ಕುಂದಾಪುರ : ಜನ ಔಷಧಿ ದಿನಾಚರಣೆ ಎರಡನೇ ದಿನ -ಚೈತನ್ಯ ವಿಶೇಷ ಶಾಲೆಗೆ ದೇಣಿಗೆ


ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶುಕ್ರಾವಾರದಂದು ಚೈತನ್ಯ ವಿಶೇಷ ಶಾಲೆಗೆ ಬೇಟಿ ನೀಡಿ ಶಾಲೆಗೆ ರೂಪಾಯಿ 15,000/- ದೇಣಿಗೆ ನೀಡಲಾಯಿತು. ಈ ದೇಣಿಗೆ ಯನ್ನು ಯುವ ರೆಡ್ ಕ್ರಾಸ್ ಸಂಯೋಜಕರಾದ ದಿನಕರ ಆರ್ ಶೆಟ್ಟಿ ಕೊಡಮಾಡಿದರು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ಮುಖ್ಯ ಶಿಕ್ಷಕರಾದ ಲೀಲಾ ಕರ್ಕಾಡಾ ಇವರಿಗೆ ಚೆಕ್ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ನಿಂದ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ, ಮುತ್ತಯ್ಯ ಶೆಟ್ಟಿ, ಸೀತಾರಾಮ ನಕತ್ತಾಯ, ಅಬ್ದುಲ್ ಬಶೀರ್, ಸದಾನಂದ ಶೆಟ್ಟಿ, ನಾರಾಯಣ ದೇವಾಡಿಗ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ “ಉಚಿತ ಶ್ರವಣ ಪರೀಕ್ಷೆ”

ಕುಂದಾಪುರ,ಮಾ.2: ವಿಶ್ವ ಶ್ರವಣ ದಿನದ ಅಂಗವಾಗಿ ಮಾರ್ಚ್ 2 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಹಾಗೂ ಔಟ್ರೀಚ್ ಸೇವಾ ಕೇಂದ್ರ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇವರ ಸಯುಕ್ತ ಆಶ್ರಯದಲ್ಲಿ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಉಚಿತ ಶ್ರವಣ ಪರೀಕ್ಷೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷರಾದ ಡಾ. ರೋಬರ್ಟ್ ರೆಬೆಲ್ಲೋ ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರು ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಪ್ರಾಥಮಿಕ ಹಂತದಲ್ಲಿ ಶ್ರವಣದೋಷವನ್ನು ಪತ್ತೆ ಹಚ್ಚಿ ವಾಕ್ ಶ್ರವಣ ಸಾಧನವನ್ನು ಅಳವಡಿಸುವುದು. ಯಾವ ಮಗುವು ಶ್ರವಣದೋಷದಿಂದ ಬಳಲಬಾರದು. ಕಿವಿಯ ರಕ್ಷಣೆ ನಮ್ಮ ಹೊಣೆ. ಕಿವಿಯ ಒಳಗೆ ಯಾವುದೇ ವಸ್ತುಗಳನ್ನು ಬಳಸಬೇಡಿ ಎಂದರು. ಕಾರ್ಯಕ್ರಮದ ಅತಿಥಿಗಳಾದ ಡಾ. ವೀಣಾ ಪಿ ಎಸ್ ಹಿರಿಯ ತಜ್ಞೆ ಕುಂದಾಪುರ ಆಸ್ಪತ್ರೆ ಇವರು ಮಾತನಾಡಿ ಮಕ್ಕಳಲ್ಲಿ ಮಾತಿನ ಬೆಳವಣಿಗೆ ಆಗಬೇಕಾದರೆ ಶ್ರವಣಶಕ್ತಿ ಅವಶ್ಯಕವಾಗಿದೆ. ಶ್ರವಣಶಕ್ತಿ ರಕ್ಷಿಸಿಕೊಳ್ಳುವುದು ಎಲ್ಲರ ಹೊಣೆ ಎಂದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ವೇದಿಕೆಯಲ್ಲಿ ಉಪಸ್ಥಿರಿರುವ ಎಲ್ಲರನ್ನು ಸ್ವಾಗತಿಸಿದರು. ಮಾತಿನ ತಜ್ಞೆ ಡಾ. ಗಾಯತ್ರಿ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಕಿವಿಯ ತಜ್ಞೆ ಡಾ. ಸುಪ್ರಿಯ ಉಪಸ್ಥಿತರಿದ್ದರು. ಶಿಕ್ಷಕರಾದ ಅಶೋಕ್ ದೇವಾಡಿಗ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಉಚಿತ ಶ್ರವಣ ಪರೀಕ್ಷೆ ನಡೆಸಲಾಯಿತು. ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಬಸ್ರೂರು ಕೆಳಪೇಟೆಯಲ್ಲಿ ಸಾರ್ವಜನಿಕ ರಸ್ತೆಗಾಗಿ ಸ್ಥಳದಾನ

ಬಸ್ರೂರು : ಇಲ್ಲಿನ ಕೆಳಪೇಟೆಯ ನೀರೋಣಿಯ ನಿವೃತ್ತಮುಖ್ಯೋಪಾಧ್ಯಾಯ ಟಿ.ನಾಸಿರಾಲಿ ಅವರು ಬಸ್ರೂರು ಕೆಳಪೇಟೆಯ ಡಾ| ಕೆ.ಟಿ. ಭಾಸ್ಕರ್‌ ನಾಯರ್‌ ರಸ್ತೆಯಿಂದ ಮುಂದಿನ ತಿರುವಿನವರೆಗೆ 150 ಮೀ. ಉದ್ದದ 10 ಮೀ. ಅಗಲದ ಸ್ವಂತ ಸ್ಥಳವನ್ನು ಸಾರ್ವಜನಿಕ ರಸ್ತೆಗಾಗಿ ಉಚಿತವಾಗಿ ಸ್ಥಳದಾನ ಮಾಡಿದ್ದಾರೆ.ನಾಸಿರಾಲಿ ಅವರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಜೆ. ಅವರಿಗೆ ದಾನಪತ್ರವನ್ನು ಹಸ್ತಾಂತರಿಸಿದರು.

     ಈ ಸಂದರ್ಭದಲ್ಲಿ ಪೀಟರ್‌ ಸೆರಾವೊ, ಲಾರೆನ್ಸ್‌ ಸೆರಾವೊ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ.ಗೆ ಸ್ಥಳದಾನ ಸ ಮಾಡುವಲ್ಲಿ ಬಸ್ರೂರು ಜಾಮಿಯಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್‌ ಅಜೀಜ್‌ ವಿಶೇಷ ಮುತುವರ್ಜಿ ವಹಿಸಿದ್ದರು.

National Science Day was celebrated in Holy Redeemer English Medium School

National Science Day was celebrated on 28th February in Holy Redeemer English Medium School. The students of Science club organized the program. Inauguration was done through an experiment. Significance of National Science Day and Scientific reasons behind daily life traditional activities were depited through a skit. Science and Superstitions were discussed through a questionnaire. Life and achievements of great Indian Scientists who contributed immensely to the world were comomorated. Science models made by students were exhibited. School Headmaster Rev Fr Clifford Pinto and Church Deacon Preetham Rego were present. Students Shravya welcomed, Shravani thanked and Renvita compered. Science teachers Mrs Kavitha and Mrs Preetha D’Souza assisted the program

ಶ್ರೀನಿವಾಸಪುರ:ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವಾಗಿರಬೇಕು ಅಧಿಕಾರಿಗಳು ಕಾಮಗಾರಿ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು:ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಸರಿಯಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್ ಸಮೀಪ ಬುಧವಾರ ರೂ.19 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ನಾಡಕಚೇರಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಿರ್ಮಾಣ ಕಾಮಗಾರಿ ನಿರ್ಮಿತಿ ಕೇಂದ್ರದಿಂದ ನಡೆಯುತ್ತಿದೆ. ಅವರಿಂದ ಉತ್ತಮ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗಿದೆ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಶೀಘ್ರವಾಗಿ ನಿವಾರಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಸರ್ಕಾರಿ ಜಮೀನು ಲಭ್ಯವಿಲ್ಲದ ಪರಿಣಾಮವಾಗಿ, ನಾಡಕಚೇರಿ ಕಟ್ಟಡ ನಿರ್ಮಾಣ ಕಾರ್ಯ ತಡವಾಯಿತು. ಆದರೆ ದಾನಿಗಳಾದ ಬಾಬೂರೆಡ್ಡಿ ಹಾಗೂ ರಮಣಾರೆಡ್ಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾ ಜಮೀನು ದಾನವಾಗಿ ನೀಡಿದ್ದರಿಂದಾಗಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌತಮಿ ಮುನಿರಾಜು, ಕೋಚಿಮುಲ್ ಮಾಜಿ ಅಧ್ಯಕ್ಷ ವೆಂಕಟಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ಮುಖಂಡರಾದ ಬಾಬುರೆಡ್ಡಿ, ರಮಣಾರೆಡ್ಡಿ ಇದ್ದರು.

ಕುಂದಾಪುರ:ಸರಕಾರದ ಆದೇಶದಂತೆ ಮಾರ್ಚ್ ಒಂದರಿಂದ ಮಾರ್ಚ್ ಏಳರ ವರೆಗೆ ಜನ ಔಷಧಿ ದಿವಸ ಆಚರಣೆ

ಕುಂದಾಪುರ ಮಾ.2: ಸರಕಾರದ ಆದೇಶದಂತೆ ಮಾರ್ಚ್ ಒಂದರಿಂದ ಮಾರ್ಚ್ ಏಳರ ವರೆಗೆ ಜನ ಔಷಧಿ ದಿವಸ ಆಚರಣೆ ಆರಂಬಿಸಲಾಯಿತು. ಇದರ ಉದ್ಘಾಟನೆ ಯನ್ನು ತಾರೀಖು ಒಂದರಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದಲ್ಲಿ ಮನೋರೋಗ ತಜ್ಞರಾದ ಡಾ. ಸುಕದಾ ಉಪಾಧ್ಯಾಯ ಇವರಿಂದ ನೆರವೇರಿತು.

ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಉದ್ಘಾಟಕರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ ಆಚಾರ್ಯ, ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಸದಾನಂದ ಶೆಟ್ಟಿ, ಸೀತಾರಾಮ ನಕತ್ತಾಯ, ನಾರಾಯಣ ದೇವಾಡಿಗ ದಿನಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಶಂಕರ ಶೆಟ್ಟಿ ಮತ್ತು ಸಿಭಂದಿಗಳು ಉಪಸ್ಥಿತರಿದ್ದರು. ನೆರೆದ ಗ್ರಾಹಕ ಬಂಧುಗಳಿಗೆ ಸಿಹಿ ಹಂಚಲಾಯಿತು.

ಕೆವಿನ್ ಡಿ’ಮೆಲ್ಲೊ ಸ್ಮಾರಕ್ ಪಯ್ಣಾರಿ ವರಸಾಚೊ ಕಥಾಕಾರ್ 2023 – ಪುರಸ್ಕಾರಾಕ್ ಕಥಾ ಅಹ್ವಾನ್

ಆಶಾವಾದಿ ಪ್ರಕಾಶನಾನ್ 2008 ಇಸ್ವೆಚೊ ದಾಯ್ಜ್ ವರ್ಸಾಚೊ ಕಥಾಕಾರ್ ಮ್ಹಳ್ಳೊ ವರ್ಸಾಚೊ ಪುರಸ್ಕಾರ್ ನಾಮ್ನೆಚೊ ಕೊಂಕಣಿ ಕಥಾಕಾರ್ ಸ್ಟೇನ್ ಅಗೇರಾ ಮುಲ್ಕಿ ಹಾಂಕಾಂ, 

2009 ಇಸ್ವೆಚೊ ದಾಯ್ಜ್ ವರ್ಸಾಚೊ ಕಥಾಕಾರ್ ಪುರಸ್ಕಾರ್ ನಾಮ್ನೆಚೊ ಕೊಂಕಣಿ ಕಥಾಕಾರ್ ಕ್ಲೆರೆನ್ಸ್ ಕೈಕಂಬ ಹಾಂಕಾಂ ದಿಲ್ಲೊ.

ಆತಾಂ 2023 ವರ್ಸಾಚೊ ಕೆವಿನ್ ಡಿ’ಮೆಲ್ಲೊ ಸ್ಮಾರಕ್ ಪಯ್ಣಾರಿ ವರ್ಸಾಚೊ ಕಥಾಕಾರ್ ಪುರಸ್ಕಾರ್ ಅಖಿಲ್ ಭಾರತೀಯ್ ಮಟ್ಟಾರ್ ಜಾಹೀರ್ ಕೆಲಾ. ರುಪಯ್ 10,000 ನಗ್ದೆನ್ ತಶೆಂಚ್ ಡಿಜಿಟಲ್ ಶಿಫಾರಸ್ ಪತ್ರ್ ಆಟಾಪ್ಚ್ಯಾ ಹ್ಯಾ ಸರ್ತೆಂತ್ ಕೊಣೆಂಯ್ ಭಾಗ್ ಘೆವ್ಯೆತಾ. 

ರೆಗ್ರೊ/ನೇಮಾಂ:

೧. ಕೊಂಕಣಿ ಕಥಾ (ಕನ್ನಡ್, ನಾಗರಿ ವ ರೋಮಿ ಲಿಪಿಯೆಂತ್ ಆಸುಂಕ್ ಜಾಯ್).

೨. ಕಥಾ ಸ್ವತಾಚಿ ಆಸುನ್ ಖಂಯ್ಚರ್‌ಯೀ ಫಾಯ್ಸ್ ಜಾಲ್ಲಿ ವಾ ಧಾಡ್ಲೆಲಿ ಆಸಾನಾಯೆ.

೩. ಕಥಾ 2000 ಸೊಭ್ದಾಂ ಭಿತರ್ ಆಸುಂಕ್ ಜಾಯ್.

೪. ಕಥಾ ಯುನಿಕೋಡ್ ವಾ ಟಾಯ್ಪ್ ಕರುನ್ ಧಾಡ್ಲೆಲಿ ಆಸುಂಕ್ ಜಾಯ್.

೫. ಇಮೇಯ್ಲ್ ಕರುಂಕ್ ಅಖೇರಿಚಿ ತಾರಿಕ್ 31 ಒಕ್ತೋಬರ್ 2023.

೬. ಕಥೆಸವೆಂ ಕಥಾಕಾರಾಚಿ ಒಳೊಕ್, ಪಾತ್ತೊ ಆನಿ ಫೋಟೊ ಧಾಡುನ್ ದಿಂವ್ಚೊ.

೭. ಕಥಾ ಧಾಡುಂಕ್ ಇಮೇಯ್ಲ್: editor@poinnari.com

ಚಡ್ತಿಕ್ ವಿವರಾಂಕ್ ಪಳೆಯಾತ್ ಪಯ್ಣಾರಿ.ಕೊಮ್ 

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕುಂದಾಪುರ : ಮೂಡ್ಲಕಟ್ಟೆ ಇಂಜಿನಿಯರಿಂಗ್  ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಸಿ.ವಿ.ರಾಮನ್ ಕ್ಲಬ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಆಯೋಜಿಸಲಾಗಿದ್ದು 40ಕ್ಕೂ ಅಧಿಕ ತಂಡಗಳು ಪ್ರಥಮ ಸುತ್ತಿನಲ್ಲಿ ಭಾಗವಹಿಸಿ ವಿಭಿನ್ನ ರೀತಿಯ ಮಾದರಿಯನ್ನು ತಯಾರಿಸಿ ಪ್ರದರ್ಶಿಸಿದರು. ತಿರುವುಗಳಲ್ಲಿ ಅಪಘಾತ ತಡೆಗಟ್ಟುವಿಕೆ, ಲೇಸರ್ ತಂತ್ರಜ್ಞಾನ ಬಳಸಿ ಸುರಕ್ಷತಾ ಅಲಾರಾಮ್ , ಆರ್ಡಿನೋ ಸಾಧನದಿಂದ ಮೊಬೈಲ್ ಅಲ್ಲೇ ನಿರ್ವಹಣೆ ಮಾಡಬಲ್ಲ ಕಾರು, ನೀರನ್ನು ಸ್ವಚ್ಛ ಮಾಡುವ ಮಾದರಿ, ವೈ ಫ಼ೈ ಮೂಲಕ ನಿರ್ವಹಣೆ ಮಾಡಬಲ್ಲ ವಾಹನ ಹೀಗೆ ಹಲವು ರೀತಿಯ ವಿಶಿಷ್ಟ ಮಾದರಿಯನ್ನು ತಯಾರಿಸಿದರು. ಲೋಳೆರಸದಿಂದ ವಿಧ್ಯುತ್ ತಯಾರಿಕೆ, ಹೊಲೊಗ್ರಾಫಿಕ್ ಪ್ರಕ್ಷೇಪಕಗಳು ವಕ್ರೀಭವನದ ಮೂಲಕ  ಸೃಷ್ಟಿಸಿದ ಚಿತ್ರ, ಆಟೋಮ್ಯಾಟಿಕ್ ಜ಼ೀಬ್ರಾ ಕ್ರಾಸಿಂಗ್, ಜಲಾಂತರ್ಗಾಮಿ ವ್ಯವಸ್ಥೆಯ ಮಾದರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.

ಆಯ್ದ ಹದಿನೈದು ಮಾದರಿಗಳ ಪ್ರದರ್ಶನ ಹಾಗು ಕೊನೆಯ ಹಂತದ ತೀರ್ಪನ್ನು ರಾಷ್ಟ್ರೀಯ ವಿಜ್ಞಾನ ದಿನದಂದು ನಡೆಸಲಾಯಿತು. ಮಧ್ಯಾಹ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಅತಿಥಿ ಹಾಗೂ ತೀರ್ಪುಗಾರರಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಪ್ರಶಸ್ತಿ ವಿಜೇತ ಗಣಿತ ಪ್ರಾಧ್ಯಾಪಕರಾದ ಶ್ರೀ ಉದಯಕುಮಾರ್ ಹಾಗೂ ಭಟ್ಕಳದ ಸಿಧ್ದಾರ್ಥ ಪದವಿ ಪೂರ್ವ ಕಾಲೇಜಿನ ಗಣಿತ ಪ್ರಾಧ್ಯಾಪಕರಾದ ಶ್ರೀ ಶ್ರೀನಿವಾಸ ಎನ್ ನಾಯ್ಕ್ ಅವರು ಆಗಮಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಉದಯಕುಮಾರ್ ಅವರು ಪ್ರಥಮ ವರ್ಷದ ವಿಧ್ಯಾರ್ಥಿಗಳಾಗಿ ಕಡಿಮೆ ಅವಧಿಯಲ್ಲಿ ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾದರಿಯನ್ನು ಪ್ರಸ್ತುತ ಪಡಿಸಿರುವುದು ನಿಜವಾಗಿಯೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ತಮ್ಮ ಸುತ್ತ ಮುತ್ತಲಿನ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಒದಗಿಸುವಂತಹ ಪ್ರಾಜೆಕ್ಟ್ ಗಳನ್ನು ಆವಿಷ್ಕರಿಸಿ ಜನಹಿತ ಕಾರ್ಯಗಳಲ್ಲಿ ತೊಡಗಬೇಕು ಎಂದು ಕರೆ ನೀಡಿದರು. ಇನ್ನೋರ್ವ ಅತಿಥಿಯಾಗಿರುವ ಶ್ರೀನಿವಾಸ ನಾಯ್ಕ್ ಅವರು ಮಾತನಾಡಿ ವಿಧ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಯಾದರೆ ಕಾಲೆಜು ಉನ್ನತ ಸ್ಥಾನವೇರುವುದರಲ್ಲಿ ಬೇರೆ ಮಾತಿಲ್ಲ ಆ ನಿಟ್ಟಿನಲ್ಲಿ ಇಂತಹ ಸ್ಪರ್ದೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಪ್ರತಿಯೊಂದು ಕಾರ್ಯದಲ್ಲು ಗುರುಹಿರಿಯರ ಮಾರ್ಗದರ್ಶನ ಅತಿ ಅವಶ್ಯಕ ಎಂದು ಉದಾಹರಣೆಯೊಂದಿಗೆ ವಿವರಿಸಿ ತಾವು ಕಲಿತ ಶಾಲಾಕಾಲೇಜುಗಳ ಬಗ್ಗೆ ಸದಾಕಾಲ ಅಭಿಮಾನ ಹೊಂದಿರಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು. ಐಎಮ್ ಜೆ ವಿಧ್ಯಾ ಸಂಸ್ಥೆಯ ನಿರ್ದೇಶಕರಾದ ಪ್ರೊಫ಼ೆಸರ್ ದೋಮ ಚಂದ್ರಶೇಖರ ಅವರು ವಿಧ್ಯಾರ್ಥಿಗಳ ಉತ್ಸಾಹ, ಮಾದರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ|ಅಬ್ದುಲ್ ಕರೀಮ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಿ ವಿ ರಾಮನ್ ಅವರ ಸಾಧನೆಯ ಬಗ್ಗೆ ವಿವರಿಸುತ್ತ ವಿಧ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಡು ಕಾಲೇಜಿನ ಕೀರ್ತಿ ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು. ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ದೀಪಕ್ ಶೆಟ್ಟಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|ರಾಮಕೃಷ್ಣ ಹೆಗ್ಡೆ, ಸಂಯೋಜಕರಾದ ಪ್ರೊಫೆಸರ್ ಸೂಕ್ಷ್ಮ ಅಡಿಗ , ವಿಭಾಗದ ಮುಖ್ಯಸ್ಥರು , ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿಧ್ಯಾರ್ಥಿನಿ ಪ್ರತೀಕ್ಷಾ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.  ಸಿವಿ ರಾಮನ್ ಕ್ಲಬ್ ಇದರ ಅಧ್ಯಕ್ಷ ದೇವರಾಜ್ ಮತ್ತು ದರ್ಶನ್ ಅತಿಥಿಗಳ ಪರಿಚಯ ಮಾಡಿ, ಉಪಾಧ್ಯಕ್ಷ ಮಣಿಕಂಠ ವಿಜೇತರ ವಿವರಣೆ ನೀಡಿದರು ಹಾಗೂ ಕಾರ್ಯದರ್ಶಿ ಶರತ್ ಸ್ವಾಗತಿಸಿ, ಸ್ನೇಹ ವಂದಿಸಿದರು

“ಕುಂದಾಪ್ರ ಕನ್ನಡ ಅಕಾಡೆಮಿ”ಗೆ ಒತ್ತಾಯಿಸಿ ಒಂದು ಸಾವಿರ ಪತ್ರಗಳ ಅಭಿಯಾನ

ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ “ಕುಂದಾಪ್ರ ಕನ್ನಡ ಅಕಾಡೆಮಿಗಾಗಿ ಹೋರಾಟ”ದ ಅಂಗವಾಗಿ ಒಂದು ಸಾವಿರ ಪತ್ರಗಳನ್ನು ಕನ್ನಡ ಮತ್ತು ಸಂಸ್ಕøತಿ ಸಚಿವರಿಗೆ ಕಳುಹಿಸುವ ಅಭಿಯಾನ ಮಾರ್ಚ್ 1 ರಿಂದ ಆರಂಭಗೊಂಡಿದೆ.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ “ಗಂಗಾವಳಿ” ಸಮ್ಮೇಳನಾಧ್ಯಕ್ಷ ಕೋ. ಶಿವಾನಂದ ಕಾರಂತರು, ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ ಕಾರ್ಯಗತಗೊಳಿಸಲು ಸರ್ವ ಕುಂದ ಕನ್ನಡಿಗರು ಒಗ್ಗಟ್ಟಿನಿಂದ ಸರಕಾರವನ್ನು ಒತ್ತಾಯಿಸಬೇಕು ಎಂದು ಕರೆ ನೀಡಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಕುಂದ ಕನ್ನಡ ಅಕಾಡೆಮಿ ಸ್ಥಾಪನೆಗೆ ಒತ್ತಾಯಿಸಿ 1 ಸಾವಿರ ಪತ್ರ ಕಳುಹಿಸುವ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.
ಅಭಿಯಾನ ಚಾಲನೆಯಲ್ಲಿ ನೂರಾರು ಮಂದಿ ಪಾಲ್ಗೊಂಡರು. ಪ್ರೊ. ಎ. ವಿ. ನಾವಡ ಡಾ. ಗಾಯತ್ತಿ ನಾವಡ, ಹಿರಿಯ ಸಾಹಿತಿ ದುಂಡಿರಾಜ್, ರೋಟರಿ ಜಿಲ್ಲಾ ಉಪ ರಾಜ್ಯಪಾಲ ಡಾ. ಉಮೇಶ್ ಪುತ್ರನ್, ಚಿತ್ರ ನಿರ್ದೇಶಕ ರಾಜ್ ಬಲ್ಲಾಳ್, ಗಮಕ ಕಲಾ ಪರಿಷತ್ ಕುಂದಾಪುರ ಘಟಕದ ಅಧ್ಯಕ್ಷ ಸುಜಯೀಂದ್ರ ಹಂದೆ, ಕಾರ್ಯದರ್ಶಿ ವಿಶ್ವನಾಥ ಕರಬ, ಡಾ. ಶ್ರೀಕಾಂತ್ ಸಿದ್ಧಾಪುರ, ಕವಿ ಗೋಪಾಲ ತ್ರಾಸಿ, ಪ್ರೊ. ವೆಂಕಟೇಶ ಎ. ಪೈ ಮುಂಬೈ, ಡಾ. ಭಾರತಿ ಮರವಂತೆ, ಪ್ರಕಾಶ ಹೆಬ್ಬಾರ್ ನಾಡ, ಪೂರ್ಣಿಮಾ ಭಟ್ ಕಮಲಶಿಲೆ, ಡಾ. ಕಿಶೋರ್ ಶೆಟ್ಟಿ ಹಕ್ಲಾಡಿ, ಪ್ರತಾಪ ಕೊಡಂಚ ಕಂಬದಕೋಣೆ, ಗಿರಿಧರ ಕಾರ್ಕಳ, ಲತಾ ಸಂತೋಷ ಶೆಟ್ಟಿ ಮುದ್ದುಮನೆ, ಮಂಜುನಾಥ ಮಯ್ಯ ಉಪ್ಪುಂದ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ. ನಿತ್ಯಾನಂದ ಶೆಟ್ಟಿ ಅಂಪಾರು, ಪತ್ರಕರ್ತ ನಾಗೇಂದ್ರ ತ್ರಾಸಿ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಹಂದ ಕುಂದ ಸೋಮಶೇಖರ ಶೆಟ್ಟಿ ಗಿಳಿಯಾರು, ಕುಂಚ ಕಲಾವಿದ ಕೆ. ಕೆ. ರಾಮನ್, ಲೇಖಕ ಪಿ. ಜಯವಂತ ಪೈ, ಶಂಕರ ನಾರಾಯಣ ತಾಲೂಕು ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಮುಂಬಾರು ದಿನಕರ ಶೆಟ್ಟಿ, ಸಾಹಿತಿ ಜಾದೂಗಾರ ಓಂ ಗಣೇಶ ಉಪ್ಪುಂದ, ಕಲಾವಿದ ಅಶೋಕ ಶ್ಯಾನುಭಾಗ್, ಬಿ. ಜಿ. ಸೀತಾರಾಮ ಧನ್ಯ ಗೋಪಾಡಿ, ರಮೇಶ ಭಟ್ ಕೋಟೇಶ್ವರ, ಉಮೇಶ ಶೆಟ್ಟಿ ಪ್ರಾಂಶುಪಾಲರು ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ತರಬೇತುದಾರ ಅಶೋಕ ತೆಕ್ಕಟ್ಟೆ, ಖ್ಯಾತ ಕತೆಗಾರ ಮಂಜುನಾಥ ಹಿಲಿಯಾಣ, ಲೇಖಕ ದಿವಾಕರ ಶೆಟ್ಟಿ ಬಸ್ರೂರು, ಲೇಖಕಿ ನಾಗರತ್ನ ಎಂ. ಜಿ. ಬೆಂಗಳೂರು, ಪತ್ರಕರ್ತ ಕಲಾವಿದ ಕೇಶವ ಸಸಿಹಿತ್ಲು, ಉಡುಪಿ ಜಿಲ್ಲಾ ಜಾನಪದ ಪರಿಷತ್ ಉಪಾಧ್ಯಕ್ಷ ಅಶೋಕ್ ಆಚಾರ್ ಪಾಲ್ಗೊಂಡು ಪತ್ರ ಅಭಿಯಾನ ಆರಂಭಕ್ಕೆ ಸ್ಫೂರ್ತಿ ತುಂಬಿದರು.
ಈ ಅಭಿಯಾನ ನಿರಂತರವಾಗಿ ನಡೆಯಲಿದ್ದು ಈಗಾಗಲೇ ಹಲವು ಸಂಘ ಸಂಸ್ಥೆಗಳ ಸದಸ್ಯರು ಈ ಹೋರಾಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಸಾಹಿತಿಗಳು, ಕುಂದ ಕನ್ನಡಿಗರೆಲ್ಲರೂ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿಗಾಗಿ ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆಯಬೇಕೆಂದು ಬಿ. ಅಪ್ಪಣ್ಣ ಹೆಗ್ಡೆ ಕರೆ ನೀಡಿದ್ದಾರೆ.
ಸಂಘಟಕರ ಪರವಾಗಿ ಯು. ಎಸ್. ಶೆಣೈ ಅಭಿಯಾನದ ವಿವರ ನೀಡಿದರು.