ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ – “ಕುಟುಂಬೋತ್ಸವ” ಕಾರ್ಯಕ್ರಮ ಹೊಸತನ – ಸಂಘ ಸಂಸ್ಥೆಗಳಲ್ಲಿ ಕೌಟುಂಬಿಕ ಮನೋಭಾವನೆ ವೃದ್ಧಿ – ಸಂದೀಪ್ ವಿ. ಪೂಜಾರಿ

ನಂದಳಿಕೆ : ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಹೊಸತನದ ಕಾರ್ಯಕ್ರಮಗಳ ಮೂಲಕ ಸಂಘ ಸಂಸ್ಥೆಗಳಲ್ಲಿ ಯುವ ಜನತೆ ಹೆಚ್ಚಾಗಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಕೌಟುಂಬಿಕ ಮನೋಭಾವನೆ ವೃದ್ಧಿಯಾಗುತ್ತದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಹೇಳಿದರು.
ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಬೋಳ ಬೀರೊಟ್ಟಿನಲ್ಲಿ ಆದಿತ್ಯವಾರ ಜರಗಿದ 23ನೇ ವರ್ಷದ ವರ್ಷಾಚರಣೆಯ ಪ್ರಯುಕ್ತ ಜರಗಿದ “ಕುಟುಂಬೋತ್ಸವ” ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಾಸ್ಯ, ಚಿಂತನ, ನೃತ್ಯ, ಗಾಯನ, ವಿವಿಧ ಮನೋರಂಜನಾ ಸ್ಪರ್ಧೆಗಳು ಜರಗಿದವು.
ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಬೋಳ ಉದಯ ಅಂಚನ್, ಪೂರ್ವಾಧ್ಯಕ್ಷ ರಘುವೀರ್ ಶೆಟ್ಟಿ, ಸುರೇಶ್ ಕಾಸ್ರಬೈಲು, ಸತೀಶ್ ಪೂಜಾರಿ, ರಾಝೇಶ್ ಕೋಟ್ಯಾನ್ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಆರತಿ ಕುಮಾರಿ, ಹರಿಣಾಕ್ಷಿ, ಹರೀಶ್ ಪೂಜಾರಿ, ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಪದ್ಮಶ್ರೀ, ಪುಷ್ಪ ಕುಲಾಲ್, ರಾಜೇಂದ್ರ ಶೆಟ್ಟಿಗಾರ್, ಸಂಧ್ಯಾ ಶೆಟ್ಟಿ, ಸುದರ್ಶನ್ ಕುಂದರ್, ಸುಲೋಚನಾ ಕೋಟ್ಯನ್, ಸುರೇಶ್ ಅಬ್ಬನಡ್ಕ, ವೀಣಾ ಪೂಜಾರಿ, ಯಶವಂತ್ ಕುಲಾಲ್ ಮೊದಲಾದವರಿದ್ದರು.

ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಿ ರೈತರ ಬೆವರ ಹನಿಗೆ ತಕ್ಕ ಬೆಂಬಲ ಬೆಲೆ ರೈತರಿಗೆ ಸಿಗಬೇಕು – ರೈತ ಸಂಘದಿಂದ ಒತ್ತಾಯ

ಮುಳಬಾಗಿಲು : ಪೆ.28: ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಿ ರೈತರ ಬೆವರ ಹನಿಗೆ ತಕ್ಕ ಬೆಂಬಲ ಬೆಲೆ ರೈತರಿಗೆ ಸಿಗಬೇಕೆಂದು ರೈತ ಸಂಘದಿಂದ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ ಮುಖಾಂತರ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಹಗಲು ರಾತ್ರಿ ಎನ್ನದೆ ಬಿಸಿಲು ಗಾಳಿಗೆ ಬೆವರು ಸುರಿಸಿ ಬಂಡವಾಳ ಹಾಕಿ ಬೆಳೆದಿರುವ ರಾಗಿಗೆ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಅಧಿಕಾರಿಗಳ ಬೇಜವಬ್ದಾರಿಯಿಂದ ರೈತರಿಗೆ ಸೇರಬೇಕಾದ ಬೆವರಿಗೆ ತಕ್ಕ ಪ್ರತಿಪಲ ದಲ್ಲಾಳಿಗಳಿಗೆ ಸೇರುತ್ತಿರುವುದು ದುರಾದೃಷ್ಟಕರ ಎಂದು ಅವ್ಯವಸ್ಥೆಯ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿ 3578 ರೂ ಘೋಷಣೆ ಮಾಡಿರುವ ಬೆಂಬಲ ಬೆಲೆ 90 ದಿನ ಕಷ್ಟಪಟ್ಟಿರುವ ರೈತರ ಹೆಸರಿನಲ್ಲಿ ದಲ್ಲಾಳಿಗಳು ಅಧಿಕಾರಿಗಳು ಲೂಟಿ ಹೊಡೆಯುತ್ತಿರುವುದು ರೈತ ವಿರೋದಿ ದೋರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ರೈತರು ರಾಗಿ ತರಬೇಕಾದರೆ ಚೀಲದಿಂದ ಎಲ್ಲಾವೂ ರೈತರೇ ವ್ಯವಸ್ಥೆ ಮಾಡಿಕೊಳ್ಳಬೇಕು ಆದರೆ ದಲ್ಲಾಳರು ತರುವ ರಾಗಿಗೆ ಯಾವುದೇ ಚೀಲ ಬೇಡ ಅಧಿಕಾರಿಗಳೇ ನೇರವಾಗಿ 100 ಕ್ವಿಂಟಾಲ್ ಒಂದೇ ದಿನದಲ್ಲಿ ಖರೀದಿ ಮಾಡಿಕೊಂಡು ಬೆಂಬಲ ಬೆಲೆಯ ಹಣವನ್ನು ದಲ್ಲಾಳರು ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದಾರೆಂದ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು .
ಕೆಲವು ರಾಗಿ ಖರೀದಿ ದಲ್ಲಾಳರು ದೊಡ್ಡ ರೈತರಿಂದ ರಾಗಿಯನ್ನು ಕಡಿಮೆ ಬೆಲೆಗೆ  ಖರೀದಿ ಮಾಡಿ ಸಣ್ಣರೈತರ ಹೆಸರಿನಲ್ಲಿ ನಕಲಿ ದಾಖೆಲಗಳನ್ನು ಸೃಷ್ಠಿ ಮಾಡಿ ಸರ್ಕಾರದ ಬೆಂಬಲ ಬೆಲೆ ಯನ್ನು ರೈತರ ಹೆಸರಿನಲ್ಲಿ ಲೂಟಿ ಮಾಡಲು ವ್ಯಾಪಾರಸ್ಥರಿಗೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪ ಮಾಡಿದರು.

ವಂಚನೆ ಹೇಗೆಂದರೆ:


ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಬೇಕಾದರೆ ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ಎಪ್.ಐ.ಡಿ ಮಾಡಿಸುವುದು ಕಡ್ಡಾಯ ಎಪ್.ಐ.ಡಿ ಸೃಷ್ಠಿಗೆ ಜಮೀನಿನ ಪಹಣಿ ಆದಾರ್ ಬ್ಯಾಂಕ್ ಪಾಸ್ ಬುಕ್ ಮಾಹಿತಿ ಅಗತ್ಯವಾಗಿದೆ ಈ ಎಲ್ಲಾ ದಾಖೆಲಗಳನ್ನೇ ಬಳಸಿಕೊಂಡು ಸೈಬರ್ ಸೆಂಟರ್ ಸಾಮಾನ್ಯ ಸೇವಾ ಸಿಬ್ಬಂದಿ ಅಮಾಯಕ ರೈತರ ಹೆಸರಿನಲ್ಲಿ ಎಪ್.ಐ.ಡಿ ಸೃಷ್ಠಿಸುತ್ತಿದ್ದಾರೆ . ಬಳಿಕ ಎಪ್.ಐ.ಡಿ ಗೆ ರೈತರ ಬದಲು ವ್ಯಾಪಾರಿಗಳ ಬ್ಯಾಂಕ್ ಖಾತೆ ನಂಬರ್ ನಮೂದಿಸಿ ರಾಗಿ ಮಾರಿದ ಹಣ ಅವರ ಖಾತೆಗೆ ಹೋಗುವಂತೆ ನೋಡಿಕೊಳ್ಳುತ್ತಾರೆ. ಈಗಾಗಿ ಸಣ್ಣ ರೈತರು ತಾವು ಬೆಳೆದ ರಾಗಿ ಬೆಂಬಲ ಬೆಲೆ ಮಾರಾಟಕ್ಕೆ ಹೋಗುವ ವೇಳೆಗೆ ಅವರ ಹೆಸರಿನಲ್ಲಿ ಖರೀದಿ ದಾಖೆಲೆಗಳು ಸೃಷ್ಠಿಯಾಗಿ ವಂಚನೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‍ಪಾಷ ಮಾತನಾಡಿ ಆಕ್ರಮ ರಾಗಿ ಖರೀದಿಗೆ ಅಧಿಕಾರಿಗಳೇ ಸಾಥ್; ಎಪ್.ಐ.ಡಿ ಸೃಷ್ಠಿಯವೇಳೆ ಸಣ್ಣ ವ್ಯತ್ಯಾಸವಿದ್ದರೂ ಅಧಿಕಾರಿಗಳ ಲಾಗಿನ್‍ಗೆ ಬಂದಾಗ ಒಪ್ಪುವುದಿಲ್ಲ ಆದರೆ ಸೈಬರ್ ಸೆಂಟರ್ ಸಾಮಾನ್ಯ ಸೇವಾ ಕೇಂದ್ರ ಸೃಷ್ಠಿಸಿದ ಎಪ್.ಐ.ಡಿಗಳಿಗೆ ಕೃಷಿ ತೋಟಗಾರಿಕೆ ಕಂದಾಯ ಮತ್ತಿತರ ಇಲಾಖೆಗಳ ಕೆಳಹಂತದ ಅಧಿಕಾರಿಗಳ ನೆರವಿಲ್ಲದೆ ಯಾರದೋ ಹೆಸರಿನ ಪಹಣಿಗೆ ಇನ್ನಾರದೋ ದಾಖಲೆ ನೊಂದಾಯಿಸಲು ಹೇಗೆ ಅವಕಾಶ ನೀಡಲಾಗುತ್ತದೆ ರೈತರ ದುಡಿಮೆ ಹಣವೇ ಅಧಿಕಾರಿಗಳಿಗೆ ಬೇಕಾ ಎಂದು ಕಿಡಿ ಕಾರಿದರು.

ಟೋಕನ್ ಪಡೆಯದಿದ್ದರೆ ರೈತರ ರಾಗಿ ಖರೀದಿ ಇಲ್ಲ ಸರ್ಕಾರದ ಬೆಂಬಲ ಬೆಲೆ ಪಡೆಯಬೇಕಾದರೆ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟಕ್ಕೂ ಮುಂಚೆ ರೈತರಿಗೆ 3-4 ವಾರದ ಮೊದಲೇ ಟೋಕನ್ ಕೊಡಲಾಗುತ್ತದೆ. ಟೋಕನ್ ನೀಡುವ ಪ್ರಕ್ರಿಯೆ ನಿಲ್ಲಿಸಿದ ಕೆಲ ಹಿರಿತನದ ಆಧಾರದಲ್ಲಿ ರಾಗಿ ಸರಬರಾಜು ಮಾಡಬೇಕಾಗುತ್ತದೆ. ಆದರೆ ರೈತರು ತರುವ ರಾಗಿಗೆ ಇಷ್ಟೇ ಖರೀದಿ ಎಂದು ನಿಯಮ ನಿಗದಿ ಮಾಡುವ ಅಧಿಕಾರಿಗಳು ರೈತರ ಹೆಸರಿನಲ್ಲಿ ರಾಗಿ ದಲ್ಲಾಳರು ಮಿತಿಯಿಲ್ಲದ ನೂರಾರು ಕ್ವಿಂಟಾಂಲ್ ರಾಗಿಯನ್ನು ಯಾವ ಆಧಾರದ ಮೇಲೆ ಖರೀದಿ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದರು.
ಜಿಲ್ಲಾದ್ಯಾಂತ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ದಲ್ಲಾಳರ ವಂಚನೆ ನಿಲ್ಲಬೇಕು ಜೊತೆಗೆ ದಲ್ಲಾಳರು ನೀಡಿರುವ ರೈತರ ಹೆಸರಿನ ದಾಖಲೆಗಳನ್ನು ಪರೀಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಿ ರೈತರ ಬೆವರ ಹನಿಯ ಬೆಂಬಲ ಬೆಲೆ ರೈತರಿಗೆ ಸಿಗಬೇಕು ಇಲ್ಲವಾದರೆ ರಾಗಿ ಖರೀದಿ ಕೇಂದ್ರಗಳ ಹಗಲು ದರೋಡೆ ಬಗ್ಗೆ ದಾಖಲೆಗಳ ಸಮೇತ ಲೋಕಾಯುಕ್ತ ದೂರು ನೀಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕರು ರಾಗಿ ಖರೀದಿಯಲ್ಲಿ ಅವ್ಯವಸ್ಥೆ ಇರುವುದು ನಿಜ ರೈತರ ಹೆಸರಿನಲ್ಲಿ ದಲ್ಲಾಳರು ದಾಖಲೆಗಳನ್ನು ನೀಡಿ ರಾಗಿಯನ್ನು ತರುತ್ತಿದ್ದಾರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಸುನಿಲ್‍ಕುಮಾರ್, ವಿಶ್ವ, ವಿಜಯ್‍ಪಾಲ್, ಅಂಬ್ಲಿಕಲ್ ಮಂಜುನಾಥ, ಯಾರಂಘಟ್ಟ ಗಿರೀಶ್, ಪದ್ಮಘಟ್ಟ ಧರ್ಮ, ಜುಬೇರ್‍ಪಾಷ, ಆದಿಲ್‍ಪಾಷ, ವೇಣು, ಹೆಬ್ಬಣ್ಣಿ ಆನಂದರೆಡ್ಡಿ ಸುಪ್ರಿಂ ಚಲ, ರಂಜಿತ್, ಸುರೇಶ್, ಗೋಪಿ, ಹರಿ, ಗುರುಮೂರ್ತಿ ಸಂದಿಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಮುಂತಾದವರು ಇದ್ದರು.

ಈಚೆಗೆ ನಿಧನರಾದ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ ಗೌರವಾರ್ಥ ಪುಷ್ಪಾಂಜಲಿ ಕಾರ್ಯಕ್ರಮದದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ ಹಾಗೂ ಅನ್ನಸಂತರ್ಪಣೆ

ಶ್ರೀನಿವಾಸಪುರ: ಪಟ್ಟಣದಲ್ಲಿ ಸೋಮವಾರ, ಈಚೆಗೆ ನಿಧನರಾದ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ ಅವರ ಗೌರವಾರ್ಥ ಏರ್ಪಡಿಸಿದ್ದ ಪುಷ್ಪಾಂಜಲಿ ಕಾರ್ಯಕ್ರಮದದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು.
ಪುರಸಭೆ ಕಚೇರಿ ಸಮೀಪ ಎಂಜಿ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ್ದ ವೇದಿಕೆ ಮೇಲೆ ಇಡಲಾಗಿದ್ದ ದಿವಂಗತ ವಿಜಯಮ್ಮ ಅವರ ಭಾವಚಿತ್ರಕ್ಕೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಪುಷ್ಪಾಂಜಲಿ ಅರ್ಪಿಸಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಅಭಿಮಾನಿ ಬಳಗದ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಇಂದ್ರಾಭವನ್ ವೃತ್ತ, ಸರ್ಕಾರಿ ಬಸ್ ನಿಲ್ದಾಣ ಹಾಗೂ ತಾಲ್ಲೂಕು ಕಚೇರಿ ಸಮೀಪ ಅನ್ನದಾನ ಮಾಡಲಾಯಿತು.
ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಪುರಸಭಾಧ್ಯಕ್ಷೆ ಎನ್.ಎಂ.ಲಲಿತಾ ಶ್ರೀನಿವಾಸ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥರೆಡ್ಡಿ, ಕೃಷ್ಣಾರೆಡ್ಡಿ, ಹರೀಶ್ ಯಾದವ್, ವೇಣು, ಹೇಮಂತ್, ನರಸಿಂಹ ಇದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ – ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಉದ್ಘಾಟನೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ದಿನ ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಉದ್ಘಾಟಿಸಲಾಯಿತು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ರೆಡ್ ಕ್ರಾಸ್, ರಕ್ತ ನಿಧಿ ಕೇಂದ್ರ ಮತ್ತು ಜನ ಔಷಧಿ ಕೇಂದ್ರದ ಬಗ್ಗೆ ವಿವರಣೆ ನೀಡಿದರು. ರೆಡ್ ಕ್ರಾಸ್ ಸದಸ್ಯರಾದ ಶ್ರೀಮತಿ ಪ್ರತಿಮಾ ಮತ್ತು ಬಗ್ವಾಡಿ ಮೆತ್ತಿನ ಮನೆ ಡಾ. ದಿನಕರ ಶೆಟ್ಟಿ ದಂಪತಿಗಳು ಕೊಡಮಾಡಿದ ರೂಪಾಯಿ ಒಂದು ಲಕ್ಷ (50,000/- ಶಾಲಾ ಲೈಬ್ರರಿ ಗಾಗಿ) ಅಲ್ಲದೇ ಹತ್ತು ಮಂದಿ ಬಡ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ಸ್ಕೋಲರ್ ಶಿಪ್ ನೀಡಲಾಯಿತು. ಪ್ರಾಂಶುಪಾಲರಾದ ಚಂದ್ರ ಶೆಟ್ಟಿ ಯವರು ಎಲ್ಲರನ್ನೂ ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಸಂಯೋಜಕ ರಾದ ದಿನಕರ ಆರ್ ಶೆಟ್ಟಿ ಯವರು ವಿದ್ಯಾರ್ಥಿಗಳಿಗೆ ಪ್ರತಿಜ್ನಾವಿಧಿ ಬೋದಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾರಾಯಣ ದೇವಾಡಿಗ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀ ವೇಣುಗೋಪಾಲ ಶೆಟ್ಟಿ ವಂದನಾರ್ಪಣೆ ಗೈದರು.

Holy Redeemer English Medium School – Scouts and Guides Thinking Day Celebration

Holy Redeemer English Medium School, Belthangady on 25th February celebrated ‘Thinking Day, the birthday of Lord Robert Baden Powell, founder of Scouts and Guides. Scout Guides teachers and students held an interfaith prayers. Headmaster Rev Fr Clifford Pinto motivated  the students to participate in more Scout Guides activities to develop good qualities and live as good citizens in the society.

Students presented the good values ​​of social service, brotherhood, environmental protection, patriotism through dance and drama. Scout Master Mrs. Blendin Rodrigues spoke about the importance of the Thinking Day. Student Minal Joseph shared her experiences as a participant of International Scout and Guide Jamboree. Students Dion D’Souza welcomed, Vibhisha felicitated and Yashasvi compered the program. Co-Teachers Mrs. Blendin Rodriguez, Mrs. Anita, Mrs. Shanthi Pereira, Mrs. Akhida Banu and Mrs Elvita Pais guided and organised the program.

Renewal Leaders Orientation and Rejuvenation program of DSC’s held at Bangalore by the KRSC

Bengaluru, February 27, 2023: Karnataka Regional Service of Communion (KRSC) organised two days Diocesan Service of Communion (DSC) Leaders Orientation as well as rejuvenation training program at Palana Bhavana, Archdiocese of Bangalore on February 25th and 26th. 

February 25th, Day 1; Day began at 8:30am with Registration. At 8:45am Praise and Worship was led by Bro. Anthony Raj. Then  KRSC Coordinator Bro. Cherian Rampuram welcomed the gathering. At 9:15am Bro. Mathew Thomas led the Ice Breaking session and introduction.

At 10am Most Rev. Dr Peter Machado Archbishop Of Archdiocese of Bangalore as well as President of KRCBC inaugurated the program together with Most Rev. Dr Lawrence Mukkuzhy, Bishop of Belthangady as well as Episcopal Advisor of KRSC. Archbishop invoked God’s blessings upon the program. He said that Prayer is the powerful weapon which we need to exercise in faith and in courage. God never lets us down. When we stand together in prayer, we can carry out His mission with love and compassion.

In his address Bishop Lawrence told that we are here to pray for the Church and Our Nation. We can attain peace among all the people with our sincere prayers and intercession. He promised Archbishop saying that KRSC & DSC is committed to support the Church of Karnataka through its intercessory prayers. Leaders gathered here are gifted by Jesus with various charisms to support the Church in its mission.

KRSC Spiritual Animator Fr Franklin D’Souza from the Diocese of Shimoga was present at the Dais.Topics dealt for two days by the resource team were:

1. Understanding the Call 

2. Works of DSC Leaders in developing and maintaining the relationships

by Bro. Cherian Rampuram

3. How to persevere, sustain & grow in the Renewal and Servant Leadership

4. Primacy of the Word of God – How to Read, Interpret, Use and Memorise the Word of God 

by Fr Franklin D’Souza

5. Charisms: Holy Spirit, the Primary Agent of Evangelization and knowing what charisms are, Receiving & using them

by Bishop Lawrence Mukkuzhy

Sessions on; 

1. Group discussion on personal goal setting

2. Group discussion on DSC goal setting – Introduction and workshop

Led by David Istacky

3. Group presentation session led by Cherian Rampuram

Both the days Holy Eucharist with homily was led by Bishop Lawrence Mukkuzhy. 

Healing and Anointing Adoration was led by Fr Franklin D’Souza.

Bro. Elias Coelho and Bro. Kevin also helped in the Praise and Worship. 

85 Participants from the ten dioceses were present for the program. 

KRSC meeting, meeting with Spiritual Directors and meeting with Spiritual Directors as well as DSC coordinators was also held.

KRSC members: Coordinator Bro. Cherian Rampuram, Secretary Bro. Thomas Chinnappa, members; Bro. Elias Coelho, Bro. Ajay, Bro. K. J. Anthony, Bro. Abhishek, Bro. Joseph and Ex oficio member Bro. Joachim Pinto were part of organising the program.

Dioceses present were; Archdiocese of Bangalore, Mysore, Karwar, Chikmagalur, Shimoga, Belgaum, Belthangady, Gulbarga, Ballari, Mangalore.

Spiritual Directors present were; Monsignor Philip Kutty – Diocese of Belgaum, Monsignor Elias Sequeira – Diocese of Chikmagalur, Fr Lawrence – Diocese of Belthangady, Fr Cyril Lasrado – Diocese of ballari, Fr George Lobo – Diocese of Gulbarga, Fr John Paul – Archdiocese of Bangalore and Fr Franklin D’Souza – Diocese of Shimoga

KRSC Secretary Bro. Thomas Chinnappa thanked Archbishop Peter Machado, 

Bishop Lawrence, Palana Bhavana Director Fr Cyril Victor, Fr Franklin D’Souza, KRSC Colleagues and all DSC Spiritual Directors as well DSC leaders of ten Dioceses.

Program concluded on February 26th at 5:30pm 

ಕುಂದಾಪುರ ಭoಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜ್ – ಮೂರು ದಿನಗಳ ಯುವ ನಾಯಕತ್ವ ಮತ್ತು ಸಮುದಾಯ ಬೆಳವಣಿಗೆ ಶಿಬಿರ

ನೆಹರು ಯುವ ಕೇಂದ್ರ ಉಡುಪಿ ಹಾಗೂ ಯುವಕಾರ್ಯ ಕ್ರೀಡಾಲಯ ಇವರ ಪ್ರಯೋಜಕತ್ವದಲ್ಲಿ ಭoಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೀಜು, ಕುಂದಾಪುರ ಇಲ್ಲಿ ಮೂರು ದಿನಗಳ ಯುವ ನಾಯಕತ್ವ ಮತ್ತು ಸಮುದಾಯ ಬೆಳವಣಿಗೆ ಶಿಬಿರ ಆರಂಭವಾಗಿದ್ದು ಇದರ ಉದ್ಘಾಟನಾ ಸಮಾರಂಭ ದಿನಾಂಕ 27-02-2023 ರಂದು ಕಾಲೇಜಿನ ಎ ವಿ ಹಾಲ್ ನಲ್ಲಿ ನಡೆಯಿತು. ಕುಂದಾಪುರದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಆರ್ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ನಾಯಕತ್ವ ಶಿಬಿರದ ಅಗತ್ಯತೆ ಹಾಗೂ ಅದರ ಉಪಯುಕ್ತತೆ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀ ಶಾಂತಾರಾಮ ಪ್ರಭು ಇವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ ನಾರಾಯಣ ಶೆಟ್ಟಿ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ ಹಾಗೂ ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಅರುಣ್ ಎ ಎಸ್ ಹಾಗೂ ರಾಮಚಂದ್ರ ಆಚಾರ್ ಸಭೆಯಲ್ಲಿ ಯಲ್ಲಿ ಉಪಸ್ಥಿತರಿದ್ದರು.ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಯಾಗಿರುವ ವಿಲ್ ಪ್ರೆಡ್ ಡಿಸೋಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಬಿರಾರ್ಥಿ ಪ್ರಜ್ವಲ್ ವಂದಿಸಿದರು ಹಾಗೂ ಶಿಬಿರಾರ್ಥಿ ಸುಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಕಾಲೇಜಿನ 45 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಮಾ.1ರಿಂದ ನೌಕರರ ಅನಿರ್ಧಿಷ್ಠ ಮುಷ್ಕರ-ಆರೋಗ್ಯ ಇಲಾಖೆ ನೌಕರರ ಬೆಂಬಲ- ತುರ್ತು ಚಿಕಿತ್ಸೆ,ಐಸಿಯುಗೆ ವಿನಾಯಿತಿ-ಜಿಲ್ಲಾಸ್ಪತ್ರೆಯೂ ಬಂದ್-ಜಿ.ಸುರೇಶ್‍ಬಾಬು

ಕೋಲಾರ:- ಏಳನೇ ವೇತನ ಆಯೋಗದ ವರದಿ ಜಾರಿ, ಎನ್‍ಪಿಎಸ್ ರದ್ದತಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಮಾ.1 ರಿಂದ ನಡೆಸುತ್ತಿರುವ ಅನಿರ್ಧಿಷ್ಟ ಮುಷ್ಕರಕ್ಕೆ ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ತುರ್ತು ಚಿಕಿತ್ಸೆ,ಐಸಿಯು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆ ಮುಂಭಾಗ ಸೋಮವಾರ ಜಿಲ್ಲಾಸ್ಪತ್ರೆಯ ಮುಂಭಾಗ ವೈದ್ಯರು, ಶುಶ್ರೂಷಕರು ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ನೌಕರರು ಮುಷ್ಕರಕ್ಕೆ ಪೂರ್ವಭಾವಿಯಾಗಿ ಸಭೆ ನಡೆಸಿ ನೌಕರರ ಸಂಘದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಘೋಷಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಐಸಿಯು ಹಾಗೂ ತುರ್ತು ಚಿಕಿತ್ಸೆಗೆ ವಿನಾಯತಿ ನೀಡಿದ್ದು, ಅವರೂ ಸಹಾ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ, ಇದು ನಮ್ಮ ಹಾಗೂ ನಮ್ಮ ಕುಟುಂಬಗಳ ಭವಿಷ್ಯದ ಪ್ರಶ್ನೆಯಾಗಿರುವುದರಿಂದ ಎಲ್ಲಾ ನೌಕರರು ಒಮ್ಮತದಿಂದ ಈ ಹೋರಾಟಕ್ಕೆ ಧುಮುಕಿದ್ದಾರೆ, ಯಾವುದೇ ಒತ್ತಡ,ಬೆದರಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದರು.
ಆರೋಗ್ಯ ಇಲಾಖೆ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ಅವರು, ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಈ ಕಠಿಣ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸಂಘದ ಅಧ್ಯಕ್ಷ ಷಡಕ್ಷರಿ ಸೂಚನೆಯಂತೆ ಎಲ್ಲಾ ಇಲಾಖೆಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 8 ಸಾವಿರ ಚುನಾಯಿತ ಪ್ರತಿನಿಧಿಗಳಿದ್ದ `ತುರ್ತು ರಾಜ್ಯ ಕಾರ್ಯಕಾರಿಣಿ ಸಭೆ’ಯಲ್ಲಿ ಮುಷ್ಕರಕ್ಕೆ ನೀಡಿರುವ ಕರೆಗೆ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಸರ್ಕಾರಿ ನೌಕರರು ಒಕ್ಕೊರಲಿನಿಂದ ಸಮ್ಮತಿ ನೀಡಿದ್ದಾರೆ, ಇದು ನಮ್ಮ ಸ್ವಾಭಿಮಾನದ ಬದುಕಿಗಾಗಿ ನಡೆಯುತ್ತಿರುವ ಹೋರಾಟವಾಗಿದ್ದು ಎಲ್ಲರೂ ಪಾಲ್ಗೊಳ್ಳಲು ಕೋರಿದರು.
ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ಜುಲೈ 1 ರಿಂದ ರಿಂದ ಪರಿಷ್ಕøತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿ ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ. 40% ಫಿಟ್‍ಮೆಂಟ್ ಸೌಲಭ್ಯವನ್ನು 2022ರ ಜುಲೈ ಒಂದರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ನೌಕರರ ಸಂಘ ಆಗ್ರಹಿಸುತ್ತಿದೆ ಎಂದರು.
ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕ್ಲಿಷ್ಟವಾಗಿದೆ, ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತಿಸ್‍ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದ ಅವರು, 35 ವರ್ಷ ಸರ್ಕಾರಿ ಸೇವೆ ಮಾಡಿದ ನೌಕರರ ನಿವೃತ್ತಿ ಜೀವನ ಅತಂತ್ರವಾಗುವುದನ್ನು ತಪ್ಪಿಸಲು ಒತ್ತಾಯಿಸುತ್ತಿದ್ದೇವೆ ಎಂದರು.
ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್,ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರವು ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‍ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿದ್ದು, ಆಯೋಗದ ಮುಂದೆ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಸ್ಕøತ ವರದಿ ಸಿದ್ದಪಡಿಸಿ ಸಲ್ಲಿಸಿದ್ದರೂ ಸರ್ಕಾರ ಬಜೆಟ್‍ನಲ್ಲಿ ನೌಕರರ ಬೇಡಿಕೆಗಳಿಗೆ ಸ್ಪಂದಿಸುವ ಪ್ರಸ್ತಾಪ ಮಾಡದಿರುವುದು ನೋವುಂಟು ಮಾಡಿದೆ ಎಂದರು.
ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷೆ ಹಾಗೂ ನೌಕರರ ಸಂಘದ ಸಹಕಾರ್ಯದರ್ಶಿ ವಿಜಯಮ್ಮ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಡೆಸುತ್ತಿರುವ ಈ ಹೋರಾಟದಲ್ಲಿ ಆರೋಗ್ಯ ಇಲಾಖೆ ನೌಕರರು ಮುಂಚೂಣಿಯಲ್ಲಿರುತ್ತೇವೆ ಯಾವುದೇ ಕಾರಣಕ್ಕೂ ಬೇಡಿಕೆ ಈಡೇರದೇ ಕರ್ತವ್ಯಕ್ಕೆ ತೆರಳದಿರಲು ನಿರ್ಧರಿಸಿದ್ದೇವೆ ಎಂದರು.
ನೌಕರರ ಸಂಘದ ಉಪಾಧ್ಯಕ್ಷ ನಂದೀಶ್, ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರು ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ಮೂಲಭೂತ, ನ್ಯಾಯಸಮ್ಮತ ಹಕ್ಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್, ಡಿಹೆಚ್‍ಒ ಡಾ.ಜಗದೀಶ್, ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ,ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್,ಖಜಾಂಚಿ ವಿಜಯ್, ಜಿಲ್ಲಾಸ್ಪತ್ರೆಯ ಆರ್‍ಎಂಒ ಡಾ.ಬಾಲಸುಂದರ್, ಡಾ.ಪುಷ್ಪಲತಾ, ಡಾ.ಶ್ರೀನಾಥ್‍ರೆಡ್ಡಿ, ಡಾ.ಶಿಲ್ಪಶ್ರೀ, ಡಾ.ಅಫೀಸ್, ಆರೋಗ್ಯ ಇಲಾಖೆಯ ಚಂದ್ರಕಲಾ, ಶಿವಾರೆಡ್ಡಿ, ಮುಖ್ಯ ಪ್ರಯೋಗಾಲಯ ತಂತ್ರಜ್ಞ ನಾರಾಯಣಪ್ಪ,ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಮಂಜುನಾಥ್,ಮಹೇಶ್, ಅಬ್ದುಲ್ ಷಫಿ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ,ನೌಕರರ ಸಂಘದ ಅನಿಲ್, ಶ್ರೀರಾಮ್ ಮತ್ತಿತರರು ಹಾಜರಿದ್ದರು.

ತಾಯಿಯ ಸ್ಮರಣಾರ್ಥ ಮಕ್ಕಳಿಗೆ ಯೋಧ ಆನಂದ್ ಸಹೋದರರಿಂದ
ತಟ್ಟೆ ಲೋಟ-ಶಾಲೆಯ ಅಡುಗೆ ಮನೆ ನವೀಕರಣಕ್ಕೆ ಆರ್ಥಿಕ ನೆರವು

ಕೋಲಾರ:- ತಮ್ಮ ತಾಯಿಯ ಪುಣ್ಯತಿಥಿಯಂದು ಅವರ ನೆನಪಿನಲ್ಲಿ ಪ್ರತಿ ವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತಾ ಬಂದಿರುವ ಯೋಧ ಆನಂದ್ ಸಹೋದರರು ಈ ಬಾರಿ ಅರಾಭಿಕೊತ್ತನೂರು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ತಟ್ಟೆ ಲೋಟ ಹಾಗೂ ಪ್ರೌಢಶಾಲೆಯ ಬಿಸಿಯೂಟ ಕೊಠಡಿ ನವೀಕರಣಕ್ಕೆ 10 ಸಾವಿರ ರೂ ಆರ್ಥಿಕ ನೆರವು ನೀಡಿದರು.
ತಾಯಿ ಆಂಜಿನಮ್ಮ ಅವರ ಪುಣ್ಯತಿಥಿ ಅಂಗವಾಗಿ ಸಹೋದರರಾದ ಶೇಖರ್, ಯೋಧ ಆನಂದ್, ಅಬಕಾರಿ ಇಲಾಖೆ ನೌಕರ ಶಿವಶಂಕರ್ ಪ್ರತಿವರ್ಷದಂತೆ ಈ ಬಾರಿಯೂ ಸೋಮವಾರ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಸಿಹಿ ವಿತರಿಸಿದ್ದಲ್ಲದೇ ನೆರವು ಒದಗಿಸಿದರು.

ಎಸ್ಸೆಸ್ಲೆಸಿ ಟಾಫರ್‍ಗೆ 5 ಸಾವಿರ ಬಹುಮಾನ


ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಆನಂದ್ ತನ್ನ ತಾಯಿಯ ಪುಣ್ಯತಿಥಿ ಸಲುವಾಗಿ ಅರಾಭಿಕೊತ್ತನೂರು ಗ್ರಾಮಕ್ಕೆ ಬಂದಿದ್ದು, ತಾಯಿ ಸ್ಮರಣೆಯ ಜತೆಗೆ ಅವರ ನೆನಪಿನಲ್ಲಿ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ನೆರವಾಗುವ ಹೃದಯವಂತಿಕೆ ತೋರಿದ್ದು, ಪ್ರತಿ ವರ್ಷ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ 5 ಸಾವಿರ ರೂ ನಗದು ಪುರಸ್ಕಾರ ನೀಡುವ ಮೂಲಕ ಮಕ್ಕಳಿಗೆ ಸಾಧನೆಗೆ ಪ್ರೇರಣೆ ನೀಡಿದ್ದಾರೆ.
ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‍ಕುಮಾರ್ ಮಾತನಾಡಿ, ಯೋಧ ಆನಂದ್ ಸಹೋದರರ ಹೃದಯವಂತಿಕೆಗೆ ಧನ್ಯವಾದ ಸಲ್ಲಿಸಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಮತ್ತಷ್ಟು ನೆರವು ಹರಿದು ಬರಲಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಆನಂದ್, ನಾನು ಇದೇ ಶಾಲೆಯಲ್ಲಿ ಓದಿದವನು, ಸೇನೆಯಲ್ಲಿ ನಾವು ಪ್ರಾಣ ಒತ್ತೆಯಿಟ್ಟು ದೇಶಕ್ಕಾಗಿ ಕೆಲಸ ಮಾಡುವಾಗ ಅತ್ಯಂತ ಹೆಮ್ಮೆ ಎನಿಸುತ್ತದೆ, ವಿದ್ಯಾರ್ಥಿ ಸಮುದಾಯವೂ ದೇಶ ರಕ್ಷಣೆಗೆ ಪಣತೊಡುವ ಮೂಲಕ ಸೈನ್ಯಕ್ಕೆ ಸೇರಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅವರ ಸಹೋದರರಾದ ಶೇಖರ್, ಅಬಕಾರಿ ಇಲಾಖೆಯ ಉದ್ಯೋಗಿ ಶಿವಶಂಕರ್ ಶಾಲೆಗೆ ತಮ್ಮ ತಾಯಿಯ ನೆನಪಿನಲ್ಲಿ ಪ್ರತಿವರ್ಷವೂ ನೆರವಾಗುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪ್ರೇರಕ ರಾಮಚಂದ್ರಪ್ಪ, ವಾಟರ್‍ಮೆನ್ ಕೆಂಪರಾಜ್, ಸ್ನೇಹಿತರಾದ ರೂಪೇಶ್, ಆಕಾಶ್,ಮನು, ಅಶೋಕ್, ಸುಮನ್, ರಾಜು, ಪುನೀತ್, ಯಶವಂತ್, ಪ್ರೌಢಶಾಲಾ ಶಿಕ್ಷಕರಾದ ಎರಡೂ ಶಾಲೆಗಳ ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ,ಶ್ವೇತಾ,ಸುಗುಣಾ,ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು, ಡಿ.ಚಂದ್ರಶೇಖರ್,ಚೈತ್ರಾ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನಾಗರಾಜ್, ಶಿಕ್ಷಕರಾದ ಭಾರತಿ,ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.