಗೊಂದ ಕೋದಂಡರಾಮಯ್ಯ ಅವರ ಅವಧಿಯಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿಯೇ ಸುಮಾರು 25 ಕೋಟಿ ವೆಚ್ಚದ ಸಮುದಾಯ ಭವನಗಳೇ ನಿರ್ಮಾಣವಾಗದೇ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಹಣ ಲೂಟಿ ಮಾಡಿರುವ ಜೊತೆಗೆ ಸಿಸಿರಸ್ತೆ, ಹೈಮಾಸ್ಟ್ ಲೈಟ್, ಚೆಕ್ ಡ್ಯಾಂಗಳನ್ನು ಕೇಳುವಂತೆ ಇಲ್ಲ. ಇವರ ಹಾದಿಯನ್ನು ಅನುಸರಿಸಿ ವಿಜಯ್ ಕುಮಾರ್ ಅವರು ತಮ್ಮ ಮಗನ ಹೆಸರಿನಲ್ಲಿ ಅಕ್ರಮ ಟೆಂಡರ್ ಸೃಷ್ಠಿ ಮಾಡಿ ಜಿಲ್ಲಾದ್ಯಂತ 60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಬೇಕಾದ ಚೆಕ್ ಡ್ಯಾಂ, ದೇವಸ್ಥಾನದ ಸಿಸಿ ರಸ್ತೆ, ಸಮುದಾಯ ಭವನಗಳನ್ನು ನಿರ್ಮಾಣ ಮಾಡದೆಯೇ ಬಿಲ್ ಮಾಡಿಕೊಂಡು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕೆಲಸದಿಂದ ವಜಾ ಮಾಡಿದ್ದರೂ ಈ ಇಬ್ಬರ ಅವಧಿಯಲ್ಲಿ ನಡೆದಿರುವ ಹಗರಣವನ್ನು ತನಿಖೆ ಮಾಡುವಲ್ಲಿ ಹಿರಿಯ ಅಧಿಕಾರಿಗಳು ವಿಫಲವಾಗಿ ಭ್ರಷ್ಟ ಅಧಿಕಾರಿಗಳಿಗೆ ನೆರವಾಗಲು ಕಡಿಮೆ ಹಣ ದುರುಪಯೋಗದ ಕಡತವನ್ನು ಸೃಷ್ಠಿ ಮಾಡಿರುವುದು ದುರಾದೃಷ್ಟಕರ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಕಾಮಗಾರಿ ಪೂರ್ಣಗೊಂಡರೆ ಟೈಲ್ಸ್ ಇಲ್ಲ, ಟೈಲ್ಸ್ ಇದ್ದರೆ ಸಿಮೆಂಟ್ ಇಲ್ಲ ಇವೆರಡೂ ಇದ್ದರೆ ನಿಗಧಿಯ ಸ್ಥಳದಲ್ಲಿ ಭವನಗಳೇ ಇಲ್ಲದ ಜೊತೆಗೆ ಅಂತರ್ಜಲ ಅಭಿವೃದ್ಧಿಗೆ ನಿರ್ಮಿಸಿರುವ ಚೆಕ್ ಡ್ಯಾಂಗಳು ಹಳೆಯ ಕಾಮಗಾರಿಗಳಿಗೆ ಹೊಸ ರೂಪ ಕೊಟ್ಟು ಹೊಸ ಕಡತವನ್ನು ಸೃಷ್ಠಿ ಮಾಡಿ ಹಣ ಲೂಟಿ ಮಾಡುವ ಜೊತೆಗೆ ಬೇರೆ ಇಲಾಖೆಯ ಕಾಮಗಾರಿಗೆ ತನ್ನದೇ ಕಾಮಗಾರಿ ಎಂದು ಬೇರೆ ಇಲಾಖೆಯ ಜೊತೆ ಒಳಒಪ್ಪಂದ ಮಾಡಿಕೊಂಡು ಹಣವನ್ನು ಲೂಟಿ ಮಾಡಿದ್ದಾರೆ ಎಂದು ದೂರಿದರು.
ಅಕ್ರಮ, ಕಳಪೆ ಕಾಮಗಾರಿಗಳ ಕೇಂದ್ರವಾದ ಸಂಸ್ಥೆಗೆ ಎಂಜಿನಿಯರ್‍ಗಳೇ ಬೆಂಗಾವಲಾಗಿ ನಿಂತಿದ್ದಾರೆ. ಭೂಸೇನಾ ನಿಗಮ ಸರ್ಕಾರಿ ಅಧಿಕಾರಿಗಳಿಗಿಂತ ಗುತ್ತಿಗೆ ಆಧಾರದ ಮೇಲೆ ದುಡಿಯುವ ನೌಕರರೇ ಇಲಾಖೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ತನಗೆ ಬೇಕಾದ ಕಾಮಕಾರಿಗಳನ್ನು ಮಂಜೂರು ಮಾಡಿಸಿಕೊಂಡು ಕಾಮಗಾರಿ ಮಾಡದೆ ಹಣ ಲೂಟಿ ಮಾಡುವ ದಂಧೆಯಾಗಿ ಇಲಾಖೆ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದೊಳಗೆ ಇಲಾಖೆಯಲ್ಲಿ 2010 ರಿಂದ ಕೋದಂಡರಾಮಯ್ಯ, ವಿಜಯ್ ಕುಮಾರ್, ಮಂಜುನಾಥ್, ಭಾಸ್ಕರ್ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಿ ಕಳೆದುಹೋಗಿರುವ ಚೆಕ್ ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಟ್ಟು ಇಲಾಖೆಯಲ್ಲಿ ಭ್ರಷ್ಟಾಚಾರತೆಗೆ ಕಡಿವಾಣ ಹಾಕಿ ಸಾರ್ವಜನಿಕರ ಹಣವನ್ನು ವ್ಯರ್ಥವಾಗದಂತೆ ಜನರಿಗೆ ಅನುಕೂಲವಾಗುವ ರೀತಿ ಕಾಮಗಾರಿಗಳನ್ನು ಮಾಡುವ ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲವಾದರೆ ಎಲ್ಲಾ ದಾಖಲೆಗಳ ಸಮೇತ ನ್ಯಾಯಕ್ಕಾಗಿ ಲೋಕಾಯುಕ್ತ ಇಲಾಖೆ ಮೊರೆ ಹೋಗುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಭೂ ಸೇನಾ ಅಧಿಕಾರಿ ಮಂಜುನಾಥ್ 2010 ರಿಂದ ಇಲಾಖೆಯ ವತಿಯಿಂದ ನಿರ್ಮಾಣಗೊಂಡಿರುವ ಸಮುದಾಯ ಭವನಗಳು, ಚೆಕ್ ಡ್ಯಾಂಗಳ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದಿವೆ. ಜೊತೆಗೆ ಯಾರ ಅವಧಿಯಲ್ಲಿ ಭ್ರಷ್ಟಾಚಾರವಾಗಿದೆ ಎಂಬುದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ಪತ್ರದ ಮೂಲಕ ತಂದಿದ್ದೇವೆ. ಹಿರಿಯ ಅಧಿಕಾರಿಗಳ ಆದೇಶದಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ರಾಜ್ಯ ಪ್ರ.ಕಾ. ಫಾರೂಖ್‍ಪಾಷ, ಬಂಗಾರಿ ಮಂಜು, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಶೈಲ, ಚೌಡಮ್ಮ, ಸುಪ್ರೀಂ ಚಲ, ಚಂದ್ರಪ್ಪ, ಕೋಟೆ ಶ್ರೀನಿವಾಸ್ ಮುಂತಾದವರಿದ್ದರು

ಅಂಗನವಾಡಿ ಮಕ್ಕಳ, ಗರ್ಭಿಣಿ ಬಾಣಂತಿಯರ ಪುಷ್ಠಿ ಆಹಾರ ಕಾಳ ಸಂತೆಯಲ್ಲಿ ಮಾರಾಟ ; ಕ್ರಮಕ್ಕೆ ಪ್ರೋ.ಎಂ.ಡಿ.ಎನ್. ರೈತ ಸಂಘ ಒತ್ತಾಯ

ಕೋಲಾರ 27 ಫೆಬ್ರವರಿ : ಕೋಲಾರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳ ಪೌಷ್ಠಿಕ ಆಹಾರ, ಬೇತಮಂಗಲ ಕಾಳಸಂತೆಯಲ್ಲಿ ಮಾರಾಟ ಮಾಡಿರುವುದನ್ನು ತನಿಖೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ರವರಿಗೆ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಒತ್ತಾಯಿಸಿದ್ದಾರೆ.
ಕೋಲಾರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಪುಟ್ಟ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಪೌಷ್ಠಿಕಾಂಶಗಳುಳ್ಳ ಪುಷ್ಠಿ ಎಂಬ ಹೆಸರಿನ ಆಹಾರ ಪಾಕೆಟ್‍ಗಳನ್ನು ಸರಬರಾಜು ಮಾಡುತ್ತಿದ್ದಾರೆ. ಮಕ್ಕಳಿಗೆ ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಠಿಕಾಂಶದ ಕೊರತೆ ಉಂಟಾಗದ ರೀತಿ ಫಲಾನುಭವಿಗಳಿಗೆ ವಿತರಣೆ ಮಾಡಲು ತಾಲ್ಲೂಕಿನ ಸಿಡಿಪಿಒ, ಸೂಪರ್‍ವೈಜರ್, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಆಹಾರ ಸರಬರಾಜುದಾರರಿಗೆ (ಎಂಎಸ್‍ಪಿಟಿ) ಆಹಾರ ತಯಾರಿಕಾ ಘಟಕದವರಿಗೆ ಜವಾಬ್ದಾರಿ ಇರುತ್ತದೆ.
ಆದರೆ ಕೋಲಾರ ತಾಲ್ಲೂಕಿನ ಎಂ.ಎಸ್.ಪಿ.ಟಿ. ಪೌಷ್ಠಿಕಾಂಶವುಳ್ಳ ಆಹಾರ ಪಾಕೆಟ್‍ಗಳ ಮೇಲೆ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕ, ವಿದ್ಯಾಜ್ಯೋತಿ ಶಾಲೆ ಹಿಂಭಾಗ, ಕಳ್ಳೀಪುರ, ಹೊನ್ನೇನಹಳ್ಳಿ ಕೋಲಾರ ತಾಲ್ಲೂಕು ಎಂದು ಮುದ್ರಿಸಲಾಗಿದೆ. ಈ ಆಹಾರ ಪಟ್ಟಣಗಳು ಬೇತಮಂಗಲದ ಸಣ್ಣ ಸಣ್ಣ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ ಇದರ ಹಿಂದೆ ಬಲಾಡ್ಯರು, ಅಧಿಕಾರಿಗಳ ಹಸ್ತವಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಈ ಒಂದು ಕಾಳಸಂತೆ ದಂದೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಆಹಾರ ಸರಬರಾಜುದಾರರು ಆಹಾರ ತಯಾರಿಕಾ ಘಟಕದವರು ಶಾಮೀಲಾಗಿದ್ದಾರೆ ಎಂಬ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದ್ದು, ಕೋಲಾರ ನಗರದ ಅಂಗನವಾಡಿ ಕೇಂದ್ರಗಳನ್ನು ಖುದ್ದು ಪರಿಶೀಲಿಸಬೇಕೆಂದು ಮತ್ತು ನಕಲಿ ಫಲಾನುಭವಿಗಳ ದಾಖಲಾತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಇರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇವರ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಮಾತನಾಡಿ ಕಾಳ ಸಂತೆಯಲ್ಲಿ ಮಾರಾಟವಾದ ಪುಷ್ಟಿ ಪಾಕೆಟ್ ವಿಚಾರವಾಗಿ ಈಗಾಗಲೇ ಸಂಬಂಧಪಟ್ಟವರ ಮೇಲೆ ಕೇಸು ದಾಖಲು ಮಾಡಿದ್ದು, ತನಿಖೆ ಮಾಡುತ್ತಿದ್ದೇವೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಗೂ ಮಕ್ಕಳ, ಗರ್ಭಿಣಿ ಭಾಣಂತಿಯರ ಪುಷ್ಟಿ ಪೌಷ್ಠಿಕಾಂಶದ ಆಹಾರ ಪಾಕೆಟ್‍ಗಳನ್ನು ಸರಬರಾಜು ಮಾಡುತ್ತಿರುವವರ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಯುವ ಘಕದ ರಾಜ್ಯಾಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ, ಜಿಲ್ಲಾ ಗೌರವಾಧ್ಯಕ್ಷ ಕೊತ್ತಮಿರಿ ಜಿ. ಮಂಜುನಾಥ್, ಜಿಲ್ಲಾಧ್ಯಕ್ಷ ಕೊಲದೇವಿ ಗೋಪಾಲಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಕೋಲಾರ ತಾಲ್ಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರೇಗೌಡ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಎಲ್.ಎನ್.ಬಾಬು, ತೇರಹಳ್ಳಿ ಚಂದ್ರಪ್ಪ ಮುಂತಾದವರು ದೂರು ಸಲ್ಲಿಸಿದರು.

Litterateur Irene Pinto bestowed with Konkani Literary Award-2023

Konkani Lekhaka Sangha (KLS) bestowed Konkani Literary Award -2023 on renowned writer Irene Pinto. The award conferring ceremony was held on Saturday, February 25 at Sandesha premises, Sandesha Foundation, Bajjodi, Nanthoor.

Former editor of ‘Raknno’ weekly Fr Francis Rodrigues graced the function as the chief guest and Prof Radhakrishna Bellur, government college Kasargod attended as the guest of honour for the award conferring ceremony.

Receiving the award, Irene Pinto said, “I am thankful to the entire Konkani literary world for recognising me as a Konkani writer and novelist. It gives me immense pleasure to receive the award from KLS which is very active in the Konkani community. Meanwhile, I am thankful to my supporters, literary friends and my family members. I wish many more prosperous years ahead to the KLS.”

The award comprised a cash prize of Rs 25,000, a citation and a memento. Jossie Pinto read out the citation.

In his keynote address, Prof Radhakrishna Bellur said, “A litterateur only can write imaginary concepts without any experience of the real subject, incident or time. But out of extraordinary imagination he can also reflect the truth in his writings. Ramayana was also written by many and all of them tried to get closer to the truth in various angles. When a poet, writer or artist tries to tackle or narrate a subject in a normal way and tries to address it by giving it a different angle then only can he get success that also reflects truth in his writings. The truth finding mission of a writer paves the way to point out the limitations, mistakes of society and encourage a course correction.”

Fr Francis said, “As per records so far we have 81 women writers in the Konkani literary circle. The women of the Konkani community have not shown much interest in penning literature. They have engaged themselves in many other activities such as managing family and tilling agricultural lands that they own. But Irene Pinto has done a miracle in Konkani. She never restricted herself to the kitchen and her family. She expressed her thoughts, her opinions and about society in general through her writings. She is an inspiration for all women and the entire Konkani literary world.”

Dr Edward Nazreth, Eric Ozario, Andrew L D’Cunha, Joyce Ozario and, Valley Quadros were also felicitated by the KLS for their achievements in their respective fields.

As a part of the event, a book titled ‘Bhagavan Yesu Krista’ (Tulu-Third Edition) written by Mark Walder, former editor of Raknno was released by former editors of Raknno weekly Fr Eric Crasta, Fr Francis Rodrigues and designated editor of Raknno Fr Rupesh Madtha. Dolphie F Lobo spoke about the book and applauded the writings of Fr Mark Walder.

Richard Moras gave the introductory speech. Core committee member Edward Nazreth introduced the literary works of Irene Pinto. Macha Milar rendered the vote of thanks.

Anil and Irene Rebello rendered the prayer song. Lavi Ganjimatt compered the event.

Konkani Lekhaka Sangha Karnataka is a voluntary association that was exclusively formed with the sole intention of promoting Konkani language and literature in the year 2018. From the year 2022, Konkani Lekhaka Sangha decided to select and honour a Konkani writer who has immensely contributed to Konkani literature.

Lecture on Relevance of St Devasahayam and His Spirituality

A lecture on “The Relevance of St Devasahayam and His Spirituality: An Inspiration for Lay Faithful of Our Times” was jointly organized by Chair in Christianity, Mangalore University and Commission for Lay Faithful, Mangalore Diocese on 23rd February 2023 at Sambhrama Hall, St Anthony’s Ashram, Jeppu-Mangalore. The speaker Rev. Dr Vincent B Wilson, Coordinator of Pastoral Commissions of Diocese of Kottar, Tamil Nadu narrated the life, socio-political background, context and mission of Devasahayam. He asserted that Devasahayam is a folk hero who identified himself with the oppressed class. The first Indian canonised lay martyr, opposed slavery and taxation in Tranvavore and considered all as children of God. He was ostracised by the people of higher caste and had to undergo many kinds of torture. The practice of secular spirituality made him a true witness of Christ. The speaker called the participants to critique the upper-class structure like Devasahayam, who inspires all to treat everyone with dignity and respect.

The Secretary of Commission for Lay faithful Rev. Fr J. B. Crasta welcomed the gathering and Retd Associate professor of Mathematics from St Aloysius college, Dr John D’Silva introduced the speaker and moderated the session. Br Jeevan Lobo compered the session. The program was coordinated by Rev. Fr J. B. Crasta and Fr Ivan D’Souza, the Head of the Chair in Christianity. The program was well attended by students residing at St Antony’s Ashram, the students of St Joseph’s Seminary, priests, religious sisters, lay faithful and interested public. There were around 230 participants for the program.

ಸರ್ಕಾರಿ ನೌಕರರು ವೇತನ ಆಯೋಗದ ವರದಿ ಜಾರಿಗಾಗಿ ಅನಿರ್ಧಿಷ್ಠಾವಧಿ ಮುಷ್ಕರ ಕೈಬಿಟ್ಟು ಜನರಿಗೆ ತೊಂದರೆಯಾಗದಂತೆ ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಬೇಕು: ಕೆ.ನಾರಾಯಣಗೌಡ

ಕೋಲಾರ; ಫೆ.26: ಮಾ.1 ರಿಂದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗಾಗಿ ಅನಿರ್ಧಿಷ್ಠಾವಧಿ ಮುಷ್ಕರ ಕೈಬಿಟ್ಟು ಜನಸಾಮಾನ್ಯರಿಗೆ ತೊಂದರೆಯಾಗದ ರೀತಿ ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರಿ ನೌಕರರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ನೌಕರರ ಮುಷ್ಕರಕ್ಕೆ ನಮ್ಮ ಅಭ್ಯಂತರವಿಲ್ಲ. ಅವರ ನ್ಯಾಯಯುತ ಹಕ್ಕುಗಳಾದ 7ನೇ ವೇತನ ಆಯೋಗದ ವರದಿ ಜಾರಿ ಹಾಗೂ ಎನ್‍ಪಿಎಸ್ ರದ್ದತಿಗೆ ರಾಜ್ಯ ವ್ಯಾಪಿ ಮಾ.1ರಿಂದ ಅನಿರ್ಧಿಷ್ಠಾವಧಿ ಮುಷ್ಕರದಿಂದ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಇಲಾಖೆಗಳಲ್ಲಿ ತೊಂದರೆಯಾಗುವ ಜೊತೆಗೆ ಅತಿಮುಖ್ಯವಾಗಿ ಎಸ್ಸೆಎಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುವುದರಿಂದ ಈ ಮುಷ್ಕರದಲ್ಲಿ ಶಿಕ್ಷಕರು ಪಾಲ್ಗೊಂಡರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುವುದಿಲ್ಲವೇ.
ಇದನ್ನೂ ಸಹ ಸರ್ಕಾರಿ ನೌಕರರು ಪರಿಗಣಿಸಬೇಕು. ಜೊತೆಗೆ ಈಗಾಗಲೇ ಸಿಬ್ಬಂದಿ ಕೊರತೆ ನೆಪದಲ್ಲಿ ಯಾವುದೇ ಕೆಲಸಗಳು ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಆಗುತ್ತಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಮುಷ್ಕರಕ್ಕೆ ಮುಂದಾದರೆ ಇನ್ನು ಜನರ ಕಷ್ಟಗಳಿಗೆ ಸ್ಪಂದಿಸುವವರು ಯಾರು.
ಈ ಅನಿರ್ಧಿಷ್ಠಾವಧಿ ಮುಷ್ಕರವನ್ನು ಸರ್ಕಾರಿ ನೌಕರರು ವಿದ್ಯಾರ್ಥಿಗಳ ಭವಿಷ್ಯ ಜನಸಾಮಾನ್ಯರ ಕಷ್ಟಗಳನ್ನು ಅರಿತು ಮುಷ್ಕರ ಕೈಬಿಟ್ಟು ಕನಿಷ್ಠ ದಿನಕ್ಕೆ 1 ತಾಸು ಬೇಕಾದರೆ ಕೆಲಸವನ್ನು ಬಹಿಷ್ಕರಿಸಲಿ. ಅದನ್ನು ಬಿಟ್ಟು ಈ ರೀತಿ ಮುಷ್ಕರಕ್ಕೆ ಮುಂದಾದರೆ ಆಗುವ ಅನಾಹುತಗಳು, ಅನಾನುಕೂಲಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಿ ಅನಿರ್ಧಿಷ್ಠಾವಧಿ ಮುಷ್ಕರ ಕೈಬಿಟ್ಟು ಸರ್ಕಾರೊಂದಿಗೆ ಮಾತುಕತೆ ಮಾಡುವ ಮುಖಾಂತರ ಸಮಸ್ಯೆ ಬಗೆಹರಿಸಿಕೊಂಡು ಮುಷ್ಕರವನ್ನು ಕೈಬಿಡಬೇಕೆಂದು ಸರ್ಕಾರಿ ನೌಕರರನ್ನು ಪತ್ರಿಕಾ ಹೇಳಿಕೆ ಮುಖಾಂತರ ಮನವಿ ಮಾಡಿದ್ದಾರೆ.

ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿ – ಶೆವೊಟ್ ಪ್ರತಿಷ್ಟಾನ್ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ


ಕುಂದಾಪುರ, ಫೆ.27: ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿ (ರಿ) ಮತ್ತು ಶೆವೊಟ್ ಪ್ರತಿಷ್ಟಾನ್ (ರಿ) ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಫೆ.26 ರಂದು ಸಂಜೆ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಲಯ ಪ್ರಧಾನ ಧರ್ಮಗುರು, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳ ಒಳಗೆ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೇರಣೆ ನೀಡಿದರೆ, ಮುಂದೆ ಆ ಮಗು ಆ ಕ್ಷೇತ್ರದಲ್ಲಿ ಸಾಧನೆ ಮಾಡುತ್ತದೆ, ಪ್ರತಿಭೆಗಳನ್ನು ಗುರುತಿಸಿ ಸನ್ಮಾನ ಕಾರ್ಯಗಳನ್ನು ಮಾಡಿದರೆ, ಅವರಿಗೆ ಸಾಧನೆ ಮಾಡಲು ಪ್ರೇರಿಸಿದಂತಾಗುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ರಾಜಕಾರಣಿ ಮುತ್ಸದಿ ದಾನಿ ದಿನೇಶ್ ಹೆಗ್ಡೆ ಮೊಳಹಳ್ಳಿ ಇವರು ಪ್ರತಿಭೆಗಳನ್ನು ಸನ್ಮಾನಿಸಿ “ಇಂತಹ ಒಂದು ಪ್ರತಿಭಾವಂತರಿಗೆ ಗೌರವಿಸುವ ಉತ್ತಮ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತೀರುವ ಕಥೊಲಿಕ್ ಸಭಾದವರಿಗೆ ಅಭಿನಂದನೆಗಳನ್ನು ಸಲ್ಲಿಸುತೇನೆ, ಸಮಾಜದಲ್ಲಿ ಇಂತಹ ಕಾರ್ಯಗಳು ನಡೆಯುತ್ತೀರಬೇಕು, ಕಲಿಕೆಯಲ್ಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಹಿಂದೆ ಬಿದ್ದವರಿಗೂ ಕೂಡ ಗೌರವಿಸುವ ಕಾರ್ಯಗಳು ಆಗಬೇಕು, ಅವಾಗ ಮುಂದಿನ ವರ್ಷ ಆ ಮಕ್ಕಳು ಸ್ಪರ್ಧೆಗೆ ಬಿದ್ದು ಇನ್ನೂ ಹೆಚ್ಚು ಅಂಕಗಳನ್ನು ಗಳಿಸುತ್ತಾರೆ” ಎಂದು ತಿಳಿಸಿದರು. ಇನ್ನೊರ್ವ ಮುಖ್ಯ ಅತಿಥಿ ಹಿಮಾಲಯದ ತುತ್ತ ತುದಿಗೆ ಬೈಕನಲ್ಲಿ ಪ್ರಯಾಣಿಸಿ ಖ್ಯಾತಿ ಗಳಿಸಿದ ಮೂಲತಹ
ಕುಂದಾಪುರದವರಾದ ವಿಲ್ಮಾ ಕರ್ವಾಲ್ಲೊ (ಕ್ರಾಸ್ತಾ) ಬೆಂಗಳೂರು, ಕಾರ್ಪೋರೇಟ್ ತರಬೇತುದಾರರು ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆರ್ಥಿಕವಾಗಿ ಹಿಂದುಳಿದು ಒದಿನಲ್ಲಿ ಸಾಧನೆ ಮಾಡಿದಕ್ಕಾಗಿ “ವಿಕ್ರಮ್ ಸುನೀತಾ” ಅವಾರ್ಡನನ್ನು ನೀಡಿ “ವಿದ್ಯಾರ್ಥಿಗಳಿಗೆ ತಮ್ಮ ವಿಧ್ಯಾಬಾಸದಲ್ಲಿ ಹಲವಾರು ಆಯ್ಕೆಗಳಿರುತವೆ, ಅದನ್ನು ನಿಮ್ಮ ಟೀಚರ್‍ಗಳು ಅಥವ ನಿಮ್ಮ ಹೆತ್ತವರು ನೀವು ಇಂತಹ ಒದನ್ನು ಆಯ್ಕೆ ಮಾಡಿಕೊಳ್ಳಿ ಅಂತಾ ಸಲಹೆ ಮಾಡುತ್ತಾರೆ ಆದರೆ ನಿಮ್ಮ ಆಯ್ಕೆಯೆ ಅಂತಿಮವಾಗಿರಬೇಕು ಅದು ನಿಮಗೆ ಸಹಕಾರಿಯಾಗುತ್ತೆ, ಸಾಧನೆ ಮಾಡಲು ಛಲವಿರಬೇಕು, ನಿಮ್ಮಿಂದ ಅಸಾಧ್ಯ ಎಂದು ಬೇರೆಯವರು ಹೇಳಿದರೆ, ಅದಕ್ಕೆ ಸೋತು ನಿರಾಶರಾಗಬೇಡಿ, ನನ್ನಿಂದ ಸಾಧ್ಯವೆಂದು ಪ್ರಯ್ತಿನಿಸಿ, ಕೊನೆಗೂ ಜಯ ನಿಮ್ಮದಾಗುತ್ತದೆ’ ಎಂದು ಕಿವಿ ಮಾತು ಹೇಳಿದರು. ಶೆವೊಟ್ ಪ್ರತಿಷ್ಟಾನ್ ಅಧಕ್ಷ ವಿನೋದ್ ಕ್ರಾಸ್ಟೊ ಮತ್ತು ಕಥೊಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷೆ ಮೇಬಲ್ ಡಿಸೋಜಾ ಬಹುಮಾನ ವಿತರಣೆ ಮಾಡಿದರು
ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ಅಧ್ಯಕ್ಷೆ, ಕಾರ್ಯಕ್ರಮದ ಅಧ್ಯಕ್ಷೆಯಾದ ಶಾಂತಿ ಪಿರೇರಾ “ನಮ್ಮ ವಿದ್ಯಾರ್ಥಿಗಳು ಸರಕಾರಿ ಉದ್ಯೋಗ ಪಡೆಯುವಲ್ಲಿ ಪ್ರಯತ್ನ ಪಡೆಯಬೇಕು, ಆ ನಿಟ್ಟಿನಲ್ಲಿ ವಿಧ್ಯಾಭಾಸವನ್ನು ಪಡೆಯಬೇಕು, ಸರಕಾರದ ಅತ್ಯುತ್ತಮ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನ ಮಾಡಬೇಕು” ಎಂದು ತಿಳಿಸಿದರು.
ಕನ್ನಡ ಕೊಂಕಣಿ ಭಾಷಣ ಸ್ಪರ್ಧೆಗಳಲ್ಲಿ ವೀಜೆತರಾದವರಿಗೆ, ಕಲಿಕೆಯಲ್ಲಿ ವಲಯ ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ, ವಿಶೇಷ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ವ.ಕಥೊಲಿಕ್ ಸಭಾ ನಿಯೋಜಿತ ಅಧ್ಯಕ್ಷ ಕಾರ್ಯಕ್ರಮದ ಸಂಚಾಲಕ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಮಾಜಿ ಕಥೊಲಿಕ್ ವ.ಸಭಾ ಅಧ್ಯಕ್ಷೆ ಡಾ.ಸೋನಿ ಕಾರ್ಯಕ್ರಮ ನಿರೂಪಿಸಿದರು. ವ.ಕಥೊಲಿಕ್ ಸಭಾ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು.

ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ತೆರೆ ಮರೆ ಯಾ ಸಾಧಕರಿಗೆ ಸನ್ಮಾನ


ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ತೆರೆ ಮರೆಯಾ ಸಾಧಕ ಮೆಸ್ಕಾಂ ಉದ್ಯೋಗಿ ಸುಮಾರು 25 ವರ್ಷ ಗಳಿಂದಮೆಸ್ಕಾಂ ನಲ್ಲಿ ಸೇವೆ ಸಲ್ಲಿಸಿದ ಅರುಣ್ ಬಿಲ್ಲವ ಯವರಿಗೆ ಕುಂದಾಪುರ ದ ಸಹನಾ ಕನ್ವೆನ್ಷನ್ ಹಾಲ್ ನಲ್ಲಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ವಲಯ 15ರ ಪೂರ್ವ ಅಧ್ಯಕ್ಷ ಹಾಗು ಭಾರತೀಯ ಜೇಸಿಸನ್ ರಾಷ್ಟ್ರೀಯ ಸಂಯೋಜಕ ಕೆ ಕಾರ್ತಿಕೇಯ ಮಧ್ಯಸ್ಥ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ ಗಿರೀಶ್ ಹೆಬ್ಬಾರ್, ಮಂಜುನಾಥ್ ಕಾಮತ್, ನಾಗೇಶ್ ನಾವಡ ,ಶ್ರೀಧರ್ ಸುವರ್ಣ, ಪ್ರಶಾಂತ್ ಹವಾಲ್ದಾರ್ ವಿಜಯ ಭಂಡಾರಿ ಉಪಾಧ್ಯಕ್ಷ ರಾದ ದಿನೇಶ್ ಪುತ್ರನ್ ನಾಗರಾಜ ಪಾಟ್ವಲ್ ಮಹೇಶ್ ಶೇಟ್ ಮಹರುದ್ರ ಲೇಡಿ ಅಧ್ಯಕ್ಷೆ ಪ್ರೇಮ ಡಿ ಯುವ ಜೇಸಿ ಛೇರ್ಮನ್ ಚಂದ್ರಿಕಾ ಕಾಮತ್ ಇನ್ನಿತರರು ಉಪಸ್ಥಿತರಿದ್ದರು
ಅಧ್ಯಕ್ಷ ರಾದ ಡಾ ಸೋನಿ ಸ್ವಾಗತಿಸಿ ದರು ಶೈಲಾ ಲುವಿಸ್ ವಂದಿಸಿದರು

ಸಾಹಿತ್ಯ ಸಮಾಜದಲ್ಲಿ ಮಾನವೀಯತೆ ಬೆಳೆಸುವ ಸಾಧನವಾಗಬೇಕು; ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ

ಶ್ರೀನಿವಾಸಪುರ: ಸಾಹಿತ್ಯ ಸಮಾಜದಲ್ಲಿ ಮಾನವೀಯತೆ ಬೆಳೆಸುವ ಸಾಧನವಾಗಬೇಕು ಎಂದು ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಹೇಳಿದರು.
ಪಟ್ಟಣದ ಎಸ್‍ವಿ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಸುಗಟೂರಿನ ಗೆಳೆಯರ ಬಳಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರಿಗೆ ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಾಹಿತಿ ತನ್ನ ಬದುಕು ಮತ್ತು ಬರಹದ ಮಧ್ಯೆ ಸಮನ್ವಯ ಸಾಧಿಸಬೇಕು. ಬರೆದಂತೆ ಬದುಕಿದಾಗ ಮಾತ್ರ ಸಾಮಾಜಿಕ ಮನ್ನಣೆ ದೊರೆಯುತ್ತದೆ. ಆ ನಿಟ್ಟಿನಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಮಾದರಿಯಾಗಿದ್ದಾರೆ. ಅವರ ಬರಹಗಳು ಸಮಾಜ ಮುಖಿಯಾಗಿದ್ದು, ಜೀವನ ಪ್ರೀತಿ ಉಂಟುಮಾಡುತ್ತವೆ. ಅವರ ಕೃತಿಗಳಲ್ಲಿ ಮಾನವೀಯ ಮೌಲ್ಯ ಪ್ರಧಾನ ಅಂಶವಾಗಿದೆ ಎಂದು ಹೇಳಿದರು.
ಅವರು ನಾಲ್ಕು ದಶಕಗಳಿಂದ ಸಾಹಿತ್ಯ, ಶಿಕ್ಷಣ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಅದು ಅವರ ಉತ್ತಮ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದ್ದು, ಗೆಳೆಯರ ಬಳಗದ ಪ್ರಥಮ ಪ್ರಶಸ್ತಿ ತಾಲ್ಲೂಕಿಗೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಸರ್ಕಾರಿ ಶಾಲೆ ಶಿಕ್ಷಕರಾಗಿದ್ದುಕೊಂಡು, ಪ್ರತಿ ತಿಂಗಳೂ ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ನೀಡುತ್ತಿರುವ ಎಸ್.ಆರ್.ಧರ್ಮೇಶ್ ಹೆಸರಲ್ಲಿ, ಅವರ ಗೆಳೆಯರು ಪ್ರಶಸ್ತಿ ಸ್ಥಾಪಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ. ಅದನ್ನು ಅರ್ಹ ವ್ಯಕ್ತಿಗೆ ನೀಡಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಉಪನ್ಯಾಸಕ ಹಾಗೂ ಸಾಹಿತಿ ಎನ್.ಶಂಕರೇಗೌಡ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರ ಬದುಕು, ಬರಹ ಕುರಿತು ಮಾತನಾಡಿದರು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ, ದಾಸಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಾಯಾ ಬಾಲಚಂದ್ರ, ಧರ್ಮೇಶ್ ಗೆಳೆಯರ ಬಳಗದ ಅಧ್ಯಕ್ಷ ಎಸ್.ಆರ್.ಧರ್ಮೇಶ್, ಕಾರ್ಯದರ್ಶಿ ವಿ.ರಾಮಪ್ಪ ಪ್ರಶಸ್ತಿ ಪುರಸ್ಕøತರ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ, ಪತ್ನಿ ಬಿ.ವಿ.ಸುಗುಣ ಅವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ರೂ.40 ಸಾವಿರ ನಗದು ಒಳಗೊಂಡ, ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು.
ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ರಾಮಕೃಷ್ಣೇಗೌಡ, ಸಿಆರ್‍ಪಿ ನಟರಾಜ್, ಉಪನ್ಯಾಸಕರಾದ ಸೀತರೆಡ್ಡಿ, ನಾರಾಯಣಸ್ವಾಮಿ, ಪ್ರಾಂಶುಪಾಲ ಸೀನಪ್ಪ, ಡಾ.ಶಿವಕುಮಾರ್, ವಿಶ್ವನಾಥಸಿಂಗ್, ನಾಗೇಂದ್ರ, ನಿಶಾಂತ್ ಇದ್ದರು.

ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ವಾಹನಗಳಿಗೆ ವರ್ತೂರು ಪ್ರಕಾಶ್ ಚಾಲನೆ- ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರಿವಿಟ್ಟು ಬಿಜೆಪಿ ಬೆಂಬಲಿಸಲು ಕರೆ

ಕೋಲಾರ:- ದೇಶದಲ್ಲಿ ಭ್ರಷ್ಟಾಚಾರದ ಶಿಶುಗಳನ್ನು ಸೃಷ್ಟಿಸಿ ಪೋಷಿಸಿದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಉಳಿಸಿ ರಾಜ್ಯವನ್ನು ಸಂರಕ್ಷಿಸಲು ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಮತ ನೀಡಲು ಕೇಂದ್ರ,ರಾಜ್ಯ ಸರ್ಕಾರಗಳ ಜನಪರ ಯೋಜನೆಗಳ ಕುರಿತು ಜನತೆಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಕರೆ ನೀಡಿದರು.
ನಗರದ ಬಂಗಾರಪೇಟೆ ವೃತ್ತದಲ್ಲಿನ ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನವ ಕರ್ನಾಟಕ ನಿರ್ಮಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ,ಪ್ರಗತಿಪರ ಯೋಜನೆಗಳ ಕುರಿತು ಜನತೆಗೆ ಅರಿವು ಮೂಡಿಸಲು ಕೈಗೊಂಡಿರುವ ವಿಜಯ ಸಂಕಲ್ಪ ಯಾತ್ರೆಯ ಮೂರು ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಭಾರತೀಯ ಜನತಾ ಪಕ್ಷವು ಜನರಿಂದ,ಜನರಿಗಾಗಿ,ಜನರಿಗೋಸ್ಕರ ಕೆಲಸ ಮಾಡುತ್ತಿದೆ, ಮೋದಿ ಪ್ರಧಾನಿಯಾದ ನಂತರ ದೇಶದ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ, ಇತರೆ ರಾಷ್ಟ್ರಗಳ ಬಳಿ ಕೈಯೊಡ್ಡುತ್ತಿದ್ದ ಅಪವಾದ ಹೊಂದಿದ್ದ ಭಾರತ ಇಂದು ಇಡೀ ವಿಶ್ವಕ್ಕೆ ಕೊಡುಗೈ ದಾನಿಯಾಗಿ, ಕೋವಿಡ್ ಲಸಿಕೆ ಉಚಿತವಾಗಿ ನೀಡಿದೆ, ಇತರೆ ರಾಷ್ಟ್ರಗಳಲ್ಲಿ ಯುದ್ದ,ಪ್ರಕೃತಿ ವಿಕೋಪಗಳಿಗೆ ನೆರವಿನ ಹಸ್ತ ಚಾಚುವ ಮೂಲಕ ವಿಶ್ವಮಾನ್ಯವಾಗಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ,ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನವ ಕರ್ನಾಟಕ ನಿರ್ಮಾಣಕ್ಕಾಗಿ ಹಲವಾರು ಜನ ಪರ ಹಾಗೂ ಪ್ರಗತಿ ಪರ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿದೆ ಎಂದರು.
135 ವಾಹನಗಳಲ್ಲಿ
ಸಂಕಲ್ಪ ಯಾತ್ರೆ
ಕೇಂದ್ರ,ರಾಜ್ಯಸರ್ಕಾರಗಳ ಕಾರ್ಯಕ್ರಮಗಳ ಕುರಿತು ಅರಿವುಂಟು ಮಾಡುವ ದೆಸೆಯಲ್ಲಿ ಬೆಂಗಳೂರಿನಲ್ಲಿ 135 ವಾಹನಗಳಿಗೆ ಚಾಲನೆ ನೀಡಲಾಗಿದೆ, ಹಾಗೆಯೇ ಕೋಲಾರ ಜಿಲ್ಲೆಯಲ್ಲಿ 6 ತಾಲ್ಲೂಕುಗಳಲ್ಲಿನ ಪ್ರಚಾರಕ್ಕೆ 3 ವಾಹನಗಳನ್ನು ವಿಜಯ ಸಂಕಲ್ಪ ಯಾತ್ರೆಗೆ ಕಳಹಿಸಿದ್ದು ಅವುಗಳಿಗೆ ಇಂದು ಚಾಲನೆ ನೀಡುತ್ತಿರುವುದಾಗಿ ತಿಳಿಸಿದರು.
ಬಿಜೆಪಿ ಜಾರಿಗೆ ತಂದಿರುವ ಯೋಜನೆಗಳನ್ನು ಬಹುಶಃ ಈ ಹಿಂದೆ ಯಾವುದೇ ಸರ್ಕಾರ ಜಾರಿಗೆ ತಂದಿಲ್ಲ, ಜನಪರ ಯೋಜನೆಗಳನ್ನು ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ನೀಡಲಾಗಿದೆ ಎಂದು ಹೇಳಿದರು,
2023ನೇ ಸಾಲಿನಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬರಲು ರೂಪಿಸಿರುವಂತ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಸಾರ್ವಜನಿಕರ ಗಮನಕ್ಕೆ ತರಲು ಪ್ರಗತಿಪರ ರಥಗಳಿಗೆ ಚಾಲನೆ ನೀಡಲಾಗಿದ್ದು ಕಾರ್ಯಕರ್ತರು ಇದಕ್ಕೆ ಸಾಥ್ ನೀಡುವ ಮೂಲಕ ಬಿಜೆಪಿ ಸಾಧನೆಗಳನ್ನು ಜನರಿಗೆ ತಿಳಿಸುವಂತಾಗ ಬೇಕೆಂದು ಕರೆ ನೀಡಿದರು,
ರಾಜ್ಯ, ಕೇಂದ್ರ ಸರ್ಕಾರಗಳ, ರೈತ ವಿದ್ಯಾನಿಧಿ ಯೋಜನೆ, ನೀರಾವರಿ ಯೋಜನೆಗಳು, ಕೃಷಿ ಪರ ಯೋಜನೆಗಳು, ಮುಖ್ಯ ಮಂತ್ರಿ ವಿದ್ಯಾಶಕ್ತಿ ಯೋಜನೆ ಗೃಹಣಿ ಶಕ್ತಿ ಯೋಜನೆ, ರೈಲ್ವೆ ಯೋಜನೆಗಳ ಸುಧಾರಣೆ, ಸಾಲ ಬಡ್ಡಿ ಮನ್ನ ಯೋಜನೆಗಳು ಆಸ್ಪತ್ರೆಗಳು ಮೇಲ್ದರ್ಜೆಗೆ, ಉಚಿತ ಬಸ್ ಯೋಜನೆ, ವಿವಿಧ ಅಭಿವೃದ್ದಿ ನಿಗಮಗಳ ಸ್ಥಾಪನೆ ಹಾಗೂ ಅನುದಾನಗಳ ಬಿಡುಗಡೆ ಕುರಿತು ಜನತೆಗೆ ಮಾಹಿತಿ ನೀಡಿ ಎಂದರು.
ಯುವಕರಿಗೆ ವಿವಿಧ ಕೌಶಲ್ಯ ತರಭೇತಿ ಕೇಂದ್ರಗಳ ಸ್ಥಾಪನೆ, ಶಿಡ್ಲಘಟ್ಟದಲ್ಲಿ ರೇಷ್ಮೆ ಹೈಟೆಕ್ ಮಾರುಕಟ್ಟೆ, ಜೀವನ್ ಜ್ಯೋತಿ ಭೀಮ ಯೋಜನೆ, ಎಕ್ಸಪ್ರೆಸ್ ಕಾರಿಡಾರ್ ಯೋಜನೆ, ವಿಮಾನ ನಿಲ್ದಾಣದ ವಿವಿಧ ಅಭಿವೃದ್ದಿ ಯೋಜನೆಗಳು ಟೌನ್ ಶಿಫ್ ಯೋಜನೆಗಳ ಕುರಿತು ಜನತೆಗೆ ತಿಳಿಸುವ ಅಗತ್ಯವಿದೆ ಎಂದರು.
ಬಿಜೆಪಿ ಭರವಸೆಯ ಪ್ರಗತಿ ರಥಗಳಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಬಿಜೆಪಿ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು
ಕಾರ್ಯಕ್ರಮದಲ್ಲಿ ಮುಖಂಡ ಬೆಗ್ಲಿ ಪ್ರಕಾಶ್, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಯುವಮೋರ್ಚಾ ಅಧ್ಯಕ್ಷ ಬಾಲಾಜಿ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ರಾಜೇಶ್ ಸಿಂಗ್, ನಾಮಾಲು ಮಂಜು, ಮೆಸ್ ಚಲಪತಿ, ಜಮೀರ್ ಆಹಮದ್, ರಾಘವೇಂದ್ರ,ಮಂಜುನಾಥ್, ಶ್ರೀನಾಥ್ ಮುಂತಾದವರು ಭಾಗವಹಿಸಿದ್ದರು.