ಜಿಲ್ಲಾದ್ಯಂತ ಸರ್ಕಾರಿ ಕೆರೆ, ರಾಜಕಾಲುವೆ, ಗುಂಡು ತೋಪು, ಗೋಮಾಳ ಒತ್ತುವರಿ ಮಾಡಿರುವ ಶಾಸಕರ ಸದಸ್ಯತ್ವ ರದ್ದು ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲು ಚುನಾವಣಾಧಿಕಾರಿಗಳಿಗೆ ರೈತ ಸಂಘ ಒತ್ತಾಯ

ಬಂಗಾರಪೇಟೆ; ಮಾ.26: ಜಿಲ್ಲಾದ್ಯಂತ ಸರ್ಕಾರಿ ಕೆರೆ, ರಾಜಕಾಲುವೆ, ಗುಂಡು ತೋಪು, ಗೋಮಾಳವನ್ನು ಒತ್ತುವರಿ ಮಾಡಿಕೊಂಡಿರುವ ಶಾಸಕರ ಸದಸ್ಯತ್ವವನ್ನು ರದ್ದು ಮಾಡುವ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿ ಮಾ.29ರಂದು ಜಿಲ್ಲಾಧಿಕಾರಿಗಳ ಕಚೇರಿಯೆದುರು ಹೋರಾಟ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ರೈಲ್ವೇ ನಿಲ್ದಾಣದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡರು ಅಕ್ರಮ ಗಣಿಗಾರಿಕೆಗೆ ಗೋಮಾಳ ಜಮೀನು ಕಬಳಿಕೆ, ಶ್ರೀನಿವಾಸಪುರ ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ಅವರು ನೂರಾರು ಎಕರೆಗೂ ಹೆಚ್ಚು ಅರಣ್ಯ ಭೂಮಿ ಕಬಳಿಕೆ ಜೊತೆಗೆ ಸ್ಥಳೀಯ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಗುಂಡುತೋಪು, ಗೋಮಾಳ, ಕೆರೆ, ಜಮೀನನ್ನು ಒತ್ತುವರಿ ಮಾಡಿಕೊಂಡು ಲೇಔಟ್, ಗಾಲ್ಫ್ ಅಭಿವೃದ್ಧಿಪಡಿಸಿದ್ದಾರೆ.
ಈ ಬಗ್ಗೆ ಸತತವಾಗಿ 10 ವರ್ಷಗಳಿಂದ ಹೋರಾಟದ ಜೊತೆಗೆ ಅಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಆದೇಶದಂತೆ ಒತ್ತುವರಿ ತೆರವುಗೊಳಿಸಲು ಮಾನ್ಯ ನ್ಯಾಯಾಲಯ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚನೆ ಮಾಡಿರುವುದರಿಂದ ಭೂ ಕಬಳಿಕೆ ಆರೋಪ ಇವರ ಮೇಲಿರುವುದರಿಂದ ಇವರ ಶಾಸಕ ಸದಸ್ಯತ್ವ ರದ್ದು ಮಾಡುವ ಜೊತೆಗೆ ಭೂ ಆರೋಪ ಮುಕ್ತ ಆಗುವವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನಾತ್ಮಕವಾಗಿ ತಡೆ ಹಿಡಿಯಬೇಕೆಂದು ಚುನಾವಣಾಧಿಕಾರಿಗಳನ್ನು ಸಭೆಯಲ್ಲಿ ಒತ್ತಾಯಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆಯಾದ ಶಾಸಕರು ಸಂವಿಧಾನದಡಿಯಲ್ಲಿ ಕೆಲಸ ನಿರ್ವಹಿಸುವಾಗ ಪ್ರಾಮಾಣಿಕವಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಆದರೆ, ಎಲ್ಲಾ ಸಂವಿಧಾನದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರ ಬರುವುದೇ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲು ಎಂಬಂತೆ ಬಿಂಬನೆ ಮಾಡುವುದು ಯಾವ ನ್ಯಾಯ ?. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಆರೋಪವಿಲ್ಲ. ಆದರೆ, ಸರ್ಕಾರಿ ಆಸ್ತಿಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್ ಗಾಲ್ಫ್ ಕೋಳಿ ಫಾರಂಗಳನ್ನು ನಿರ್ಮಿಸಿರುವುದು ಶಾಸಕರ ಭೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಆರೋಪ ಮಾಡಿದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಅಕ್ರಮ ಗಣಿಗಾರಿಕೆಗೆ ನಕಲಿ ದಾಖಲೆಯನ್ನು ಸೃಷ್ಠಿ ಮಾಡಿ ಟೇಕಲ್ ವ್ಯಾಪ್ತಿಯಲ್ಲಿ ಗೋಮಾಳ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿರುವ ಜೊತೆಗೆ ಪ್ರಭಾವಿ ರಾಜಕಾರಣಿ ಕೆ.ಆರ್.ರಮೇಶ್ ಕುಮಾರ್ ತನ್ನ ಹುಟ್ಟೂರಿನಲ್ಲಿ ನೂರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿರುವ ಜೊತೆಗೆ ಕೋಲಾರ ಶಾಸಕರಾದ ಕೆ.ಶ್ರೀನಿವಾಸಗೌಡ ಅವರು ಅಣ್ಣಿಹಳ್ಳಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಮಾವಿನ ತೋಪು ಅಭಿವೃದ್ಧಿ ಮಾಡಿಸಿಕೊಂಡಿದ್ದಾರೆ. ಜೊತೆಗೆ ಮುಳಬಾಗಿಲು ಶಾಸಕ ಎಚ್.ನಾಗೇಶ್ ಅವರು ಹೆಜ್ಜೆಹೆಜ್ಜೆಗೂ ಲಂಚ ಲಂಚ ಎಂದು ಅಧಿಕಾರಿಗಳು, ಗುತ್ತಿಗೆದಾರರನ್ನು ಪೀಡಿಸುವುದಕ್ಕೆ ಇತ್ತೀಚೆಗೆ ಮಾಧ್ಯಮದಲ್ಲಿ ಪ್ರಕಟವಾದ ಹಣದ ವ್ಯವಹಾರವೇ ಭ್ರಷ್ಟಾಚಾರತೆಗೆ ಕೈಗನ್ನಡಿಯಾಗಿದೆ ಹಾಗಾಗಿ ಇವರ ಶಾಸಕ ಸ್ಥಾನದ ಸದಸ್ಯತ್ವವನ್ನು ಯಾಕೆ ರದ್ದು ಮಾಡಬಾರದೆಂದು ಜಿಲ್ಲಾಡಳಿತವನ್ನು ಪ್ರಶ್ನೆ ಮಾಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ರಾಜಕಾರಣಿಗಳಿಗೆ ನೈತಿಕತೆ ಎಂಬುದು ಇಲ್ಲದಂತಾಗಿದೆ. ಸಂವಿಧಾನದ ಅಡಿಯಲ್ಲಿ ಆಯ್ಕೆಯಾದ ಅವರು ಸಾರ್ವಜನಿಕವಾಗಿ ಯಾವ ರೀತಿ ಮಾತನಾಡಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡಬೇಕಾದ ಪರಿಸ್ಥಿತಿ ಇದೆ. ಯಾವ ಭಾಷೆ ಮಾತನಾಡಬೇಕು ಎಂಬುದನ್ನು ಅರಿಯದೆ ತಮಗಿಷ್ಟ ಬಂದ ರೀತಿ ಏಕವಚನ ಬಳಸಿದರೆ ಯಾವ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿಯವರ ಅನರ್ಹತೆ ಶಿಕ್ಷೆ ದೇಶದ ರಾಜಕಾರಣಿಗಳಿಗೆ ಪಾಠವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾದ್ಯಂತ 6 ಶಾಸಕರ ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಒಂದಲ್ಲಾ ಒಂದು ಭೂ ಹಗರಣ, ಲಂಚದ ಆರೋಪದಲ್ಲಿ ಸಿಲುಕಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಹಾಗೂ ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಭೂ ಹಗರಣದಲ್ಲಿ ಸಿಲುಕಿರುವ ಶಾಸಕರ ಸದಸ್ಯತ್ವ ರದ್ದು ಮಾಡಿ ಭ್ರಷ್ಟಾಚಾರದಲ್ಲಿ ಸಿಲುಕಿರುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ಮಾನ್ಯ ಒತ್ತಾಯಿಸಿ ಮಾ.29ರ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುವ ಮೂಲಕ ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸುವುದಾಗಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಚಾಂದ್‍ಪಾಷ, ಕದಿರಿನತ್ತ ಅಪ್ಪೋಜಿರಾವ್, ಮಾಸ್ತಿ ಹರೀಶ್, ವೆಂಕಟೇಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಕಿರಣ್, ಗಿರೀಶ್, ಐತಾಂಡಹಳ್ಳಿ ಮುನ್ನಾ ಮುಂತಾದವರಿದ್ದರು.

ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಶೇ.4 ರಷ್ಟು ಮೀಸಲಾತಿ ವಾಪಸ್ ಪಡೆದು ಒಂದು ಸಮುದಾಯಕ್ಕೆ ಅನ್ಯಾಯ ಮಾಡಿದೆ:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಶೇ.4 ರಷ್ಟು ಮೀಸಲಾತಿ ವಾಪಸ್ ಪಡೆಯುವುದರ ಮೂಲಕ ಒಂದು ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸಮಾಜದಲ್ಲಿ ಮತೀಯವಾದ ಬಿತ್ತುತ್ತಿದೆ. ಸಮಾಜ ಒಡೆಯುವ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ಗೋಡೆಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಲ್ಪ ಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಿಲ್ಲ. ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಅಲ್ಪ ಸಂಖ್ಯಾತರು ನಡೆಸುವ ವ್ಯಾಪಾರಕ್ಕೆ ಕಲ್ಲು ಹಾಕುತ್ತಿದೆ. ಮತದಾರರು ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕು. ಎಲ್ಲಕಿಂತ ದೇಶ ಮುಖ್ಯ. ದೇಶಕ್ಕೆ ಗಂಡಾಂತರ ತರುವುದನ್ನು ಸಹಿಸಲಾಗದು ಎಂದು ಹೇಳಿದರು.
ಕೇಂದ್ರ ಸರ್ಕಾರ ಶೇ.18 ಜಿಎಸ್‍ಟಿ ಹಾಕುವುದರ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಬಡವರು ಬಳಸುವ ಗೃಹ ನಿರ್ಮಾಣ ವಸ್ತುಗಳನ್ನೂ ಜಿಎಸ್‍ಟಿಯಿಂದ ಹೊರಗಿಟ್ಟಿಲ್ಲ. ಕೊರೊನಾ ಸಂದರ್ಭದಲ್ಲಿ ವೈಜ್ಞಾನಿಕ ಕ್ರಮ ಕೈಗೊಳ್ಳುವ ಬದಲು ಮೊಂಬತ್ತಿ ಬೆಳಗಲು ಹೇಳಿದ್ದು ಸಾವಿರಾರು ಜನರ ಸಾವಿಗೆ ಕಾರಣವಾಯಿತು. ರಾಮನ ಹೆಸರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.
ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೇರೆಯಲ್ಲ, ಜೆಡಿಎಸ್ ಬೇರೆಯಲ್ಲ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪರಸ್ಪರ ಸಹಕಾರ ಮುಂದುವರಿದಿದೆ. ಜಿಲ್ಲೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಸೇರಿದಂತೆ ಕಾಂಗ್ರೆಸ್ ಮುಖಂಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯಕರ್ತರು ಎಲ್ಲ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮುಖಂಡ ಬಿ.ಎಂ.ಪ್ರಕಾಶ್ ಮಾತನಾಡಿ, ಶಾಸಕ ಕೆ.ಆರ್.ರಮೇಶ್ ಕುಮಾರ್ ಸರ್ಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಪಕ್ಷಾತೀತವಾಗಿ ವಿತರಣೆ ಮಾಡಿದ್ದಾರೆ. ವಿರೋಧಿಗಳು ವಿನಾಕಾರಣ ಕೆಸಿ ವ್ಯಾಲಿ ನೀರಿನ ಬಗ್ಗೆ ಅಪಸ್ವರ ಎತ್ತಿ, ಅಪಪ್ರಜಾರ ಮಾಡುತ್ತಿದ್ದಾರೆ. ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳಿಗೆ ಜನರು ಸಾಕ್ಷಿಯಾಗಿದ್ದಾರೆ. ರಮೇಶ್ ಕುಮಾರ್ ಸತತವಾಗಿ ಮೂರನೇ ಬಾರಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಮುಖಂಡರಾದ ಎನ್.ಜಿ.ಬ್ಯಾಟಪ್ಪ, ಗೋವಿಂದಸ್ವಾಮಿ, ಮ್ಯಾಕಲ ನಾರಾಯಣಸ್ವಾಮಿ, ಕೃಷ್ಣೇಗೌಡ, ಸೈಯದ್ ಖಾದರ್, ಕೊಂಡಸಂದ್ರ ಶಿವಾರೆಡ್ಡಿ, ಎನ್.ಹನುಮೇಶ್, ಎಸ್.ವಿ.ಸುಧಾಕರ್, ಕೆ.ಕೆ.ಮಂಜು, ನಾರಾಯಣಸ್ವಾಮಿ, ನಾಗೇಶ್, ಉಮಾ, ಸಂಜಯ್ ರೆಡ್ಡಿ, ರೆಡ್ಡಪ್ಪ, ಅಕ್ಬರ್ ಷರೀಫ್, ವೆಂಕಟಾದ್ರಿ, ಸೀತಾರಾಮರೆಡ್ಡಿ, ರಾಮಮೂರ್ತಿ ಇದ್ದರು.
ರೋಡ್ ಷೋ: ಪಟ್ಟಣದ ಎಂಜಿ ರಸ್ತೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್, ಕಾಂಗ್ರೆಸ್ ಮುಖಂಡರೊಂದಿಗೆ ರೋಡ್ ಷೋ ನಡೆಸಿದರು. ರಸ್ತೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೂಡ್ಲಕಟ್ಟೆ, ವಿದ್ಯಾ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವ

ಮೂಡ್ಲಕಟ್ಟೆ, ವಿದ್ಯಾ ಅಕಾಡೆಮಿ ಸ್ಕೂಲಿನ ವಾರ್ಷಿಕೋತ್ಸವವು ಇತ್ತಿಚಿಗೆ ಶಾಲೆಯ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಕುಂದಾಪುರದ ಹೆಮ್ಮಾಡಿಯ ಲಕ್ಷ್ಯಾ ಕ್ಲಿನಿಕ್ ವೈದ್ಯರಾಗಿರುವ ಅಮ್ಮಾಜಿ ಪಿ ಅವರು ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಅವರು ತಮ್ಮ ಉದ್ಗಾಟನಾ ಭಾಷಣದಲ್ಲಿ ಶಾಲೆಯ ವಾರ್ಷಿಕೋತ್ಸವವು ಎಳೆಯರಿಗೆ ಜೀವನ ಪರ್ಯಂತ ಸ್ಮರಣೀಯ ಕ್ಷಣಗಳನ್ನು ನೀಡುವ ಅತ್ಯಂತ ಮಹತ್ವದ ದಿನ ಎಂದು ಹೇಳಿದರು. ಶಾಲೆಯು ಮಕ್ಕಳಿಗೆ ಮನೆಯ ವಾತಾವರಣದ ಹೊರತಾಗಿ ಹೊರಗಿನ ವಾತಾವರಣವನ್ನು ಅರಿತುಕೋಳ್ಳಲು ಬಹಳ ಸಹಾಯವಾಗುತ್ತದೆ ಎಂದರು ಮತ್ತು ವಿದ್ಯಾರ್ಥಿಗಳ ಉನ್ನತಿಯನ್ನೆ ದೈರ್ಯವಾಗಿಟ್ಟುಕೊಂಡು ಶಾಲೆಯು ಮುನ್ನಡೆಯುತ್ತಿರುವುದು ಪ್ರಶಂಸನೀಯ ಎಂದರು. ಐ.ಎಂ.ಜೆ ಸಂಸ್ಥೆಗಳ ನಿದೇರ್ಶಕರಾದ ಪ್ರೋಫೆಸರ್ ದೋಮ ಚಂದ್ರಶೇಖರ್ ಮಾತನಾಡಿ ಸಂಸ್ಥೆಯ ಅಧ್ಯಕ್ಷರ ಅವಿರತ ಪ್ರಯತ್ನವನ್ನು ಪ್ರಶಂಶಿಸಿದರಲ್ಲದೇ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿವಿಧ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆಯ ನಂತರ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸಿದ್ದಾರ್ಥ ಜೆ ಶೆಟ್ಟಿಯವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸುವ್ಯವಸ್ಥೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಹಾಗೂ ಕಲಿಕೆಯು ಮನೋರಂಜನಾತ್ಮಕವಾಗಿ ಸಾಗುವಂತೆ ಪಠ್ಯವನ್ನು ಸಂಯೊಜಿಸಲಾಗಿದೆ ಎಂದರು. ಪೋಷಕರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸಕ್ಕೆ ಅವರು ಕೃತಜ್ಞತೆಯನ್ನು ಸಲ್ಲಿಸಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಪಾವನಾರವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಶ್ರೀಮತಿ ವಿದ್ಯಾರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀಮತಿ ರಷ್ಮಾ ಶೆಟ್ಟಿಯವರು ಶಾಲೆಯ ವಾರ್ಷಿಕ ವರದಿಯನ್ನು ಓದಿದರು. ಶ್ರೀಮತಿ ಪಾವನಾರವರು ವಂದನಾರ್ಪಣೆಗೈದರು. ಸಭಾಕಾರ್ಯಕ್ರಮದ ನಂತರ ಮಕ್ಕಳಿಂದ ಅತ್ಯಾಕರ್ಷಕ ಮನೋರಂಜನಾ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾ ಅಕಾಡೆಮಿಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕುಮಾರಿ ಫಾತಿಮಾ ನಿರ್ವಹಿಸಿದ್ದರು.

ಕುಂದಾಪುರ-ಬೈಂದೂರು ತಾಲೂಕು ಭಾವನ ಮಹಿಳಾ ಒಕ್ಕೂಟದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ


ಕುಂದಾಪುರ, ಮಾ.27: ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದಿಂದ ಕುಂದಾಪುರ ಸಂತ ಮೇರಿಸ್ ಪ.ಪೂ. ಕಾಲೇಜಿನ ಸಭಾಭವನದಲ್ಲಿ ಮಾ.26 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಸುಗಮ್ಯ ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟಉಡುಪಿ ಧರ್ಮಪ್ರಾಂತ್ಯ ಇದರ ಅಧ್ಯಕ್ಷೆ ಅನಿತಾ ಡಾಯಸ್ ಗೀಡಕ್ಕೆ ನಿರೇರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ವಲಯ ಮಟ್ಟದ ಒಕ್ಕೂಟಗಳ ಸಹಕಾರದಿಂದ ನಮ್ಮ ಮಹಿಳಾ ಒಕ್ಕೂಟವು ಉತ್ತಮ ರೀತಿಯಲ್ಲಿ ನಡೆಯುತ್ತದೆ, ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದು ಚರ್ಚಿನ ವಾಳೆಯ ಗುರಿಕಾರರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಮತು ಇನ್ನಿತರ ಕ್ಷೇತ್ರಗಳಲ್ಲಿ ಮಹಿಳೆ ತಾನೇನು ಕಡಿಮೆಯಿಲ್ಲವೆಂದು ಹೆಸರು ಮಾಡಿದ್ದಾಳೆ’ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಸುಗಮ್ಯ ಸೌರ್ಹಾದ ಸಹಕಾರಿ ನಿಯಮಿತ ಉಡುಪಿ ಇದರ ಅಧ್ಯಕ್ಷೆ ಪ್ರಮೀಳಾ ಡೆಸಾ, ಸುಗಮ್ಯ ಸೌರ್ಹಾದ ಸಹಕಾರಿ ನಿಯಮಿತ ಸಂಸ್ಥೆ ಸ್ಥಾಪಿಸುವುದರಲ್ಲಿ ಶ್ರಮಿಸಿದ ಪ್ರಯುಕ್ತ, ಆಶಾ ಕಾರ್ಯಕರ್ತೆಯಾದ ಸಿಂತಿಯಾ ಬುತ್ತೆಲ್ಲೊ ಇವರಿಗೆ ಶಿಸುಗಳ ಆರೈಕೆ ಗರ್ಭಿಣಿಯವರ ಸೇವೆ, ಬಾಣತನದ ಸೇವೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ಗುರುತಿಸಿದ್ದಕಾಗಿ ಹಾಗೂ ಕುಂದಾಪುರ ತಾಲೂಕಿನಲ್ಲಿ ಆಟೋ ರಿಕ್ಷಾ ಚಾಲಕರಾಗಿ ಅನನ್ಯ ರೀತಿಯಲ್ಲಿ ಸೇವೆ ನೀಡುತ್ತೀರುವ ರೂಪ, ದೀಪ ಮತ್ತು ಸುಲೋಚನ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಪ್ರಮೀಳಾ ಡೆಸಾ ಮತ್ತು ದೀಪಾ ಅನ್ನಿಸಿಕೆಯನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆ ಸ್ಥಾನ ವಹಿಸಿದ ಭಾವನ ಒಕ್ಕೂಟದ ಅಧ್ಯಾತ್ಮಿಕ ನಿರ್ದೇಶಕರಾದ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ‘ಮಹಿಳೆ ಇಂದು ಯಾವ ಕ್ಷೇತ್ರದಲ್ಲೂ ಹಿಂದಿಲ್ಲ, ಇವತ್ತು ನಾನೊಂದು ಮಹಿಳೆಯ ಅಂತ್ಯ ಸಂಸ್ಕಾರದ ಕಾರ್ಯವನ್ನು ಮಾಡಬೇಕಿದೆ, ಸಮಾಕ ಸೇವಕಿ ಬರಹಗಾರ್ತಿಯಾದ ಅವಳು ಅವಳು ನಾನು ಸತ್ತ ನಂತರ ನನ್ನ ಶವವನ್ನು ವೈಧ್ಯಕೀಯ ಸಂಶೋಧೆನೆಗಾಗಿ ಉಪಯೋಗಿಸಲು ನೀಡಬೇಕೆಂದು ಕರಾರು ಮಾಡಿಕೊಂಡಿದ್ದಾಳೆ, ಅದರಂತೆ ಅವಳ ಮ್ರ್ ಆತ್ಮಕ್ಕಾಗಿ ಪೂಜೆ ಪ್ರಾರ್ಥನೆ ಮಾಡಿದ ನಂತರ, ಅವರ ಮ್ರತದೇಹವನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ನೀಡಲಿಕ್ಕೆ ಇದೆ, ಇಂತಹ ದಿಟ್ಟತನ ತ್ಯಾಗಮಯಿ ಮಹಿಳೆಗಳು ಸಮಾಜದಲ್ಲಿ ಇದ್ದಾರೆ’ ಎಂದು ಹೇಳುತ್ತಾ, ಶುಭ ಕೋರಿದರು.
ಮುಕಾಂಬಿಕ ಮಹಿಳಾ ಮಂಡಲ ಮತ್ತು ಮಹಿಳಾ ಸಾಂತ್ವನ ಕೇಂದ್ರ ಕುಂದಾಪುರ ಇದರ ಅಧ್ಯಕ್ಷೆ ಸಮಾಜ ಸೆವಕಿ ರಾಧ ದಾಸ್ ಮಾತನಾಡಿ ‘ತಮ್ಮ ಮನೆಯ ವ್ರದ್ದರನ್ನು ಚೆನ್ನಾಗಿ ನೋಡಿಕೊಳ್ಳಿ, ಅವರನ್ನು ವ್ರದ್ದಾಶ್ರಮದಲ್ಲಿ ಇಡುವುದು ಸರಿಯಲ್ಲ, ಅಲ್ಲಿ ಅವರ ವೇದನೆ ನೋಡಲಾರದು ಎಂದು ಹೇಳುತ್ತಾ, ನಾನು ಎಷ್ಟೊ ಅತ್ಯಾಚಾರದ ಪ್ರಕರಣದಲ್ಲಿ ಶಿಕ್ಷೆ ನೀಡುವಲ್ಲಿ ಶ್ರಮಿಸಿದ್ದೇನೆ, ಇಂತಹ ಎಷ್ಟೊ ಪ್ರಕರಣದಲ್ಲಿ ಎರಡು ಕಡೆಯವರಿಗೆ ಒಟ್ಟು ಕೂಡಿಸಿ, ಅವರನ್ನು ಮದುವೆ ಮಾಡಿಸಿದ್ದೇನೆ, ಮಹಿಳೆಯ ಸಾಂತ್ವಾನ ಕೇಂದ್ರವನ್ನು ತೆರೆದಿದ್ದೇನೆ, ಸುಸಜ್ಜಿತ ಶವಾಗರವನ್ನು ನಿರ್ಮಿಸಿದೇನೆ, ಇದ್ಯಾಕೆ ನಾನು ಹೇಳುತ್ತಿದ್ದೇನೆ ಅಂದರೆ, ನನ್ನನ್ನೆ ನಾನು ಸಾಧಕಿಯೆಂದು ಬಿಂಬಿಸಿಕೊಳ್ಳಲು ಅಲ್ಲ, ನೀವು ಕೂಡಾ ಮಹಿಳೆಯರಾಗಿ ಮುಂದೆ ಇಂತಹ ಕೆಲಸಗಳನ್ನು ಮಾಡಿ, ಮಹಿಳೆಯರಿಗಾಗಿ ಶ್ರಮಿಸಬೇಕೆಂಬುದೆ ನನ್ನ ಉದ್ದೇಶ ಎಂದು ಹೇಳಿದರು.
ಕುಂದಾಪುರ, ಬಸ್ರೂರು, ಬೈಂದೂರು, ಪಿಯುಸ್ ನಗರ್, ಪಡುಕೋಣೆ, ಗಂಗೊಳ್ಳಿ ಮಹಿಳಾ ಘಟಕಗಳು ನ್ರತ್ಯ ಹಾಡುಗಳ ಪ್ರದರ್ಶನ ನೀಡಿದರು. ತ್ರಾಸಿ ಘಟಕವು ಪ್ರಹಸನ ಪ್ರದರ್ಶನ ಮಾಡಿದರೆ, ಕೋಟದ ಘಟಕವು ಪ್ರಾರ್ಥನೆ ಗೀತೆ ಹಾಡಿತು. ತಲ್ಲೂರು ಘಟಕವು ಉಪಚಾರ ಸೇವೆಯನ್ನು ಕೈಗೊಂಡಿತು. ಕೋಟ ಚರ್ಚಿನ ಧರ್ಮಗುರು ವಂ|ಆಲ್ಫೊನ್ಸ್ ಡಿಲಿಮಾ ಉಪಸ್ಥತರಿದ್ದರು
ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಲೆಟ್ ಡಿಸಿಲ್ವಾ ಸ್ವಾಗತಿಸಿದರು.ಕಾರ್ಯದರ್ಶಿ ಜ್ಯೋತಿ ಡಿಮೆಲ್ಲೊ ವಂದಿಸಿದರು, ರೇನಿಟಾ ಬಾರ್ನೆಸ್ ಮತ್ತು ಆಶಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ಗೆ ಎರಡನೇ ಬಾರಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ


ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಸಂಘÀಟನೆ ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ ನೀಡುತ್ತಾ ಬಂದಿರುವ ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿಗೆ ಈ ಬಾರಿ ಕಾರ್ಕಳ ತಾಲೂಕಿನಲ್ಲೇ ಸಾಮಾಜಿಕ, ಸಾಂಸ್ಕøತಿಕ, ಕ್ರೀಡಾ, ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಕಳೆದ 23 ವರ್ಷಗಳಿಂದ ತನ್ನದೇ ವೈಶಿಷ್ಟ್ಯಪೂರ್ಣ ಶೈಲಿಯ ಮೂಲಕ ಗುರುತಿಸಿಕೊಂಡಿರುವ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಸಂಸ್ಥೆಗೆ ಜಿಲ್ಲಾ ಪ್ರಶಸ್ತಿ ಮತ್ತು 25 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರವನ್ನು ನೀಡಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರನ್ನು ಗೌರವಿಸಲಾಯಿತು.
ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಜಿಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಭಟ್, ಉಡುಪಿ ಯುವಜನ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಶೆಟ್ಟಿ, ಉಡುಪಿ ನೆಹರೂ ಯುವ ಕೇಂದ್ರ ಸಂಘಟನೆಯ ಜಿಲ್ಲಾ ಯುವ ಸಮಾನ್ವಯಾಧಿಕಾರಿ ವಿಲ್ಪ್ರೆಡ್ ಡಿ’ಸೋಜಾ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಪೂಜಾರಿ ಬೀರೊಟ್ಟು, ಪೂರ್ವಾಧ್ಯಕ್ಷರಾದ ಸುರೇಶ್ ಕಾಸರಬೈಲು, ಸತೀಶ್ ಅಬ್ಬನಡ್ಕ, ಕಾರ್ಯದರ್ಶಿ ಲಲಿತಾ ಆಚಾರ್ಯ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಸದಸ್ಯರಾದ ಸುರೇಶ್ ಅಬ್ಬನಡ್ಕ, ಸಂಧ್ಯಾ ಶೆಟ್ಟಿ, ಆರತಿ ಕುಮಾರಿ, ವೀಣಾ ಪೂಜಾರಿ, ಪುಷ್ಪ ಕುಲಾಲ್, ಸುಲೋಚನಾ ಕೋಟ್ಯಾನ್, ಅಶ್ವಿನಿ ಪೂಜಾರಿ ಮೊದಲಾದವರು ಉಪಸ್ಥಿತಿತರಿದ್ದರು.

ಜನನುಡಿ ಸುದ್ದಿ ಸಂಸ್ಥೆಯ ಮುದ್ದು ಯೇಸು ಸ್ಫರ್ಧೆಯಲ್ಲಿ ವೆನೋರಾ ಡಿಸೋಜಾ ಮತ್ತು ಸಾನಿಯಾ ಡಿಮೆಲ್ಲೊ ಇವರಿಗೆ ಪ್ರಥಮ ಸ್ಥಾನ

ಕುಂದಾಪುರ, ಜನನುಡಿ ಸುದ್ದಿ ಸಂಸ್ಥೆ ಆಶ್ರಯದಲ್ಲಿ ನಡೆದ ಮುದ್ದು ಯೇಸು ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಬಸ್ರೂರಿನ ವೆನೋರಾ ಡಿಸೋಜಾ ಪ್ರಥಮ ಸ್ಥಾನ ಪಡೆದಿದ್ದಾಳೆ, ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಇಯಾನ್ ಜಿತ್, ಪಡೆದರೆ ತ್ರತೀಯ ಸ್ಥಾನವನ್ನು ಕುಂದಾಪುರದ ಎಡೆನ್ ಡಿಆಲ್ಮೇಡಾ ಪಡೆದುಕೊಂಡಿದ್ದಾನೆ.
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಕುಂದಾಪುರದ ಸಾನಿಯಾ ಡಿಮೆಲ್ಲೊ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ದ್ವಿತೀಯ ಸ್ಥಾನವನ್ನು ಕುಂದಾಪುರದ ಅಲೈನಾ ಎಬ್ರಿಲ್ ಫೆರ್ನಾಂಡಿಸ್ ಪಡೆದುಕೊಂಡರೆ, ತ್ರತೀಯ ಸ್ಥಾನವನ್ನು ಕುಂದಾಪುರದ ಮಹಿಮಾ ವಿಯಾನ್ನಾ ಬರೆಟ್ಟೊ ಪಡೆದುಕೊಂಡಿದ್ದಾಳೆ.
ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಕೋಟದ ಡೀಯೊರ್ ಸಾಶಾ ಡಾಯಾಸ್, ಕೋಟೆಶ್ವರದ ಅಮೋಸ್ ಥೋಮಸ್ ಡಿಮೆಲ್ಲೊ ಮತ್ತು ಪೇತ್ರಿಯ ಈವಾ ಎಂಜೆಲ್ ಡಿಸೋಜಾ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಗಂಗೊಳ್ಳಿಯ ಒನೀಲ್ ಜೂಡ್ ರೆಬೆಲ್ಲೊ, ಮೂಡುಬಿದ್ರೆ ಕಲ್ಲಾಬೆಟ್ಟುವಿನ ಆನ್ (Ann) ಕಾರ್ಡೊಜಾ, ಮತ್ತು ಹಂಗಾರಕಟ್ಟೆಯ ಸೆಲ್ವಿಟಾ ಡಿಆಲ್ಮೇಡಾ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಈ ಸಲ ಮಾಧ್ಯಮದ ಮೂಲಕ ಸಾರ್ವಜನಿಕರು ಮೆಚ್ಚುಗೆ ಪಡೆದ ಮಕ್ಕಳು ಜನನುಡಿ ಮುದ್ದು ಯೇಸು ಸ್ಫರ್ಧೆಯಲ್ಲಿ ಆರಿಸಲಾಗಿದೆ. ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಜನನುಡಿ ಸುದ್ದಿ ಸಂಸ್ಥೆಯಿಂದ ಧನ್ಯವಾದಗಳು, ವಿಜೇತರಾದ ಮುದ್ದು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಜನನುಡಿ ಸುದ್ದಿ ಸಂಸ್ಥೆಯಿಂದ ಅಭಿನಂದನೆಗಳು.
ಈ ಸ್ಫರ್ಧೆಯ ಪೋಷಕರುಗಳಿಗೆ ತುಂಬು ಹ್ರದಯದಿಂದ ಸುದ್ದಿ ಸಂಸ್ಥೆಯಿಂದ ಕ್ರತ್ಞಜತೆಗಳನ್ನು ಸಲ್ಲಿಸಿಸುತ್ತಿದ್ದೆವೆ.
ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.

ಒಂದು ವರ್ಷದ ಒಳಗಿನ ವಿಭಾಗದಲ್ಲಿ ವಿಜೇತರಾದವರು

First prize winnerVenora Dsouza D/O  Vikram Dsouza: & anusha Dsouza, Basrur
Second prize winnerIan Jith Dcosta S/O Kiran Jith & Jeswina Dcosta, Bangaluru
Third prize winnerAiden Dalmeida  S/O Christopher Dalmeida & Vanitha Dalmeida

ಒಂದರಿಂದ ಐದು ವರ್ಷದ ಒಳಗಿನ ವಿಭಾಗದಲ್ಲಿ ವಿಜೇತರಾದವರು

First prize winnerSaniya Dmello  D/O  Anil Dmello & Soniya Dsouza, Voderhobli Kundapura
 
Second prize winnerAlaina Abrielle Fernandes D/O Avin Francis Fernandes & Leema Rodrigues, Kundapur
Third prize winnerMahima Vianna Baretto D/o Vincent Baretto and Vanitha Baretto, Kundapura


ಒಂದು ವರ್ಷದ ಒಳಗಿನವರ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಪಡೆದವರು

Deor Sasha Dias Parents : Dezma Furtado & Sunny Dias , Kota
Amos Thomas D’Mello  S/O Anil Dmello & Sopiya Dmello, Koteshwara
Eva Angel Dsouza D/O Edwin Rajesh Dsouza & Nayana CK, Pethri.

ಒಂದು ವರ್ಷದಿಂದ ಐದು ವರ್ಷದ ಒಳಗಿನವರ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಪಡೆದವರು

Oniel jude Rebello F/O  ovin Rebello and Jonita lewis, Gangolli
Ann cardoza S/O Avinash loyd carodza & viola Cardoza, Karinje village, Kallabettu,Moodabiri
Selvita D Almeida D/O Stany Dalmeida / Maria Almeida Hangarkatta

Appreciated children in one to five years category

Olina ruth -M/O Vianan lobo Sajeepa munnur post Bantwal taluk
Caren DlimaParents: Nelson & Viola, Sunkadakatte Bajpe
Ethan Abner dsouza – Parents: santhosh dsouza and anjeline supriya lobo Derlakattte

Appreciated children in the under one year category

Sian merik Dsouza – Parents: sunil praveen Dsouza and Swathi Dsouza, Adyapady, Mangalore

OUR SPONOSORS FOR JANANUDI.COM “MUDDU YESU” PHOTO CONTEST 2022-23

ಗ್ರೇಸಿ ರೀಟಾ ವಾಜ್  (ಕುಂದಾಪುರ್- ಮಾಗುಂಡಿ-ಮಲ್ಗಡಿ ಕೊಂಕ್ಣಿ ಬರವ್ಪಿಣ್) ದೆವಾಧೀನ್ ಜಾಲಿ (25-3-23)

ಗ್ರೇಸಿ ರೀಟಾ ವಾಜ್  (ಕುಂದಾಪುರ್- ಮಾಗುಂಡಿ) ದೆವಾಧೀನ್ ಜಾಲಿ (25-3-23)

ದೆ| ಪಿ. ಡಿ. ವಾಜ್ ಚಿ ಪತಿಣ್

ಧುವ್ :ದೆ| ಜೋಸೆಫ್ ಡೆಸಾ ಆನಿ ಜೂಲಿಯಾನ ಡೆಸಾ ಹಾಂಚಿಂ

ಆವಯ್ : ರೂಪರ್ಟ್ / ಈವಾನ್.  ಪ್ರವೀಣ್ / ಜಸಿಂತಾ. ಪ್ರಮೀಳಾ / ಕೇಶವ್. ಪ್ರದೀಪ್ / ಶೋಭಾ. ಶರ್ಮಿಳಾ / ಕಾನ್ರಡ್. ಹಾಂಚಿಂ

ಗ್ರೇಸಿ ಬಾಯ್ ಗಾಂವಾನ್ ಮಾಗುಂಡಿ, ಬಾಳೆಹೊನ್ನೂರ್  ಚಿಕ್ಕಮಗಳೂರ್ಚಿ, ಆಸೊನ್ ತಿಚೆಂ ಲಗ್ನ್ ಖ್ಯಾತ್ ಹಾಸ್ಯ್ ಬರವ್ಪಿ ಪಿಡ್ವಾಜ್ ಕುಂದಾಪುರ್ ಲಗ್ನ್ ಜಾವ್ನ್ ತಿ ಕುಂದಾಪುರ್, ವಸ್ತಿ ಕರ್ನ್ ಆಸಲ್ಲಿ.

 ತಿ ಎಕ್ ಸಮಾಜ್ ಸೇವಕಿ ಜಾವ್ನಾಸೊನ್, ಮಲ್ಗಡಿ ಕೊಂಕ್ಣಿ ಬರವ್ಪಿಣ್ ಜಾವ್ನಾಸ್ಲಿ, ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆಂತ್ ತಿಣೆ, ಲ್ಹಾನ ಸಮುದಾಯ್, ಕೊಯೆರ್ ಪಂಗ್ಡಾಂತ್ ಆನಿ ತಿಸ್ರಿ ಒಡ್ದಿಂತ್ ಸೆವಾ ದಿಲ್ಯಾ ಆಸ್ತಾಂ,  ಗ್ರೆಸಿ ಬಾಯ್ ಥ್ಹೊಡ್ಯಾ ಕಾಳಾ ಥಾವ್ನ್  ಪೀಡೆಂತ್ ಆಸೊನ್ ತಿ.  25-3-23 ವೇರ್ ಕುಂದಾಪುರ್ ತಿಚ್ಯಾ ಘರಾಂತ್ ಅಂತರ್ಲಿ.

   ತಿಚಿ ಕುಡ್ ವೈಧ್ಯಕೀಯ ಉಪ್ಕಾರಾಕ್ ಪಡ್ಚ್ಯಾ ಖಾತಿರ್ ತಿಣೆ ಕಂಕನಾಡಿ ಆಸ್ಪತ್ರೆಕ್ ದಾನ್ ದಿಲ್ಲಿ ಆಸ್ತಾಂ, ತಿಚೆಂ ಮರ್ಣಾಚೆಂ ಬಲಿದಾನ್ ಆನಿ ಅಂತಿಮ್ ಸಂಸ್ಕಾರ್ಣಿ ಸಂಪ್ತೆರ್ ತಿ ಕಂಕನಾಡಿ ಹೊಸ್ಪಿಟೆಲಾಕ್ ವ್ಹರ್ನ್ ವೆತಾಲೆ. ಮ್ಹಣುನ್ ಕುಟ್ಮಾದಾರಾನಿ ಕಳಯ್ಲಾ.

ಮರ್ಣಾಚಿ ರೀತ್ : ಆಯ್ತಾರಾ 26-03-2023, ಸಾಂಜೆರ್ 3.30 ವೊರಾರ್ ಘರಾ ಥಾವ್ನ್ ಆನಿ  4.00 ವೊರಾರ್ ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆಂತ್ ಚಲ್ತೆಲಿ.

ಚಡಿತ್ ವಿವರ್ ಸಂಪರ್ಕಾಕ್ : 9448252649

ಗ್ರಾಮೀಣ ಭಾಗದಲ್ಲಿ ಪಕ್ಷಾತೀತವಾಗಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ : ಶಾಸಕ ಕೆ.ಆರ್.ರಮೇಶ್‍ಕುಮಾರ್

ಗ್ರಾಮೀಣ ಭಾಗದಲ್ಲಿ ಪಕ್ಷಾತೀತವಾಗಿ ವಸತಿ ರಹಿತರಿಗೆ ವಸತಿ ನೀಡಲಾಗಿದೆ. ಕುಡಿಯುವ ನೀರು, ಸಮುದಾಯಭವನಗಳನ್ನು ನಿರ್ಮಿಸಲಾಗುತ್ತಿದೆ. ಮುಖ್ಯವಾಗಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ಚಿಕ್ಕರಂಗೇಪಲ್ಲಿ ಗ್ರಾಮದಲ್ಲಿ ವಿವಿಧ ಯೋಜನೆಯಲ್ಲಿ 30 ಲಕ್ಷ ವೆಚ್ಚದ ಕಾಮಗಾರಿಗಳನ್ನು ಹಾಗು ಜಿಲ್ಲಾ ಕೋಮುಲ್ ಹಾಲು ಒಕ್ಕೂಟದಿಂದ ನಿರ್ಮಿಸಲಾದ ಹಾಲಿನ ಡೈರಿ ಕಟ್ಟಡವನ್ನು ಶುಕ್ರವಾರ ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯು ರೈತ ಹಾಗೂ ಬಡ ಕುಟುಂಬಗಳ ಆರ್ಥಿಕವಾಗಿ ಸಭಲರಾಗಲು ಕಾರಣವಾಗಿದ್ದು, ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಮಾಡುವಂತೆ ಸಲಹೆ ನೀಡಿದರು.
ಗ್ರಾಮದಲ್ಲಿನ ಹಾಲು ಡೈರಿಯಲ್ಲಿ ದಿನಕ್ಕೆ 385 ಲೀಟರ್ ಉತ್ಪಾದನೆ ಆಗುತ್ತಿದ್ದು, ಇದರಿಂದ 4.20 ಲಕ್ಷ ಆದಾಯ ಇದೆ. ಈಗ ಬರುವ ಆದಾಯವು 4.20 ಲಕ್ಷ ದಿಂದ 8 ಲಕ್ಷ ಆದಾಯದ ಗುರಿ ಸೇರಬೇಕು. ಆಗ ನೀವು ಅಭಿವೃದ್ಧಿಯಾಗುತ್ತೀರಿ ಎಂದರು. ಜನರಿಗೆ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ಮಾಡಿದರೆ ಮುಂದಿನ ದಿನಗಳಲ್ಲಿ ಪುನಃ ನಮ್ಮನ್ನ ಆಯ್ಕೆ ಮಾಡುತ್ತಾರೆ.
ಈ ನಿಟ್ಟಿನಲ್ಲಿ ಬಡ ಕುಟುಂಬಗಳ ಮಹಿಳೆಯರ ಏಳಿಗೆಗಾಗಿ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲವಿತರಣೆಯು ಪಕ್ಷತೀತವಾಗಿ ಮಾಡಲಾಗಿದೆ. ಗ್ರಾಮದಲ್ಲಿನ ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಸಲಹೆ ಸಹಕಾರಗಳೊಂದಿಗೆ ಹಬ್ಬ ಹರಿದಿನಗಳನ್ನು ಆಚರಣೆ ಮಾಡಿಕೊಳ್ಳುತ್ತಾ ಒಗ್ಗಾಟ್ಟಾಗಿ ಇರುವಂತೆ ಸಲಹೆ ನೀಡಿದರು.
ಅಂಗನವಾಡಿ ನೂತನ ಕಟ್ಟಡ, ಸಿಸಿ ರಸ್ತೆ , ಶಾಲಾ ಶೌಚಾಲಯ , ಶಾಲಾ ಕಾಂಪೌಂಡ್, ಸಿಸಿ ಚರಂಡಿ ರಸ್ತೆಯನ್ನು ಉದ್ಗಾಟಿಸಲಾಯಿತು. ಪಿಎಲ್‍ಡಿ ಬ್ಯಾಂಕ್ ತಾಲೂಕು ಅಧ್ಯಕ್ಷ ದಿಂಬಾಲ್ ಅಶೋಕ್ , ನೆಲವಂಕಿ ಗ್ರಾ.ಪಂ.ಅಧ್ಯಕ್ಷೆ ಗೌತಮಿ ಮುನಿರಾಜು, ಸದಸ್ಯ ಸಿ.ಎಂ.ರಮೇಶ್ , ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಕೆ.ಆರ್.ಶಿವಾರೆಡ್ಡಿ, ಮುಖಂಡರಾದ ಆರ್.ವೆಂಕಟೇಶ್‍ಮೂರ್ತಿ, ಕೆ.ಕೆ.ಮಂಜು, ಬೋರ್‍ವೈಲ್ ಕೃಷ್ಣಾರೆಡ್ಡಿ, ಎಂಸಿಎಸ್ ಅಧ್ಯಕ್ಷ ನಾರಾಯಣಸ್ವಾಮಿ, ರಮಣಾರೆಡ್ಡಿ, ಮುನಿಯಪ್ಪ, ಅಮರನಾರಾಯಣ, ಶ್ರೀನಿವಾಸ್ ಕೋಮುಲ್ ಶ್ರೀನಿವಾಸಪುರ ಶಿಬಿರ ಕಚೇರಿ ವ್ಯವಸ್ಥಾಪಕ ಮುನಿರಾಜು ಇದ್ದರು.

ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ , ಆಂತಸ್ತು, ಮಾಡಿಕೊಟ್ಟರೆ ಮಾರಿಕೊಳ್ಳುತ್ತಾರೆ,ಆದರೆ ವಿದ್ಯೆ ಕೊಟ್ಟರೆ ಶಾಶ್ವತವಾಗಿ ನಿಮ್ಮ ಮಕ್ಕಳು ಸುಖ ಜೀವನ ನಡೆಸಲು ಕಾರಣರಾಗುತ್ತೀರಿ :ಕೆ.ಆರ್.ರಮೇಶ್‌ಕುಮಾರ್

ಶ್ರೀನಿವಾಸಪುರ : ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ , ಆಂತಸ್ತು, ಮಾಡಿಕೊಟ್ಟರೆ ಮಾರಿಕೊಳ್ಳುತ್ತಾರೆ . ಆದರೆ ವಿದ್ಯೆ ಕೊಟ್ಟರೆ ಶಾಶ್ವತವಾಗಿ ನಿಮ್ಮ ಮಕ್ಕಳು ಸುಖ ಜೀವನ ನಡೆಸಲು ಕಾರಣರಾಗುತ್ತೀರಿ ಎಂದು ಮಕ್ಕಳ ಪೋಷಕರಿಗೆ ಶಾಸಕ ಕೆ.ಆರ್.ರಮೇಶ್‌ಕುಮಾರ್ ಕಿವಿಮಾತು ಹೇಳಿದರು.

 ಗೌಡತಾತಗಡ್ಡ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಚುನಾವಣೆಯು ಐದು ವರ್ಷಗಳಿಗೊಮ್ಮೆ ನಡೆಯುವಂತಹ ಕಾರ್ಯಕ್ರಮ.  ಈ ದೇಶವನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂದು ಆಲೋಚನೆ ಮಾಡಲು, ನೀವು  ಎಲ್ಲರೂ ಸೇರಿ ನಮಗೆ ಇಂತಹ ಸೌಲಭ್ಯಗಳು ಬೇಕು. ಇಂತಹ ಸಮಸ್ಯೆ ಇದೆ . ಎಂದು ನೀವು ನನಗೆ ಮಾಹಿತಿ ನೀಡಬೇಕು. ಸಮಸ್ಯೆಯ ಬಗ್ಗೆ ನನ್ನಲ್ಲಿ ಮಾಹಿತಿ ಇರಬೇಕು. ಅದನ್ನ ನಾನು ವಿಧಾನಸೌದ ಚರ್ಚೆ ಮಾಡುತ್ತೇನೆ. ಆಗ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಾಗುತ್ತದೆ ಎಂದು ಭರವಸೆ ನೀಡಿದರು. 

ಸಾರ್ವಜನಿಕರು ಮುಖ್ಯವಾಗಿ ನಮ್ಮ ಗಮನಕ್ಕೆ ತರುವುದು, ಗ್ರಾಮಕ್ಕೆ ಸುಸಜ್ಜಿತ ರಸ್ತೆ, ಚರಂಡಿ, ಶುದ್ದಕುಡಿಯುವ ನೀರು, ಶಾಲೆ, ಕಾಲೇಜು, ಆರೋಗ್ಯ ಕೇಂದ್ರ, ವಸತಿ ನಿಲಯ, ಉದ್ಯೋಗ ಕೇಳುತ್ತಾರೆ ಅಷ್ಟೇ. 

ಗೌಡತಾತ ಗಡ್ಡ ಗ್ರಾಮದಲ್ಲಿ ಬಹುತೇಕ ಭೋವಿ ಜನಾಂಗವಿದ್ದು, ೫೦ ವರ್ಷ ಹಿಂದೆ ಯಾವ ರೀತಿಯಲ್ಲಿ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು . ಈ ಹಿಂದೆ ಗ್ರಾಮದಲ್ಲಿ ಬಹುತೇಕ ಗುಡಿಸಲು ವಾಸಿಗಳೇ ಇದಿದ್ದು, ಶಿಕ್ಷಣ ಅಷ್ಟಕ್ಕಷ್ಟೆ  ಆದರೆ ಇಂದು ಗ್ರಾಮದ ಜನತೆ ಸಂವೃದ್ಧಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ ಇದು ನನ್ನ ಮನಸ್ಸಿಗೆ ಖುಷಿ ತಂದಿದೆ. 

೬೦ ವರ್ಷಗಳ ಹಿಂದೆ ಇಂದಿರಗಾAದಿ ರವರು ಎಲ್ಲರೂ ಶಿಕ್ಷಣವನ್ನು ಪಡೆಯಲು ಆದೇಶಿದ್ದರು. ಈ ಒಂದು ದೃಷ್ಟಿಯಿಂದ ಇಂದು ಬಹುತೇಕರು  ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಂದಿರಾಗಾAದಿಯವರ ಆಶಯವನ್ನು ನಾನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು. 

ಮುಂದಿನ ದಿನಗಳಲ್ಲಿ ಶಾಲೆ ೧೦ ಕೋಟಿ ವೆಚ್ಚದಲ್ಲಿ ವಸತಿ ಶಾಲೆಯನ್ನು ನಿರ್ಮಿಸಿ ಗ್ರಾಮದ ಎಲ್ಲಾ ಮಕ್ಕಳು ಇಲ್ಲಿಯೇ ಓದಿ ಬುದ್ದಿವಂತರಾಗುವ ನಿಟ್ಟಿನಲ್ಲಿ ಆಂತರರಾಷ್ಟೀಯ ಮಟ್ಟದಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಿಸುವ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಬೆಂಗಳೂರು ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಈ ಶಾಲೆಯಲ್ಲಿ ಪಾಠಪ್ರವಚನಗಳನ್ನು ಹಮ್ಮಿಕೊಳ್ಳಲಾಗುವುದು. 

ದೇಶಕ್ಕೆ ಅನ್ನ ನೀಡುವವರೆಲ್ಲರೂ ರೈತರೆ. ಅನ್ನವನ್ನು ನೀಡುವ ರೈತರಿಗೆ ಜಾತಿ ಮತ ಬೇದವಿಲ್ಲ. ರೈತರನ್ನು ಕಾಪಾಡಿ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮಳೆ ಬರಲಿ, ಇರಲಿ ಇಂದು ಕೆಸಿ ವ್ಯಾಲಿ ನೀರಿನಿಂದ ತಾಲೂಕಿನ ಕೆರೆಗಳು ಬಹುತೇಕ ಭರ್ತಿಯಾಗಿದೆ. ರಾಯಲ್ಪಾಡು , ನೆಲವಂಕಿ ಹೋಬಳಿಗಳಲ್ಲಿ ಚೆಕ್ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮದಲ್ಲಿ ಅರ್ಧ ಎಕರೆ, ಒಂದು ಎಕರೆ ಜಮೀನು ಇರುವ ರೈತರಿಗೆ ಸರ್ಕಾರದಿಂದ ಉಚಿತವಾಗಿ ಕೊಳವೆಬಾವಿಗಳನ್ನು ಪಕ್ಷಾತೀತವಾಗಿ ಹಾಕಿಸಲಾಗುತ್ತದೆ ಎಂದು ಭರವಸೆ ನೀಡಿದರು.

ರಾಜಕೀಯಕ್ಕೆ ಅರ್ಥ ಬರಬೇಕಾದರೆ, ಗೌರವ ಸಿಗಬೇಕಾದರೆ ನೀವು ಕೊಡುವ ಗೌರವ, ಆಪ್ಯಾಯತೆ ನಾವು ಉಳಿಸಿಕೊಳ್ಳಬೇಕು. ಅದರಂತೆ ಮುಂದಿನ ದಿನಗಳಲ್ಲಿ ಗೌಡತಾತಗಡ್ಡ ಗ್ರಾಮಕ್ಕೆ ಬೇಟಿ ನೀಡಿದರೆ ಬೆಂಗಳೂರಿಗೆ ಬೇಟಿ ನೀಡಿದಂತೆ ಇರಬೇಕು ಎಂದರು. ಈ ಒಂದು ನಿಟ್ಟಿನಲ್ಲಿ ತಾವೆಲ್ಲರೂ ಮುಂದಿನ ಚುನಾವಣೆಯಲ್ಲಿ ನನ್ನ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು. 

ಈ ಕಾರ್ಯಕ್ರಮದಲ್ಲಿ ಗ್ರಾಮದ ೩೫ ಕುಟುಂಬಗಳು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಲಕ್ಷಿಪುರ ಗ್ರಾ.ಪಂ.ಅಧ್ಯಕ್ಷೆ ಮಂಗಮ್ಮ ನಡುಪನ್ನ ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸAದ್ರ ಶಿವಾರೆಡ್ಡಿ, ರಾಯಲ್ಪಾಡು ಗ್ರಾ.ಪಂ.ಸದಸ್ಯ. ಆರ್.ಗಂಗಾದರ್, ಮುಖಂಡರಾದ ಕೆ.ಕೆ.ಮಂಜು, ಬೋರ್‌ವೆಲ್ ಕೃಷ್ಣಾರೆಡ್ಡಿ, ಎಸ್ . ಎನ್.ವೆಂಕಟೇಶ್, ರೋಣುರು ಸಂತೋಷ, ಸೀತಾರಾಮರೆಡ್ಡಿ, ಪೇಪರ್ ವೆಂಕಟೇಶ್, ಮುನಿಪ್ಪ , ಭಾಸ್ಕರ ಇದ್ದರು.